ಹೋರಾಟ ಕೈಬಿಡಲು ಮನವಿ
•ತೀವ್ರಗೊಳ್ಳಲಿದೆ ಪ್ರತಿಭಟನೆ •ಬಾರದ ಡಿಸಿ-ಸಚಿವ: ಆಕ್ರೋಶ
Team Udayavani, May 31, 2019, 11:30 AM IST
ಅಥಣಿ: ಕೃಷ್ಣಾ ನದಿ ನೀರಿನ ಹೋರಾಟ ಕೈ ಬಿಡುವಂತೆ ತಹಶೀಲ್ದಾರ್ ಪ್ರತಿಭಟನಾ ಸ್ಥಳಕೆ ಭೇಟಿ ನೀಡಿದರು.
ಅಥಣಿ: ಶಾಶ್ವತ ನೀರನ್ನು ಒದಗಿಸುವಂತೆ ಆಗ್ರಹಿಸಿ ಕೃಷ್ಣಾ ನದಿ ನೀರು ಹೋರಾಟ ಸಮಿತಿಯಿಂದ ನಡೆಸುತ್ತಿರುವ ಹೋರಾಟ ಸ್ಥಳಕ್ಕೆ ಅಥಣಿ ತಹಶೀಲ್ದಾರ್ ಎಂ.ಎನ್. ಬಳಿಗಾರ ಭೇಟಿ ನೀಡಿ ಹೋರಾಟ ಕೈ ಬೀಡುವಂತೆ ವಿನಂತಿಸಿದರು.
ಈ ವೇಳೆ ಹೋರಾಟ ಸಮಿತಿ ಬಸನಗೌಡ ಪಾಟೀಲ ಮಾತನಾಡಿ, ಶಾಶ್ವತ ನೀರಿಗಾಗಿ ಹೋರಾಟ ಮುಂದುವರೆಯಲಿದ್ದು, ಈ ಹೋರಾಟ ಮುಂಬರುವ ದಿನಗಳಲ್ಲಿ ತೀವ್ರಗೊಳ್ಳುವ ನಿರೀಕ್ಷೆ ಇದೆ. ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಬಂದು ಭೇಟಿಯಾಗದೇ ಇರುವುದು ವಿಷಾದನೀಯವಾಗಿದೆ. ಕಳೆದ 12 ದಿನಗಳಿಂದ ನಡೆಸಿದ ಈ ಹೋರಾಟಕ್ಕೆ ಸಾರ್ವಜನಿಕರು ಮತ್ತು ಸಂಘ ಸಂಸ್ಥೆಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಶಾಶ್ವತ ಪರಿಹಾರಕ್ಕಾಗಿ ಹೋರಾಟ ಮುಂದುವರೆಯಲಿದೆ ಎಂದು ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ತಹಶೀಲ್ದಾರ್ ಅಥಣಿ ಮತ್ತು ಕಾಗವಾಡ ಕ್ಷೇತ್ರಗಳಲ್ಲಿ ಭೀಕರ ಬರಗಾಲದಿಂದಾಗಿ ಕೃಷ್ಣಾ ನದಿ ಸಂಪೂರ್ಣ ಬತ್ತಿ ಹೋಗಿದ್ದರಿಂದ ಅಥಣಿ ಪಟ್ಟಣ ಸೇರಿದಂತೆ ಸುಮಾರು 120ಕ್ಕೂ ಹೆಚ್ಚು ಹಳ್ಳಿಗಳು ನೀರಿನ ಅಭಾವ ಎದುರಿಸುತ್ತಿವೆ. ಇಂತಹ ಸಂದರ್ಭದಲ್ಲಿ ತಾಲೂಕಾಡಳಿತದಿಂದ ಅಗತ್ಯಕ್ಕೆ ತಕ್ಕಂತೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಹೋರಾಟಗಾರರ ಬೇಡಿಕೆಗಳನ್ನು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರದ ಗಮನಕ್ಕೆ ತರಲಾಗಿದೆ ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಹಿರಿಯ ನ್ಯಾಯವಾದಿ ಎಸ್.ಎಸ್. ಪಾಟೀಲ, ಮಹಾದೇವ ಮಡಿವಾಳ, ಮುಖಂಡರಾದ ಶಬ್ಬೀರ ಸಾತಬಚ್ಚೆ, ಮಹಾಂತೇಶ ಬಾಡಗಿ, ಬಳವಂತ ಪತ್ತಾರ, ಮಂಜು ಹೋಳಿಕಟ್ಟಿ, ಪತ್ರಕರ್ತ ವೆಂಕಟೇಶ ದೇಶಪಾಂಡೆ, ಪ್ರಕಾಶ ಕಾಂಬಳೆ, ರಾಕೇಶ ಮೈಗೂರ, ರಮೇಶ ಬಾದವಾಡಗಿ, ಶ್ರೀನಿವಾಸ ಪಟ್ಟಣ, ಸದಾಶಿವ ಕಾಂಬಳೆ, ಮಹಾದೇವಿ ಹೋಳಿಕಟ್ಟಿ, ಚಿದಾನಂದ ಶೇಗುಣಸಿ ಸೇರಿದಂತೆ ಅನೇಕರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf issue: ಉಪಚುನಾವಣೆಯಲ್ಲಿ ನಾಟಕ ಮಾಡಲು ಜೆಪಿಸಿ ದುರ್ಬಳಕೆ: ಎಚ್.ಕೆ.ಪಾಟೀಲ್
Waqf Property: ಆಡು ಮುಟ್ಟದ ಸೊಪ್ಪಿಲ್ಲ, ವಕ್ಫ್ ಮುಟ್ಟದ ಸ್ವತ್ತಿಲ್ಲ: ತೇಜಸ್ವಿ ಸೂರ್ಯ
Belagavi: ಎಸ್‌ಡಿಎ ರುದ್ರಣ್ಣ ಮೊಬೈಲ್ ಪತ್ತೆ: ಪೊಲೀಸರಿಂದ ತನಿಖೆ ಚುರುಕು
Belagavi; ರುದ್ರಣ್ಣ ಯಡವಣ್ಣವರ ಪ್ರಕರಣ ನಿಷ್ಪಕ್ಷಪಾತ ತನಿಖೆಯಾಗಲಿ: ಹೆಬ್ಬಾಳಕರ್
Belagavi: ಎಸ್‌ಡಿಎ ಆತ್ಮಹ*ತ್ಯೆ: ಸಚಿವೆ ಹೆಬ್ಬಾಳ್ಕರ್ ರಾಜೀನಾಮೆಗೆ ಬಿಜೆಪಿ ಪಟ್ಟು
MUST WATCH
ಹೊಸ ಸೇರ್ಪಡೆ
Waqf Property: ಸಚಿವ ಜಮೀರ್ ಅಶ್ವಮೇಧ ಕುದುರೆ ತಡೆದಿದ್ದೇನೆ: ಶಾಸಕ ಯತ್ನಾಳ್
ಐತಿಹಾಸಿಕ ಮುಡಗೇರಿ ಗ್ರಾಮ ನಿರ್ಲಕ್ಷ್ಯ; ಸೋದೆ ಅರಸರ ಕೋಟೆ ಪಳೆಯುಳಿಕೆ
BGT Series: ಚೇತೇಶ್ವರ ಪೂಜಾರ ಅಂದು ತಿಂದ ಪೆಟ್ಟಿನ ನೋವು ಭಾರತೀಯರು ಮರೆಯುವುದುಂಟೇ?
Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ
ಹಾವೇರಿ-ಸಿದ್ದರಾಮಯ್ಯ ಪಂಜರದ ಗಿಳಿ: ಕೇಂದ್ರ ಸಚಿವ ಸೋಮಣ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.