ವಿಷಯಾಧಾರಿತಕ್ಕಿಂತ ಟೀಕೆಗಳಿಗೇ ಹೆಚ್ಚಿನ ಮಣೆ
Team Udayavani, Apr 22, 2019, 1:21 PM IST
ಬೆಳಗಾವಿ: ಲೋಕಸಭೆಗೆ ಅದರದೇ ಆದ ಘನತೆ ಗೌರವ ಇದೆ. ಇದಕ್ಕೆ ಗೌರವದ ಆವರಣ ಇರಬೇಕಿತ್ತು. ಆದರೆ ಈ ಆವರಣವೇ ಕುಸಿದಿದೆ. ಪ್ರಮುಖ ಪಕ್ಷಗಳ ನಾಯಕರು ಹಾಗೂ ಅಭ್ಯರ್ಥಿಗಳು ಬಳಸಿದ ಶಬ್ದ, ಮಾಡಿದ ಟೀಕೆಗಳು ಸಾಮಾನ್ಯ ಜನರಿಗೆ ಜಿಗುಪ್ಸೆ ಬರುವಂತೆ ಮಾಡಿವೆ.
ಇದು ಲೋಕಸಭೆ ಚುನಾವಣೆಯ ಪ್ರಚಾರ ಕಾರ್ಯದ ಬಗ್ಗೆ ಗಡಿನಾಡು ಬೆಳಗಾವಿ ಜಿಲ್ಲೆಯ ಚಿಂತಕರು, ಸಾಹಿತಿಗಳು, ಲೇಖಕರು, ವಿರ್ಮಶಕರು ವ್ಯಕ್ತಪಡಿಸಿದ ಅಭಿಪ್ರಾಯ. ಲೋಕಸಭೆ ಚುನಾವಣೆಯ ಪ್ರಚಾರ ವೈಖರಿ ಹೇಗಿತ್ತು ಎಂದು ಪ್ರಶ್ನೆ ಮಾಡಿದಾಗ ಬೇಸರದ ಅಭಿಪ್ರಾಯಗಳೇ ವ್ಯಕ್ತವಾದವು.
ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಗಮನ ಸೆಳೆದಿರುವ ಬೆಳಗಾವಿ ಹಾಗೂ ಚಿಕ್ಕೋಡಿ ಕ್ಷೇತ್ರಗಳಲ್ಲಿ ಲೋಕಸಭೆ ಸಾರ್ವತ್ರಿಕ ಚುನಾವಣೆಯ ಪ್ರಚಾರದ ಭರಾಟೆ ಮುಗಿದಿದೆ. ಮತದಾನಕ್ಕೆ ವೇದಿಕೆ ಸಹ ಸಜ್ಜಾಗಿದೆ. ಮತದಾರರು ನಿರೀಕ್ಷೆ ಮಾಡಿದಂತೆ ವಿಷಯಾಧಾರಿತ ಪ್ರಚಾರ ಎರಡೂ ಕ್ಷೇತ್ರಗಳಲ್ಲಿ ಕಾಣಲಿಲ್ಲ. ವಿಷಯಕ್ಕಿಂತ ವೈಯಕ್ತಿಕ ಟೀಕೆಗಳೇ ಹೆಚ್ಚು ಪ್ರಾಮುಖ್ಯತೆ ಪಡೆದವು. ಅಭ್ಯರ್ಥಿಗಳು ಹಾಗೂ ನಾಯಕರು ಪರಸ್ಪರ ಟೀಕೆ ಮಾಡುವಾಗ ಮಹಿಳೆ, ಜಾತಿ, ಧರ್ಮ, ಸಂಸ್ಕೃತಿ ಯಾವುದನ್ನೂ ನೋಡಲಿಲ್ಲ ಎಂಬ ಅಭಿಪ್ರಾಯ ಮೂಡಿಬಂದವು.
ಹಿಂದಿನ ಕಾಲದ ಚುನಾವಣೆಗೂ ಈಗಿನ ಚುನಾವಣೆಗೂ ಅಜಗಜಾಂತರ ವ್ಯತ್ಯಾಸವಿದೆ ಎಂಬುದು ಈಗ ಮತ್ತೂಮ್ಮೆ ಗೊತ್ತಾಯಿತು. ನೆಹರು ಕಾಲದಲ್ಲಿ ನಡೆದ ಚುನಾವಣೆ ಸಂದರ್ಭದಲ್ಲಿ ಲೋಹಿಯಾ ಅವರು ಸೋತಾಗ ಅಚ್ಚರಿಗೊಂಡಿದ್ದ ಜವಾಹರ ಲಾಲ ನೆಹರು ಅವರು ಸ್ವತಃ ಲೋಕಸಭೆಯಲ್ಲಿ ಲೋಹಿಯಾ ಅವರು ಇರಬೇಕಿತ್ತು. ನಾನು ಅವರ ಮಾತುಗಳನ್ನು ಕೇಳಲು ಬಹಳ ಉತ್ಸುಕನಾಗಿದ್ದೆ. ಆದರೆ ಜನರು ಅವರನ್ನು ಹೇಗೆ ಸೋಲಿಸಿದರು ಎಂದು ಅಚ್ಚರಿಯಿಂದ ಕೇಳಿದ್ದರು. ಆದರೆ ಈಗ ಎಲ್ಲವೂ ತದ್ವಿರುದ್ಧ. ಈ ಬಾರಿಯಂತೂ ಜನರು ಮುಜುಗುರಪಡುವಷ್ಟು ವೈಯಕ್ತಿಕ ಟೀಕೆಗಳು ಕೇಳಿಬಂದವು. ಮೌಲ್ಯಗಳು ಮೂಲೆಗುಂಪಾಗಿದ್ದವು ಎಂದು ಹಿರಿಯ ಸಾಹಿತಿ ಡಾ| ಸರಜೂ ಕಾಟ್ಕರ್ ಹೇಳಿದರು.
ಲೋಕಸಭೆಗೆ ನಾಯಕರಾದವರು ಘನತೆಯ ಗೋಡೆ ಕಟ್ಟಬೇಕು. ಗೌರವದ ಆವರಣ ನಿರ್ಮಾಣ ಮಾಡಬೇಕು. ಆದರೆ ಈಗ ಎರಡೂ ಕುಸಿದಿದೆ. ಪೈಪೋಟಿಯ ಮೇಲೆ ಜಾತಿ ಹಾಗೂ ಧರ್ಮದ ನಿಂದನೆ ಮಾಡಿದ್ದಾರೆ. ಇದರಲ್ಲಿ ಹಿರಿ-ಕಿರಿ ಎಂಬ ಬೇಧ-ಭಾವ ಕಂಡಿಲ್ಲ. ವಿಷಯಾಧಾರಿತ ಪ್ರಚಾರಕ್ಕೆ ಇಲ್ಲಿ ಅವಕಾಶವೇ ಇರಲಿಲ್ಲ ಎಂದು ಅವರು ನೋವಿನಿಂದ ಹೇಳಿದರು.
ಈಗಷ್ಟೆ ಮುಗಿದ ಲೋಕಸಭೆ ಚುನಾವಣೆ ಪ್ರಚಾರದಲ್ಲಿ ವಿಷಯಾಧಾರಕ್ಕಿಂತ ಟೀಕೆ ಗಳಿಗೆ, ವೈಯಕ್ತಿಕ ನಿಂದನೆ, ಸಿದ್ಧಾಂತಗಳ ನಿಂದನೆ, ವಂಶದ ಹಿಂದಿನ ವಿಷಯಗಳನ್ನು ಕಿಚಾಯಿಸುವುದಕ್ಕೆ ಸಿಂಹಪಾಲು ಸಿಕ್ಕಿದೆ. ಇದು ಬಹಳ ನೋವಿನ ಸಂಗತಿ. ಆಚಾರವಿಲ್ಲದ ನಾಲಗೆ ಎಂಬ ದಾಸರ ಪದ ಮತ್ತೆ ಮತ್ತೆ ನೆನಪಾಯಿತು. ಎರಡೂ ಪಕ್ಷಗಳ ನಾಯಕರು ಪರಸ್ಪರ ಜನ್ಮಜಾಲಾಡಿ ಮತದಾರರ ಮನಸ್ಸು ಕಲುಷಿತವಾಗುವಂತೆ ಮಾಡಿದರು ಎಂದು ಶಿಕ್ಷಣ ತಜ್ಞ ಡಾ| ಬಸವರಾಜ ಜಗಜಂಪಿ ಬಹಳ ಬೇಸರದಿಂದ ಹೇಳಿದರು. ಪ್ರಚಾರ ಕಾರ್ಯ ವಿಷಯಾಧಾರಿತವಾಗಬೇಕಿತ್ತು. ನಾವು ಏನು ಮಾಡಿದ್ದೇವೆ. ಮುಂದೆ ಏನು ಮಾಡುತ್ತೇವೆ ಎಂಬುದರ ಬಗ್ಗೆ ನಾಯಕರು ಪ್ರಸ್ತಾಪ ಮಾಡಬೇಕಾಗಿತ್ತು. ಕೆಲಸದ ಸಾಧನೆಯನ್ನು ಸೌಮ್ಯವಾಗಿ ಹೇಳಬೇಕಿತ್ತು. ಕೆಲವರ ಪ್ರಬುದ್ಧತೆ ಇತರರಿಗೆ ಮಾದರಿಯಾಗಬೇಕಾಗಿತ್ತು. ಆದರೆ ದುರ್ದೈವ. ಈ ಬಾರಿಯ ಪ್ರಚಾರ ಕೀಳುಮಟ್ಟದ ರಾಜಕಾರಣಕ್ಕೆ ಸಾಕ್ಷಿಯಾಯಿತು ಎಂಬುದು ಪ್ರಚಾರವನ್ನು ಬಹಳ ಸೂಕ್ಷ,ವಾಗಿ ಅವಲೋಕಿಸಿದ ಚಿಂತಕರ ಅಭಿಪ್ರಾಯ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರಿಗೆ ಏನು ಅನುಕೂಲ ಮಾಡುತ್ತೇವೆ ಎಂಬುದನ್ನು ಯಾವ ಅಭ್ಯರ್ಥಿಯೂ ಹೇಳಲಿಲ್ಲ. ಬದಲಾಗಿ ಕೆಳಮಟ್ಟದ ವೈಯಕ್ತಿಕ ಟೀಕೆಗಳೇ ಹೆಚ್ಚಾದವು. ಈ ರೀತಿಯಾದರೆ ಮತದಾನದ ಪ್ರಮಾಣ ಸ್ವಾಭಾವಿಕವಾಗಿಯೇ ಕಡಿಮೆಯಾಗುತ್ತದೆ. ದುಡ್ಡು ಪಡೆದವರು ಅನಿವಾರ್ಯವಾಗಿ ಮತ ಹಾಕಲು ಹೋಗುತ್ತಾರೆ. ಉಳಿದವರು ಆಸಕ್ತಿಯಿಂದ ಹೋಗಲು ಮನಸ್ಸು ಬಿಡುವದಿಲ್ಲ. ಪ್ರಜ್ಞಾವಂತರು ಹೇಗೂ ನೋಟಾ ಕಾಲಂ ಇದೆ ಎಂಬ ಕಾರಣಕ್ಕೆ ಮತದಾನಕ್ಕೆ ಹೋಗಬೇಕಾಗಿದೆ ಎಂಬುದು ಹಿರಿಯ ಸಾಹಿತಿ ಜ್ಯೋತಿ ಹೊಸೂರ ವಿಷಾದದ ನುಡಿ.
ಲೋಕಸಭೆ ಚುನಾವಣೆಗೆ ಅದರದೇ ಆದ ಘನತೆ ಇದೆ. ಆದರೆ ಈ ಬಾರಿಯ ಚುನಾವಣೆ ಪ್ರಚಾರ ಸ್ಥಳೀಯ ಮಟ್ಟದ ಚುನಾವಣೆಗಿಂತ ಕೆಳಮಟ್ಟಕ್ಕೆ ಇಳಿದಿತ್ತು. ಜ್ವಲಂತ ಸಮಸ್ಯೆಗಳನ್ನು ಬಿಟ್ಟು ವೈಯಕ್ತಿಕ ಟೀಕೆಗಳಿಗೆ ಹೆಚ್ಚು ಮಹತ್ವ ಸಿಕ್ಕಿತು. ಸಾಮಾಜಿಕ ಜಾಲತಾಣಗಳ ದುರುಪಯೋಗವಾಯಿತು. ಜ್ವಲಂತ ಸಮಸ್ಯೆಗಳ ಚರ್ಚೆಗೆ ಅವಕಾಶ ಸಿಗಲೇ ಇಲ್ಲ. ವಾಸ್ತವಿಕವಾಗಿ ಜನರಿಗೆ ಏನು ಸಿಗಬೇಕಿತ್ತೋ ಅದು ಚರ್ಚೆಗೆ ಬರಲೇ ಇಲ್ಲ. ಇದು ನಮ್ಮ ದುರ್ದೈವ ಎಂದು ಹಿರಿಯ ಇತಿಹಾಸ ಸಂಶೋಧಕ ಯ.ರು. ಪಾಟೀಲ ಹೇಳಿದರು.
ಚುನಾವಣೆ ಎಂದರೆ ಸಹಜವಾಗಿಯೇ ಜನರಲ್ಲಿ ನಮಗೆ ಯಾವುದಾದರೂ ಹೊಸ ಯೋಜನೆಗಳ ಬಗ್ಗೆ ಭರವಸೆ ಕೇಳುತ್ತದೆ. ನಮ್ಮ ಅಭ್ಯರ್ಥಿಗಳು ಆಸೆ ಹುಟ್ಟಿಸುವ ಭರವಸೆ ನೀಡುತ್ತ ಬರುತ್ತಾರೆ. ಮುಂದೆ ಅವುಗಳು ಕಾರ್ಯರೂಪಕ್ಕೆ ಬರುವುದು ಬೇರೆ ಮಾತು. ಆದರೆ ಈ ಚುನಾವಣೆ ಪ್ರಚಾರದಲ್ಲಿ ಅಂತಹ ಯಾವುದೂ ಕೇಳಲಿಲ್ಲ. ಬದಲಾಗಿ ಎಲ್ಲರೂ ವೈಯಕ್ತಿಕ ಟೀಕೆಗಳನ್ನು ಮಾಡುವುದರಲ್ಲಿ ಹೆಚ್ಚು ಆಸಕ್ತರಾಗಿದ್ದರು. ಇದು ಬಹಳ ಬೇಸರದ ಸಂಗತಿ ಎಂಬುದು ಹಿರಿಯ ಲೇಖಕಿ ಜ್ಯೋತಿ ಬದಾಮಿ ಅನಿಸಿಕೆ.
ಲೋಕಸಭೆ ಚುನಾವಣೆಯ ಪ್ರಚಾರ ವೈಖರಿ ಸಂಪೂರ್ಣ ಹಳಿತಪ್ಪಿದೆ. ಬರುವ ಚುನಾವಣೆಗಳಲ್ಲಿ ಪಕ್ಷಗಳ ಅಧ್ಯಕ್ಷರು ಹಾಗೂ ನಾಯಕರು ಹಾಗೂ ಕಿರಿಯರು ಚುನಾವಣೆ ಪ್ರಚಾರ ಹೇಗಿರಬೇಕು ಎಂಬುದನ್ನು ಮೊದಲೇ ನಿರ್ಧರಿಸಬೇಕು. ವೈಯಕ್ತಿಕ ನಿಂದನೆ ಹಾಗೂ ಚಾರಿತ್ರಿಕ ವಧೆ ಮಾಡಬಾರದು ಎಂಬುದಕ್ಕೆ ಬದ್ಧರಾಗಿರಬೇಕು. ಇದಕ್ಕೆ ಪ್ರಾಮಾಣಿಕ ಇಚ್ಛಾಶಕ್ತಿ ತೋರಿಸಬೇಕು ಎಂಬುದು ಪ್ರತಿಯೊಬ್ಬರ ಅಭಿಮತ.
ಇದು ಲೋಕಸಭೆ ಚುನಾವಣೆಯ ಪ್ರಚಾರ ಕಾರ್ಯದ ಬಗ್ಗೆ ಗಡಿನಾಡು ಬೆಳಗಾವಿ ಜಿಲ್ಲೆಯ ಚಿಂತಕರು, ಸಾಹಿತಿಗಳು, ಲೇಖಕರು, ವಿರ್ಮಶಕರು ವ್ಯಕ್ತಪಡಿಸಿದ ಅಭಿಪ್ರಾಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬೆಳಗಾವಿಯ ಶ್ರೀನಿವಾಸ ಠಾಣೇದಾರ ಅಮೆರಿಕ ಸಂಸತ್‌ಗೆ ಆಯ್ಕೆ
Waqf issue: ಉಪಚುನಾವಣೆಯಲ್ಲಿ ನಾಟಕ ಮಾಡಲು ಜೆಪಿಸಿ ದುರ್ಬಳಕೆ: ಎಚ್.ಕೆ.ಪಾಟೀಲ್
Waqf Property: ಆಡು ಮುಟ್ಟದ ಸೊಪ್ಪಿಲ್ಲ, ವಕ್ಫ್ ಮುಟ್ಟದ ಸ್ವತ್ತಿಲ್ಲ: ತೇಜಸ್ವಿ ಸೂರ್ಯ
Belagavi: ಎಸ್‌ಡಿಎ ರುದ್ರಣ್ಣ ಮೊಬೈಲ್ ಪತ್ತೆ: ಪೊಲೀಸರಿಂದ ತನಿಖೆ ಚುರುಕು
Belagavi; ರುದ್ರಣ್ಣ ಯಡವಣ್ಣವರ ಪ್ರಕರಣ ನಿಷ್ಪಕ್ಷಪಾತ ತನಿಖೆಯಾಗಲಿ: ಹೆಬ್ಬಾಳಕರ್
MUST WATCH
ಹೊಸ ಸೇರ್ಪಡೆ
Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ
Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ
Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.