ತಗ್ಗು-ಗುಂಡಿಗಳಲ್ಲಿ ಜೋಕಾಲಿ ಪಯಣ
•ಮಳೆ ಅವಾಂತರಕ್ಕೆ ಕೆರೆಯಂತಾದ ರಸ್ತೆ ಗುಂಡಿಗಳು•ನಾಗರಿಕರಿಂದ ಇಂದು ಪ್ರತಿಭಟನೆ
Team Udayavani, Jul 8, 2019, 10:16 AM IST
ಬೈಲಹೊಂಗಲ: ಮುಂಗಾರು ಮಳೆಗೆ ಪಟ್ಟಣದ ಬಸ್ ನಿಲ್ದಾಣ ಸೇರಿದಂತೆ ಹಲವು ಪ್ರದೇಶಗಳ ಗುಂಡಿಗಳಿದ್ದ ಪರಿಣಾಮ ರಸ್ತೆಗಳೇ ಹೊಂಡಗಳಾಗಿ ಮಾರ್ಪಟ್ಟಿವೆ.
ಬಸ್ ನಿಲ್ದಾಣ ರಸ್ತೆಯಲ್ಲಿ ಬಾರಿ ಮಳೆಯಿಂದ ನೀರು ಹರಿಯುತ್ತಿದೆ. ವಾಹನ ಸವಾರರು, ಪಾದಚಾರಿಗಳು ಓಡಾಡುವುದು ಕಷ್ಟವಾಗುತ್ತಿದೆ. ಮಳೆ ನೀರು ತುಂಬಿಕೊಂಡಿರುವ ಗುಂಡಿಯನ್ನು ನೋಡದೆ ವಾಹನ ಸವಾರರು ವೇಗವಾಗಿ ಚಲಿಸುವುದರಿಂದ ಕೊಚ್ಚೆ ನೀರು ಪಾದಚಾರಿಗಳಿಗೆ, ಪಕ್ಕದಲ್ಲಿ ಚಲಿಸುವ ವಾಹನಗಳಿಗೆ ಸಿಡಿಯುತ್ತಿದೆ. ಮಳೆ ಬರುವಾಗ ಹೊಂಡದಲ್ಲಿ ನೀರು ತುಂಬಿದರೆ ಹೊಸದಾಗಿ ಬರುವವರು ಹೊಂಡಕ್ಕೆ ಬೀಳುವ ಸ್ಥಿತಿಯಿದೆ.
ಮಳೆ ಬಂದಾಗ ಮಧ್ಯಭಾಗದಲ್ಲಿ 1ರಿಂದ 2ಅಡಿಯಷ್ಟು ಮಳೆ ನೀರು ಶೇಖರಣೆಯಾಗುತ್ತದೆ. ರಸ್ತೆಯಲ್ಲಿ ಮಕ್ಕಳು ಸಂಚರಿಸಿದರೆ ಅನಾಹುತ ಕಟ್ಟಿಟ್ಟ ಬುತ್ತಿ. ಅಪಘಾತಗಳು ಸಂಭವಿಸುವ ಸಂದರ್ಭಗಳು ಇವೆ. ದ್ವಿಚಕ್ರ ವಾಹನಗಳು ಮುಳುಗೇಳುತ್ತಾ ಸಂಚರಿಸುವ ಸ್ಥಿತಿ ಉದ್ಬವವಾಗಿದೆ. ಕೆಸರುಮಯ ಇಂಥ ರಸ್ತೆಗಳಲ್ಲಿ ಸಂಚರಿಸುವ ಶಾಲಾ-ಕಾಲೇಜು ವಿದ್ಯಾರ್ಥಿಗಳು, ನಾಗರಿಕರು ದಿನಂಪ್ರತಿ ಅಳುಕುತ್ತಲೆ ಚಲಿಸುತ್ತಾರೆ. ಬಹುತೇಕ ಪಟ್ಟಣದ ಭಾಗದಲ್ಲಿ ಇದೇ ಸ್ಥಿತಿ ಇದೆ.
ಪಟ್ಟಣದ ಕಿತ್ತೂರ ಚನ್ನಮ್ಮ ಸಮಾಧಿ ರಸ್ತೆ, ಬಜಾರ ರಸ್ತೆ, ಜವಳಿಕೂಟ, ಬಸವನಗರ, ವಿದ್ಯಾನಗರ ಇದೇ ಮೊದಲಾದ ಪ್ರಮುಖ ರಸ್ತೆಗಳಲ್ಲಿ ತಗ್ಗುಗುಂಡಿಗಳು ಬಿದ್ದು ಮಳೆ ನೀರು ನಿಂತರೂ ಅಧಿಕಾರಿಗಳು ಇದರತ್ತ ಗಮನ ಹರಿಸುತ್ತಿಲ್ಲ ಎಂದು ನಾಗರಿಕರು ದೂರಿದ್ದಾರೆ.
ಬಳಹಷ್ಟು ದಿನಗಳಿಂದ ಮಳೆ ನೀರು ಗುಂಡಿಗಳಲ್ಲಿ ನಿಲ್ಲುವುದರಿಂದ ಹೊಲಸು ಕೇಸರಿನಿಂದ ಆವೃತ್ತವಾದ ಪ್ರದೇಶದಲ್ಲಿ ಸೊಳ್ಳೆ, ಕ್ರಿಮಿಕೀಟಗಳಿಂದ ಸಾಂಕ್ರಾಮಿಕ ರೋಗಗಳ ತಾಣವಾಗಿ ಮಾರ್ಪಟ್ಟು, ನಾಗಕರಿಕರು ಆರೋಗ್ಯ ಸಮಸ್ಯೆ ತಲೆದೋರುವ ಸಮಸ್ಯೆ ಇದೆ.
ಒಮ್ಮೆ ರಸ್ತೆ ಗುತ್ತಿಗೆ ಪಡೆದವರು ಇಂತಿಷ್ಟು ವರ್ಷ ಅಥವಾ ಕನಿಷ್ಠ ಐದು ವರ್ಷ ನಿರ್ವಹಣೆ ಮಾಡಬೇಕೆಂಬ ನಿಯಮವಿದೆ. ಆದರೆ ಗುಂಡಿ ಬಿದ್ದು ಹಲವು ದಿನಗಳಾದರೂ ಇದರತ್ತ ಗಮನ ಹರಿಸದ ಕಾರಣ ಮಳೆ ನೀರು ಹರಿದು ರಸ್ತೆಗಳು ಮತ್ತಷ್ಟು ಹದಗೆಟ್ಟಿವೆ.
ಬಿದ್ದಿರುವ ತಗ್ಗು-ಗುಂಡಿಗಳನ್ನು ಮುಚ್ಚಿಸಿಬೇಕು. ವಾಹನ ಸವಾರರು ನಡೆದಾಡುವಂತೆ ಮತ್ತು ಚಾಲಕರು ಸರಾಗವಾಗಿ ವಾಹನ ಚಲಾಯಿಸಲು ಅಧಿಕಾರಿಗಳು ಅನುಕೂಲ ಮಾಡಿಕೊಡಬೇಕು ಪುರಸಭೆ, ವಿವಿಧ ಇಲಾಖೆ ಅಧಿಕಾರಿಗಳು ಪ್ರಯತ್ನಿಸಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.
•ಸಿ.ವೈ. ಮೆಣಶಿನಕಾಯಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Punjalkatte: ಘನತ್ಯಾಜ್ಯ ಘಟಕ ಆರಂಭಕ್ಕೆ ಇನ್ನೂ ಮೀನ ಮೇಷ ಎಣಿಕೆ
Hubli; ಹಂದಿ ಸಾಕಾಣಿಕೆದಾರ ಕೊಲೆ ಪ್ರಕರಣ; ಮೃತನ ಅಕ್ಕನ ಗಂಡ ಸೇರಿ ನಾಲ್ವರ ಬಂಧನ
Hubli; ಅಯ್ಯಪ್ಪ ಶಿಬಿರ ಅಗ್ನಿ ಆಕಸ್ಮಿಕ ಪ್ರಕರಣ; ಆರಕ್ಕೇರಿದ ಸಾವಿನ ಸಂಖ್ಯೆ
ಗಂಭೀರಕಾಯಿಲೆಗಳಿಂದ ಮಕ್ಕಳಿಗೆ ರಕ್ಷಣೆ-ಬಾಲ್ಯಕಾಲದಲ್ಲಿ ಲಸಿಕೆಹಾಕಿಸಿಕೊಳ್ಳುವುದು ಯಾಕೆಮುಖ್ಯ
INDvAUS: ಅಬ್ಬರಿಸಿದ ಬುಮ್ರಾ-ಸಿರಾಜ್: ಕೊನೆಯಲ್ಲಿ ಕಾಡಿದ ಲಿಯಾನ್- ಬೊಲ್ಯಾಂಡ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.