ಸುಮಿತ್ ಜಾಧವ ಚಾಂಪಿಯನ್ ಆಫ್ ಚಾಂಪಿಯನ್ಸ್
Team Udayavani, Dec 19, 2017, 1:43 PM IST
ಬೆಳಗಾವಿ: ಮಹಾರಾಷ್ಟ್ರದ ಸುಮಿತ್ ಜಾಧವ ನಗರದಲ್ಲಿ ನಡೆದ 10 ನೇ ಸತೀಶ ಶುಗರ್ಸ್ ಕ್ಲಾಸಿಕ್ ದೇಹದಾರ್ಡ್ಯ ಚಾಂಪಿಯನ್‌ಶಿಪ್‌ನ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಚಾಂಪಿಯನ್ ಆಫ್ ಚಾಂಪಿಯನ್ಸ್ ಕಿರೀಟ ಧರಿಸಿದರು.
ಸರ್ದಾರ ಹೈಸ್ಕೂಲ್ ಮೈದಾನದಲ್ಲಿ ಕಿಕ್ಕಿರಿದು ತುಂಬಿದ್ದ ಪ್ರೇಕ್ಷಕರ ಮಧ್ಯೆ ತಮ್ಮ ಅಂಗಸೌಷ್ಠವದ ಅಮೋಘ ಪ್ರದರ್ಶನ ನೀಡಿದ ಸುಮಿತ್ ಜಾಧವ ಪ್ರಶಸ್ತಿಯ ಜೊತೆಗೆ ನಾಲ್ಕು ಲಕ್ಷ ರೂ. ಬಹುಮಾನ ಪಡೆದರು. ಒಟ್ಟಾರೆ ಸ್ಪರ್ಧೆಯಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಮಹಾರಾಷ್ಟ್ರ ತಂಡ ಒಟ್ಟು 54 ಅಂಕಗಳೊಂದಿಗೆ ಪ್ರಶಸ್ತಿ ಪಡೆದುಕೊಂಡಿತು. ಅಂತಿಮ ಸುತ್ತಿನ ಸ್ಪರ್ಧೆಯಲ್ಲಿ ತಮ್ಮ ಪ್ರತಿಸ್ಪರ್ಧಿಗಳಿಗಿಂತ ಉತ್ತಮ ಮುನ್ನಡೆ ಕಾಯ್ದುಕೊಂಡಿದ್ದ ಸುನೀತ ಜಾಧವ ಕಡೆಗೆ ಟ್ರೋಫಿಗೆ ಮುತ್ತಿಕ್ಕಿ ಸಂಭ್ರಮಪಟ್ಟರು. ತಮಿಳುನಾಡಿನ ದಯಾನಂದ ಸಿಂಗ್ ರನರ್ ಅಪ್ ಗೌರವದೊಂದಿಗೆ 1.5 ಲಕ್ಷ ರೂ ಬಹುಮಾನ ಗಳಿಸಿದರು.
ಭಾರತೀಯ ರೈಲ್ವೆಯ ಎನ್ ಸಬೊìàಸಿಂಗ್ ಬೆಸ್ಟ್ ಪೋಸರ್ ಜೊತೆಗೆ 25 ಸಾವಿರ ರೂ ಬಹುಮಾನ ಪಡೆದುಕೊಂಡರು. ತೀವ್ರ ಕುತೂಹಲ ಕೆರಳಿಸಿದ್ದ ಹಾಗೂ ಎಲ್ಲರ ಆಕರ್ಷಣೆಯ ಸ್ಪರ್ಧೆಯಾಗಿದ್ದ ಮಹಿಳೆಯರ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಮಣಿಪುರಕ್ಕೆ ಆಘಾತ ನೀಡಿದ ಪಶ್ಚಿಮ ಬಂಗಾಳದ ಯುರೋಪಾ ಭೌಮಿಕ್ ಚಾಂಪಿಯನ್ ಆಫ್ ಚಾಂಪಿಯನ್ಸ್ ಕಿರೀಟ ಅಲಂಕರಿಸಿ 1.50 ಲಕ್ಷ ರೂ. ಬಹುಮಾನ ಗಿಟ್ಟಿಸಿದರು. ಪ್ರಶಸ್ತಿಯ ಫೆವರಿಟ್ ಎನಿಸಿದ್ದ ಮಣಿಪುರದ ಸರಿತಾದೇವಿ ಎರಡು ಹಾಗೂ ಮಣಿಪುರದವರೇ ಆದ ರೆಬಿತಾ ದೇವಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟರು. ಚಾಂಪಿಯನ್‌ಶಿಪ್‌ನ ಅಂತಿಮ ದಿನ ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಿದ್ದ ಪೋಲಂಡ್ ದ.ಜೆ. ಮಾರ್ಕನ್ ತಮ್ಮ ವಜ್ರಕಾಯದಿಂದ ಎಲ್ಲರ ಗಮನಸೆಳೆದರು. ಅಜಾನಬಾಹು ವ್ಯಕ್ತಿತ್ವದ ಯುರೋಪಿಯನ್ ಚಾಂಪಿಯನ್ ಮಾರ್ಕನ್ ಸತೀಶ ಶುಗರ್ಸ್ ಕ್ಲಾಸಿಕ್ ಚಾಂಪಿಯನ್‌ಶಿಪ್ ವಿಶ್ವಮಟ್ಟಕ್ಕೆ ಬೆಳೆಯಲಿ ಎಂದು ಹಾರೈಸಿದರು.
ಫಲಿತಾಂಶಗಳು ಪುರುಷರು: 55 ಕೆ ಜಿ ವಿಭಾಗ: ಉಮೇಶ ಗುಪ್ತಾ (ಮಹಾರಾಷ್ಟ್ರ, ಪ್ರಥಮ), ರಾಮ್ ಮಾರ್ಥ (ದ್ವಿತೀಯ,
ಸರ್ವಿಸಸ್). ಅರುಣ ಪಾಟೀಲ (ತೃತೀಯ, ಮಹಾರಾಷ್ಟ್ರ). 60 ಕೆ ಜಿ: ನಿತಿನ್ ಮಾತ್ರೆ (ಪ್ರ, ಮಹಾರಾಷ್ಟ್ರ), ವಿಘ್ನೇಶ್ (ದ್ವಿ. ಕರ್ನಾಟಕ), ವಿನೋದ ಮೇತ್ರಿ (ತೃ, ಕರ್ನಾಟಕ). 65 ಕೆ ಜಿ; ಅಜು ಘೋಷ್ (ಪ್ರ, ಪಶ್ಚಿಮ ಬಂಗಾಳ). ಫೈಯಾಜ್ ಶೇಖ್ (ದ್ವಿ.ಮಹಾರಾಷ್ಟ್ರ), ಪ್ರದೀಪಕುಮಾರ (ತೃ. ಉತ್ತರಪ್ರದೇಶ). 70 ಕೆ ಜಿ: ಸಿ. ರಾಹುಲ್ (ಪ್ರ, ತೆಲಂಗಾಣ), ಧನರಾಜ್ (ದ್ವಿ.ಕರ್ನಾಟಕ), ಪಿ. ಕೃಷ್ಣಾ (ತೃ. ಸರ್ವಿಸಸ್). 75 ಕೆ ಜಿ: ಟಿ. ಶಿವಕುಮಾರ (ಪ್ರ,ಸರ್ವಿಸಸ್), ಸಿದ್ದು ದೇಶನೂರ (ದ್ವಿ, ಕರ್ನಾಟಕ), ದಾನೇಶಕುಮಾರ (ತೃ. ಸರ್ವಿಸಸ್). 80 ಕೆ ಜಿ: ಸಾಗರ ಕಾತುರ್ಡೆ (ಪ್ರ,ಮಹಾರಾಷ್ಟ್ರ), ರವಿ ತುಡು (ದ್ವಿ, ಸಿಆರ್‌ಪಿಎಫ್), ಸಚಿನ್‌ಕುಮಾರ (ತೃ. ಮಹಾರಾಷ್ಟ್ರ). 85 ಕೆ ಜಿ: ಎನ್ ಸಬೋìಸಿಂಗ್ (ಪ್ರ.ರೈಲ್ವೆ), ಎಸ್. ಮೋಹನ್ ಸುಬ್ರಮಣಿ (ದ್ವಿ, ರೈಲ್ವೆ). ಎಸ್.ದಾಸಗುಪ್ತಾ (ತೃ. ಸರ್ವಿಸಸ್). 90 ಕೆ ಜಿ: ಸುನಿತ್ ಜಾಧವ (ಪ್ರ, ಮಹಾರಾಷ್ಟ್ರ), ನರೇಂದ್ರ ಯಾದವ್ (ದ್ವಿ. ದೆಹಲಿ). ಎಂ. ದುರ್ಗಾಪ್ರಸಾದ (ತೃ, ಸರ್ವಿಸಸ್). 95 ಕೆ ಜಿ: ಟಿ.ಎಚ್.ದಯಾನಂದ (ಪ್ರ, ಸರ್ವಿಸಸ್), ಮಹೇಂದ್ರ ಚವ್ಹಾಣ (ದ್ವಿ. ಮಹಾರಾಷ್ಟ್ರ). ಪ್ರೀತಮ್ ಚೌಗಲೆ (ತೃ ಮಹಾರಾಷ್ಟ್ರ). 95 ಕೆ ಜಿ ಮೇಲ್ಪಟ್ಟವರು: ಅಕ್ಷಯ ಮೋಗಾರಕರ (ಪ್ರ, ಮಹಾರಾಷ್ಟ್ರ), ಜುಬೇರ ಶೇಖ್ (ದ್ವಿ. ಮಹಾರಾಷ್ಟ್ರ), ಹರ್ಷದ್ ಕಾಟೆ (ತೃ. ಮಹಾರಾಷ್ಟ್ರ).
ಮುಕ್ತಾಯ ಸಮಾರಂಭದಲ್ಲಿ ಕಾರ್ಯಕ್ರಮದ ರೂವಾರಿ ಮತ್ತು ಶಾಸಕ ಸತೀಶ ಜಾರಕಿಹೊಳಿ ಮಾತನಾಡಿ, ಗ್ರಾಮೀಣ ಪ್ರತಿಭೆಗಳನ್ನು ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟಕ್ಕೆ ಪರಿಚಯಿಸಲು ಕ್ರೀಡಾ ಕ್ಷೇತ್ರವೂ ಸೇರಿ ವಿವಿಧ ಕ್ಷೇತ್ರಗಳಲ್ಲಿ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ. ಮಿ.ಸತೀಶ ಶುಗರ್ಸ್ ಕ್ಲಾಸಿಕ್ ದೇಹದಾಡ್ಯì ಸ್ಪರ್ಧೆಗಳು 10 ವರ್ಷಗಳಿಂದ ನಡೆಯುತ್ತಿದ್ದು, ಇದಕ್ಕೆ ಎಲ್ಲರ ಸಹಕಾರ ಕಾರಣ ಎಂದು ಹೇಳಿದರು.
ಎಲ್ಲ ಸಾಧಕರಿಗೆ ಪ್ರಶಸ್ತಿ ಪಡೆಯುವುದು ಸಾಧ್ಯವಾಗದೇ ಇರಬಹುದು. ಆದರೆ ದೇಶದ ನಾನಾ ಭಾಗಗಳ ಸಾಧಕರ ಪರಿಚಯ, ಅವರ ಸಾಧನೆಯ ಮಟ್ಟವನ್ನು ತಿಳಿದುಕೊಳ್ಳಲು ಮತ್ತು ಬೆಳೆಯಲು ಈ ಸ್ಪರ್ಧೆಗಳು ವೇದಿಕೆಯಾಗಿವೆ. ಹಾಗಾಗಿ ಇಂಥದೊಂದು ವೇದಿಕೆಯ ಮೂಲಕ ದೇಶದ ಪ್ರತಿಭಾವಂತರು ಒಂದೆಡೆ ಪರಸ್ಪರ ಭೇಟಿಯಾಗುವ, ತಮ್ಮ ಪ್ರತಿಭೆಗಳಿಗೆ ಸಾಣೆ ಹಿಡಿಯುವ ಅವಕಾಶವೂ ಇದರಿಂದ ಸಾಧ್ಯವಾಗಿದೆ ಎಂದರು.
ದೇಶದ 85 ನಗರಗಳಲ್ಲಿ ಸುಮಾರು 211ಕ್ಕೂ ಹೆಚ್ಚು ಜಿಮ್‌ಗಳನ್ನು ತೆರೆದು ದೇಹದಾಡ್ಯì ಕ್ಷೇತ್ರಕ್ಕೆ ಗಣನೀಯ ಕೊಡುಗೆ ನೀಡಿರುವ 83 ವರ್ಷದ ಎಂಜಿನಿಯರ್ ಮುಂಬೈನ ಮಧುಕರ ವಿಷ್ಣು ತಳವಳಕರ್ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಭಾರತೀಯ ಬಾಡಿ ಬಿಲ್ಡಿಂಗ್ ಅಸೋಸಿಯೇಶನ್ ಅಧ್ಯಕ್ಷ ಪ್ರೇಮಚಂದ್ರ ಡೇಗ್ರಾ, ಕರ್ನಾಟಕ ಬಾಡಿ ಬಿಲ್ಡಿಂಗ್ ಅಸೋಸಿಯೇಶನ್ ಅಧ್ಯಕ್ಷ ರಘುನಾಥ್ ರಾವ್, ಎಂ. ಗಂಗಾಧರ, ಅವಿನಾಶ ಪೋತದಾರ್, ಕಲಾವಿದ ರಿಯಾಜ್ ಚೌಗಲಾ, ಅಜಿತ್ ಸಿದ್ದಣ್ಣವರ, ಸುನೀಲ್ ರಾವ್, ಅನಿಲ ಚೌಧರಿ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
New year : ಬಾಗಲಕೋಟೆ ಜಿಲ್ಲೇಲಿ ಅಭಿವೃದ್ಧಿ ಬಾಗಿಲು ತೆರೆಯಲಿ-ಸ್ಥಳಾಂತರವಾಗಬೇಕಿದೆ ಐಹೊಳೆ!
Belthangady: ಖಾಸಗಿ ಕಟ್ಟಡದ ಅವ್ಯವಸ್ಥೆ ವಿರುದ್ಧ ಸದಸ್ಯರು ಗರಂ
New Year 2025:ಹಳೆ ವ್ಯಕ್ತಿಗೆ ಹೊಸ ವರ್ಷ….ಹಳೆ ವರ್ಷದಲ್ಲಿ ಕಲಿತ ಎಲ್ಲಾ ಅನುಭವ ಪಾಠವಾಗಲಿ
Bantwal: ಸಾಮಾನ್ಯ ಸೈಕಲನ್ನೇ ಎಲೆಕ್ಟ್ರಿಕ್ ಆಗಿ ಪರಿವರ್ತಿಸಿದ ಬಾಲಕ!
ಹತ್ತಾರು ಸಿನಿಮಾ.. ನೂರಕ್ಕೆ ನೂರು ನಿರೀಕ್ಷೆ.. ಈ ವರ್ಷದ ಬಹು ನಿರೀಕ್ಷಿತ ಕನ್ನಡ ಚಿತ್ರಗಳಿವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.