12 ದೇವಸ್ಥಾನಕ್ಕೆ 1.9 ಕೋಟಿ ರೂ. ; ದೇವಸ್ಥಾನ ಅಭಿವೃದ್ಧಿ
ದೇವಸ್ಥಾನ ಅಭಿವೃದ್ಧಿಗೆ ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಕ್ರಮ
Team Udayavani, Jul 28, 2022, 6:04 PM IST
ಯಮಕನಮರಡಿ: ಮುಜರಾಯಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಅವರು ಬೆಳಗಾವಿ ತಾಲೂಕಿನ 3 ಜಿಪಂ ಕ್ಷೇತ್ರದ 12ದೇವಸ್ಥಾನಗಳಿಗೆ 1.9ಕೋಟಿ ರೂ.ಅನುದಾನ ಬಿಡುಗಡೆ ಮಾಡಿದ್ದಾರೆ ಎಂದು ಬಿಜೆಪಿ ಮುಖಂಡ ರವೀಂದ್ರ ಹಂಜಿ ಹೇಳಿದರು.
ಅವರು ಪತ್ರಕರ್ತರೊಂದಿಗೆ ಮಾತನಾಡಿ, ಯಮಕನಮರಡಿ ಮತಕ್ಷೇತ್ರದ ಭೂತರಾಮಹಟ್ಟಿಯ ಶ್ರೀ ಶಿವಸೋಮೇಶ್ವರ ಮುಕ್ತಿಮಠಕ್ಕೆ 25ಲಕ್ಷ ರೂ, ಬೆನ್ನಾಳಿ ಗ್ರಾಮದ ಗಜಾನನ ಸೇವಾ ಸಮಿತಿಗೆ 5ಲಕ್ಷ ರೂ. ಕಡೋಲಿ ಗ್ರಾಮದ ಕಲಮೇಶ್ವರ ದೇವಸ್ಥಾನಕ್ಕೆ 5ಲಕ್ಷ ರೂ. ಮತ್ತು ಶ್ರೀ ದುರದುಂಡೇಶ್ವರ ದೇವಸ್ಥಾನಕ್ಕೆ 13 ಲಕ್ಷ ರೂ, ಅಗಸಗಾ ಗ್ರಾಮದ ವಿಠ್ಠಲ ದೇವಸ್ಥಾನಕ್ಕೆ 2.5ಲಕ್ಷ ರೂ.ಗಳು, ಅದೇ ಗ್ರಾಮದ ಶ್ರೀ ಕಲಮೇಶ್ವರ ದೇವಸ್ಥಾನಕ್ಕೆ 2.5ಲಕ್ಷ ರೂ, ಚಲುವೆನಟ್ಟಿ ಗ್ರಾಮದ ಬ್ರಹ್ಮಲಿಂಗೇಶ್ವರ ದೇವಸ್ಥಾನಕ್ಕೆ 5 ಲಕ್ಷ ರೂ. ಮಣ್ಣಿಕೇರಿ ಗ್ರಾಮದ ಬಹ್ಮಾನಂದ ಮಠಕ್ಕೆ 5 ಲಕ್ಷ ರೂ., ಕಲಕಾಂಬ ಗ್ರಾಮದ ಬ್ರಹ್ಮಲಿಂಗೇಶ್ವರ ದೇವಸ್ಥಾನಕ್ಕೆ 5ಲಕ್ಷ ರೂ, ಮುಚ್ಚಂಡಿ ಗ್ರಾಮದ ಸಿದ್ದೇಶ್ವರ ದೇವಸ್ಥಾನಕ್ಕೆ 15 ಲಕ್ಷ ರೂ., ಅಷ್ಠೆ ಗ್ರಾಮದ ಹುಲಿಗೆವ್ವಾ ದೇವಸ್ಥಾನಕ್ಕೆ 5ಲಕ್ಷ ರೂ., ಶಿವಾಪೂರ ಗ್ರಾಮದ ಶ್ರೀ ಮುಪ್ಪಿನ ಕಾಡಸಿದ್ದೇಶ್ವರ ಮಠಕ್ಕೆ 10ಲಕ್ಷ ರೂ., ಗುಗ್ರಾನಟ್ಟಿ ಗ್ರಾಮದ ಕಲಮೇಶ್ವರ ದೇವಸ್ಥಾನಕ್ಕೆ 5 ಲಕ್ಷ ರೂ. ಮಂಜೂರು ಮಾಡಿದ್ದಾರೆ ಎಂದರು.
ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮ ಅಧ್ಯಕ್ಷ ಮಾರುತಿ ಅಷ್ಠಗಿ, ಬಸವರಾಜ ಹುಂದ್ರಿ, ಶಂಕರಗೌಡ ಮೋದಗಿ, ಹುಕ್ಕೇರಿ ಕೆಇಬಿ ಅಧ್ಯಕ್ಷ ಕಲಗೌಡ ಪಾಟೀಲ, ಉತ್ತರ ಬಿಜೆಪಿ ಮಂಡಲ ಅಧ್ಯಕ್ಷ ಶ್ರೀಶೈಲ ಯಮಕನಮರಡಿ, ಶಿವಾನಂದ ಮಸಗುಪ್ಪಿ, ಉದಯ ನಿರ್ಮಳ, ಪ್ರಹ್ಲಾದ ನಾಯಿಕ, ಶಿವಾನಂದ ಪಡಗುರಿ, ಸುಶಾಂತ ಪರಮೋಜಿ, ಮಲ್ಲಪ್ಪಾ ಪರಮೋಜ, ಸಂಜೆಯ ಶಿಪುಕರ, ರಾಹುಲ ಹಿರೋಜಿ, ಅಪ್ಪಯ್ನಾ ಜಾಜರಿ, ಶಿವಾನಂದ ಮಸಗುಪ್ಪಿ ಮುಂತಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf issue: ಉಪಚುನಾವಣೆಯಲ್ಲಿ ನಾಟಕ ಮಾಡಲು ಜೆಪಿಸಿ ದುರ್ಬಳಕೆ: ಎಚ್.ಕೆ.ಪಾಟೀಲ್
Waqf Property: ಆಡು ಮುಟ್ಟದ ಸೊಪ್ಪಿಲ್ಲ, ವಕ್ಫ್ ಮುಟ್ಟದ ಸ್ವತ್ತಿಲ್ಲ: ತೇಜಸ್ವಿ ಸೂರ್ಯ
Belagavi: ಎಸ್‌ಡಿಎ ರುದ್ರಣ್ಣ ಮೊಬೈಲ್ ಪತ್ತೆ: ಪೊಲೀಸರಿಂದ ತನಿಖೆ ಚುರುಕು
Belagavi; ರುದ್ರಣ್ಣ ಯಡವಣ್ಣವರ ಪ್ರಕರಣ ನಿಷ್ಪಕ್ಷಪಾತ ತನಿಖೆಯಾಗಲಿ: ಹೆಬ್ಬಾಳಕರ್
Belagavi: ಎಸ್‌ಡಿಎ ಆತ್ಮಹ*ತ್ಯೆ: ಸಚಿವೆ ಹೆಬ್ಬಾಳ್ಕರ್ ರಾಜೀನಾಮೆಗೆ ಬಿಜೆಪಿ ಪಟ್ಟು
MUST WATCH
ಹೊಸ ಸೇರ್ಪಡೆ
Karkala: ಡಾ. ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆಯಲ್ಲಿ 24*7 ಸಿಟಿ ಸ್ಕ್ಯಾನ್ ಸೌಲಭ್ಯ ಉದ್ಘಾಟನೆ
Manipal: ಡಿಸಿ ಕಚೇರಿ ಆವರಣದಲ್ಲೂ ಬೀದಿನಾಯಿ ಉಪಟಳ
Malpe: ಕೋಡಿಬೆಂಗ್ರೆ-ಹಂಗಾರಕಟ್ಟೆ ಸಂಪರ್ಕ ಇನ್ನು ದೂರ
Hotel Room: ಹೋಟೆಲ್ ಕೊಠಡಿಯಲ್ಲೇ ವೈದ್ಯನ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ
Bengaluru: ಬೆಂಗಳೂರಲ್ಲಿ ಶೀಘ್ರ ಪ್ರತಿ ಕೆಜಿ ಈರುಳ್ಳಿ ಬೆಲೆ 100?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.