ಬಡ ವಿದ್ಯಾರ್ಥಿಗಳಿಗೆ ರುದ್ರಾಕ್ಷಿಮಠದಿಂದ ಶಿಕ್ಷಣ ಸಂಸ್ಥೆ
ಕೇವಲ ವಿದ್ಯಾಭ್ಯಾಸದತ್ತ ಮನಸ್ಸನ್ನು ಕೇಂದ್ರೀಕರಿಸಬೇಕು.
Team Udayavani, Jan 1, 2022, 6:08 PM IST
ಬೆಳಗಾವಿ: ನಾಗನೂರು ರುದ್ರಾಕ್ಷಿಮಠವು ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗಾಗಿಯೇ ಶಿಕ್ಷಣ ಸಂಸ್ಥೆಗಳನ್ನು ಹುಟ್ಟು ಹಾಕಿತು ಎಂದು ನಾಗನೂರು ರುದ್ರಾಕ್ಷಿ ಮಠದ ಪೀಠಾಧಿಪತಿ ಡಾ| ಅಲ್ಲಮಪ್ರಭು ಸ್ವಾಮೀಜಿ ಹೇಳಿದರು .
ನಗರದಲ್ಲಿ ಶುಕ್ರವಾರ ಸಿದ್ದರಾಮೆಶ್ವರ ವಿಜ್ಞಾನ ಕಾಲೇಜು ಪದವಿ ಪೂರ್ವ ವಿಭಾಗದ ನೂತನ ಕಟ್ಟಡದ ಭೂಮಿ ಪೂಜೆ ನೆರವೇರಿಸಿ ಆಶೀರ್ವಚನ ನೀಡಿದ ಅವರು, ಉತ್ತರ ಕರ್ನಾಟಕ ಭಾಗದ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಿರುವುದನ್ನು ಮನಗಂಡು ಲಿಂಗೈಕ್ಯ ಡಾ| ಶಿವಬಸವ ಶ್ರೀಗಳು ಶ್ರೀಮಠದಿಂದ ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸಿದರು. ಅವರ ಆಶಯ ಹಾಗೂ ಚಿಂತನೆಯನ್ನು ಇಂದಿಗೂ ಮುಂದುವರಿಸಿಕೊಂಡು ಹೋಗಲಾಗುತ್ತಿದೆ. 5 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ವಿಜ್ಞಾನ ಕಾಲೇಜಿನ ಕಟ್ಟಡ ಒಂದೂವರೆ ವರ್ಷದಲ್ಲಿ ಪೂರ್ಣಗೊಳ್ಳಲಿದೆ ಎಂದರು.
ವಿದ್ಯಾರ್ಥಿಗಳು ಮೊಬೈಲ್, ಫೇಸ್ ಬುಕ್ ವಾಟ್ಸ್ ಆ್ಯಪ್ ಗಳಿಂದ ದೂರ ಇದ್ದು ಕೇವಲ ವಿದ್ಯಾಭ್ಯಾಸದತ್ತ ಮನಸ್ಸನ್ನು ಕೇಂದ್ರೀಕರಿಸಬೇಕು. ವಿದ್ಯೆ ಬೇಕಾದವ ಸುಖವನ್ನು ತ್ಯಾಗ ಮಾಡಬೇಕು. ವಿದ್ಯಾರ್ಥಿ ಜೀವನದಲ್ಲಿ ಸುಖವನ್ನು ತ್ಯಾಗ ಮಾಡಿದವರ ಇಡೀ ಜೀವನ ಸಂಪೂರ್ಣ ಸುಖಮಯವಾಗುತ್ತದೆ ಎಂದು ಶ್ರೀಗಳು ಹೇಳಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ನಾಗರಾಜ್ ವಿ. ಮಾತನಾಡಿ, ಈ ಶಿಕ್ಷಣ ಸಂಸ್ಥೆಯ ವಿಜ್ಞಾನ ಕಾಲೇಜಿಗೆ ಪ್ರಾಯೋಗಿಕ ಪರೀಕ್ಷಾ ಕೇಂದ್ರವನ್ನು ಒದಗಿಸಲಾಗಿದೆ ಮತ್ತು ಸರಕಾರದಿಂದ ಎಲ್ಲ ರೀತಿಯ ಸೌಲಭ್ಯ ಮತ್ತು ಸಹಕಾರ ನೀಡಲು ಪ್ರಯತ್ನಿಸುವುದಾಗಿ
ಹೇಳಿದರು.
ನಗರ ಪೊಲೀಸ್ ಉಪ ಆಯುುಕ್ತ ನಾರಾಯಣ ಭರಮನಿ ಮಾತನಾಡಿ, ರಾಜ್ಯದ ಮತ್ತು ಪ್ರಮುಖವಾಗಿ ಬೆಳಗಾವಿ ಗಡಿ ಭಾಗದ ಬಹುತೇಕ ಎಲ್ಲಾ ಆಗು ಹೋಗುಗಳಲ್ಲಿ ಶ್ರೀಮಠವು ಅತ್ಯಂತ ಪ್ರಮುಖ ಪಾತ್ರ ವಹಿಸಿದ್ದನ್ನು ನೆನಪಿಸಿಕೊಂಡರು .
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಕಾರ್ಯದರ್ಶಿ ಕೆ ಬಿ ಹಿರೇಮಠ ಮಾತನಾಡಿ, ಎಲ್‌ಕೆಜಿ ಯಿಂದ ಹಿಡಿದು ಪದವಿ ಶಿಕ್ಷಣ, ಸ್ನಾತಕ ಮತ್ತು ಇಂಜಿನಿಯರಿಂಗ್ ಶಿಕ್ಷಣದವರೆಗೆ ಎಲ್ಲಾ ರೀತಿಯ ಶಿಕ್ಷಣ ವ್ಯವಸ್ಥೆಯನ್ನು ಸಂಸ್ಥೆ ಒಳಗೊಂಡಿವೆ ಎಂದು ಹೇಳಿದರು .
ಕಾರ್ಯಕ್ರಮದಲ್ಲಿ ಇಂಜಿನಿಯರ್ ಮಹೇಶ ಹೆಬ್ಟಾಳೆ, ಪ್ರಾಚಾರ್ಯ ಸಿದ್ದರಾಮ ರೆಡ್ಡಿ, ಬೈಲಹೊಂಗಲ ಸರ್ಕಾರಿ ಪಿಯು ಕಾಲೇಜಿನ ಪುಂಡಲೀಕ ಕಾಂಬ್ಳೆ , ಗುತ್ತಿಗೆದಾರ ವೈಭವ್ ಬಡಮಂಜಿ, ಬಿಎಡ್ ಕಾಲೇಜು ಪ್ರಾಚಾರ್ಯ ಡಾ| ಎ.ಎಲ್ ಪಾಟೀಲ್ ಉಪಸ್ಥಿತರಿದ್ದರು. ಉಪನ್ಯಾಸಕ ಎ.ಕೆ ಪಾಟೀಲ ನಿರ್ವಹಿಸಿದರು. ಶಶಿಕಲಾ ಸ್ವಾಗತಿಸಿದರು. ವಿಜ್ಞಾನ ಕಾಲೇಜು ಮುಖ್ಯಸ್ಥ ಪ್ರವೀಣ ಪಾಟೀಲ್ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ
“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ
Council Session: ಪವರ್ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ
Fake Gold: ಎಚ್ಚರ ವಹಿಸಲು ಡಿಸಿಸಿ ಬ್ಯಾಂಕ್‌ಗಳಿಗೆ ಸೂಚನೆ: ಸಚಿವ ಕೆ.ಎನ್. ರಾಜಣ್ಣ
Karnataka Govt.,: ಮಂಗಳೂರಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಮನವಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.