Chikkodi ಶಾಮನೂರು ಶಿವಶಂಕರಪ್ಪ ಕುಟುಂಬದವರು ಮುರಸಿದ್ದೇಶ್ವರ ದೇವಸ್ಥಾನಕ್ಕೆ ಕುದುರೆ ದೇಣಿಗೆ
ವಾದ್ಯ ಕುಂಭದೊಂದಿಗೆ ಕುದುರೆಗೆ ಭವ್ಯ ಸ್ವಾಗತಿಸಿದ ಭಕ್ತರು
Team Udayavani, Jul 9, 2024, 6:19 PM IST
ಚಿಕ್ಕೋಡಿ: ಕಾಂಗ್ರೆಸ್ ಹಿರಿಯ ದುರೀಣ ಶಾಮನೂರು ಶಿವಶಂಕರಪ್ಪ ಮತ್ತು ಪುತ್ರ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಅವರು ಚಿಕ್ಕೋಡಿ ಶ್ತೀ ಮುರಸಿದ್ದೇಶ್ವರ ದೇವಸ್ಥಾನಕ್ಕೆ ಕಾಣಿಕೆಯಾಗಿ ನೀಡಿದ ಕುದುರೆಯನ್ನು ಮಂಗಳವಾರ ಕುರುಬ ಸಮಾಜ ಬಾಂದವರು ಭವ್ಯ ಮೆರವಣಿಗೆ ಮಾಡಿ ಭರಮಾಡಿಕೊಂಡರು.
ಕಾಟವಾಡೆ ಜಾತಿಯ ಸೇರಿದ ನಾಲ್ಕು ತಿಂಗಳಿನ ಕುದುರೆಯನ್ನು ಶ್ರೀ ಮುರಸಿದ್ದೇಶ್ವರ ದೇವರ ಭಕ್ತ ಸಮೂಹ ಬೃಹತ್ ಕುಂಭಮೇಳದೊಂದಿಗೆ ಸ್ವಾಗತಿಸಿಕೊಂಡರು.
ಚಿಕ್ಕೋಡಿ ನಗರದ ಬಸ್ ನಿಲ್ದಾಣದಿಂದ ಡೊಳ್ಳು ಕುಣಿತ, ಕರಡಿ ಮಜಲು ವಾದ್ಯ ದೊಂದಿಗೆ ಮುತೈದಿಯರ ಕುಂಭಮೇಳದೊಂದಿಗೆ ದೇವರ ಕುದುರೆ ಮೆರವಣಿಗೆ ಅದ್ದೂರಿಯಾಗಿ ನಡೆಯಿತು.
ಆರಂಭದಲ್ಲಿ ಪುರಸಭೆ ಸದಸ್ಯೆ ವೀಣಾ ಕವಟಗಿಮಠ ಮೆರವಣಿಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಕರ್ನಾಟಕ ಪ್ರದೇಶ ಕುರುಬರ ಸಂಘದ ರಾಜ್ಯ ನಿರ್ದೇಶಕ ವಿನಾಯಕ ಬನ್ನಟ್ಟಿ. ತಾಲೂಕಾ ಅಧ್ಯಕ್ಷ ಲಕ್ಷ್ಮಣ ಡಂಗೇರ. ರಾಮಣ್ಣ ಬನ್ನಟ್ಟಿ. ಬೀರಾ ಬನ್ನೆ. ಸುರೇಶ ಹೆಗಡೆ. ಸಿದ್ದಪ್ಪ ಡಂಗೇರ. ಶಂಕರ ದತ್ತವಾಡೆ. ಸಿದ್ದಪ್ಪ ಪೂಜಾರಿ. ಮಾರುತಿ ಕಟ್ಟಿಕರ. ಮಾರುತಿ ಕರಿಗಾರ, ರಾಮಚಂದ್ರ ಬನ್ನಟ್ಟಿ ಮುಂತಾದವರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಮರಕ್ಕೆ ಕ್ರೂಸರ್ ಢಿಕ್ಕಿ: ಸ್ಥಳದಲ್ಲೇ ಮೂವರ ಸಾವು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Belagavi: ಪೂರ್ಣಾವಧಿ ಅಧಿವೇಶನದಲ್ಲಿ ಸಮಸ್ಯೆಗಳ ಪೂರ್ಣ ಚರ್ಚೆಯಾಗಲಿ: ಡಾ.ಪ್ರಭಾಕರ್ ಕೋರೆ
Belagavi: ಗೆಳೆಯರ ಜೊತೆ ಪಾರ್ಟಿಗೆಂದು ಹೋದ ವ್ಯಕ್ತಿ ಅನುಮಾನಾಸ್ಪದವಾಗಿ ಸಾ*ವು
Belagavi: ಬಾಲಕಿ ಮೇಲೆ ಅತ್ಯಾಚಾರ… ಆರೋಪಿಗೆ 20 ವರ್ಷ ಜೈಲು ಶಿಕ್ಷೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.