ಸಮರ್ಪಕ ಬಸ್ ಸೌಲಭ್ಯ ಕಲ್ಪಿಸಲು ಆಗ್ರಹಿಸಿ ವಿದ್ಯಾರ್ಥಿಗಳ ಪ್ರತಿಭಟನೆ
Team Udayavani, Jul 13, 2019, 4:32 PM IST
ಚನ್ನಮ್ಮ ಕಿತ್ತೂರು: ಸಮರ್ಪಕ ಬಸ್ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿ ವಿದ್ಯಾರ್ಥಿಗಳು ಕಿತ್ತೂರು ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದರು.
ಚನ್ನಮ್ಮನ ಕಿತ್ತೂರು: ಸಮರ್ಪಕ ಬಸ್ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿ ವಿದ್ಯಾರ್ಥಿಗಳು ಕಿತ್ತೂರು ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದರು.
ಈ ವೇಳೆ ಮೆಹಬೂಬ್ ಕಾದ್ರೊಳ್ಳಿ ಮಾತನಾಡಿ, ಪಟ್ಟಣದ ಕಿತ್ತೂರು ಬಸ್ ನಿಲ್ದಾಣದಿಂದ ಸಮೀಪದ ಕುಲವಳ್ಳಿ, ಗಂಗ್ಯಾನಟ್ಟಿ, ಸಾಗರ, ಮಾಚಿ ಹಾಗೂ ಕತ್ರಿದಡ್ಡಿ ಗ್ರಾಮಗಳಿಗೆೆ ಒಂದು ವಾರದಿಂದ ಸಮರ್ಪಕ ಬಸ್ ವ್ಯವಸ್ಥೆ ಇಲ್ಲದೆ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ತೀವ್ರ ಸಮಸ್ಯೆಯಾಗಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಪ್ರತಿನಿತ್ಯ ಹಳ್ಳಿಗಳಿಂದ ಪಟ್ಟಣಕ್ಕೆ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಸಂಚಾರಿಸುತ್ತಾರೆ. ಅದರಲ್ಲಿ ಶಾಲಾ-ಕಾಲೇಜುಗೆಂದು ದಿನಕ್ಕೆ 150 ವಿದ್ಯಾರ್ಥಿಗಳು ಪಟ್ಟಣಕ್ಕೆ ಬರುತ್ತಾರೆ. ಆದರೆ ಸಮರ್ಪಕ ಬಸ್ ಇಲ್ಲದರಿಂದ ವಿದ್ಯಾರ್ಥಿಗಳು ಮಳೆಯಲ್ಲಿ ಕಾಲ್ನಡಿಗೆ ಮುಖಾಂತರ ಗ್ರಾಮಕ್ಕೆ ಸಂಚರಿಸುವಂತಾಗಿದೆ. ಇಲ್ಲಿರುವ ಸಮಸ್ಯೆ ಕುರಿತು ಅನೇಕ ಬಾರಿ ಶಾಸಕರಿಗೆ, ಜಿಪಂ ಸದಸ್ಯರಿಗೆ ಹಾಗೂ ಸಾರಿಗೆ ಅಧಿಕಾರಿಗಳಿಗೆ ಮನವಿ ಸಲ್ಲಿಸದರೂ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಖಾಸಿಂ ನೇಸರಗಿ, ಮೆಹಬೂಬ್ ಕಾದ್ರೊಳ್ಳಿ, ಹಸನ್‌ಸಾಬ್ ಕಾದ್ರೊಳ್ಳಿ, ಶರೀಫ್ ಶಿಲೇದಾರ, ಗಿರಿಮಲ್ಲ ನಾಯ್ಕರ, ಕುತುಬುದಿನ್ ದಳವಾಯಿ, ಪ್ರಕಾಶ ಪವಾರ, ಸಾನೀಯಾ ಇಮಾವನವರ, ಆಕಾಶ ಜಕ್ಕನವರ, ಗಂಗಪ್ಪ ಕೊಕ್ಕರೆ, ಕುಮಾರ ಪಟ್ಟಿಹಾಳ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಅಂತಾರಾಜ್ಯ ಮಕ್ಕಳ ಮಾರಾಟ ಜಾಲ ಪತ್ತೆ… 4.50 ಲಕ್ಷಕ್ಕೆ ಗೋವಾಕ್ಕೆ ಮಾರಿದ್ದ ಮಗುವಿನ ರಕ್ಷಣೆ
Belagavi: ತಹಶೀಲ್ದಾರ್ ಮನೆ ಮೇಲೆ ಲೋಕಾಯುಕ್ತ ದಾಳಿ
Belagavi; ಸಂಘದ ಹೆಸರಲ್ಲಿ ಮಹಿಳೆಯರಿಗೆ 19.35 ಕೋಟಿ ರೂ. ಮಹಾ ವಂಚನೆ!
Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು
Congress; ಔತಣಕೂಟದ ಸಭೆಗೆ ರಾಜಕೀಯ ಮಹತ್ವ ಬೇಕಿಲ್ಲ: ಸತೀಶ್ ಜಾರಕಿಹೊಳಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.