Subsidy: ರಸಗೊಬ್ಬರಕ್ಕೆ ಸಬ್ಸಿಡಿ ನೀಡಿದ ಕೇಂದ್ರದ ಕ್ರಮ ಸ್ವಾಗತಾರ್ಹ: ಸಂಸದ ಈರಣ್ಣ ಕಡಾಡಿ
Team Udayavani, Oct 26, 2023, 1:23 PM IST
ಮೂಡಲಗಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಹಿಂಗಾರು ಹಂಗಾಮಿಗೆ ಅನ್ವಯವಾಗುವಂತೆ ಕೃಷಿ ಬಳಕೆಯ ರಸಗೊಬ್ಬರ ಸಬ್ಸಿಡಿಗೆ 22,303 ಕೋಟಿ ರೂ.ಗಳನ್ನು ಸಬ್ಸಿಡಿ ನೀಡಲು ತೀರ್ಮಾನಿಸಿದೆ ಜೊತೆಗೆ ಫಾಸ್ಪೆಟ್ ಹಾಗೂ ಪೋಟ್ಯಾಷ್‌ಯುಕ್ತ ರಸಗೊಬ್ಬರಗಳಿಗೆ ಪೌಷ್ಟಿಕಾಂಶ ಆಧಾರಿತ ಸಬ್ಸಿಡಿ ನೀಡಲು ಒಪ್ಪಿಗೆ ನೀಡಲಾಗಿದೆ. ಇದು ರೈತರಿಗೆ ಕೈಗೆಟುಕುವ ಬೆಲೆಯಲ್ಲಿ ರಸಗೊಬ್ಬರಗಳ ಲಭ್ಯತೆಯನ್ನು ಖಾತ್ರಿಪಡಿಸಲು ಸರ್ಕಾರ ಬದ್ಧವಾಗಿದೆ ಎಂದು ರಾಜ್ಯಸಭಾ ಸಂಸದ ಹಾಗೂ ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಈರಣ್ಣ ಕಡಾಡಿ ಕೇಂದ್ರ ಸರ್ಕಾರದ ಕ್ರಮವನ್ನು ಶ್ಲಾಘೀಸಿದ್ದಾರೆ.
ಗುರುವಾರದಂದು ಪತ್ರಿಕಾ ಹೇಳಿಕೆ ನೀಡಿದ ಸಂಸದ ಈರಣ್ಣ ಕಡಾಡಿ ಅವರು ಕೇಂದ್ರ ಸರ್ಕಾರ ಹಿಂಗಾರು ಋತುವಿನ ಬೆಳೆಗಳಿಗೆ ಸಾರಜನಕ, ರಂಜಕ, ಪೊಟ್ಯಾಶ್ ಮತ್ತು ಗಂಧಕದಂತಹ ವಿವಿಧ ಪೋಷಕಾಂಶಗಳಿಗೆ ಸಬ್ಸಿಡಿ ದರ ಒದಗಿಸಲು ಸರ್ಕಾರ ನಿರ್ಧರಿಸಿದೆ. ಹೆಚ್ಚಿನ ಜಾಗತಿಕ ಬೆಲೆಗಳ ಹೊರತಾಗಿಯೂ ರೈತರಿಗೆ ಸಮಂಜಸವಾದ ದರದಲ್ಲಿ ಮಣ್ಣಿನ ಪೋಷಕಾಂಶಗಳನ್ನು ಸಿಗುವುದನ್ನು ಖಚಿತಪಡಿಸಿಕೊಳ್ಳಲು ಸಹಾಯಧನಕ್ಕೆ ಕೇಂದ್ರ ಸರ್ಕಾರದ ಈ ತೀರ್ಮಾನ ಕೈಗೊಂಡಿದೆ ಇದು ಅನ್ನದಾತನ ಬಾಳಿನಲ್ಲಿ ಸಮಗ್ರ ಬದಲಾವಣೆ ತರುವತ್ತ ಹೆಜ್ಜೆ ಹಾಕಿದೆ ಎಂದರು.
NPK ಪ್ರತಿ ಚೀಲಕ್ಕೆ ರೂ 1,470ರ ಹಳೆಯ ದರದಲ್ಲಿ ಮತ್ತು SSP (ಸಿಂಗಲ್ ಸೂಪರ್ ಫಾಸ್ಟೇಟ್) ಪ್ರತಿ ಚೀಲ ರೂ 500ಕ್ಕೆ ಲಭ್ಯವಿರಲಿದೆ. MoP (ಮ್ಯುರಿಯೇಟ್ ಆಫ್ ಪೊಟಾಷ್) ದರ ಪ್ರತಿ ಚೀಲಕ್ಕೆ ರೂ 1,700ರಿಂದ ರೂ 1,655ಕ್ಕೆ ಇಳಿಯಲಿದೆ. ಪ್ರತಿ ಕಿಲೋ ನೈಟ್ರೋಜೆನ್ (ಎನ್) ರೂ.47.02, ರಂಜಕಕ್ಕೆ ರೂ 20.82, ಪೊಟ್ಯಾಷ್‌ಗೆ ರೂ. 2.38 ಮತ್ತು ಸಲ್ಪರ್‌ಗೆ ರೂ 1,89 ರೂ.ಗೆ ನಿಗದಿಪಡಿಸಲಾಗಿದೆ. ಕೇಂದ್ರ ಸರ್ಕಾರವು ಯೂರಿಯಾ ಸಬ್ಸಿಡಿಯನ್ನು ಹೆಚ್ಚಿಸುವ ಮೂಲಕ ರಸಗೊಬ್ಬರ ಬೆಲೆ ಏರಿಕೆಯಿಂದ ರೈತರನ್ನು ರಕ್ಷಿಸುತ್ತಿದೆ. ಈ ಐತಿಹಾಸಿಕ ನಿರ್ಧಾರ ಕೈಗೊಂಡ ಪ್ರಧಾನಮಂತ್ರಿ ನರೇಂದ್ರ ಮೋದಿ ಜೀ ಹಾಗೂ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಾ. ಮನ್ಸುಖ್ ಮಾಂಡವಿಯಾ ಅವರಿಗೆ ದಸರಾ ಉಡುಗೊರೆ ನೀಡಿದಕ್ಕಾಗಿ ನಾಡಿನ ರೈತರ ಪರವಾಗಿ ಧನ್ಯವಾದಗಳನ್ನು ತಿಳಿಸಿದ್ದಾರೆ.
ಇದನ್ನೂ ಓದಿ: ನಗರಸಭೆಯಲ್ಲಿ ಗದ್ದುಗೆಗಾಗಿ ಗುದ್ದಾಟ… ಬಿಜೆಪಿ ಅಧ್ಯಕ್ಷನ ವಿರುದ್ಧ ಬಿಜೆಪಿ ಸದಸ್ಯರೇ ಗರಂ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.