ಮನ ಬೆಳಗಿ ಜೀವನ ಪಾವನಗೊಳಿಸಿದ ಶಿವಯೋಗಿಗಳು

ದಲಿತರನ್ನು ಎತ್ತಿ ಹಿಡಿಯುವ ಮೂಲಕ ಬಸವ ಪರಂಪರೆಯನ್ನು ಪಾಲಿಸುತ್ತಿದ್ದಾರೆ

Team Udayavani, Mar 3, 2022, 6:25 PM IST

ಮನ ಬೆಳಗಿ ಜೀವನ ಪಾವನಗೊಳಿಸಿದ ಶಿವಯೋಗಿಗಳು

ಅಥಣಿ: ಅಧಿಕಾರ ಇರುವವರೆಗೆ ಅಹಂಕಾರ ಇರುತ್ತೆ ಎಂಬುದು ಶಿವಯೋಗಿ ಮುರುಘೇಂದ್ರ ಸ್ವಾಮೀಜಿಯವರ ಸೂಕ್ಷ್ಮ ದೃಷ್ಟಿಯಾಗಿತ್ತು ಎಂದು ಚಿತ್ರದುರ್ಗದ ಡಾ| ಶಿವಮೂರ್ತಿ ಮುರುಘಾ ಶರಣರು ಹೇಳಿದರು.

ಅವರು ಶಿವಯೋಗಿಗಳ ಲಿಂಗೈಕ್ಯ ಶತಮಾನೋತ್ಸವ ಸಮಾರಂಭದ ಪ್ರತಿಗಳನ್ನು ಬಿಡುಗಡೆಗೋಳಿಸಿ, ಅಥಣಿ ಗಚ್ಚಿನಮಠದಲ್ಲಿ ಶಿವರಾತ್ರಿ ಪ್ರಯುಕ್ತ ಶರಣ ಸಂಸ್ಕೃತಿ ಉತ್ಸವ ಉದ್ಘಾಟನಾ ಸಮಾರಂಭದಲ್ಲಿ ಶಿವಯೋಗಿಗಳ ಅಂತರ್ಮುಖೀ ಸಾಧನೆ ಮತ್ತು ಲೋಕ ಚಿಂತನೆ ಕುರಿತು ಮಾತನಾಡಿ, ಅಧಿಕಾರದ ಜಂಜಾಟವೇ ಬೇಡ ಎನ್ನುವ ನಿರ್ಲಿಪ್ತತೆಯನ್ನು ಶಿವಯೋಗಿಗಳು ಹೊಂದಿದ್ದರು.

ಶಿವಯೋಗಿಗಳು ದೂರ ಇದ್ದಿರುವುದಕ್ಕೆ ನಮಗೆಲ್ಲ ಜಿಜ್ಞಾಸೆ ಇದೆ. ಸುಸಂಸ್ಕೃತ ಮತ್ತು ಹಾರ್ದಿಕ ಸಮಾಜವನ್ನು ಕಟ್ಟಿ ಬೆಳೆಸಿದವರು ಶಿವಶರಣರು. ಅದರಲ್ಲಿ ಶಿವಯೋಗಿಗಳು ಎಲ್ಲರ ಮನವನ್ನು ಬೆಳಗುವುದರ ಮುಖೇನ ಜನರ ಜೀವನವನ್ನು ಪಾವನಗೊಳಿಸಿದರು.ಅವರು ಅಂತರ್‌ ಮುಖೀಯಾಗಿದ್ದರು.  ದಿನಕ್ಕೊಮ್ಮೆಯಾದರು ಭಜನೆ, ಪ್ರಾರ್ಥನೆ ಮಾಡುವುದರ ಜೊತೆ ಆಧ್ಯಾತ್ಮ ಯಾನ ಮಾಡಿ ಅಂತರ್‌ ಮುಖೀಯಾಗಬೇಕು. ಇಲ್ಲವಾದರೆ ಜೀವನ ಜ್ವಾಲಾಮುಖೀಯಾಗುತ್ತೆ ಎಂದವರು. ಎಲ್ಲ ದುಃಖ-ದುಮ್ಮಾನ ಮರೆಯಲು ಶಿವಯೋಗಗಳ ಮತ್ತು ಬಸವಣ್ಣವರ ದಾರಿಯಲ್ಲಿ ನಡೆಯಬೇಕು ಎಂದರು.

ಗೋಕಾಕದ ಶೂನ್ಯಸಂಪಾದನಾ ಮಠದ ಮುರುಘರಾಜೇಂದ್ರ ಸ್ವಾಮಿಗಳು ಮಾತನಾಡಿ, ಬಿದ್ದವರನ್ನು, ತುಳಿತಕ್ಕೊಳಗಾದವರನ್ನು ಎತ್ತಿ ಹಿಡಿಯುವುದೇ ಶಿವಯೋಗಿ ಮುರುಘೇಂದ್ರ ಸ್ವಾಮಿಗಳ ಉದ್ದೇಶವಾಗಿತ್ತು. ಶಿವಯೋಗಿಗಳ ಪರಂಪರೆಯನ್ನು ಪಾಲಿಸುವ ಮೂಲಕ ಮುರುಘಾ ಶರಣರು ಸಹ ಬಿದ್ದವರನ್ನು, ತುಳಿತಕ್ಕೋಳಗಾದವರನ್ನು ಮತ್ತು ದಲಿತರನ್ನು ಎತ್ತಿ ಹಿಡಿಯುವ ಮೂಲಕ ಬಸವ ಪರಂಪರೆಯನ್ನು ಪಾಲಿಸುತ್ತಿದ್ದಾರೆ ಎಂದು ತಿಳಿಸಿದರು.

ಸಾಹಿತಿ ಬಾಳಾಸಾಬ ಲೋಕಾಪೂರ ಮಾತನಾಡಿ, ಅಹಂ ದಾಟಿದಾಗ ಸೋಹಂ ಬರುತ್ತೆ. ಸೋಹಂ ದಾಟಿದಾಗ ದಾಸೋಹ ಮತ್ತು ಶರಣ ಸಂಸ್ಕೃತಿ ಬರುತ್ತೆ. ಶರಣ ಸಂಸ್ಕೃತಿ ಬಹುತ್ವ ಸಂಸ್ಕೃತಿ, ಸಮಾನತೆ ಸಂಸ್ಕೃತಿಯಾಗಿದೆ. ಶರಣ ಸಂಸ್ಕೃತಿ ನಿರ್ದಿಷ್ಟ ಜನಾಂಗಕ್ಕೆ ಸೀಮಿತವಾಗದೆ ಸಮಸ್ತ ಮನುಕುಲಕ್ಕೆ ಶಾಂತ ಪರಂಪರೆಯಾಗಿದೆ ಎಂದರು.

ಚನ್ನಬಸವಸ್ವಾಮಿಗಳು, ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ಮುಜಾರಾಯಿ ಸಚಿವೆ ಶಶಿಕಲಾ ಜೊಲ್ಲೆ, ಸಂಸದ ಅಣ್ಣಾಸಾಬ ಜೊಲ್ಲೆ, ಶಾಸಕ ಶಿವರಾಯಗೌಡ, ಶಿವಬಸವ ಸ್ವಾಮೀಜಿ, ರಾವಸಾಬ ಐಹೊಳೆ, ರಾಜೇಂದ್ರಸಿಂಗ ಶೇಖಾವತ, ನಾರಗೌಂಡ ಪಾಟೀಲ, ರಾಮನಗೌಡ ಪಾಟೀಲ ಇದ್ದರು. ಶಿವಾನಂದ ದಿವಾನಮಳ ಸ್ವಾಗತಿಸಿದರು. ರಮೇಶ ಪಾಟೀಲ ನಿರೂಪಿಸಿದರು.

ಟಾಪ್ ನ್ಯೂಸ್

DK–BJP-Protest

Mangaluru: ತುಳುನಾಡಿನ ದೈವ-ದೇವರ ಜಾಗ ಉಳಿಸಲು ಹೋರಾಟ: ಸಂಸದ ಚೌಟ

Kharge

Adani ಕುಟುಂಬ ವಶಕ್ಕೆ ಪಡೆದು ತನಿಖೆ ನಡೆಸಲಿ : ಖರ್ಗೆ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚUdupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

ಬೈಡೆನ್‌ “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು

Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Belgavi-Roberry

Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!

ಬೆಳಗಾವಿ-ಐಫೋನ್‌ಗಾಗಿ ನಡೆಯಿತಾ ಯುವಕನ ಹತ್ಯೆ? ಪೊಲೀಸರಿಂದ ತೀವ್ರ ತನಿಖೆ

ಬೆಳಗಾವಿ-ಐಫೋನ್‌ಗಾಗಿ ನಡೆಯಿತಾ ಯುವಕನ ಹತ್ಯೆ? ಪೊಲೀಸರಿಂದ ತೀವ್ರ ತನಿಖೆ

ಬೆಳಗಾವಿ: ಸಿಎಂ ಸಿದ್ದರಾಮಯ್ಯಗೆ ಬೆಳಗಾವಿ ಅಧಿವೇಶನವೇ ಕೊನೆ-ಬಿ.ವೈ ವಿಜಯೇಂದ್ರ

ಬೆಳಗಾವಿ: ಸಿಎಂ ಸಿದ್ದರಾಮಯ್ಯಗೆ ಬೆಳಗಾವಿ ಅಧಿವೇಶನವೇ ಕೊನೆ-ಬಿ.ವೈ ವಿಜಯೇಂದ್ರ

Belagavi: ಮರಕ್ಕೆ ಕ್ರೂಸರ್‌ ಢಿಕ್ಕಿ: ಸ್ಥಳದಲ್ಲೇ ಮೂವರ ಸಾವು

Belagavi: ಮರಕ್ಕೆ ಕ್ರೂಸರ್‌ ಢಿಕ್ಕಿ: ಸ್ಥಳದಲ್ಲೇ ಮೂವರ ಸಾವು

vij

Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Suside-Boy

Karkala: ಬೋಳ ಗ್ರಾಮದ ವ್ಯಕ್ತಿ ಆತ್ಮಹತ್ಯೆ

Suside-Boy

Mudubidre: ಅಂತಿಮ ಬಿಬಿಎಂ ವಿದ್ಯಾರ್ಥಿ ಆತ್ಮಹತ್ಯೆ

Suside-Boy

Belthangady: ಕಲ್ಮಂಜ: ರಿಕ್ಷಾ ಚಾಲಕ ಆತ್ಮಹತ್ಯೆ

DK–BJP-Protest

Mangaluru: ತುಳುನಾಡಿನ ದೈವ-ದೇವರ ಜಾಗ ಉಳಿಸಲು ಹೋರಾಟ: ಸಂಸದ ಚೌಟ

Suside-Boy

Punjalakatte: ಕೊಯಿಲದ ವ್ಯಕ್ತಿ ಹಾಸನದಲ್ಲಿ ನಿಗೂಢ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.