ನದಿ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ: ಪಾಟೀಲ
Team Udayavani, Dec 18, 2023, 3:18 PM IST
ಬೈಲಹೊಂಗಲ : ಇಡೀ ಉತ್ತರ ಕರ್ನಾಟಕ ಜನರ ಜೀವನಾಡಿ ಆಗಿರುವ ಮಲಪ್ರಭಾ ನದಿಯು ಈ ಭಾಗದ ಜನರ ಕಾಮಧೇನು, ಕಲ್ಪವೃಕ್ಷವಾಗಿದೆ. ಮಲಪ್ರಭಾ ನದಿ ದಡವು ಸಾಕಷ್ಟು ವರ್ಷಗಳಿಂದ ಪ್ಲಾಸ್ಟಿಕ್ ವಸ್ತುಗಳು, ಮೀನು ಮಾರಾಟಗಾರರ ತ್ಯಾಜ್ಯ ವಸ್ತುಗಳಿಂದ ಕಲುಷಿತಗೊಳ್ಳುತ್ತಿರುವುದನ್ನು ಮನಗಂಡು ತಾಲೂಕಿನ ಜಾಲಿಕೊಪ್ಪ ಗ್ರಾಮದ ತಪೋಕ್ಷೇತ್ರದ ಶಿವಾನಂದ ಗುರೂಜಿ, ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಮಾರ್ಗದರ್ಶನದಲ್ಲಿ ನಿರ್ಮಲ ಮಲಪ್ರಭಾ ನದಿ ಅಭಿಯಾನ ಹೆಸರಿನಡಿ ವಿವಿಧ ಕನ್ನಡಪರ ಸಂಘಟನೆ, ಸಾಮಾಜಿಕ ಕಾರ್ಯಕರ್ತರು, ವೈದ್ಯರು, ವಕೀಲರ ಸಂಘ, ಕಲಾವಿದರ ಬಳಗ, ಎಲ್ಲ ಶಾಲೆಗಳ ಪ್ರಾಂಶುಪಾಲರು, ಶಿಕ್ಷಕರು, ವಿದ್ಯಾರ್ಥಿಗಳು, ಈ ಭಾಗದ ಸಮಸ್ತ ರೈತರು ಕೂಡಿಕೊಂಡು ನದಿ ದಡವನ್ನು ರವಿವಾರ ಬೆಳಗ್ಗೆ ಶುಚಿಗೊಳಿಸಿದರು.
ನದಿ ದಡದಲ್ಲಿ ಅಧಿಕ ಪ್ರಮಾಣದಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ವಸ್ತುಗಳು, ಮೀನಿನ ತ್ಯಾಜ್ಯ, ಮಾಂಸದ ತುಕಡಿ, ಹಣ್ಣು, ಕಾಯಿ, ಬಟ್ಟೆ, ದೇವರ ಹಳೆಯ ಫೋಟೋಗಳನ್ನು ತೆಗೆದು ಹಾಕಿದರು. ನದಿ ದಡದ ತ್ಯಾಜ್ಯವನ್ನು ಪೂರ್ಣ ಪ್ರಮಾಣದಲ್ಲಿ ಸಂಗ್ರಹಿಸಿ ಸುಟ್ಟು ಹಾಕಿದರು.
ಜಾಲಿಕೊಪ್ಪ ಗ್ರಾಮದ ತಪೋ ಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ನೇತೃತ್ವವಹಿಸಿ ಮಾತನಾಡಿ, ಈ ಭಾಗದ ಜೀವನಾಡಿಯಾಗಿರುವ ಮಲಪ್ರಭಾ ನದಿಯ ಸಂರಕ್ಷಣೆ, ಸ್ವತ್ಛತೆಗೆ ಪ್ರತಿಯೊಬ್ಬರ ಸಹಕಾರ ಅಗತ್ಯವಾಗಿದೆ. ಮೊದಲೇ ಬರಗಾಲ. ಮಳೆ ಇಲ್ಲ. ಕುಡಿಯುವ ನೀರಿಗೆ ಪರದಾಡುವ ದುಸ್ಥಿತಿ ಇದೆ. ಮಲಪ್ರಭಾ ನದಿಯು ಮಲೀನಗೊಂಡು ಕಲುಷಿತಗೊಳ್ಳುತ್ತಿರುವುದನ್ನು ಮನಗಂಡು ಶಿವಾನಂದ ಗುರೂಜಿ ಮಾರ್ಗದರ್ಶನದಲ್ಲಿ ಅಭಿಯಾನ ನಡೆಸಿ ಶುಚಿಗೊಳಿಸಲಾಗಿದೆ. ಈ ಅಭಿಯಾನಕ್ಕೆ ಕೈ ಜೋಡಿಸಿದ ಪ್ರತಿಯೊಬ್ಬರಿಗೂ ಕೃತಜ್ಞತೆ ಎಂದರು.
ತಪೋ ಕ್ಷೇತ್ರದ ಶಿವಾನಂದ ಗುರೂಜಿ ಸಾನ್ನಿಧ್ಯವಹಿಸಿ ಮಾತನಾಡಿ, ಸುತ್ತಮುತ್ತಲಿನ ಪರಿಸರ ಶುಚಿಯಾಗಿಟ್ಟುಕೊಳ್ಳುವುದರಿಂದ
ಆರೋಗ್ಯಭಾಗ್ಯ ಲಭಿಸುತ್ತದೆ. ಕುಡಿಯುವ ನೀರಿಗೆ ಆಸರೆ ಆಗಿರುವ ಮಲಪ್ರಭಾ ನದಿಯು ಈ ಭಾಗದ ಜನರ ಜೀವ ನಾಡಿ ಆಗಿದೆ. ಅದರ ಉಳಿವು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ನದಿಗೆ ಯಾರೂ ಏನನ್ನೂ ಎಸೆಯದೆ ಶುಚಿಯಾಗಿಟ್ಟುಕೊಳ್ಳಬೇಕು ಎಂದರು. ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಂ.ಆರ್. ಮೆಳವಂಕಿ, ಮಡಿವಾಳಪ್ಪ ಹೋಟಿ, ಮಲ್ಲಪ್ಪ ಮುರಗೋಡ, ಯಲಪ್ಪ ಹುಗಲಣ್ಣವರ, ಡಾ.ಸಿ.ಬಿ.ಗಣಾಚಾರಿ, ಎ.ಬಿ.ಪಾಟೀಲ, ಮಹಾದೇವ ಕಲಭಾಂವಿ, ಸುರೇಶ ಹೊಳಿ, ಮಲ್ಲಯ್ನಾ ಪೂಜೇರ,
ಮಡಿವಾಳಪ್ಪ ಹಟ್ಟಿ, ಗುರು ಅಂಗಡಿ, ಉದಯ ಕೃಷ್ಣನ, ಪ್ರದೀಪ ಮೂಟವಾಣಿ, ಕುಮಾರ ಗಾಣಿಗೇರ, ಪರಪ್ಪ ಬೋಳಶೆಟ್ಟಿ, ಉಮೇಶ ಅಂಕನ್ನವರ, ಬಸವರಾಜ ತೋಟಗಿ, ಮಲ್ಲಿಕಾರ್ಜುನ ಗಾಣಿಗೇರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi; ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿದ್ದ ಹುಲಿ ಶೌರ್ಯ ಇನ್ನಿಲ್ಲ
Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ
Setback BJP: ಜನರಿಂದ ವಿಜಯೇಂದ್ರ ನಾಯಕತ್ವ ತಿರಸ್ಕಾರ, ರಾಜೀನಾಮೆ ನೀಡಲಿ: ಶಾಸಕ ಯತ್ನಾಳ್
ಮಹಾರಾಷ್ಟ್ರ ಸೋಲಿನ ಬೆನ್ನಲ್ಲೇ ಇವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಸತೀಶ್ ಜಾರಕಿಹೊಳಿ
ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.