ಮಗ ಬಂದೇ ಬರುತ್ತಾನೆ.. ಮಗನನ್ನು ಕಳೆದುಕೊಂಡ ಸುರೇಶ್ ಅಂಗಡಿ ತಾಯಿಯ ರೋದನೆ
Team Udayavani, Sep 24, 2020, 11:47 AM IST
ಬೆಳಗಾವಿ: ಮಗನನ್ನು ಕಳೆದುಕೊಂಡು ಬಿಕ್ಕಿ ಬಿಕ್ಕಿ ಅಳುತ್ತಿರುವ ತಾಯಿ ಸೋಮವ್ವ ಅಂಗಡಿ, ಮಗ ಬಂದೇ ಬರುತ್ತಾನೆ ಎಂದು ಅಳುತ್ತ ಕಾದು ಕುಳಿತಿದ್ದಾರೆ.
ಮಗ ಸುರೇಶ ಅಂಗಡಿಯ ಸಾವಿನ ಸುದ್ದಿ ತಿಳಿದು ಕಂಗಾಲಾಗಿರುವ ವೃದ್ಧ ತಾಯಿ, ಸದಾಶಿವಗರದ ಸಂಪಿಗೆ ರಸ್ತೆಯಲ್ಲಿರುವ ನಿವಾಸಕ್ಕೆ ಬಂದಿದ್ದಾರೆ. ಮಗ ನನ್ನ ಬಿಟ್ಟು ಹೋಗುವುದಿಲ್ಲ. ಪಾರ್ಲಿಮೆಂಟ್ ಮೀಟಿಂಗ್ ಮುಗಿಸಿ ಒಂದು ತಿಂಗಳ ನಂತರ ಬರ್ತೀನಿ ಅಂತ ಹೇಳಿ ಹೋಗಿದ್ದಾನೆ. ವಾಪಸ್ಸು ನನ್ನ ಭೇಟಿ ಆಗಲು ಬರುತ್ತಾನೆ ಎಂದು ಎದೆ ಬಡೆದುಕೊಳ್ಳುತ್ತ ಅಳುತ್ತಿದ್ದಾರೆ. ಮಗನನ್ನು ನೆನೆಸಿಕೊಂಡು ಅಳುತ್ತಿರುವ ತಾಯಿಯ ಆಕ್ರಂದನ ಮುಗಿಲು ಮುಟ್ಟಿದೆ.
ಇದನ್ನೂ ಓದಿ: ದೆಹಲಿಯಲ್ಲಿ ಇಂದು ಸಂಜೆ ನಾಲ್ಕು ಗಂಟೆಗೆ ಸುರೇಶ್ ಅಂಗಡಿ ಅಂತ್ಯಕ್ರಿಯೆ
‘ಕೆ.ಕೆ. ಕೊಪ್ಪ ಊರಾಗ ಸಾಲಿ ಕಟ್ಟಿಸಿ ಶಿಕ್ಷಣ ಕೊಡ್ಸಾತಾನ, ಊರಾಗ ಗುಡಿ ಕಟ್ಟಿಸ್ಯಾನ. ನನ್ನ ಹೆಸರಲೇ ಸಾಲಿ ಕಟ್ಟಿಸಿ ಶಿಕ್ಷಣ ಕೊಡ್ಸಾತಾ. ಹಳ್ಳ್ಯಾಗಿಂದ ದಿಲ್ಲಿಗೆ ಹೋದ ಅಂತ ಹಿಗ್ಗಿ ಹಿಗ್ಗಿ ಹೇಳ್ತಿದ್ನಿ. ನನ್ನ ಬಿಟ್ಟ ಮಗ ಹೋಗಿಲ್ಲ… ಬರ್ತಾನ’ ಅಂತ ಕಣ್ಣೀರು ಹಾಕುತ್ತಿರುವ ತಾಯಿಯ ರೋದನೆ ಮುಗಿಲು ಮುಟ್ಟಿದೆ.
ವಾರದ ಹಿಂದೆ ಕೋವಿಡ್-19 ಸೋಂಕು ದೃಢಪಟ್ಟಿದ್ದ ಸುರೇಶ್ ಅಂಗಡಿಯವರು ಬುಧವಾರ ಸಂಜೆ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಗೆಳೆಯರ ಜೊತೆ ಪಾರ್ಟಿಗೆಂದು ಹೋದ ವ್ಯಕ್ತಿ ಅನುಮಾನಾಸ್ಪದವಾಗಿ ಸಾ*ವು
Belagavi: ಬಾಲಕಿ ಮೇಲೆ ಅತ್ಯಾಚಾರ… ಆರೋಪಿಗೆ 20 ವರ್ಷ ಜೈಲು ಶಿಕ್ಷೆ
Minister K. N. Rajanna: ಸದ್ಯಕ್ಕಂತೂ ಸಚಿವ ಸಂಪುಟ ಪುನಾರಚನೆ ಇಲ್ಲ
Lakshmi Hebbalkar: “ಎಪಿಎಲ್, ಬಿಪಿಎಲ್‌ನವರಿಗೆ ಗೃಹಲಕ್ಷ್ಮಿ ಹಣ ಬಂದೇ ಬರುತ್ತೆ’
ಬೈಲಹೊಂಗಲ: ಜ್ಞಾನೇಶ್ವರ ಮುನಿ ಮಹಾರಾಜರು ಸಮಾಧಿ ಮರಣ
MUST WATCH
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ
ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು
ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್ ನಕ್ಸಲ್ ಸಾವು
ಹೊಸ ಸೇರ್ಪಡೆ
Russia ದಿಂದ ಉಕ್ರೇನ್ ಮೇಲೆ ICBM ದಾಳಿ; ನ್ಯೂಕ್ಲಿಯರ್ ದಾಳಿ ಉದ್ವಿಗ್ನತೆ ಹೆಚ್ಚಳ
IFFI 2024: ತಾಲಿಯಾ..ತಾಲಿಯಾ…ಜೋರ್ ದಾರ್ ತಾಲಿಯಾ..!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
KMC: ನವೀಕೃತ ವೈದ್ಯಕೀಯ ಆಂಕೊಲಾಜಿ ಹೊರರೋಗಿ, ಕಿಮೊಥೆರಪಿ ಡೇ ಕೇರ್ ಕೇಂದ್ರ ಉದ್ಘಾಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.