ಸುಳ್ಳಿನ ಸರದಾರ ನರೇಂದ್ರ ಮೋದಿ: ಸಚಿನ್ ಮಿಗಾ
Team Udayavani, Apr 13, 2021, 11:51 AM IST
ಮೂಡಲಗಿ: ನಾ ಖಾವುಂಗಾ ನಾ ಖಾನೆದೂಂಗಾ ಎಂದು ಹೇಳುವ ಪ್ರಧಾನಿ ನರೇಂದ್ರ ಮೋದಿಯವರ ಸುಳ್ಳು ಭಾಷಣ, ಜನರಿಗೆ ನೀಡಿರುವ ಆಶ್ವಾಸನೆಗಳ ಮುಖವಾಡ ಕಳಚಿ ಬೀಳುತ್ತಿದೆ. ರೈತರ ದುಡ್ಡನ್ನೇ ಹೊಡೆಯುತ್ತಿರುವ ಮೊದಲ ಸರ್ಕಾರ ಬಿಜೆಪಿಯಾಗಿದೆ ಎಂದು ಕಾಂಗ್ರೆಸ್ ರೈತಮೋರ್ಚಾ ರಾಜ್ಯಾಧ್ಯಕ್ಷ ಸಚಿನ್ ಮಿಗಾ ಹೇಳಿದರು.
ಪಟ್ಟಣದ ಅಂಬೇಡ್ಕರ ನಗರದಲ್ಲಿ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ರೈತ ವಿರೋಧಿ 3 ಕಾಯ್ದೆಗಳನ್ನು ಜಾರಿಗೊಳಿಸಿ ರೈತರನ್ನು ಅಧೋಗತಿಯತ್ತ ತಳ್ಳುತ್ತಿರುವದಲ್ಲದೆ ಗಡಿ ಕಾಯುವ ಸೈನಿಕರಿಗೆ ಬುಲೇಟ್ ಫ್ರುಫ್ ಜಾಕೀಟ್ ನೀಡದೆ ಬುಲೇಟ್ ಟ್ರೈನು ಓಡಿಸುವುದಾಗಿ ಹೇಳುತ್ತಿರುವಮೋದಿಗೆ ಸುಳ್ಳಿನ ಸರದಾರ ಬಿರುದು ಕೊಡಬೇಕು. ಅಚ್ಛೆ ದಿನ ವಾಗ್ಧಾನ ಏನಾಯಿತು? ದಿನ ನಿತ್ಯ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಬಡವರು ಬೀದಿ ಪಾಲಾಗುತ್ತಿದ್ದಾರೆ. ದೊಡ್ಡ ದೊಡ್ಡ ಭಾಷಣಬಿಗಿದು ಜನರನ್ನು ಮರುಳು ಮಾಡಿ ಜನತೆಗೆ ಮೋಸ ಮಾಡುವುದೇ ಇವರ ದೊಡ್ಡ ಸಾಧನೆಯಾಗಿದೆ ಎಂದು ಪ್ರಧಾನಿ ಮೋದಿ ವಿರುದ್ಧ ಹರಿಹಾಯ್ದರು.
ಹಿಟ್ಲರ್ ವರ್ತನೆಯ ಸರ್ವಾಧಿಕಾರ ಧೋರಣೆಯೇ ಅವರಿಗೆ ಮುಳ್ಳಾಗಲಿದೆ. ಈಗಬದಲಾವಣೆಯ ಸಮಯ ಬಂದಿದೆ ಎಲ್ಲ ವರ್ಗದವರ ಪ್ರೀತಿಗೆ ಪಾತ್ರರಾದ ದಕ್ಷ ಆಡಳಿತಗಾರ,ಸರಳ ಸಜ್ಜನಿಕೆಯ ವ್ಯಕ್ತಿ ಸತೀಶ ಜಾರಕಿಹೊಳಿಸಮರ್ಥ ನಾಯಕರಾಗಿದ್ದಾರೆ. ಅವರನ್ನು ಭಾರಿಬಹುಮತದಿಂದ ಗೆಲ್ಲಿಸುವ ಮೂಲಕ ಮೋದಿಸರ್ಕಾರಕ್ಕೆ ತಕ್ಕ ಪಾಠ ಕಲಿಸಿ ಬೆಳಗಾವಿಯಿಂದದೆಹಲಿಗೆ ಈ ಮೂಲಕ ಸಂದೇಶ ಕಳಿಸೋಣ ಎಂದು ಹೇಳಿದರು.
ಕಿಸಾನ್ ಕಮಿಟಿ ಜಿಲ್ಲಾಧ್ಯಕ್ಷ ಕಲ್ಲಪ್ಪಗೌಡ ಲಕ್ಕಾರ,ಬೆಳಗಾವಿ ವಿಭಾಗ ಸಂಚಾಲಕ ರಾಜೇಂದ್ರ ಪಾಟೀಲ,ಕಾರ್ಯಾಧ್ಯಕ್ಷ ಭೀಮಶಿ ಕಾರದಗಿ, ಉಪಾಧ್ಯಕ್ಷಇಜಾಜ ಕೊಟ್ಟಲಗಿ, ದಲಿತ ಮುಖಂಡ ರಮೇಶಸಣ್ಣಕ್ಕಿ ಮಾತನಾಡಿದರು.
ಈ ಸಂದರ್ಭದಲ್ಲಿ ಅರಭಾಂವಿ ಬ್ಲಾಕ್ ಅಧ್ಯಕ್ಷ ಗುರುರಾಜ ಪೂಜೇರಿ, ಕೌಜಲಗಿ ಬ್ಲಾಕ್ ಅಧ್ಯಕ್ಷಲಗಮನ್ನ ಕಳಸನ್ನವರ, ದಸ್ತಗೀರ ಕಾಗವಾಡೆ, ಶಾಬೂಸಣ್ಣಕ್ಕಿ, ಅಶೋಕ ಮರೆನ್ನವರ, ರಾಜು ಪರಸನ್ನವರ,ಶೆಬ್ಬೀರ ಕೆರಿಪೆಳ್ಳಿ, ನಾಗೇಂದ್ರ ಕಬ್ಬೂರ, ಬಸವರಾಜತುಬುಚಿ, ಗುರು ಗಂಗನ್ನವರ, ರμàಕ ಪೈಲವಾನಹಾಗೂ ಅನೇಕ ಮುಖಂಡರು, ಕಾರ್ಯಕರ್ತರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಮರಕ್ಕೆ ಕ್ರೂಸರ್ ಢಿಕ್ಕಿ: ಸ್ಥಳದಲ್ಲೇ ಮೂವರ ಸಾವು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Belagavi: ಪೂರ್ಣಾವಧಿ ಅಧಿವೇಶನದಲ್ಲಿ ಸಮಸ್ಯೆಗಳ ಪೂರ್ಣ ಚರ್ಚೆಯಾಗಲಿ: ಡಾ.ಪ್ರಭಾಕರ್ ಕೋರೆ
Belagavi: ಗೆಳೆಯರ ಜೊತೆ ಪಾರ್ಟಿಗೆಂದು ಹೋದ ವ್ಯಕ್ತಿ ಅನುಮಾನಾಸ್ಪದವಾಗಿ ಸಾ*ವು
Belagavi: ಬಾಲಕಿ ಮೇಲೆ ಅತ್ಯಾಚಾರ… ಆರೋಪಿಗೆ 20 ವರ್ಷ ಜೈಲು ಶಿಕ್ಷೆ
MUST WATCH
ಹೊಸ ಸೇರ್ಪಡೆ
Amazon Employee: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.