Assembly Session: ಸದನದಲ್ಲಿ ಹೆಚ್ಚು ಕಾಲ ಕುಳಿತರೆ ಹೆಚ್ಚು ಬಾರಿ ಗೆಲುವು: ಖಾದರ್
Team Udayavani, Dec 14, 2024, 12:30 AM IST
ಬೆಳಗಾವಿ: ಸದನದಲ್ಲಿ ಜಾಸ್ತಿ ಸಮಯ ಕುಳಿತವರು, ಹೆಚ್ಚು ಬಾರಿ ಶಾಸಕರಾಗಿ ಗೆಲ್ಲುತ್ತಾರಂತೆ. ಹೀಗಾಗಿ ಶಾಸಕರಾದವರು ಸದನದಲ್ಲಿ ಹೆಚ್ಚು ಸಮಯ ಕಳೆಯಬೇಕು ಎಂದು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಪಾಠ ಮಾಡಿದರು.
ಶುಕ್ರವಾರ ಬೆಳಗ್ಗೆ ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆ ಬಿಜೆಪಿಯ ವಿ. ಸುನಿಲ್ ಕುಮಾರ್ ವಿಷಯ ಪ್ರಸ್ತಾವಿಸಿ, ಮೊದಲ ಸಾಲಿನಲ್ಲಿ ಸಚಿವರೇ ಇಲ್ಲ. ನಾವು ನಿನ್ನೆ ರಾತ್ರಿ 10 ಗಂಟೆವರೆಗೆ ಕುಳಿತಿದ್ದೇವೆ. ಸಚಿವರು ಬರುವುದಿಲ್ಲ ಎಂದರೆ ಸದನವನ್ನು ಸರಕಾರ ಗಂಭೀರವಾಗಿ ತೆಗೆದುಕೊಂಡಂತಿಲ್ಲ ಎಂದು ಆರೋಪಿಸಿದರು. ಮಧ್ಯಪ್ರವೇಶಿಸಿದ ಸ್ಪೀಕರ್, ನಿಮ್ಮ ಪ್ರಶ್ನೆಗಳಿಗೆ ಉತ್ತರಿಸಬೇಕಾದ ಸಚಿವರಿದ್ದಾರಲ್ಲ ಎಂದರು. ಆಗ ವಿಪಕ್ಷ ಸದಸ್ಯರು, ಹಾಗಿದ್ದರೆ ಪ್ರಶ್ನೆ ಕೇಳುವವರಷ್ಟೇ ಇದ್ದರೆ ಸಾಕೇ ಎಂದು ಪ್ರಶ್ನಿಸಿದರು.
ಸದನಕ್ಕೆ ಬೇಗ ಬಂದವರ ಹೆಸರುಗಳನ್ನು ಪ್ರಕಟಿಸಿದ ಸ್ಪೀಕರ್, ಗುರುವಾರ ರಾತ್ರಿ ಕೊನೆಯವರೆಗೂ ಕುಳಿತಿದ್ದವರ ಹೆಸರನ್ನೂ ಓದಿದರು. ಶಾಸಕರಾದವರು ಸದನದಲ್ಲಿ ಹೆಚ್ಚು ಸಮಯ ಕುಳಿತುಕೊಳ್ಳಬೇಕು. ಚರ್ಚೆಯಲ್ಲಿ ಪಾಲ್ಗೊಂಡು, ಬೇರೆಯವರ ಚರ್ಚೆಯನ್ನೂ ಕೇಳಿಸಿಕೊಳ್ಳಬೇಕು. ವೈದ್ಯಕೀಯ, ಕಾನೂನು, ಎಂಜಿನಿಯರಿಂಗ್ ಸೇರಿದಂತೆ ಎಲ್ಲದಕ್ಕೂ ಅಕಾಡೆಮಿಗಳಿವೆ. ರಾಜಕೀಯಕ್ಕೆ ಇಲ್ಲ. ಸದನವೇ ಅಕಾಡೆಮಿ. ಹೀಗಾಗಿ ಪ್ರಶ್ನೆ ಕೇಳಿದ ಅನಂತರವೂ ಕುಳಿತುಕೊಳ್ಳಿ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ICC Champions Trophy: ಚಾಂಪಿಯನ್ಸ್ ಟ್ರೋಫಿ ಉದ್ಘಾಟನೆ: ಹಾಜರಿರುವರೇ ಭಾರತದ ನಾಯಕ?
Daily Horoscope: ತಲೆತಿನ್ನುತ್ತಿದ್ದ ಚಿಂತೆಗಳಿಂದ ಬಿಡುಗಡೆ, ಕ್ಷಿಪ್ರ ಲಾಭದ ನಿರೀಕ್ಷೆ ಬೇಡ
Inspection: ಬೆನ್ನು ನೋವು ಮರುಕಳಿಸಿದರೇ ನಟ ದರ್ಶನ್‌ಗೆ ಶಸ್ತ್ರಚಿಕಿತ್ಸೆ?
CM Post: 2028ರಲ್ಲಿ ಸಿಎಂ ಕುರ್ಚಿ ಕುರಿತು ಮಾತನಾಡೋಣ: ಸಚಿವ ಡಾ.ಎಚ್.ಸಿ.ಮಹದೇವಪ್ಪ
Udupi: ಮೀನುಗಾರರ ಸಮಸ್ಯೆ: ರಾಜ್ಯದಲ್ಲಿ ಏಕರೂಪತೆಗೆ ಜಿಲ್ಲಾಧಿಕಾರಿ ಚಿಂತನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.