ತಾರತಮ್ಯ ಮೆಟ್ಟಿ ನಿಂತ ಮಹಿಳೆಯರು: ಪ್ರೊ| ಜಯಶ್ರೀ
Team Udayavani, Aug 31, 2018, 4:15 PM IST
ಬೆಳಗಾವಿ: ಶಿಕ್ಷಣ ಎನ್ನುವ ಆಯುಧದಿಂದ ಮಹಿಳೆ ತನ್ನ ಸುತ್ತಲಿನ ನಿರ್ಬಂಧ ಹಾಗೂ ತಾರತಮ್ಯ ಮೆಟ್ಟಿ ನಿಂತು ಉನ್ನತ ಸ್ಥಾನಮಾನ ಪಡೆಯುತ್ತಿದ್ದಾಳೆ ಎಂದು ಪ್ರೊ| ಜಯಶ್ರೀ ಅಬ್ಬಿಗೇರಿ ಹೇಳಿದರು. ಶಿವಬಸವ ನಗರದ ಕಾರಂಜಿಮಠದಲ್ಲಿ ಶ್ರಾವಣ ಮಾಸದ ನಿಮಿತ್ತ ನಡೆದ ಕಾರ್ಯಕ್ರಮದಲ್ಲಿ ಆಧುನಿಕ ಮಹಿಳೆಯ ಸವಾಲುಗಳು ಕುರಿತು ಉಪನ್ಯಾಸ ನೀಡಿದ ಅವರು, ಹೆಣ್ಣು ಅಂದ್ರೆ ನಂದಾದೀಪ ಎನ್ನುವ ಕಾಲವಿತ್ತು, ಆದರೆ ಈಗ ಹೆಣ್ಣು ಹುಟ್ಟಿದರೆ ಹುಣ್ಣು ಹುಟ್ಟಿದಂತೆ ಆಡುತ್ತಾರೆ. ಕುಟುಂಬದಲ್ಲಿ, ಸಮಾಜದಲ್ಲಿ ಎಲ್ಲಾ ನೀತಿ ನಿಯಮಗಳು, ನಿರ್ಬಂಧಗಳು ಕೇವಲ ಮಹಿಳೆಯರಿಗೆ ಮೀಸಲಾಗಿರುತ್ತವೆ. ಇದನ್ನು ಮೆಟ್ಟಿ ನಿಂತು ಉತ್ತಮ ಮಹಿಳೆಯಾಗಿ ಪುರುಷರಿಗೆ ಸಮಾನಳಾಗಿ ಬೆಳೆಯುತ್ತಿದ್ದಾಳೆ ಎಂದರು.
ಭಾರತ ಉತ್ತಮ ಸಂಸ್ಕೃತಿಗೆ ಪ್ರಸಿದ್ಧಿ ಹೊಂದಿದೆ. ಭಾರತದ ಸಂಸ್ಕೃತಿ ಇಡೀ ವಿಶ್ವಕ್ಕೆ ಮಾದರಿ ಎಂದರು. ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಡಾ| ಉಮಾ ಸಾಲಿಗೌಡರ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೆಲ ಬಾರಿ ಮಹಿಳೆಯೇ ಮಹಿಳೆಗೆ ಶತ್ರುವಾಗಿ ಪರಿಣಮಿಸುತ್ತಾಳೆ. ಜೊತೆಗೆ ಆಧುನಿಕ ಕಾಲದಲ್ಲಿ ಮಹಿಳೆ ಬಹಳಷ್ಟು ಒತ್ತಡ ಎದುರಿಸಿತ್ತಿದ್ದಾಳೆ. ಈ ಒತ್ತಡದಿಂದ ಹೊರಬರಬೇಕಾದರೆ ಅಧ್ಯಾತ್ಮ ಅವಶ್ಯಕ ಎಂದರು.
ಜ್ಯೋತಿ ಬದಾಮಿ, ಪಾರ್ವತಿ ಪಿಟಗಿ, ವಿದ್ಯಾ ಹುಂಡೇಕಾರ, ಜಯಶ್ರೀ ನಿರಾಕಾರಿ, ದೀಪಿಕಾ ಚಾಟೆ ಅವರನ್ನು ಸನ್ಮಾನಿಸಲಾಯಿತು. ಪ್ರಿಯಾಂಕಾ ಅರೆಸಿದ್ದಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ವಿದ್ಯಾ ಹುಂಡೇಕರ ನಿರೂಪಿಸಿದರು. ಕಾರಂಜಿ ಮಠದ ಶ್ರೀ ಗುರುಸಿದ್ಧ ಸ್ವಾಮೀಜಿ ಸಾನ್ನಿಧ್ಯ ಹಾಗೂ ಶಿವಯೋಗಿ ದೇವರು ಸಮ್ಮುಖ ವಹಿಸಿದ್ದರು. ವಿಜಯಾ ಪುಟ್ಟಿ, ಡಾ| ನಿರ್ಮಲಾ, ದೊಡ್ಡಮನಿ, ಪಾಲಿಕೆ ಸದಸ್ಯೆ ಸರಳಾ ಹೇರೇಕರ ಸೇರಿದಂತೆ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಯುವಕನ ಮೇಲೆ ಗುಂಡಿನ ದಾಳಿ… ಸ್ಥಳದಲ್ಲಿ ಬಿಗುವಿನ ವಾತಾವರಣ
Belagavi; ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿದ್ದ ಹುಲಿ ಶೌರ್ಯ ಇನ್ನಿಲ್ಲ
Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ
Setback BJP: ಜನರಿಂದ ವಿಜಯೇಂದ್ರ ನಾಯಕತ್ವ ತಿರಸ್ಕಾರ, ರಾಜೀನಾಮೆ ನೀಡಲಿ: ಶಾಸಕ ಯತ್ನಾಳ್
ಮಹಾರಾಷ್ಟ್ರ ಸೋಲಿನ ಬೆನ್ನಲ್ಲೇ ಇವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಸತೀಶ್ ಜಾರಕಿಹೊಳಿ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Mangaluru: ವೆನ್ಲಾಕ್ ಆಸ್ಪತ್ರೆ ಹೊರರೋಗಿ ವಿಭಾಗ ವಿಸ್ತರಣೆ
Bengaluru ಭಯೋ*ತ್ಪಾದಕ ಚಟುವಟಿಕೆ ಆರೋಪಿ, ಉ*ಗ್ರ ಖಾನ್ ರುವಾಂಡದಿಂದ ಭಾರತಕ್ಕೆ ಗಡಿಪಾರು!
Kundapura: ಹತ್ತೂರು ಸೇರುವ ಮುಳ್ಳಿಕಟ್ಟೆಗೆ ಬೇಕು ಬಸ್ ನಿಲ್ದಾಣ
IPL 2024: ನನಗೆ ಪ್ರೀತಿ ಗೌರವ ಕೊಡಿ ಸಾಕು..: ಡೆಲ್ಲಿ ಮಾಲಿಕರ ಮುಂದೆ ರಾಹುಲ್ ಬೇಡಿಕೆ
Tollywood: ಒಂದೇ ದಿನ ವಿವಾಹವಾಗಲಿದ್ದಾರಾ ಅಕ್ಕಿನೇನಿ ಸಹೋದರರು? ನಾಗಾರ್ಜುನ್ ಹೇಳಿದ್ದೇನು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.