ತೊಗರಿ ಬೆಳೆಗಾರರ ಸಹಾಯಕ್ಕೆ ಧಾವಿಸಿ
Team Udayavani, Nov 28, 2021, 2:29 PM IST
ಐಗಳಿ: ಅಥಣಿ ತಾಲೂಕಿನಲ್ಲಿ ತೊಗರಿ ಬೆಳೆಗಾರರು ಅಪಾರ ಹಾನಿಗೊಳಗಾಗಿದ್ದು, ಸರಕಾರ ಸಮಗ್ರ ಸಮೀಕ್ಷೆ ಮಾಡಿ ಯೋಗ್ಯ ಪರಿಹಾರ ನೀಡಬೇಕು ಹಾಗೂ ತಾಲೂಕನ್ನು ಬರ ಪೀಡಿತ ಪ್ರದೇಶ ಎಂದು ಘೋಷಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.
ಕರಿ ಮಸೂತಿ ನೀರಾವರಿಯಿಂದ ಹೊರಗುಳಿದ ತಾಲೂಕಿನ ಒಣ ಬೇಸಾಯದ ಜಮೀನುಗಳಲ್ಲಿ ತೊಗರಿ ಬಿತ್ತನೆಗೆ ವೇಳೆಯಲ್ಲಿ ಮಳೆ ಕೊರತೆಯಿಂದ ಕೆಲಭಾಗ ಸರಿಯಾಗಿ ನಾಟಿ ಆಗಿಲ್ಲ. ಬಹುತೇಕ ಜಮೀನುಗಳಿಗೆ ನೀರಿನ ಕೊರತೆಯಾಗಿ ಹಾನಿಗೊಳಪಟ್ಟಿತು. ಇನ್ನೂಳಿದ ಕೆಲ ತೊಗರಿ ಬೆಳೆ ಕಾಳು ತುಂಬುವ ಸಮಯದಲ್ಲಿಯೇ ಅಕಾಲಿಕ ತುಂತುರು ಮಳೆ ಆಪತ್ತು ತಂದು ಕೋಟ್ಯಾಂತರ ಫಸಲು ಹಾಳು ಮಾಡಿತು. ಕಾರಣ ಒಣ ಬೇಸಾಯಗಾರರ ಬದುಕು ದುಸ್ತರವಾಗಿದೆ.
ಬಿಜೆಪಿ ಕಚೇರಿಯಲ್ಲಿ ನಡೆದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ ಮಾತನಾಡಿದರು.
ಕಾಯಿ ಕಟ್ಟುವ ಹಂತದಲ್ಲಿಯೇ ಒಣಗಿದ ತೊಗರಿ ಬೆಳೆ. ಸಮೀಕ್ಷೆ ಮಾಡಿ ಸರಕಾರಕ್ಕೆ ವರದಿ ನೀಡಿ ತೊಂದರೆಯಲ್ಲಿರುವ ತೊಗರಿ ಬೆಳೆಗಾರರ ಸಹಾಯಕ್ಕೆ ಬರಬೇಕು ಎಂದು ಕೇದಾರಿಗೌಡ ಬಿರಾದಾರ ಒತ್ತಾಯಿಸಿದ್ದಾರೆ.
ಅಥಣಿ ಪೂರ್ವ ಭಾಗದ ಹಲವು ಗ್ರಾಮಗಳ ವ್ಯಾಪ್ತಿಯಲ್ಲಿ ಮಳೆಯಾಗಿಲ್ಲ. ಹೀಗಾಗಿ ತೊಗರಿ ಬೆಳೆ ಒಣಗುತ್ತಿವೆ. ಇಲಾಖೆ ಸಮಗ್ರ ಸರ್ವೇ ಮಾಡಿ ರೈತರಿಗೆ ಪರಿಹಾರ ಮತ್ತು ಅಥಣಿ ತಾಲೂಕನ್ನು ಬರ ಪ್ರದೇಶ ಎಂದು ಘೋಷಿಸಬೇಕು ಎಂದು ತಾಪಂ ಸದಸ್ಯ ಯಲ್ಲಪ್ಪ ಮಿರ್ಜಿ ಆಗ್ರಹಿಸಿದ್ದಾರೆ.
ಅಲ್ಪಸ್ವಲ್ಪ ಜಮೀನಿರುವ ರೈತರು ಬೆಳೆ ತೊಗರಿಯನ್ನೇ ಅವಲಂಬಿಸಿದ್ದು, ಬೆಳೆ ಹಾಳಾಗಿ ಅವರ ಬದುಕು ಕಷ್ಟಕರವಾಗಿದೆ. ಕಾರಣ ಸರಕಾರ ಯೋಗ್ಯ ಪರಿಹಾರ ಕೊಡಬೇಕು ಎಂದು ಐಗಳಿ ಪ್ರಗತಿಪರ ರೈತ ಶಂಕರಗೌಡ ಪಾಟೀಲ ಒತ್ತಾಯಿಸಿದ್ದಾರೆ.
ತೆಲಸಂಗ ಹೊಬಳಿಯಲ್ಲಿ 8000 ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬೆಳೆಯಿದ್ದು, ಶೇ.80ರಷ್ಟು ನೀರಿನ ಕೊರತೆಯಿಂದ ಹಾಳಾಗಿದೆ. ಇದರ ಸಮಗ್ರ ವರದಿಯನ್ನು ಸರಕಾರಕ್ಕೆ ಸಲ್ಲಿಸಲಾಗಿದೆ ಎಂದು ತೆಲಸಂಗ ಹೋಬಳಿ ಕೃಷಿ ಅಧಿಕಾರಿ ಯಂಕಪ್ಪ ಉಪ್ಪಾರ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ರಾಜ್ಯೋತ್ಸವ ಮೆರವಣಿಗೆ ವೇಳೆ ಯುವಕನ ಮೇಲೆ ಮಾರಣಾಂತಿಕ ಹಲ್ಲೆ
Belagavi: ಎಂಇಎಸ್ ಕಾರ್ಯಕರ್ತರ ಪುಂಡಾಟ
Rajyotsava Celebration: ಬೆಳಗಾವಿಯಲ್ಲಿ ವೈಭವದ ಕರ್ನಾಟಕ ರಾಜ್ಯೋತ್ಸವ
Belagavi; ಎಂಇಎಸ್ ನಿಷೇಧಕ್ಕಿಂತ ನಿರ್ಲಕ್ಷ್ಯ ಮಾಡುವುದು ಉತ್ತಮ: ಸತೀಶ್ ಜಾರಕಿಹೊಳಿ
ಬೆಳಗಾವಿ: ಆರ್ಥಿಕ ಮುಗ್ಗಟ್ಟು ಮಧ್ಯೆಯೇ ದುಂದುವೆಚ್ಚ: ಪಾಲಿಕೆಯಿಂದ ಲಕ್ಷ, ಲಕ್ಷ ವೆಚ್ಚ!
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.