ಪುಣ್ಯಕ್ಷೇತ್ರಗಳಲ್ಲಿ ಸಾಮೂಹಿಕ ವಿವಾಹ ಆಚರಣೆ
Team Udayavani, Mar 9, 2020, 2:41 PM IST
ಸವದತ್ತಿ: ಪ್ರತಿ ಕುಟುಂಬಗಳಲ್ಲಿ ಮದುವೆ ಹೇಗೆ ಜರುಗುತ್ತವೆಯೋ ಅದೇ ರೀತಿ ಮುಜರಾಯಿ ದೇವಸ್ಥಾನಗಳಲ್ಲಿಯೂ ಸಹ ಸಪ್ತಪದಿ ಉಚಿತ ಸಾಮೂಹಿಕ ವಿವಾಹ ಮಹೋತ್ಸವದ ಕುರಿತು ಮುತುವರ್ಜಿ ವಹಿಸಲಾಗುವುದು ಎಂದು ಮುಜರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.
ಸ್ಥಳೀಯ ಮಾಮನಿ ಕಲ್ಯಾಣ ಮಂಟಪದಲ್ಲಿ ರವಿವಾರ ಹಿಂದೂ ಧಾರ್ಮಿಕ ಸಂಸ್ಥೆ, ಧಾರ್ಮಿಕ ದತ್ತಿ ಇಲಾಖೆ ಮತ್ತು ಜಿಲ್ಲಾಡಳಿತದಿಂದ ಸಪ್ತಪದಿ ಸರಳ ಸಾಮೂಹಿಕ ವಿವಾಹದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿ, ಆಯ್ದ ದೇವಸ್ಥಾನಗಳಲ್ಲಿ ಸರ್ಕಾರದಿಂದಲೇ ಉಚಿತ ಸಾಮೂಹಿಕ ವಿವಾಹ ಆಚರಣೆ ತರಲಾಗುತ್ತಿದೆ ಎಂದರು.
ಇನ್ನು ಇನ್ಫೋಸಿಸ್ ಮುಖ್ಯಸ್ಥೆ ಸುಧಾಮೂರ್ತಿ ಇದಕ್ಕೆ ರಾಯಭಾರಿ ಆಗುತ್ತೇನೆಂದು ತಿಳಿಸಿರುವುದು, ದೇವೆಗೌಡರು ಹರ್ಷ ವ್ಯಕ್ತಪಡಿಸಿದ್ದು ಸಂತಸ ತಂದಿದೆ. ಸಂತ್ರಸ್ತರಿಗೆ ಆತ್ಮಸ್ಥೈರ್ಯ ತುಂಬುವುದು ಹೇಗೆ ಎಂದು ಸರಕಾರದ ಚಿಂತೆಯಾಗಿತ್ತು. ಸರ್ವ ಸ್ಪರ್ಶಿಯಾಗಿ ಜನಮನ ತಲುಪಲು ಸರ್ಕಾರ ಎರಡು ಹಂತದಲ್ಲಿ ವಿವಾಹ ನಡೆಸಲು ಸನ್ನದ್ಧವಿದೆ ಎಂದರು. ಶಾಸಕ ಆನಂದ ಮಾಮನಿ ಮಾತನಾಡಿ, ಯಲ್ಲಮ್ಮ ದೇವಸ್ಥಾನದಲ್ಲಿ ಜರುಗುವ ಸಪ್ತಪದಿಯಲ್ಲಿ ಸರ್ಕಾರ ಒಪ್ಪಲಿ, ಒಪ್ಪದೇ ಇರಲಿ ವೈಯಕ್ತಿಕವಾಗಿ ಪ್ರತಿ ನವಜೋಡಿಗೆ 5 ರಿಂದ 6 ಸಾವಿರ ರೂ.ಗಳ ಗೃಹ ಬಳಕೆ ಸಾಮಗ್ರಿಗಳನ್ನು ನೀಡಲಾಗುವುದು. ಸುಧಾಮೂರ್ತಿ ಅವರನ್ನು ಸಪ್ತಪದಿ ಉದ್ಘಾಟನೆಗೆ ಅಹ್ವಾನಿಸಲಾಗುವುದು ಎಂದರು.
ಸರ್ಕಾರ ಈ ಧಾರ್ಮಿಕ ಸಂಸ್ಥೆಗಳಲ್ಲಿ ಭಕ್ತರ ಹಣದಿಂದ ಭಕ್ತರಿಗೋಸ್ಕರ ಯೋಜನೆ ರೂಪಿಸಿ, ಕೆಳಹಂತದ ಜನರಿಗೆ ಅನುಕೂಲ ಕಲ್ಪಿಸಿದೆ. ಉಚಿತ ಸಾಮೂಹಿಕ ವಿವಾಹ ಪುಣ್ಯಕ್ಷೇತ್ರಗಳಲ್ಲಿ ಆಗಬೇಕೆನ್ನುವುದು ಸರಕಾರದ ಉದ್ದೇಶವಾಗಿದ್ದು, ಈ ಕುರಿತು ಸಾರ್ವಜನಿಕರು ತಮ್ಮ ಸಲಹೆ ಸೂಚನೆಗಳನ್ನು ನೀಡಿ ಕಾರ್ಯಕ್ರಮ ಯಶಸ್ವಿಯಾಗಲು ಸಹಕರಿಸಬೇಕು ಎಂದರು.
ಕುಡಚಿ ಶಾಸಕ ಪಿ. ರಾಜೀವ್ ಮಾತನಾಡಿ, ಅದ್ಧೂರಿ ಆಡಂಬರದ ಕುದುರೆ ಏರಿ ಮದುವೆ ಮಾಡಿ, ಅದೆಷ್ಟೋ ಕುಟುಂಬಗಳು ಬೀದಿಗೆ ಬಂದು ಆತ್ಮಹತ್ಯೆಗೂ ಶರಣಾಗಿವೆ. ಅನಗತ್ಯ ಖರ್ಚುಗಳ ಬದಲಾಗಿ ಈ ಯೋಜನೆ ಭಾರತಕ್ಕೆ ಮಾದರಿಯಾಗಲಿದೆ ಎಂದರು.
ಈ ವೇಳೆ ರವಿ ಕೋಟರಗಸ್ತಿ, ಶಿವಾನಂದ ಭಜಂತ್ರಿ, ಹಾಸನ ಸಕಲೇಶಪುರದ ಶ್ರೀ, ರಾಮನಗೌಡ ತಿಪರಾಶಿ, ಜೀರಗಾಳ, ಜಗದೀಶ ಶಿಂತ್ರಿ, ಜಿ.ಎಸ್. ಗಂಗಲ, ಎಂ.ಎಸ್. ಹಿರೇಕುಂಬಿ, ಜಗದೀಶ ಹನಸಿ, ಪ್ರಶಾಂತ ಪಾಟೀಲ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi Session: ಬರಾಕ್ ಒಬಾಮಾ ಆಹ್ವಾನಕ್ಕೆ ಸರಕಾರ ತೀರ್ಮಾನ
Belagavi: ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದ ಮುಗಿದ ಅಧ್ಯಾಯ: ಸಚಿವ ಎಚ್.ಕೆ. ಪಾಟೀಲ್
Belagavi: ತಹಶೀಲ್ದಾರ್ ಕೊಠಡಿಯಲ್ಲೇ ಸಿಬ್ಬಂದಿ ನೇಣಿಗೆ ಶರಣು, ಸ್ಥಳದಲ್ಲಿ ಡೆತ್ ನೋಟ್ ಪತ್ತೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Bailhongal: ಯುವಕನಿಗೆ ಚಾಕು ಇರಿದು ಬರ್ಬರವಾಗಿ ಕೊ*ಲೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.