ಬೆಳಗಾವಿಗೆ ಬಂದ ತೆಂಡೂಲ್ಕರ್: ರಸ್ತೆ ಬದಿಯ ಅಂಗಡಿಯಲ್ಲಿ ಚಹಾ ಸವಿದರು!
ಕುಟುಂಬ ಸಮೇತರಾಗಿ ಟೀ ಕುಡಿದು ಸೆಲ್ಫಿ
Team Udayavani, Oct 31, 2022, 7:35 PM IST
ಬೆಳಗಾವಿ: ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರು ಬೆಳಗಾವಿಯಲ್ಲಿ ಸೋಮವಾರ ಬೆಳಗ್ಗೆ ಮಚ್ಛೆ ಗ್ರಾಮದ ಕ್ಯಾಂಟಿನ್ನಲ್ಲಿ ಕುಟುಂಬ ಸಮೇತರಾಗಿ ಟೀ ಕುಡಿದು ಸೆಲ್ಫಿ ತೆಗೆದುಕೊಂಡಿರುವ ವಿಡಿಯೋ ವೈರಲ್ ಆಗಿದೆ.
ಭಾರತೀಯ ಕ್ರಿಕೆಟ್ ದೇವರು, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರು ಬೆಳಗಾವಿ ಮೂಲಕ ಗೋವಾಕ್ಕೆ ಸೋಮವಾರ ತೆರಳಿದರು. ಈ ವೇಳೆ ಮಾರ್ಗ ಮಧ್ಯದಲ್ಲಿ ಬೆಳಗಾವಿ ತಾಲೂಕಿನ ಮಚ್ಛೆ ಗ್ರಾಮದಲ್ಲಿರುವ ಫೌಜಿ ಎಂಬ ಟೀ ಕ್ಯಾಂಟಿನ್ಗೆ ಬೆಳಗ್ಗೆ 8 ಗಂಟೆ ಸುಮಾರಿಗೆ ತಮ್ಮ ಮರ್ಸಡಿಸ್ ಕಾರು ಹಾಗೂ ಇನ್ನೋವಾ ಕಾರಿನೊಂದಿಗೆ ಬಂದಿದ್ದರು.ಈ ವೇಳೆ ಟೀ ಕ್ಯಾಂಟಿನ್ ಮಾಲೀಕ ವೈಜು ನಿತೂರಕರ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ.
ತೆಂಡೂಲ್ಕರ್ ಕಾರಿನಲ್ಲಿಯೇ ಕುಳಿತುಕೊಂಡಿದ್ದರು. ಅವರ ಬಾಡಿ ಗಾರ್ಡ್ ಗಳು ಬಂದು ಚಹಾ ತೆಗೆದುಕೊಂಡು ಹೋದರು. ಚಹಾ ರುಚಿಯಾಗಿದ್ದರಿಂದ ಕಾರಿನಿಂದ ಇಳಿದು ಬಂದು ಕ್ಯಾಂಟೀನ್ ಮಾಲೀಕನೊಂದಿಗೆ ಮಾತಾಡಿದರು. ಮಾಲೀಕ ವೈಜು ಇದನ್ನು ನಂಬಲೇ ಇಲ್ಲ. ಅತ್ಯಂತ ಖುಷಿಯಿಂದ ಬರಮಾಡಿಕೊಂಡರು. ಚಹಾ ಬಿಲ್ 175 ರೂ. ಆಗಿತ್ತು. ಸಚೀನ್ 200 ರೂ. ನೋಟು ನೀಡಿ ಅದರ ಮೇಲೆಯೇ ತಮ್ಮ ಸಹಿ ಮಾಡಿದರು. ಉಳಿದ 25 ರೂ. ಚಿಲ್ಲರೆ ಹಣವನ್ನು ವೈಜು ವಾಪಸ್ ಮರಳಿಸಿದರು.
ಫೌಜಿ ಎಂಬ ಹೆಸರು ಇಟ್ಟಿದ್ದಕ್ಕೆ ಹೆಮ್ಮೆ ಪಟ್ಟ ಸಚಿನ್ ಅವರು ಪತ್ನಿ, ಪುತ್ರ ಹಾಗೂ ಪುತ್ರಿಯೊಂದಿಗೆ ಗೋವಾಕ್ಕೆ ತೆರಳಿದರು. ಈ ವೇಳೆ ನಾಲ್ವರು ಅಂಗ ರಕ್ಷಕರೂ ಇದ್ದರು. ಕ್ಯಾಂಟೀನ್ನಲ್ಲಿ ಸಚಿನ್ ಅವರು ತಮ್ಮ ಮೊಬೈಲ್ನಲ್ಲಿ ವಿಡಿಯೋ ಮಾಡಿಕೊಂಡರು. ನಂತರ ಸೆಲ್ಫಿ ಕ್ಲಿಕ್ಕಿಸಿಕೊಂಡು ಅಲ್ಲಿಂದ ಗೋವಾಕ್ಕೆ ಪ್ರಯಾಣ ಬೆಳೆಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf: ರೈತರಿಗೆ ನೀಡಿರುವ ನೋಟಿಸ್ ತಕ್ಷಣ ವಾಪಸ್: ಅಧಿಕಾರಿಗಳಿಗೆ ಸಿಎಂ ಖಡಕ್ ಸೂಚನೆ
Waqf Issue: ನ.4ರಂದು ರಾಜ್ಯಾದ್ಯಂತ ಕಾಂಗ್ರೆಸ್ ಸರ್ಕಾರದ ವಿರುದ್ದ ಬಿಜೆಪಿ ಪ್ರತಿಭಟನೆ
High Court: ಕ್ರಿಮಿನಲ್ ಕೇಸ್ ಡೈರಿ ಪ್ರತೀ ಪುಟಕ್ಕೆ ಸಹಿ:ಅರ್ಜಿ ವಜಾಗೊಳಿಸಿದ ಹೈಕೋರ್ಟ್
Bengaluru: ಸುವರ್ಣ ಸಂಭ್ರಮದಲ್ಲಿ ರಾಜ್ಯೋತ್ಸವ ವೈಭವ
Bengaluru: ಕೇಂದ್ರದ ತೆರಿಗೆ ಅನ್ಯಾಯ ಮಧ್ಯೆಯೂ ಅಭಿವೃದ್ಧಿ: ಸಿಎಂ
MUST WATCH
ಹೊಸ ಸೇರ್ಪಡೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.