ಶಾಸಕರು ಅತೃಪ್ತರಾಗೋಕೆ ಸಿದ್ದರಾಮಯ್ಯ ಕಾರಣ : ಸೋಮಣ್ಣ ವಾಗ್ದಾಳಿ
Team Udayavani, Nov 4, 2019, 1:30 PM IST
ಬೆಳಗಾವಿ: ನಾವೇನು 17 ಜನ ಶಾಸಕರಿಗೆ ರಾಜೀನಾಮೆ ಕೊಡಿ. ನಮ್ಮ ಪಕ್ಷಕ್ಕೆ ಬನ್ನಿ ಎಂದು ಆಹ್ವಾನ ನೀಡಿದ್ದೆವಾ ಅಥವಾ ಅರ್ಜಿ ಹಾಕಿದ್ದೇವಾ? ಎಲ್ಲವೂ ಮಾಡಿದ್ದು ಅವರೇ ಎಂದು ವಸತಿ ಸಚಿವ ಸೋಮಣ್ಣ ಹೇಳಿದರು.
ಬೆಳಗಾವಿಯಲ್ಲಿ ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು 17 ಜನರಲ್ಲಿ 14 ಜನ ಸಿದ್ದರಾಮಯ್ಯ ಫೋಟೋ ಹಾಕೊಂಡು ಗೆದ್ದವರು. ನಾವು ಯಾರನ್ನು ಕರೆದಿರಲಿಲ್ಲ, ಅರ್ಜಿ ಹಾಕಿಲ್ಲ ಎಂದು ವಸತಿ ಸಚಿವ ಸೋಮಣ್ಣ ಹೊಸ ಬಾಂಬ್ ಸಿಡಿಸಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿ ಇರುವ ಗೊಂದಲದಿಂದ ಅವರೆಲ್ಲಾ ರಾಜೀನಾಮೆ ಕೊಟ್ಟಿದ್ದಾರೆ ಎಂದ ಅವರು ಸಂಬಂಧ ಅಂದ್ರೆ ಏನು ನಾವೇನು ನೆಂಟಸ್ಥಿಕೆ ಮಾಡಬೇಕೇ?. ವಿಶ್ವಾಸ, ಪ್ರೀತಿ ಇದೆ.ಶಾಸಕರು ಅತೃಪ್ತರಾಗೋಕೆ ಸಿದ್ದರಾಮಯ್ಯ ಕಾರಣ. ಸಿದ್ದರಾಮಯ್ಯ ಅವರು ಸೋನಿಯಾ ಗಾಂಧಿ ತೃಪ್ತಿ ಪಡಿಸಲು ಈ ಕೆಲಸ ಮಾಡಿದ್ದಾರೆ ಎಂದು ತಿರುಗೇಟು ನೀಡಿದರು. ಅತೃಪ್ತರ ಪರ ಬಿ ಎಸ್ ವೈ ಹೇಳಿಕೆ ವಿಚಾರ ಪ್ರಸ್ತಾಪಿಸಿದ ಅವರು ಸಿಎಂ ಯಡಿಯೂರಪ್ಪ ದೊಡ್ಡತನ ಪ್ರದರ್ಶನ ಮಾಡಿದ್ದಾರೆ ಎಂದರು.
ನೆರೆ ಪರಿಹಾರ ಹಾಗೂ ಸಂತ್ರಸ್ತರ ವಿಚಾರದಲ್ಲಿ ಮಾತಾನಾಡಿದ ಅವರು ವಿಪಕ್ಷ ಸಿದ್ದರಾಮಯ್ಯ ಯಾರಿಯಾಗಿ ಈ ರೀತಿ ಹೇಳಿಕೆ ಕೊಡ್ತಾರೆ ಗೊತ್ತಿಲ್ಲ. ಸಿದ್ದರಾಮಯ್ಯ ಮಾತಿಗೆ ಅವರ ಪಕ್ಷದ ನಾಯಕರು ಯಾವ ರೀತಿ ಸ್ಪಂದಿಸಿದ್ದಾರೆ ಗೊತ್ತಿದೆ ಎಂದು ವಸತಿ ಸಚಿವ ಸೋಮಣ್ಣ ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯ ಸಿದ್ದರಾಮಯ್ಯ ಆಗಿರೋದು ತುಂಬ ಒಳ್ಳೆಯದು. ಅವರ ಕಾಲದಲ್ಲಿ 5 ವರ್ಷ ಬರೀ ಬರಗಾಲ ಇತ್ತು. ಇವತ್ತು ರಾಜ್ಯದಲ್ಲಿ ಅತಿವೃಷ್ಠಿ ಇದೆ. ಸಿದ್ದರಾಮಯ್ಯ, ಬಿ ಎಸ್ ವೈ ಆಡಳಿತದಲ್ಲಿ ತುಂಬ ವ್ಯತ್ಯಾಸವಿದೆ. ಬಿ ಎಸ್ ವೈ ಜನರ ಬಳಿ ಹೋಗಿ ಸಮಸ್ಯೆ ಕೇಳುತ್ತಾರೆ. ಸಿದ್ದರಾಮಯ್ಯ ನಾಯಕರ ಬಳಿ ಹೋಗ್ತಾರೆ ಎಂದು ಟೀಕಿಸಿದರು.
ಸಿದ್ದರಾಮಯ್ಯ ಯಾರದೋ ಮನೆಯಲ್ಲಿ ಕುಳಿತು ಏನೆನೋ ಮಾತನಾಡುತ್ತಾರೆ ನೆರೆ ವಿಚಾರದಲ್ಲಿ ಗೋಲಮಾಲ್, ಮದ್ಯವರ್ತಿಗಳ ಹಾವಳಿ ಇಲ್ಲ ಎಂದ ಅವರು ರಾಜ್ಯದಲ್ಲಿ ಪ್ರವಾಹದಲ್ಲಿ ಪರಿಸ್ಥಿತಿ ಪ್ರಕೃತಿಯೋ ಯಡಿಯೂರಪ್ಪ ಅವರ ದುರಾದೃಷ್ಟವೋ ಪ್ರವಾಹ ಬಂದಿದೆ.ಯಡಿಯೂರಪ್ಪ ಕಾಲದಲ್ಲಿ ಪ್ರವಾಹ ಆದ್ರೆ ಎಲ್ಲ ಬಡವರಿಗೆ ಪರಿಹಾರ ತಲುಪುತ್ತದೆ ಅಂತ ಆಗಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗಾಂಧಿ ಭಾರತ್ ಕಾರ್ಯಕ್ರಮದ ಬಗ್ಗೆ ಶೆಟ್ಟರ್ ಅಪಸ್ವರ ತೆಗೆದಿದ್ದು ದುರ್ದೈವ – ಎಚ್ ಕೆ ಪಾಟೀಲ
Congress ಅಧಿವೇಶನದ ಶತಮಾನೋತ್ಸವ ಕಾರ್ಯಕ್ರಮ ದೇಶದ ಇತಿಹಾಸದ ಒಂದು ಐತಿಹಾಸಿಕ ಕಾರ್ಯಕ್ರಮ
Belagavi: ಗಾಂಧಿ ಭಾರತ ಹಿನ್ನೆಲೆ ಡಿ. 26, 27 ರಂದು ಕೆಲ ಶಾಲೆಗಳಿಗೆ ರಜೆ
Suspension: ಸಿ.ಟಿ. ರವಿ ಪ್ರಕರಣ; ಖಾನಾಪುರ ಸಿಪಿಐ ಅಮಾನತು
Belagavi: ಕಾಶ್ಮೀರದಲ್ಲಿ 300 ಅಡಿ ಆಳದ ಕಂದಕಕ್ಕೆ ಬಿದ್ದ ಸೇನಾ ವಾಹನ; ಯೋಧರು ಹುತಾತ್ಮ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ
Madikeri: ಹುಲಿ ದಾಳಿ; ವ್ಯಕ್ತಿಗೆ ಗಂಭೀರ ಗಾಯ
Egg Thrown: ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ; ಮೂವರ ಬಂಧನ
Living together; ವಿಚ್ಛೇದನ ತಡೆಯಲು ಲಿವಿಂಗ್ ಟುಗೆದರ್ ಸಹಕಾರಿಯೇ?
Uttarakhand: ಕಂದಕಕ್ಕೆ ಬಿದ್ದ ಬಸ್ ನಾಲ್ವರು ಮೃ*ತ್ಯು; 20ಕ್ಕೂ ಅಧಿಕ ಮಂದಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.