ರಮೇಶ್ ದುಡ್ಡು ಮಾಡಿ, ಸಾಲ ತೀರಿಸಿ ಮತ್ತೆ ಕಾಂಗ್ರೆಸ್ ಬರುತ್ತಾರೆ: ಸತೀಶ್ ಜಾರಕಿಹೊಳಿ
Team Udayavani, Oct 18, 2019, 3:35 PM IST
ಬೆಳಗಾವಿ: ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಮುಂದೆ ಮತ್ತೆ ಕಾಂಗ್ರೆಸ್ ಗೆ ಮರಳುತ್ತಾರೆ. ಅವರಿಗೆ ದುಡ್ಡು ಮಾಡೋದೆ ಕೆಲಸ. ಕಳೆದ ಒಂದು ವರ್ಷದ ಹಿಂದೆಯೇ ಬಿಜೆಪಿಗೆ ಹೋಗುವ ಮುನ್ನ ಸಾಲ ಇದೆ ತೀರಿಸಿ ಮತ್ತೆ ಕಾಂಗ್ರೆಸ್ ಬರುತ್ತೇನೆ ಅಂತಾ ರಮೇಶ್ ಹೇಳಿದ್ದಾನೆ ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆಬೆಳಗಾವಿಯಲ್ಲಿ ಮಾತನಾಡಿದ ಸತೀಶ್ ಜಾರಕಿಹೊಳಿ, ಗೋಕಾಕ್ ನ ವ್ಯವಸ್ಥೆ ಬದಲಾವಣೆ ಆಗಬೇಕೆಂದರೆ ಶಾಸಕ ಬದಲಾವಣೆ ಆಗಬೇಕು. ಶಾಸಕ ರಮೇಶ್ ಬದಲಾವಣೆ ಆದರೆ ಅಂಬಿರಾವ್ ಪಾಟೀಲ್ ಅಧಿಕಾರ ಕಟ್ ಆಗುತ್ತೆ. ರಮೇಶ್ ಶಾಸಕನಾಗಿ ಇರುವವರೆಗೂ ಅಂಬಿರಾವ್ ಕೈಯಲ್ಲಿ ಅಧಿಕಾರ ಇರುವುದೇ ಎಂದರು.
ರಮೇಶ್ ಜಾರಕಿಹೊಳಿ ಈಗ ಕಾಂಗ್ರೆಸ್ ಬರುವುದಿಲ್ಲ ಮುಂದೆ ಬರಬಹುದು. ಸಾಲ ತೀರಿಸಬೇಕು, ದುಡ್ಡು ಮಾಡುವುದಕ್ಕೆ ಮೂರ್ನಾಲ್ಕು ವರ್ಷಕ್ಕೆ ಆಗುತ್ತದೆ. ಆಗ ಯಾರು ಎಲ್ಲಿರ್ತಾರೆ ಗೊತ್ತಿಲ್ಲ. ಸೇವೆ ಮಾಡಲು ಬೇರೆಯವರು ರಾಜಕಾರಣ ಮಾಡಿದರೆ, ರಮೇಶ್ ಮತ್ತು ಅಳಿಯ ಅಂಬಿರಾವ್ ದುಡ್ಡು ಮಾಡಲು ರಾಜಕಾರಣ ಮಾಡುತ್ತಾರೆ ಎಂದು ಸತೀಶ್ ಜಾರಕಿಹೊಳಿ ವಾಗ್ದಾಳಿ ನಡೆಸಿದರು.
ಸುಣ್ಣದ ನೀರು ಕುಡಿದಿದ್ದಾನೆ
ಜಾತ್ರೆಯಲ್ಲಿ ಕೋಣ ಕಡಿಯಲು ಐದು ದಿನ ಪೂರ್ವದಲ್ಲಿ ಸುಣ್ಣದ ನೀರು ಕುಡಿಸುತ್ತಾರೆ. ಆ ರೀತಿ ತಪ್ಪಿ ರಮೇಶ್ ಜಾರಕಿಹೊಳಿ ಸುಣ್ಣದ ನೀರು ಕುಡಿದಿದ್ದಾನೆ. ಪಾರ್ಟಿ ಗಲಿಬಿಲಿ ಮಾಡಿ ರಮೇಶ್ ಸಿಕ್ಕಿಹಾಕಿಕೊಂಡು ಕುಳಿತಿದ್ದಾನೆ. ರಮೇಶ್ ರನ್ನು ಸೋಲಿಸಲು ಮತದಾರರಿಗೆ ಅವಕಾಶ ಇದೆ. ಉಪಚುನಾವಣೆಗೂ ರೆಡಿ, ಫ್ರೆಶ್ ಚುನಾವಣೆಗೂ ನಾವು ತಯಾರಿದ್ದೇವೆ ಎಂದು ಸತೀಶ್ ವಿಶ್ವಾಸ ವ್ಯಕ್ತಪಡಿಸಿದರು.
ಮುಂದಿನ ದಿನಗಳಲ್ಲಿ ರಮೇಶ್ ಜಾರಕಿಹೊಳಿ ಪುತ್ರ ಸಂತೋಷ ಜಾರಕಿಹೊಳಿ ಲಖನ್ ಪರವಾಗಿ ಪ್ರಚಾರಕ್ಕೆ ಬರುವುದನ್ನ ಕಾದು ನೋಡಬೇಕಿದೆ. ಸಂತೋಷ ಮತ್ತು ಲಖನ್ ನಡುವೆ ಒಳ್ಳೆಯ ಸಂಬಂಧವಿದೆ ಎಂದು ಜಾರಕಿಹೊಳಿ ಕುಟುಂಬದ ಹೊಸ ಅಧ್ಯಾಯದ ಮುನ್ಸೂಚನೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Minister Sudhakar: ಸೀಟ್ ಬ್ಲಾಕಿಂಗ್ ದಂಧೆ ವಿರುದ್ಧ ಕ್ರಿಮಿನಲ್ ಕೇಸ್ ಅಸ್ತ್ರ
State Govt: ಒಳಮೀಸಲು ನಿಗದಿ ಆಯೋಗಕ್ಕೆ ನ್ಯಾ| ಎಚ್.ಎನ್. ನಾಗಮೋಹನ್ ದಾಸ್ ಅಧ್ಯಕ್ಷ?
Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
Congress: ಸಿದ್ದರಾಮಯ್ಯ ಮಾಸ್ ಲೀಡರ್, ಮುಗಿಸಲು ಬಿಜೆಪಿ ಯತ್ನ: ಡಿ.ಕೆ.ಶಿವಕುಮಾರ್
MUST WATCH
ಹೊಸ ಸೇರ್ಪಡೆ
Himachal Pradesh; ಸಿಎಂಗೆ ತಂದಿದ್ದ ಸಮೋಸಾ ಮಾಯ: ಸಿಐಡಿ ತನಿಖೆ?
Minister Sudhakar: ಸೀಟ್ ಬ್ಲಾಕಿಂಗ್ ದಂಧೆ ವಿರುದ್ಧ ಕ್ರಿಮಿನಲ್ ಕೇಸ್ ಅಸ್ತ್ರ
Trump ಗೆಲ್ಲುತ್ತಿದ್ದಂತೆ ಅಮೆರಿಕ ತೊರೆಯಲು ಜನರಿಂದ ಭರದ ಸಿದ್ಧತೆ
Yogi ‘ಬಟೇಂಗೆ’ಹೇಳಿಕೆ ಒಪ್ಪಲ್ಲ ಎಂದ ಅಜಿತ್: ಮಹಾಯುತೀಲಿ ಬಿರುಕು?
Canada; ನಮ್ಮಲ್ಲಿರುವ ಎಲ್ಲ ಹಿಂದೂಗಳು ಮೋದಿ ಬೆಂಬಲಿಗರಲ್ಲ: ಟ್ರಾಡೋ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.