BPL ಪಡಿತರ ರದ್ದತಿಯ ಮಾನದಂಡ ಸರಿಯಿಲ್ಲ; ಡಾ| ಭರತ್
Team Udayavani, Dec 13, 2024, 12:44 AM IST
ಬೆಳಗಾವಿ: ಬಿಪಿಎಲ್ ಪಡಿತರ ಚೀಟಿ ರದ್ದು ಮಾನದಂಡ ಸಂಬಂಧ ಶಾಸಕರಾದ ಡಾ| ಭರತ್ ಶೆಟ್ಟಿ ವೈ. ಅವರು ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಬಿಪಿಎಲ್ ಪಡಿತರ ಫಲಾನುಭವಿಗಳು ಯಾವುದೋ ಕಾರಣಕ್ಕೆ ಒಂದೆರಡು ತಿಂಗಳು ಪಡಿತರ ಪಡೆದುಕೊಳ್ಳದಿದ್ದಲ್ಲಿ ಕಾರ್ಡ್ ರದ್ದಾಗುತ್ತಿದೆ. ಕೆಲವೊಂದು ಸಾಲ ಸೌಲಭ್ಯಕ್ಕಾಗಿ ಕೇವಲ ಆದಾಯ ರಿಟರ್ನ್ ಮಾಡಿದವರ ಕಾರ್ಡ್ ರದ್ದಾಗುತ್ತಿದೆ. ಆಯುಷ್ಮಾನ್ ಜತೆ ಬಿಪಿಎಲ್ ಪಡಿತರ ಲಿಂಕ್ ಇರುವುದರಿಂದ ಮತ್ತೆ ಕಾರ್ಡ್ ಪಡೆಯಲು ಫಲಾನುಭವಿಯ ಫೈಲ್ ಜಿಲ್ಲಾ ಮಟ್ಟದಲ್ಲಿ ವಿಲೇವಾರಿ ಮಾಡುವ ಬದಲು ಬೆಂಗಳೂರಿಗೆ ಕಳಿಸಬೇಕಿದೆ. ಈ ನಡುವೆ ಚಿಕಿತ್ಸೆ ಪಡೆಯುತ್ತಿರುವವರ ಪಾಡು ಏನು, ಸರಕಾರ ಬಿಪಿಎಲ್ ಕಾರ್ಡ್ ರದ್ದು ಮಾನದಂಡವನ್ನು ಪುನರ್ ಪರಿಶೀಲಿಸಬೇಕು ಎಂದರು. ಇದಕ್ಕೆ ಆಹಾರ ಪೂರೈಕೆ ಸಚಿವ ಮುನಿಯಪ್ಪ ಉತ್ತರಿಸಿ, ಆರೋಗ್ಯ ಸಂಬಂಧಿ ಚಿಕಿತ್ಸೆಗೆ ಸ್ಥಳೀಯ ಉಪ ನಿರ್ದೇಶಕರಿಗೆ ಅರ್ಜಿ ಸಲ್ಲಿಸಿದರೆ ತತ್ಕ್ಷಣ ಬೇಕಾದ ಕ್ರಮ ಕೈಗೊಳ್ಳಲಾಗುವುದು ಎಂದರು.
ಬಂಟ್ವಾಳ-ಕಾರ್ಡ್ ರದ್ದಾಗಿಲ್ಲ: ಬಂಟ್ವಾಳ ಶಾಸಕ ರಾಜೇಶ್ ನಾೖಕ್ ಕೇಳಿದ ಚುಕ್ಕಿ ಗುರುತಿನ ಪ್ರಶ್ನೆಗೆ ಬಂಟ್ವಾಳ ಕ್ಷೇತ್ರದಲ್ಲಿ ಯಾವುದೇ ಕಾರ್ಡ್ ರದ್ದಾಗಿಲ್ಲ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kambala Kalarava: 400 ವರ್ಷ ಇತಿಹಾಸವಿರುವ ಮಂಡಾಡಿ ಹೋರ್ವರಮನೆ ಕಂಬಳ
Putturu: ದೇಗುಲ: ನಿಯಮಾನುಸಾರ ಮೀಸಲಾತಿ ನೀಡಿ ಸಮಿತಿ ರಚಿಸಲು ಹೈಕೋರ್ಟ್ ಆದೇಶ
Congress Gurantee: ಎಲ್ಲ ಅರ್ಹರಿಗೂ ಗ್ಯಾರಂಟಿ ಯೋಜನೆ ಸೌಲಭ್ಯ ತಲುಪಿಸಿ: ರಮೇಶ್ ಕಾಂಚನ್
Udupi: ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠ: ಆನ್ಲೈನ್ ಭಗವದ್ಗೀತೆ ರಸಪ್ರಶ್ನೆ ಸ್ಪರ್ಧೆ
Udupi: ಬೈಲೂರು ಶ್ರೀಮಹಿಷಮರ್ದಿನಿ ದೇವಸ್ಥಾನ; ಡಿ.14ಕ್ಕೆ ಶತಚಂಡಿಕಾಯಾಗ, ಬ್ರಹ್ಮಮಂಡಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.