ಸ್ವಾಮಿ ವಿವೇಕಾನಂದರು ಯುವಜನರಿಗೆ ಪ್ರೇರಕ ಶಕ್ತಿ; ಡಾ| ಭುವಿ
ರಾಷ್ಟ್ರೀಯ ಯುವ ದಿನ ಯುವ ಸಪ್ತಾಹ ಕಾರ್ಯಕ್ರಮ
Team Udayavani, Jan 13, 2023, 6:27 PM IST
ಚಿಕ್ಕೋಡಿ: ಸ್ವಾಮಿ ವಿವೇಕಾನಂದರು ಕೇವಲ ವ್ಯಕ್ತಿ ಅಲ್ಲ, ಅದೊಂದು ದಿವ್ಯ ಶಕ್ತಿ. ಅವರು ಚಿಕ್ಯಾಗೊ ಸಮ್ಮೇಳನದಲ್ಲಿ ಮಾಡಿದ ಉಪನ್ಯಾಸ ಸುವರ್ಣ ಅಕ್ಷರಗಳಲ್ಲಿ ಬರೆದಿಡುವಂತದ್ದು ಎಂದು ಕಬ್ಬೂರ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ| ಭುವಿ ನುಡಿದರು.
ಚಿಕ್ಕೋಡಿ ತಾಲೂಕಿನ ಜಾಗನೂರ ಗ್ರಾಮದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ನೆಹರು ಯುವ ಕೇಂದ್ರ ಬೆಳಗಾವಿ, ಯುವ ಸಂಘಗಳ ಒಕ್ಕೂಟದ ತಾಲೂಕಾ ಘಟಕ, ಡಾ.ಅಂಬೇಡ್ಕರ ಕಲಾ ಮತ್ತು ಕ್ರೀಡಾ ಯುವಕ ಮಂಡಳ ಮಾಂಜರಿ, ಸ್ವಾಮಿ ವಿವೇಕಾನಂದ ಸ್ವ-ಸಹಾಯ ಸಂಘ, ಜಾಗನೂರ, ಚಿಕ್ಕೋಡಿ ತಾಲೂಕಾ ಆಯ್ದ ಯುವ ಸಂಘಗಳ ಸಹಯೋಗದಲ್ಲಿ ದಿವ್ಯ ಚೇತನ ಸ್ವಾಮಿ ವಿವೇಕಾನಂದರ 160 ನೇ ಜಯಂತಿ ಅಂಗವಾಗಿ ನಡೆದ ರಾಷ್ಟ್ರೀಯ ಯುವ ದಿನ ಯುವ ಸಪ್ತಾಹ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಯುವಕರು ದುಷ್ಟಟಗಳಿಗೆ ದಾಸರಾಗದೆ ಒಳ್ಳೆಯ ಶಿಕ್ಷಣವನ್ನು ಪಡೆದು ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಭವ್ಯ ಭಾರತ ನಿರ್ಮಾಣದಲ್ಲಿ ಪಾಲುದಾರರಾಗಬೇಕೆಂದು ಹೇಳಿದರು.ಹುಕ್ಕೇರಿ ಕ್ಯಾರಗುಡ್ಡರ ಅಭಿನವ ಮಂಜುನಾಥ ಸ್ವಾಮಿಗಳು, ಕಬ್ಬೂರಿನ ಗೌರಿ ಶಂಕರ ಮಠದ ಶ್ರೀ ರೇವಣ ಸಿದ್ದ ಶಿವಾಚಾರ್ಯ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು.
ಗ್ರಾ.ಪಂ ಅಧ್ಯಕ್ಷರಾದ ಮಹಾದೇವಿ ಸನದಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯ ಮೇಲೆ ಹಣಮಂತ ರಬಕವಿ , ಲಕ್ಷ್ಮಣ ಹನಮನ್ನವರ, ಲಕ್ಷ್ಮಣ ಮಂಗಿ, ರಾಮು ನಿಪ್ಪಾಣಿ.ಪರಶುರಾಮ ಹನಮನ್ನವರ, ಪ್ರಕಾಶ ಪೂಜಾರಿ, ರಾಘವೇಂದ್ರ ಲಂಬುಗೋಳ, ಮಹಾಂತೇಶ ಶಿರಗೂರ, ಲಕ್ಕಪ್ಪ ಹನಮನ್ನವರ, ಗದಿಗೆಪ್ಪಾ ಆದರಗಿ, ಶಿವಾನಂದ ಗುಡಸ, ಬೀರಪ್ಪಾ ಪೂಜಾರಿ, ಮುತ್ತಪ್ಪಾ ಮುರಾರಿ, ಸಂತೋಷ ಚವಲಗೇರ, ಹನಮಂತ ಕರಗಾಂವಿ, ಅಪ್ಪಯ್ನಾ ಹನಮನ್ನವರ, ರಾಜೇಶ ಶಿರಗೂರ, ಬಸವರಾಜ ಹನಮನ್ನವರ, ಯಲ್ಲಪ್ಪಾ ಚಿಂಚಲಿ, ಸೇರಿದಂತೆ ಗ್ರಾಮ ಪಂಚಾಯತ ಸದಸ್ಯರು, ಶಿಕ್ಷಕರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ರಸಪ್ರಶ್ನೆ ಹಾಗೂ ಪ್ರಬಂಧ ಸ್ಪರ್ಧೆಯಲ್ಲಿ ವಿಜೆತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಸಿದ್ದು ಖಿಚಿಡಿ ನಿರೂಪಿಸಿದರು, ಮಂಜುನಾಥ ಹನುಮನ್ನವರ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಎಸ್‌ಡಿಎ ರುದ್ರಣ್ಣ ಕೇಸ್: ಮೂವರು ಆರೋಪಿಗಳಿಗೆ ನಿರೀಕ್ಷಣಾ ಜಾಮೀನು
Belagavi: ಸಿಎಂ ಮುಟ್ಟೋಕೆ ಆಗುತ್ತಾ…: ಸಿದ್ದರಾಮಯ್ಯ ಹೇಳಿಕೆಗೆ ವ್ಯಂಗ್ಯವಾಡಿದ ಸೋಮಣ್ಣ
Assembly Election: “ಮಹಾ’ ಅಖಾಡದಲ್ಲಿ ಕರುನಾಡ ನಾಯಕರ ಹವಾ!
Belagavi: ಆಟೋ ಚಾಲಕನ ಮೇಲೆ ಅಪರಿಚಿತ ದುಷ್ಕರ್ಮಿಗಳಿಂದ ಹಲ್ಲೆ
Belagavi: ಅಕ್ರಮ ಆಸ್ತಿ ಸಂಪಾದನೆ ಆರೋಪ… ಬೆಳಗಾವಿ ಜಿಲ್ಲೆಯ ವಿವಿಧೆಡೆ ಲೋಕಾಯುಕ್ತ ದಾಳಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.