ಅತ್ತ ಹೊತ್ತಿ ಉರಿದ ಮೃತದೇಹ ಇತ್ತ ದಾಂಪತ್ಯಕ್ಕೆ ಕಾಲಿಟ್ಟ ಜೋಡಿ
Team Udayavani, Dec 7, 2018, 6:00 AM IST
ಬೆಳಗಾವಿ: ಅಮಾವಾಸ್ಯೆಯ ಮುನ್ನಾ ದಿನ ಸ್ಮಶಾನದ ಚಿತೆಯಲ್ಲಿ ಉರಿಯುತ್ತಿದ್ದ ಮೃತದೇಹದ ಪಕ್ಕದಲ್ಲಿ ನೋವಿನ ಸಂಕಟ ಒಂದೆಡೆಯಾದರೆ, ಇನ್ನೊಂದೆಡೆ ಸ್ಮಶಾನದಲ್ಲಿಯೇ ಅಂತರ್ಜಾತಿಯ ಸರಳ ವಿವಾಹ ನಡೆದು ಹೊಸ ಜೀವನದ ಸಂಭ್ರಮಕ್ಕೆ ಸದಾಶಿವನಗರದಲ್ಲಿರುವ ರುದ್ರಭೂಮಿ ಸಾಕ್ಷಿಯಾಯಿತು.
ಈ ಸಲವೂ ಸ್ಮಶಾನ ಭೂಮಿಯಲ್ಲಿ ಡಾ| ಬಾಬಾಸಾಹೇಬ ಅಂಬೇಡ್ಕರ ಮಹಾ ಪರಿನಿರ್ವಾಣ ದಿನದ ನಿಮಿತ್ತ ಗುರುವಾರ ನಡೆದ ಮೌಡ್ಯ ವಿರೋಧಿ ಪರಿವರ್ತನಾ ದಿನ ಕಾರ್ಯಕ್ರಮ ಅನೇಕ ನೂತನ ವಿಚಾರಗಳಿಗೆ ನಾಂದಿಯಾಯಿತು. ಅಲ್ಲಿ ಮಂತ್ರ ವಾದ್ಯಗಳಿಲ್ಲ, ವೇದ ಘೋಷಗಳಿಲ್ಲ, ಹೋಮ-ಹವನವಿಲ್ಲ, ಪುರೋಹಿತರು, ಶಾಸ್ತ್ರಗಳಂತೂ ಮೊದಲೇ ಇಲ್ಲ. ಹಿರಿಯರ ಆಶೀರ್ವಾದ, ಹೂಗಳ ಅಕ್ಷತಾರೋಹಣ, ಕುವೆಂಪು ಅವರ ಮಂತ್ರ ಮಾಂಗಲ್ಯದ ಆಶಯದಂತೆ ನವ ಜೋಡಿ ನವಜೀವನಕ್ಕೆ ಕಾಲಿಟ್ಟಿತು.
8 ನೇ ತರಗತಿ ಓದಿ, ಎಪಿಎಂಸಿಯಲ್ಲಿ ಹಮಾಲಿ ಕೆಲಸ ಮಾಡುತ್ತಿದ್ದ ಖಾನಾಪುರ ತಾಲೂಕಿನ ತೀರ್ಥಕುಂಡೆ ಗ್ರಾಮದ ಸೋಪಾನ ಬಾಳಕೃಷ್ಣ ಜಾಂಬೋಟಿ (25) ಹಾಗೂ ದ್ವಿತೀಯ ಪಿಯು ಓದಿ, ಆಸ್ಪತ್ರೆಯಲ್ಲಿ ದರ್ಜೆ ನೌಕರಿ ಮಾಡುತ್ತಿರುವ ಹಿರೇಬಾಗೇವಾಡಿಯ ರೇಖಾ ಚಂದ್ರಪ್ಪ ಗುರವಣ್ಣವರ (23) ಸ್ಮಶಾನದಲ್ಲಿಯೇ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಆಸ್ಪತ್ರೆಯಲ್ಲಿ ಇಬ್ಬರ ನಡುವಿನ ಪರಿಚಯ ಪ್ರೀತಿಗೆ ತಿರುಗಿತ್ತು. ಕೆಲ ವರ್ಷಗಳಿಂದ ಪ್ರೀತಿಸುತ್ತಿದ್ದ ಈ ಜೋಡಿ, ಸಾವಿರಾರು ಜನರ ಸಮ್ಮುಖದಲ್ಲಿ ಮದುವೆಯಾಯಿತು.
ಲಿಂ| ಡಾ.ತೋಂಟದ ಶ್ರೀ ಸಿದ್ದಲಿಂಗ ಸ್ವಾಮೀಜಿಯ ಭಾವಚಿತ್ರಕ್ಕೆ ಗೌರವ ಸಲ್ಲಿಸಿದ ಗಣ್ಯರು, ಹಾರ ಬದಲಿಸಿದ ನವ ಜೋಡಿಗಳ ತಲೆಯ ಮೇಲೆ ಹೂ ಹಾಕಿ ಆಶೀರ್ವದಿಸಿದರು. ಸ್ಮಶಾನದ ಆವರಣದಲ್ಲಿ ಇಡೀ ರಾತ್ರಿ ವಿವಿಧ ವೈಚಾರಿಕ ಗೋಷ್ಠಿ, ತತ್ವಪದ, ಕ್ರಾಂತಿ ಗೀತೆ, ಮೌಡ್ಯ ವಿರೋಧಿ ಕಲಾಕೃತಿಗಳ ರಚನೆ, ಅಂಬೇಡ್ಕರರ ಚಿಂತನೆಗಳ ಕುರಿತು ಭಜನೆ, ನಾಟಕ ಪ್ರದರ್ಶನಗೊಂಡವು. ಸ್ಮಶಾನದ ಆವರಣದಲ್ಲಿ ವಿವಿಧ ಸಾಹಿತ್ಯ ಕೃತಿ, ಬುದ್ಧ, ಬಸವ, ಅಂಬೇಡ್ಕರರ ಪುಸ್ತಕಗಳು, ಕಲೆ-ಸಾಹಿತ್ಯ, ವೈಚಾರಿಕ ಪುಸ್ತಕಗಳ ಮಾರಾಟ ನಡೆದಿತ್ತು. ಜತೆಗೆ, ವಿವಿಧ ಕಲಾ, ಕೃಷಿ ಪರಿಕರಗಳು, ಅನೇಕ ವಸ್ತುಗಳ ಮಾರಾಟ ಇತ್ತು. ನೆರೆದ ಗಣ್ಯರು ಹಾಗೂ ಸಾವಿರಾರು ಜನ ಸ್ಮಶಾನ ಭೂಮಿಯಲ್ಲಿಯೇ ಗೋಧಿ ಹುಗ್ಗಿ, ಬದನೆಕಾಯಿ ಪಲೆÂ, ಅನ್ನ-ಸಾರು ಸವಿದರು.
– ಭೈರೋಬಾ ಕಾಂಬಳೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijaypura: ಕೋರ್ಟ್ ನಲ್ಲೆ ಕತ್ತು ಕೊ*ಯ್ದುಕೊಂಡ ಆರೋಪಿ!!
C.T.Ravi; ಬಿಡುಗಡೆ ಬಳಿಕ ಬಿಜೆಪಿ ಕಿಡಿ ಕಿಡಿ: ನಾವೇನು ಬಳೆ ತೊಟ್ಟು ಕುಳಿತಿಲ್ಲ…!
C.T. Ravi; ಅವಾಚ್ಯ ಶಬ್ದಗಳಿಂದ ನಿಂದಿಸಿದ ದಾಖಲೆ ಇಲ್ಲ: ಮಹತ್ವ ಪಡೆದ ಸಭಾಪತಿ ಹೇಳಿಕೆ
C.T. Ravi ಅವರನ್ನು ತತ್ ಕ್ಷಣ ಬಿಡುಗಡೆ ಮಾಡಿ: ಹೈಕೋರ್ಟ್ ಆದೇಶ
Davanagere: ಬಿಜೆಪಿ-ಕಾಂಗ್ರೆಸ್ ಹೊಂದಾಣಿಕೆ ಆರೋಪದ ಬಗ್ಗೆ ರೇಣುಕಾಚಾರ್ಯ ಸ್ಪಷ್ಟನೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.