ತೆಲಸಂಗ: ಸೈನಿಕ ಭವನ ಭಾರತಾಂಬೆಯ ದೇವಾಲಯ
Team Udayavani, Jan 6, 2024, 5:48 PM IST
ಉದಯವಾಣಿ ಸಮಾಚಾರ
ತೆಲಸಂಗ: ನಮಗೆ ಭಾರತವನ್ನು ಸುತ್ತಲಾಗದಿದ್ದರೂ ಗ್ರಾಮದಲ್ಲಿರುವ ಸೈನಿಕರನ್ನು ನೋಡಿದಾಗ, ಭೇಟಿಯಾದಾಗ ನಿಜವಾದ ಭಾರತ ದರ್ಶನವಾಗುತ್ತದೆ. ಹೀಗಾಗಿ ಇಂದು ನಿರ್ಮಾಣಗೊಂಡ ಸೈನಿಕ ಭವನ ನಿವೃತ್ತ ಸೆ„ನಿಕರ ಸಂಘಟನೆಯ ಶ್ರಮದ
ಭಾರತಾಂಬೆಯ ದೇವಾಲಯ ಎಂದು ಹಿರೇಮಠದ ವೀರೇಶ್ವರ ದೇವರು ಹೇಳಿದರು.
ಗ್ರಾಮದ ನಿವೃತ್ತ ಸೈನಿಕ ಕ್ಷೇಮಾಭಿವೃದ್ಧಿ ಸಂಘದಿಂದ ನಿರ್ಮಿಸಿದ ನೂತನ ಸೆ„ನಿಕರ ಭವನ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿ, ಸೈನಿಕರು ಹಾಕುವ ಮೆಡಲ್‌ಗಳು ಭಾರತ ರತ್ನಕ್ಕೆ ಸಮ. ತಮ್ಮ ಪ್ರಾಣವನ್ನು ಲೆಕ್ಕಿಸದೆ ದೇಶದ
ರಕ್ಷಣೆಯಲ್ಲಿ ತೊಡಗಿರುವ ಸೈನಿಕರಿಂದ ಇಂದು ರಾಷ್ಟ್ರದ ಜನ ನೆಮ್ಮದಿಯಿಂದ ಇದ್ದಾರೆ ಎಂದರು.
ನಿವೃತ್ತ ಸೇನಾಧಿಕಾರಿ ಕರ್ನಲ್ ಬಿ.ಎಸ್.ಹಿಪ್ಪರಗಿ ಮಾತನಾಡಿ, ಸರಕಾರ ಮತ್ತು ಸೈನ್ಯ ನಮಗೆ ಏನೆಲ್ಲ ಕೊಟ್ಟಿದೆ. ಇಷ್ಟಿದ್ದರೂ ನಮಗೆ ಇನ್ನೂ ಬೇಕು ಅಂತ ಕೇಳುವುದು ತಪ್ಪು. ನಾವು ದೇಶ ಸೇವೆ ಮಾಡಿದ್ದೇವೆ ನಾವೇ ಶ್ರೇಷ್ಠ ಅನ್ನೋ ಭಾವನೆ ಬೇಡ. ಜನ ನಮ್ಮನ್ನು ಕರೆದು ಗೌರವಿಸುವಂತೆ ನಮ್ಮ ನಡೆ ಇರಬೇಕು . ನಾನೂ ಕೂಡಾ ಹೊಟ್ಟೆಪಾಡಿಗಾಗಿಯೇ ಸೈನ್ಯ ಸೇರಿದ್ದು. ಅದು ದೇಶ ಸೇವೆಯಾಗಿ ಪರಿವರ್ತನೆ ಆಯಿತು. ಸೈನಿಕನಾಗುವ ಭಾಗ್ಯ ಎಲ್ಲರಿಗೂ ಸಿಗಲ್ಲ. ನಮಗೆ ಸಿಕ್ಕಿದ್ದು ಸೌಭಾಗ್ಯ ಎಂದು ತಿಳಿದು
ಶ್ರೇಷ್ಠತೆಯನ್ನು ಹೊಂದಿರಿ ಎಂದರು.
ಕುಂಬಾರ ಗುರುಪೀಠದ ಬಸವಗುಂಡಯ್ನಾ ಸ್ವಾಮೀಜಿ, ಮಾಜಿ ಸೈನಿಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸಾಬು ಅರಟಾಳ, ನ್ಯಾಯವಾದಿ ಅಮೋಘ ಖೊಬ್ರಿ, ಗ್ರಾಪಂ ಅಧ್ಯಕ್ಷ ವಿಲಾಸ ಮೋರೆ ಮಾತನಾಡಿದರು.
ಗ್ರಾಪಂ ಉಪಾಧ್ಯಕ್ಷೆ ಮಿನಾಕ್ಷಿ ಬಾಣಿ, ಹಿರಿಯರಾದ ಕಾಶೀನಾಥ ಕುಂಬಾರಕರ, ಅರವಿಂದ ಉಂಡೋಡಿ, ಶಿವಪ್ಪಾ ಚೌಗಲೆ, ಬೀಸಲಪ್ಪ ತಾಂವಶಿ, ಶ್ರೀಮಂತ ಸೊಂದಕರ, ಅಣ್ಣಾಸಾಬ ಸಾವಳಗಿ, ಶಿವಮಲ್ಲಪ್ಪಾ ಕೊಳಲಿ, ಗಂಗಪ್ಪಾ ಗಂಗಾದರ, ಮಾರುತಿ ಚವ್ಹಾಣ, ಸುಭಾಸ ಮೋರೆ ಸೇರಿದಂತೆ ನೂರಾರು ಜನ ನಿವೃತ್ತ ಸೈನಿಕರು ಉಪಸ್ಥಿತರಿದ್ದರು. ಗ್ಯಾನು ನಲವಡೆ ಸ್ವಾಗತಿಸಿದರು. ಗಪೂರ ಮುಲ್ಲಾ ನಿರುಪಿಸಿದರು. ಧರೆಪ್ಪಾ ಮಾಳಿ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!
ಬೆಳಗಾವಿ: ಮಾನವ ಕಳ್ಳ ಸಾಗಾಣಿಕೆ-ಜೀತ ಪದ್ಧತಿ ದೊಡ್ಡ ಸಮಸ್ಯೆ
Belagavi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ
Belagavi: ಎಸ್‌ಡಿಎ ರುದ್ರಣ್ಣ ಕೇಸ್: ಮೂವರು ಆರೋಪಿಗಳಿಗೆ ನಿರೀಕ್ಷಣಾ ಜಾಮೀನು
Belagavi: ಸಿಎಂ ಮುಟ್ಟೋಕೆ ಆಗುತ್ತಾ…: ಸಿದ್ದರಾಮಯ್ಯ ಹೇಳಿಕೆಗೆ ವ್ಯಂಗ್ಯವಾಡಿದ ಸೋಮಣ್ಣ
MUST WATCH
ಹೊಸ ಸೇರ್ಪಡೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Kollywood: ಬಹಿರಂಗ ಪತ್ರ ಬರೆದು ಧನುಷ್ ಮೇಲೆ ರೇಗಾಡಿದ ನಟಿ ನಯನತಾರಾ; ಆಗಿರುವುದೇನು?
Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ
Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.