ಗ್ರಾಮಾಭಿವೃದ್ಧಿಗೆ ಧರ್ಮಸ್ಥಳದ ಸೇವಾ ಕಾರ್ಯ ಅನನ್ಯ
Team Udayavani, Sep 6, 2021, 2:16 PM IST
ಬೈಲಹೊಂಗಲ: ಸಮಾಜದಲ್ಲಿ ಉತ್ತಮಯೋಜನೆಗಳನ್ನು ಹಮ್ಮಿಕೊಂಡು ಬದುಕಿಗೆಆಸರೆಯಾಗಿ ಧಾರ್ಮಿಕ, ಅಧ್ಯಾತ್ಮಿಕಕಾರ್ಯಗಳಿಂದ ಸುಖ ಶಾಂತಿಗೆ ಪ್ರಯತ್ನಿಸುತ್ತಿರುವಧರ್ಮಸ್ಥಳದ ಗ್ರಾಮಾಭಿವೃದ್ಧಿ ಸಂಸ್ಥೆಯ ಕಾರ್ಯಶ್ಲಾಘನೀಯವಾಗಿದೆ ಎಂದು ಕಾಡಾ ಅಧ್ಯಕ್ಷ ಡಾ.ವಿಶ್ವನಾಥ ಪಾಟೀಲ ಹೇಳಿದರು.
ಅವರು ಪಟ್ಣಣದ ಶ್ರೀ ಮೌನೇಶ್ವರ ಕಲ್ಯಾಣಮಂಟಪದಲ್ಲಿ ಶ್ರಾವಣ ಮಾಸದ ಪ್ರಯುಕ್ತಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಬಿಸಿ ಟ್ರಸ್ಟ್,ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟದಸಂಯುಕ್ತ ಆಶ್ರಯದಲ್ಲಿ ನಡೆದ ಶ್ರೀ ಲಕ್ಷ್ಮೀ ಪೂಜೆ ಹಾಗೂ ಶ್ರೀ ಕೃಷ್ಣ ಜನಾಷ್ಟಮಿ ಧಾರ್ಮಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಾಮಾಜಿಕ,ಶೆ„ಕ್ಷಣಿಕ,ಧಾರ್ಮಿಕ, ಅಧ್ಯಾತ್ಮಿಕ, ಆರ್ಥಿಕ ಸೇರಿದಂತೆವಿಧಾಯಕ ಕಾರ್ಯಗಳಿಂದ ಸಂಸ್ಥೆಯು ರಾಜ್ಯದಲ್ಲಿಮನೆ ಮಾತಾಗಿದೆ.
ಸ್ವಸಹಾಯ ಸಂಘಗಳ ಮೂಲಕಮಹಿಳೆಯರ ಸ್ವಾವಲಂಬನೆಗೆ ಕಾರಣೀಭೂತವಾಗಿ,ರಾಜ್ಯ ಮಟ್ಟದಲ್ಲಿ ಕೃಷಿಮೇಳವನ್ನು ಇಲ್ಲಿಆಯೋಜಿಸಿದ್ದು ಸಾಕ್ಷಿಯಾಗಿದೆ ಎಂದರು.ಯೋಜನೆಯ ಜಿಲ್ಲಾ ನಿರ್ದೇಶಕ ಪ್ರದೀಪ ಶೆಟ್ಟಿಮಾತನಾಡಿ, ಧರ್ಮಾಧಿಕಾರಿ ಡಾ. ವಿರೇಂದ್ರ ಹೆಗ್ಗಡೆಅವರ ಆಶಯದಂತೆ ಸಮಾಜದ ಪ್ರತಿ ವರ್ಗಕ್ಕೂವಿಭಿನ್ನ ಚಟುವಟಿಕೆಗಳನ್ನು ಏರ್ಪಡಿಸಿ ಆ ಮೂಲಕಪ್ರಗತಿಗೆ ಅವಿರತವಾಗಿ ಪ್ರಯತ್ನ ಮಾಡುತ್ತಲಿದ್ದು, ನೊಂದು ಬೆಂದವರ ಬಾಳಿಗೆ ಆಶಾಕಿರಣವಾಗಿದೆ.
ಪ್ರತಿಭಾವಂತರಿಗೆ ಪ್ರೇರಣೆ, ನಾಡಿನ ಅನ್ನದಾತನಿಗೆಸಹಕಾರ, ಯುವಕರ ದುಶ್ಚಟಗಳ ನಿವಾರಣೆಗೆಮದ್ಯವರ್ಜನ ಶಿಬಿರ, ಮಹಿಳೆಯರ ಅಭ್ಯುದಯಸೇರಿದಂತೆ ನಾಡು ಕಟ್ಟುವಲ್ಲಿ ಮುಂಚೂಣಿಯಲ್ಲಿದೆಎಂದರು.ಶ್ರೀರಾಮನಗರ ಒಕ್ಕೂಟದ ಅಧ್ಯಕ್ಷೆ ರತ್ನಾ ಗೋಧಿಸಭೆಯ ಅಧ್ಯಕ್ಷತೆ ವಹಿಸಿದ್ದರು. ಪತ್ರಿ ಬಸವ ನಗರದಅಭಿವೃದ್ಧಿ ಸಂಘದ ಅಧ್ಯಕ್ಷೆ ಪ್ರೇಮಾ ಅಂಗಡಿ,ತಾಲೂಕು ರೈತ ಮೋರ್ಚಾ ಉಪಾಧ್ಯಕ್ಷ ಈಶ್ವರಬೋರಕನವರ, ತಾಲೂಕಾ ಯೋಜನಾಧಿಕಾರಿ ಪುರಷೋತ್ತಮ ಕೆ., ಒಕ್ಕೂಟದ ಅಧ್ಯಕ್ಷೆ ಈರಮ್ಮಾಕಮ್ಮಾರ, ಗಿರಿಜಾ ಪಾಟೀಲ ಮುಂತಾದವರು ಉಪಸ್ಥಿತರಿದ್ದರು. ಮೇಲ್ವಿಚಾರಕಿ ಸರೋಜಾ ಪಟಗಾರಸ್ವಾಗತಿಸಿದರು. ಮಂಜುನಾಥ ಕಡಕೋಳನಿರೂಪಿಸಿದರು. ಸೇವಾ ಪ್ರತಿನಿಧಿ ರಾಜೇಶ್ವರಿ ಈಟಿವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mrinal Hebbalkar: ನನ್ನ ತಾಯಿಗೆ ರವಿ ಬಳಸಿದ ಪದದಿಂದ ನೋವಾಗಿದೆ: ಮೃಣಾಲ್
Belgavi: ಸಿ.ಟಿ.ರವಿ ಪ್ರಕರಣ ಮುಂದುವರಿಸುವಲ್ಲಿ ಅರ್ಥವೇ ಇಲ್ಲ: ಸಚಿವ ಸತೀಶ್ ಜಾರಕಿಹೊಳಿ
Belagavi: ನ್ಯಾಯಾಧೀಶರ ಮುಂದೆ ಪೊಲೀಸ್ ದೌರ್ಜನ್ಯ ಬಿಚ್ಚಿಟ್ಟ ಸಿ.ಟಿ. ರವಿ
Belagavi: ಎಲ್ಲದಕ್ಕೂ ಪೂರ್ಣವಿರಾಮ ಬೀಳಲಿದೆ, ನನಗೂ ಒಂದು ಕಾಲ ಬರುತ್ತದೆ….. : ಸಿ.ಟಿ.ರವಿ
Belagavi: ಸಿ.ಟಿ.ರವಿ ಬಂಧನ ಪ್ರಕರಣ ಬೆಂಗಳೂರಿಗೆ ಸ್ಥಳಾಂತರ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.