Belgaum: ಸಂಗೊಳ್ಳಿ ರಾಯಣ್ಣ ಪ್ರತಿಮೆ ಲೋಕಾರ್ಪಣೆ
ಪ್ರತಿಮೆ ಮತ್ತು ಪರಿಸರವನ್ನು ಸ್ವಚ್ಛ-ಸುಂದರವಾಗಿ ಇರಿಸಬೇಕು
Team Udayavani, Aug 28, 2023, 5:13 PM IST
ಮೂಡಲಗಿ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮತ್ತು ಮತ್ತು ಜಗಜ್ಯೋತಿ ಶ್ರೀ ಬಸವಣ್ಣನವರ ಜೀವನ ಮತ್ತು ತತ್ವಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂದು ಗೋಕಾಕ ಲಕ್ಷ್ಮೀ ಶಿಕ್ಷಣ ಸಂಸ್ಥೆಯ ನಿರ್ದೇಶಕ ಹಾಗೂ ಯುವ ಮುಖಂಡ ಸರ್ವೋತ್ತಮ ಜಾರಕಿಹೊಳಿ ಹೇಳಿದರು.
ತಾಲೂಕಿನ ಸುಣಧೋಳಿ ಗ್ರಾಮದ ಸಂಕೇಶ್ವರ-ಸಂಗಮ ರಾಜ್ಯ ಹೆದ್ದಾರಿ ಪಕ್ಕದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಪ್ರತಿಮೆ
ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದ ಅವರು, ಈ ರಸ್ತೆಯಲ್ಲಿ ಸಂಚರಿಸುವರಿಗೆ ಇಬ್ಬರು ಮಹಾನ್ ವ್ಯಕ್ತಿಗಳ ದರ್ಶನ ಮಾಡಿಸುವಂತಹ ಕಾರ್ಯ ಶ್ಲಾಘನೀಯ ಎಂದರು.
ಕರ್ನಾಟಕ ಪ್ರದೇಶ ಕುರುಬ ಸಂಘದ ಮಾಜಿ ರಾಜ್ಯಾಧ್ಯಕ್ಷ ಡಾ| ರಾಜೇಂದ್ರ ಸಣ್ಣಕ್ಕಿ ಮಾತನಾಡಿ, ಪ್ರತಿಮೆ ಮತ್ತು ಪರಿಸರವನ್ನು ಸ್ವಚ್ಛ-ಸುಂದರವಾಗಿ ಇರಿಸಬೇಕು ಎಂದರು.
ಸುಣಧೋಳಿ ಜಡಿಸಿದ್ದೇಶ್ವರ ಮಠದ ಅಭಿನವ ಶ್ರೀ ಶಿವಾನಂದ ಶ್ರೀಗಳು ಮಾತನಾಡಿ, ಅನುಭಾವದ ಮೂಲಕ ಆಂತರಿಕ ಶಕ್ತಿ ತುಂಬುವ ಬಸವಣ್ಣನ ಮೂರ್ತಿ ಮತ್ತು ಬಾಹ್ಯ ಶಕ್ತಿ ಮತ್ತು ಶೌರ್ಯ ತುಂಬುವ ರಾಯಣ್ಣನ ಮೂರ್ತಿಗಳೆರಡೂ ಸುಣಧೋಳಿ ಗ್ರಾಮದಲ್ಲಿ ಪ್ರತಿಷ್ಠಾಪಿಸಲ್ಪಟ್ಟಿವೆ, ಈ ಮಹಾನ ವ್ಯಕ್ತಿಗಳು ಗ್ರಾಮದ ಜನತೆಯ ಬುದುಕಿಗೆ ಪ್ರೇರಕ ಶಕ್ತಿಗಳಾಗಲಿ ಎಂದು ಹಾರೈಸಿದರು.
ಸಾನ್ನಿಧ್ಯ ವಹಿಸಿದ್ದ ಸುಣಧೋಳಿ ಚಿದಾನಂದ ಶ್ರೀಗಳು, ಹುಲಜಯಂತಿಯ ಶ್ರೀ ಮಹಾಳಿಂಗರಾಯ ಮಹಾರಜರು, ಹಡಗಿನಾಳದ ಶ್ರೀ ತಪೋನಿರತ ಮುತ್ತೇಶ್ವರ ಶ್ರೀಗಳು ಆಶೀರ್ವಚನ ನೀಡಿದರು. ಇದಕ್ಕೂ ಮುಂಚೆ ರಾಯಣ್ಣನ ಪ್ರತಿಮೆಯನ್ನು ಸುಣಧೋಳಿ ಗ್ರಾಮದ ಜಡಿಸಿದ್ದೇಶ್ವರ ಮಠದ ಹತ್ತಿರದಿಂದ ಮೆರವಣಿಗೆಯಲ್ಲಿ ತರಲಾಯಿತು.ನಾಡಿನ ವಿವಿಧ ಪೂಜ್ಯರು ಮೂರ್ತಿ ಲೋಕಾರ್ಪಣೆಗೊಳಿಸಿದರು.
ವೇದಿಕೆಯಲ್ಲಿ ಸುಣಧೋಳಿ ಸಂಗೊಳ್ಳಿ ರಾಯಣ್ಣ ಯುವಕ ಸಂಘದ ಅಧ್ಯಕ್ಷ ಸಿದ್ಧಲಿಂಗ ಅಜ್ಜಪ್ಪನ್ನವರ, ಗಣ್ಯರಾದ ಮಡೇಪ್ಪ ತೋಳಿನವರ, ಭೀಮಶಿ ಮಗದುಮ್, ಹನಮಂತ ಗುಡ್ಲಮನಿ, ಡಾ.ಮಹಾದೇವ ಜಿಡ್ಡಿಮನಿ, ಡಾ.ಎಸ್.ಎಸ್ .ಪಾಟೀಲ, ಬಸವರಾಜ ಭೂತ್ತಾಳಿ, ರಾಯಪ್ಪ ಬಾನಸಿ, ಭೀಮಶಿ ಕಾರದಗಿ, ವಿನಾಯಕ ಕಂಠಿಕಾರ, ವಿಜಯ ಜಂಬಗಿ, ಅಡಿವೆಪ್ಪ ಅಳಗೋಡಿ, ಗಿರೀಶ ಹಳ್ಳೂರ, ಶ್ರೀಕಾಂತ ದೇವರಮನಿ, ಭೀಮಶಿ ಉವನ್ನವರ, ಗದಿಗೇಪ್ಪ ಅಮ್ಮಣಿ, ಸಿದ್ಧಾರೂಢ ಪಾಶಿ, ಸದಾಶಿವ ದೇವನಗೋಳ, ಬಸು ಹಟ್ಟಿಹೊಳಿ, ಮಹಾಂತೇಶ ಪಾಟೀಲ, ಶಂಕರ ಕುರಿಬಾಗಿ, ರಾಜು ವಾಲಿ, ಅವೀನಾಶ ಹಿರೇಮಠ, ಮಹಾದೇವ ಹಾರುಗೇರಿ, ಅನೀಲ ಕಣಕಿಕೋಡಿ ಮತ್ತಿತರರು ಉಪಸ್ಥಿತರಿದ್ದರು. ಬಿವಿಎನ್ ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು, ಮುತ್ತು ಜಿಡಿಮನ್ನಿ ಸ್ವಾಗತಿಸಿದರು, ಮಹಾಂತೇಶ ಅಂದಾನಿ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
Belagavi; ಬಹಳ ನೋವಾಗಿದೆ, ನೂರು ಸಿ.ಟಿ.ರವಿ ಬಂದರೂ ಹೆದರುವುದಿಲ್ಲ: ಲಕ್ಷ್ಮೀ ಹೆಬ್ಬಾಳಕರ
Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ
Mrinal Hebbalkar: ನನ್ನ ತಾಯಿಗೆ ರವಿ ಬಳಸಿದ ಪದದಿಂದ ನೋವಾಗಿದೆ: ಮೃಣಾಲ್
Belgavi: ಸಿ.ಟಿ.ರವಿ ಪ್ರಕರಣ ಮುಂದುವರಿಸುವಲ್ಲಿ ಅರ್ಥವೇ ಇಲ್ಲ: ಸಚಿವ ಸತೀಶ್ ಜಾರಕಿಹೊಳಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.