ಸಂಕೇಶ್ವರ ಸಿಪಿಐ,ಸಿಬ್ಬಂದಿಗಳಿಂದ ನನ್ನ ವಿರುದ್ದ ಷಡ್ಯಂತ್ರ: ಅಮಾನತಾದ ಪಿಎಸ್ ಐ ನರಸಿಂಹರಾಜು
Team Udayavani, Dec 25, 2023, 1:13 PM IST
ಸಂಕೇಶ್ವರ : ನನ್ನ ವಿರುದ್ದ ಸಂಕೇಶ್ವರದ ಸಿಪಿಐ ಅವಜಿ ಹಾಗೂ ಸಿಬ್ಬಂದಿಗಳು ಸೇರಿ ಷಡ್ಯಂತ್ರ ಮಾಡಿ ನನ್ನ ಅಮಾನತು ಮಾಡುವ ಮೂಲಕ ಬಲಿಪಶು ಮಾಡಲಾಗಿದೆ. ನಾನು ಈ ಭಾಗದ ಯಾವುದೇ ಮಹಿಳೆಗೆ ಕಿರುಕುಳ ಕೊಟ್ಟ ಬಗ್ಗೆ ಉದಾಹರಣೆಗೆ ನೀಡಿದರೆ ನಾನು ಸೇವೆಯಿಂದ ನಿವೃತ್ತಿ ಆಗುತ್ತೇನೆ ಎಂದು ಅಮಾನತುಗೊಂಡಿರುವ ಪಿಎಸ್ ಐ ನರಸಿಂಹರಾಜು ಅವರು ಹೇಳಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ಬೆಳಿಗ್ಗೆ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನನ್ನು ಸಂಕೇಶ್ವರ ಠಾಣೆಯಿಂದ ಹೊರಹಾಕಲು ಸಿಪಿಐ ಜೊತೆ ಇಬ್ಬರು ಸಿಬ್ಬಂದಿಗಳಾದ ನಾಗನೂರೆ ಹಾಗೂ ಜಂಬಗಿ ಎನ್ನುವರು ಕೂಡಾ ಶಾಮೀಲಾಗಿರುವುದು ಸಂಶಯ ಇದೆ ಎಂದು ಹೇಳಿದರು.
ನನ್ನ ವಿರುದ್ದ ಷಡ್ಯಂತ್ರ ಬ್ಲಾಕ್ ಮೇಲ್ ಮಾಡಲಾಗಿದೆ. ನಾನು ನಿರಪರಾಧಿಯಾಗಿದ್ದೇನೆ. ಜಂಬಗಿ ನಾಗನೂರೆ ಅವರ ಪಿತೂರಿ ಇದರಲ್ಲಿ ಇರಬಹುದು ಎನ್ನುವ ಸಂಶಯ ಇದೆ ಎಂದರು.
ನಾನು ಈ ವಿಷಯವನ್ನು ನ್ಯಾಯಾಲಯದಲ್ಲಿ ಕಾನೂನಿನ ಮೂಲಕ ಹೋರಾಟ ಮಾಡುತ್ತೇನೆ. ನ್ಯಾಯಾಲಯದ ಮುಖಾಂತರ ನ್ಯಾಯ ಪಡೆಯುತ್ತೇನೆ. ಈ ವಿಷಯವನ್ನು ಸವಾಲಾಗಿ ಸ್ವೀಕಾರ ಮಾಡುತ್ತೇನೆ ಎಂದರು.
ಒಂದು ಸಣ್ಣ ವಿಷಯಕ್ಕೆ ಸಿಪಿಐ ಜೊತೆ ಭಿನ್ನಾಭಿಪ್ರಾಯ ಬಂತು. 3 ಲಕ್ಷ ವೆಚ್ಚದಲ್ಲಿ ಸಿಪಿಐ ರೂಮ್ ಸುಧಾರಣೆಗಾಗಿ ಖರ್ಚು ಮಾಡಿದ್ದರು. ಇದರ ವಿರುದ್ದ ಧ್ವನಿ ಎತ್ತಿರುವ ನನ್ನನ್ನು ಈ ಊರಿನಿಂದ ಹೊರಹಾಕಲು ಪ್ರಯತ್ನದಿಂದ ಸಿಪಿಐ ಹಾಗೂ ಕೆಲ ಸಿಬ್ಬಂದಿಗಳು ಸೇರಿ ಈ ರೀತಿಯಾಗಿ ನನ್ನನ್ನು ತೇಜೋವಧೆ ಮಾಡಲಾಗಿದೆ ಎಂದರು.
ಯಾವುದೇ ಸತ್ಯಾಂಶವನ್ನು ಅರಿಯದೆ, ನನ್ನ ಕರೆದು ವಿಚಾರಣೆ ಮಾಡದೆ ಅಮಾನತು ಮಾಡಲಾಗಿದೆ. ಒತ್ತಾಯ ಪೂರ್ವಕವಾಗಿ ಮಹಿಳೆ ಕಡೆಯಿಂದ ಬರೆಯಿಸಿಕೊಳ್ಳಲಾಗಿದೆ. ನನ್ನನ್ನು ಈ ಪ್ರಕರಣದಲ್ಲಿ ಬಲಿಪಶು ಮಾಡಲಾಗಿದೆ. ಇದರಲ್ಲಿ ಸತ್ತಾಂಶ ಇಲ್ಲ. ಜಿಲ್ಲಾ ಪೊಲೀಸ್ ವರಿಷ್ಠ ಭೀಮಾಶಂಕರ ಗುಳೇದ ಅವರು ಏಕಪಕ್ಷೀಯವಾಗಿ ಅಮಾನತು ಮಾಡಿದ್ದಾರೆ ಎಂದು ದೂರಿದರು.
ಮಹಿಳೆಯೋರ್ವಳು ಅಕ್ಕಪಕ್ಕದವರ ಜೊತೆ ಜಗಳ ಮಾಡಿದ್ದರು. ಅವರಿಗೆ ರಕ್ಷಣೆಗಾಗಿ ನನ್ನ ನಂಬರ್ ನೀಡಿದ್ದೇನೆ. ಅವರ ಮಕ್ಕಳ ಅನಾರೋಗ್ಯ ಹಿನ್ನೆಲೆಯಲ್ಲಿ ಆರ್ಥಿಕ ಸಹಾಯ ಮಾಡಿದ್ದೇವೆ. ವಿದ್ಯಾ ಗೋಲ್ಡ್ ಅಂಗಡಿಯಲ್ಲಿ 20 ಸಾವಿರ ಚಿನ್ನ ಕೊಡಿಸಿದ್ದೇನೆ. ಗೆಳೆಯರ ಹಾಗೆ ಇದ್ದೇವೆ ಇದನ್ನು ನನ್ನ ತೇತೋವಧೆಗೆ ಬಳಸಲಾಗಿದೆ ಎಂದರು.
ಕೆಲ ಪೊಲೀಸ್ ಸಿಬ್ಬಂದಿಗಳು ಸಂಕೇಶ್ವರದಲ್ಲಿ ಪ್ಲಾಟ್ ಗಳು ಹಾಗೂ ಬ್ಯುಸಿನೆಸ್ ಮಾಡಿಕೊಂಡಿದ್ದಾರೆ. ಅದನ್ನು ವಿರೋಧ ಮಾಡಿದ್ದಕ್ಕೆ ನನ್ನನ್ನು ಗುರಿ ಮಾಡಲಾಯಿತು. ಹಿಂದೆಯಿಂದಲು ನನ್ನ ತೇರಜೋವಧೆ ಮಾಡುವ ಕೆಲಸ ಮಾಡಲಾಗಿದೆ. ಅವಜಿ ಅವರಿಗೆ ನನ್ನ ಮೇಲೆ ಏನು ಅಸಮಾಧಾನ ಇತ್ತು ಗೊತ್ತಿಲ್ಲ. ಮಹಿಳೆ ಮಾಡಿದ ಕರೆಗಾಗಿ ನೇರವಾಗಿ ರಾತ್ರಿ ಹೆಣ್ಣುಮಗಳ ಮನೆಗೆ ಹೋಗಿ ಅರ್ಜಿ ಬರೆಯಿಸಿಕೊಂಡು ಎಸ್ ಪಿ ಅವರಿಗೆ ನೀಡಿದ್ದಾರೆ ಎಂದು ಆರೋಪಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠರು ನನ್ನ ವಿಚಾರಣೆ ಮಾಡದೆ ಆ ಮಹಿಳೆಯನ್ನು ಕರೆದು ವಿಚಾರಣೆ ಮಾಡದೆ. ರಾತ್ರಿ ಮಹಿಳೆ ಕಡೆಯಿಂದ ಒತ್ತಾಯ ಪೂರ್ವಕವಾಗಿ ಅರ್ಜಿ ಬರೆಸಿಕೊಂಡು ಈ ರೀತಿಯಾಗಿ ನನ್ನನ್ನು ಅಮಾನತು ಮಾಡಲಾಗಿದೆ.
ನನ್ನನ್ನು ಬ್ಲಾಕ್ ಮೇಲ್ ಮಾಡುವ ರೀತಿ ಮಾಡಲಾಗಿದೆ. ಆ ಮಹಿಳೆ ಮೇಲೆ ನಮಗೆ ಯಾವುದೆ ರೀತಿ ದ್ವೇಷ ಇಲ್ಲ. ಇಲ್ಲಿಯವರೆಗೆ ಹಿತ್ತಲಮನಿ ಸೇರಿದಂತೆ ಕೆಲವು ಅಧಿಕಾರಿ, ಸಿಬ್ಬಂದಿ ಅವರನ್ನು ಬಲಿಪಶು ಮಾಡಿದ್ದಾರೆ.
ಸುಮಾರ ವರ್ಷಗಳಿಂದ ಸಂಕೇಶ್ವರದಲ್ಲಿ ಕೆಲ ಸಿಬ್ಬಂದಿಗಳು ಕೆಲಸ ಮಾಡುತ್ತಿದ್ದಾರೆ. ಇಲ್ಲಿ ಆಗು ಹೋಗುಗಳ ಬಗ್ಗೆ ಅವರು ಮಾಹಿತಿ ಪಡೆದು ಈ ರೀತಿಯ ಷಡ್ಯಂತ್ರ ಮಾಡಿದ್ದಾರೆ ಎಂದು ಆರೋಪಿಸಿದರು.
ಆ ಮಹಿಳೆಗೆ ಮಾನವೀಯತೆಯ ನೆಲೆ ಮೇಲೆ ನಾನು ಸಹಾಯ ಮಾಡಿದ್ದೇನೆ. ಸಿಪಿಐ ಅವಜಿ ಅವರು ಆ ಮಹಿಳೆ ಮನೆಗೆ ಹೋಗುವಾಗ ಯಾವುದೇ ಮಹಿಳಾ ಸಿಬ್ಬಂದಿ ಕರೆದುಕೊಂಡು ಹೋಗದೆ ತಾವೇ ಸ್ವತಃ ಹೋಗಿರುವುದು ಸರಿನಾ?.
ಸಂಕೇಶ್ವರದ ಪೊಲೀಸ್ ಸಿಬ್ಬಂದಿಗಳು ಠಾಣೆಗೆ ಬರುವ ಜನರು ಅರ್ಜಿ ಕೊಟ್ಟರೆ ನಾಳೆ ಬಾ ಅಂತಾರೆ ಎಂದು ಅಮಾನತಾದ ಪಿಎಸ್ ಐ ನರಸಿಂಹರಾಜು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಗಳ ಈಡೇರಿಕೆಗೆ ಕ್ರಮ: ಸಚಿವೆ ಲಕ್ಷ್ಮೀ
ತೀವ್ರ ಸ್ವರೂಪ ಪಡೆದ ಅತಿಥಿ ಶಿಕ್ಷಕರ ಪ್ರತಿಭಟನೆ; ಶಿಕ್ಷಕ ಅಸ್ವಸ್ಥ, ಆಸ್ಪತ್ರೆಗೆ ದಾಖಲು
Grant: ರಸ್ತೆ ಅಭಿವೃದ್ಧಿಗೆ ಪಕ್ಷಾತೀತವಾಗಿ ಶಾಸಕರಿಗೆ 2 ಸಾವಿರ ಕೋ.ರೂ.: ಮುಖ್ಯಮಂತ್ರಿ
ವಾಲ್ಮೀಕಿ ಹಗರಣ ಮಾದರಿ ನಗರೋತ್ಥಾನದಲ್ಲೂ ನಿಧಿ ತಿರುವು!
Winter Session: ಸೋಮವಾರ 14.18 ಗಂಟೆ ಕಲಾಪ: ನೂತನ ದಾಖಲೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.