ದೇಸಿ ಕ್ರೀಡೆಗಳನ್ನು ಉಳಿಸಿ-ಬೆಳೆಸುವ ಕೆಲಸವಾಗಲಿ
Team Udayavani, Nov 14, 2020, 3:40 PM IST
ಉಗರಗೋಳ: ಆಧುನಿಕ ಯುಗದಲ್ಲಿ ಗರಡಿಮನೆಗಳ ಆಚರಣೆ ನಶಿಸಿ ಹೋಗುತ್ತಿದ್ದು ಗರಡಿ ಮನೆ ಪೈಲ್ವಾನರಿಗೆ ಕೇವಲ ಜಾತ್ರೆ ಮತ್ತು ಹಬ್ಬಗಳಲ್ಲಿ ಮಾತ್ರ ಪ್ರೋತ್ಸಾಹ ನೀಡಲಾಗುತ್ತದೆ. ಪ್ರತಿಯೊಂದು ಗ್ರಾಮದಲ್ಲಿ ಗರಡಿಮನೆಗಳನ್ನು ತೆರೆದು ದೇಶಿಯಕ್ರೀಡೆಗಳನ್ನು ಉಳಿಸಿ, ಬೆಳೆಸುವ ಕಾರ್ಯದ ಜೊತೆಗೆ ಇಂದಿನ ಯುವ ಜನತೆ ರೋಗ ಮುಕ್ತರಾಗಿ ಜೀವಿಸುವಂತಾಗಲಿ ಎಂದು ಎಎಸ್‌ಐ ಸುರೇಶ ಗಿರಿಯಾಲ್ ಹೇಳಿದರು.
ಉಗರಗೋಳ ಗ್ರಾಮದ ಹೊರಕೇರಿ ಓಣಿಯಲ್ಲಿರುವ ಗರಡಿಮನೆಯಲ್ಲಿ ದೀಪಾವಳಿ ಪ್ರಯುಕ್ತ ಪೂಜಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಯುವ ಜನತೆ ಭಾರತದ ಪಾರಂಪರಿಕ ಕ್ರೀಡೆಗಳನ್ನು ಮರೆತು, ಮೊಬೈಲ್ ಗೇಮ್‌ಗಳಿಗೆ ಮಾರು ಹೋಗಿದ್ದಾರೆ. ಗರಡಿಮನೆಗಳ ಆರೋಗ್ಯಕರವಾತಾವರಣದಲ್ಲಿ ಬೆಳೆದ ಸಾಕಷ್ಟು ಜನ ಇಂದಿಗೂ ಆರೋಗ್ಯವಂತರಾಗಿರುವುದನ್ನು ಕಾಣುತ್ತೇವೆ. ಆರೋಗ್ಯವಂತರಾಗಿರಲು ಕೇವಲ ಪೌಷ್ಟಿಕ ಆಹಾರ ಸಾಲದು. ದೇಹವನ್ನು ದಂಡಿಸುವಂತಹ ಕೆಲಸವಾಗಬೇಕು.ಅಂದಾಗ ಮಾತ್ರ ಆರೋಗ್ಯವಾಗಿರಲು ಸಾಧ್ಯ ಎಂದರು.
ಸರಕಾರ ಸಹ ಇಂತಹ ದೇಸಿ ಕ್ರೀಡೆಗಳನ್ನು ಪ್ರೋತ್ಸಾಹಿಸುವ ಕೆಲಸ ಮಾಡಬೇಕು. ಈ ಗರಡಿಮನೆಗೆ ಶೀಘ್ರವಾಗಿ ಮೂಲಸೌಕರ್ಯ ಸಿಗಲಿ ಎಂದರು.
ಅನ್ನ ಸಂತರ್ಪಣೆ ಆಯೋಜಿಸಲಾಗಿತ್ತು. ಈ ವೇಳೆ ಗ್ರಾಪಂ ಮಾಜಿ ಸದಸ್ಯ ಹಣಮಂತ ಸಿದ್ದಕ್ಕನವರ, ತಾ.ಪಂ ಮಾಜಿ ಸದಸ್ಯ ರಾಜೇಸಾಬ ಬೇವಿನಗಿಡದ, ದೂಳಪ್ಪ ಗುಡೆನ್ನವರ, ಮಲ್ಲಪ್ಪ ಸಿದ್ದಕ್ಕನವರ, ದಿಲಾವರ ಬಾರಿಗಿಡದ, ಮೀರಾಸಾಬ ಬೇವಿನಗಿಡದ, ಮಾರುತಿ ಕುಂಟೋಜಿ, ಈರಪ್ಪ ಶಿರಕೋಳ, ಮಕ್ತುಮ ಬಾರಿಗಿಡದ, ಗಣಪತಿ ಚನ್ನಪ್ಪಗೌಡ್ರ, ರವಿ ಅತ್ತಿಗೇರಿ, ರಾಹುಲ ಕಲಾಲ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬೆಳಗಾವಿಯ ಶ್ರೀನಿವಾಸ ಠಾಣೇದಾರ ಅಮೆರಿಕ ಸಂಸತ್‌ಗೆ ಆಯ್ಕೆ
Waqf issue: ಉಪಚುನಾವಣೆಯಲ್ಲಿ ನಾಟಕ ಮಾಡಲು ಜೆಪಿಸಿ ದುರ್ಬಳಕೆ: ಎಚ್.ಕೆ.ಪಾಟೀಲ್
Waqf Property: ಆಡು ಮುಟ್ಟದ ಸೊಪ್ಪಿಲ್ಲ, ವಕ್ಫ್ ಮುಟ್ಟದ ಸ್ವತ್ತಿಲ್ಲ: ತೇಜಸ್ವಿ ಸೂರ್ಯ
Belagavi: ಎಸ್‌ಡಿಎ ರುದ್ರಣ್ಣ ಮೊಬೈಲ್ ಪತ್ತೆ: ಪೊಲೀಸರಿಂದ ತನಿಖೆ ಚುರುಕು
Belagavi; ರುದ್ರಣ್ಣ ಯಡವಣ್ಣವರ ಪ್ರಕರಣ ನಿಷ್ಪಕ್ಷಪಾತ ತನಿಖೆಯಾಗಲಿ: ಹೆಬ್ಬಾಳಕರ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.