ಹಣಾಹಣಿಗೆ ಸಿದ್ಧವಾಯ್ತು ಅಂತಿಮ ಕಣ

Team Udayavani, Apr 9, 2019, 12:21 PM IST

bel-1
ಬೆಳಗಾವಿ: ಲೋಕಸಭೆ ಚುನಾವಣೆಗೆ ಬೆಳಗಾವಿ ಜಿಲ್ಲೆಯ ಎರಡು ಕ್ಷೇತ್ರಗಳ ಆಖಾಡಾ ಸಿದ್ಧವಾಗಿದೆ. ನಾಮಪತ್ರ ವಾಪಸ್‌ ಪಡೆಯಲು ಅಂತಿಮ ದಿನವಾದ ಸೋಮವಾರ ಚಿಕ್ಕೋಡಿಯಲ್ಲಿ ಇಬ್ಬರು ಮತ್ತು ಬೆಳಗಾವಿ ಕ್ಷೇತ್ರದಲ್ಲಿ ಏಳು ಜನ ತಮ್ಮ ನಾಮಪತ್ರ ವಾಪಸ್‌ ಪಡೆಯುವ ಮೂಲಕ ಚುನಾವಣೆಯ ಸ್ಪಷ್ಟ ಚಿತ್ರಣ ಹೊರಬಿದ್ದಿದೆ.
ನಾಮಪತ್ರ ಪರಿಶೀಲನೆಯ ನಂತರ ಬೆಳಗಾವಿ ಕ್ಷೇತ್ರದಲ್ಲಿ 64 ಜನ ಕಣದಲ್ಲಿದ್ದರು. ಅದರಲ್ಲಿ ಮಹಾರಾಷ್ಟ್ರ ಏಕೀಕರಣ ಬೆಂಬಲಿತ ಮೋಹನ ಯಲ್ಲಪ್ಪ ಮೋರೆ, ಅಶೋಕ ಪಾಂಡಪ್ಪ ಹಂಜಿ, ಅಶೋಕ ಭಾವಕಣ್ಣಾ ಚೌಗಲೆ, ಗುರುಪುತ್ರ ಕೆಪ್ಪಣ್ಣಾ ಕುಳ್ಳೂರ, ಸಂಗಮೇಶ ನಾಗಪ್ಪ ಚಿಕ್ಕನರಗುಂದ, ಸಂಜೀವ್‌ ಪ್ರಾಣೇಶ ಗಣಾಚಾರಿ, ಸಂಜಯ ಅಶೋಕ ಪಾಟೀಲ ತಮ್ಮ
ನಾಮಪತ್ರಗಳನ್ನು ಹಿಂತೆಗೆದುಕೊಂಡಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ| ವಿಶಾಲ ಆರ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅದೇ ರೀತಿ ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಸಹ ಚುನಾವಣಾ ಕದನದ ಚಿತ್ರಣ ಸ್ಪಷ್ಟವಾಗಿದ್ದು 13 ಜನ ಅಭ್ಯರ್ಥಿಗಳಲ್ಲಿ ಇಬ್ಬರು ನಾಮಪತ್ರ ಮರಳಿ ಪಡೆದಿದ್ದಾರೆ. ಈಗ ಕಣದಲ್ಲಿ ಒಟ್ಟು 11 ಜನ ಅಭ್ಯರ್ಥಿಗಳು ಉಳಿದುಕೊಂಡಿದ್ದಾರೆ. ಶೈಲಾ ಸುರೇಶ ಕೋಳಿ, ಮಲ್ಲಪ್ಪ ಮಾರುತಿ ಖಟಾಂವೆ ನಾಮಪತ್ರ ವಾಪಸ್‌ ಪಡೆದಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ| ರಾಜೇಂದ್ರ ಕೆ.ವಿ ತಿಳಿಸಿದ್ದಾರೆ.
ಈಗ ಎರಡೂ ಲೋಕಸಭಾ ಕ್ಷೇತ್ರದ ಕಣ ಸ್ಪಷ್ಟವಾಗಿದ್ದು ಬಿಜೆಪಿ ಹಾಗೂ ಕಾಂಗ್ರೆಸ್‌ ಮಧ್ಯೆ ನೇರ ಪೈಪೋಟಿ ಏರ್ಪಟ್ಟಿದೆ. ಬೆಳಗಾವಿಯಲ್ಲಿ ಹಾಲಿ ಸಂಸದ ಸುರೇಶ ಅಂಗಡಿಗೆ ಕಾಂಗ್ರೆಸ್‌ ನಿಂದ ಡಾ| ವಿ.ಎಸ್‌. ಸಾಧುನವರ ನೇರ ಎದುರಾಳಿಯಾಗಿದ್ದಾರೆ.
ಚಿಕ್ಕೋಡಿಯಲ್ಲಿ ಇಬ್ಬರು ಘಟಾನುಘಟಿಗಳ ಮಧ್ಯೆ ಹಣಾಹಣಿ ಏರ್ಪಟ್ಟಿದೆ. ಕಾಂಗ್ರೆಸ್‌ನ ಹಾಲಿ ಸಂಸದ ಪ್ರಕಾಶ ಹುಕ್ಕೇರಿ ಬಿಜೆಪಿಯಿಂದ ಇದೇ ಮೊದಲ ಬಾರಿಗೆ ಸ್ಪರ್ಧೆ ಮಾಡುತ್ತಿರುವ ಅಣ್ಣಾಸಾಹೇಬ ಜೊಲ್ಲೆ ಮುಖಾಮುಖೀಯಾಗಲಿದ್ದಾರೆ.
ಚಿಕ್ಕೋಡಿ ಕ್ಷೇತ್ರದ ಅಭ್ಯರ್ಥಿಗಳ ವಿವರ ಇಂತಿದೆ: ಅಣ್ಣಾಸಾಹೇಬ ಜೊಲ್ಲೆ (ಬಿಜೆಪಿ), ಕಾಡಾಪೂರೆ ಮಚ್ಛೇಂದ್ರ ದವಲು (ಬಿಎಸ್‌ಪಿ), ಪ್ರಕಾಶ ಬಾಬಣ್ಣ ಹುಕ್ಕೇರಿ (ಕಾಂಗ್ರೆಸ್‌),ಅಪ್ಪಾಸಾಹೇಬ ಕುರಣೆ (ಭಾರಿಫ ಬಹುಜನ ಮಹಾಸಂಘ ಪಕ್ಷ) ಬಾಳಿಗಟ್ಟಿ ಪ್ರವೀಣಕುಮಾರ (ಉತ್ತಮ ಪ್ರಜಾಕೀಯ ಪಕ್ಷ) ಹಾಗೂ ಮುಗದುಮ್‌ ಇಸ್ಮಾಯಿಲ್‌ ಮಗದುಮ್ಮ (ರಿಪಬ್ಲಿಕನ್‌ ಪಾರ್ಟಿ ಆಫ್‌ ಇಂಡಿಯಾ). ಪಕ್ಷೇತರರು; ಕಲ್ಲಪ್ಪಾ ಅಡಿವೆಪ್ಪಾ ಗುಡಸಿ, ಜಿತೇಂದ್ರ ಸುಭಾಷ. ನೇರ್ಲೆ, ಮೋಹನ ಗುರಪ್ಪಾ ಮೋಟನ್ನವರ, ವಿಶ್ವನಾಥ ವಾಜಂತ್ರಿ, ಹಾಗೂ ಶ್ರೀಣಿಕ ಅಣ್ಣಾಸಾಹೇಬ ಜಂಗಟೆ.
ಬೆಳಗಾವಿ ಲೋಕಸಭಾ ಕ್ಷೇತ್ರ: ಸುರೇಶ ಚನ್ನಬಸಪ್ಪ ಅಂಗಡಿ (ಬಿಜೆಪಿ), ಡಾ. ವಿ.ಎಸ್‌. ಸಾಧುನವರ (ಕಾಂಗ್ರೆಸ್‌), ಪಕ್ಷೇತರರು: ನಂದಾ ಮಾರುತಿ ಕೊಳಚವಾಡಕರ, ರಣಜಿತ ಕಲ್ಲಪ್ಪ ಪಾಟೀಲ, ಕೃಷ್ಣಕಾಂತ ಕಾಮನ ಬಿರ್ಜೆ, ರಾಮಚಂದ್ರ ದತ್ತೋಬಾ ಪಾಟೀಲ, ಗೋಪಾಲ ಬಿ.ದೇಸಾಯಿ, ವಿಜಯ ಕೃಷ್ಣ ಮಾದರ, ರಾಮಚಂದ್ರ ಕೃಷ್ಣ ಗಾಂವಕರ, ಆನಂದ ರಮೇಶ ಪಾಟೀಲ, ಶ್ರೀಕಾಂತ ಬಾಲಕೃಷ್ಣ ಕದಮ, ಸುರೇಶ ಬಸಪ್ಪ ಮರಲಿಂಗನ್ನವರ, ಬದ್ರುದ್ದಿನ ಕಮದೊಡ್ಡ, ನಿತೀನ ದುಂಡಿಯಾ ಆನಂದಾಚೆ, ಲಕ್ಷ್ಮಣ ಸೋಮನಾಥ ಮೇಲಗೆ, ಪ್ರಕಾಶ ಬಾಳಪ್ಪ ನೇಸರಕರ, ನೀಲಕಂಠ ಎಂ. ಪಾಟೀಲ, ವಿಶ್ವನಾಥ ರಘುನಾಥ ಭುವಾಜಿ, ಪ್ರಣಾಮ ಪ್ರಕಾಶ ಪಾಟೀಲ, ಸಂಜಯ ಶಿವಪ್ಪ ಕಾಂಬಳೆ, ಶಂಕರ ಪೋನಪ್ಪ ಚೌಗಲೆ, ನಾಗೇಶ ಸುಭಾಶ ಬೂಬಾಟೆ, ಸಂದೀಪ ವಸಂತ ಲಾಡ, ಸಚಿನ ಮನೋಹರ ನಿಕಮ, ಗಜಾನನ ಅಮೃತ ಟೋಕಣೇಕರ, ವಿನಾಯಕ ಗೋಪಾಲ ಗುಂಜಟಕರ, ದೀಲಶಾನಮ ಸಿಕಂದರ ತಹಶೀಲ್ದಾರ, ಸುನೀಲ ಲಗಮಣ್ಣ ಗುಡ್ಡಕಾಯ, ಸುನೀಲ ದಾಸರ ವಿಠ್ಠಲ.
 ಪಕ್ಷೇತರರು: ಮಾರುತಿ ಸಿದ್ದಪ್ಪ ಚೌಗಲೆ, ಕವಿತಾ ದೀಪಕ ಕೋಲೆ, ರಾಜೇಂದ್ರ ಯಲ್ಲಪ್ಪ ಪಾಟೀಲ, ಅಸಿದೋಶ ಶಶಿಕಾಂತ ಕಾಂಬಳೆ, ಕಲ್ಲಪ್ಪ ಕೃಷ್ಣ ಕೋವಾಡಕರ, ರಾಜು ಸಂಗಪ್ಪ ದಿವಟಗೆ, ಪ್ರಭಾಕರ ಭುಜಂಗ ಪಾಟೀಲ, ಸುರೇಶ ಕೇಮಣ್ಣ ರಾಜುಕರ್‌, ಲಕ್ಷ್ಮೀ ಸುನೀಲ ಮುತಗೇಕರ್‌, ಸಚಿನ ಶಾಂತಾರಾಮ ಕೇಳವೇಕರ, ಓಂಕಾರಸಿಂಗ್‌ ಚಾತ್ರಾಸಿಂಗ್‌ ಭಾಟಿಯಾ, ಶಂಕರ ಪಾಂಡಪ್ಪ ರಾಠೊಡ, ವಿಜಯ ಲಕ್ಷ್ಮಣ್ಣ ಪಾಟೀಲ, ಬುಲಂದ ದೀಪಕ ದಳವಿ, ಉದಯ ರಾಮಪ್ಪ
ಕುಂದರಗಿ, ಶಿವರಾಜ ನಾರಾಯಣ ಪಾಟೀಲ, ಧನಂಜಯ ರಾಜಾರಾಮ ಪಾಟೀಲ, ಶುಭಂ ವಿಕ್ರಾಂತ ಶಿಲ್ಕೆ, ವಿನಾಯಕ ಬಾಲಕೃಷ್ಣ ಮೋರೆ, ಪಾಂಡುರಂಗ ಮಲ್ಲಪ್ಪ ಪಟ್ಟಣ, ಲಕ್ಷ್ಮಣ ಭೀಮರಾವ್‌ ದಳವಿ, ಮಂಜುನಾಥ ಹನುಮಂತ ರಾಜಪ್ಪನವರ, ಚೇತಕಕುಮಾರ ಯಲ್ಲಪ್ಪ ಕಾಂಬಳೆ, ಮಹಾದೇವ ಮಾರುತಿ ಮಂಗನಕರ್‌, ಗಣೇಶ ಮಹೇಶ ದಡ್ಡಿಕರ್‌, ಉದಯ ತುಕ್ಕಾರಾಮ ನಾಯ್ಕ, ಅನಿಲ ಬಾಬಣ್ಣ ಹೆಗಡೆ , ಮೇಘರಾಜ ಶಿವಗೌಡರ ಖಾನಗೌಡರ ಅಂತಿಮವಾಗಿ ಕಣದಲ್ಲಿ ಉಳಿದ ಅಭ್ಯರ್ಥಿಗಳು.

ಟಾಪ್ ನ್ಯೂಸ್

ip

‌IPL Auction: ಕೇನ್‌, ಮಯಾಂಕ್‌, ಶಾಗಿಲ್ಲ ಬೇಡಿಕೆ; ಉತ್ತಮ ಹಣ ಪಡೆದ ದ. ಆಫ್ರಿಕಾ ವೇಗಿ

Andaman: ಮೀನುಗಾರಿಕಾ ದೋಣಿಯಲ್ಲಿದ್ದ 5 ಟನ್ ಮಾದಕ ವಸ್ತು ವಶಕ್ಕೆ ಪಡೆದ ಕೋಸ್ಟ್ ಗಾರ್ಡ್

Andaman: ಕೋಸ್ಟ್ ಗಾರ್ಡ್ ಕಾರ್ಯಾಚರಣೆ… ಮೀನುಗಾರಿಕಾ ದೋಣಿಯಲ್ಲಿದ್ದ 5ಟನ್ ಮಾದಕ ವಸ್ತು ವಶ

Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್‌ ಸುಖಾಂತ್ಯ

Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್‌ ಸುಖಾಂತ್ಯ

BBK11: ಧರ್ಮ ಬಿಗ್‌ ಬಾಸ್‌ ಆಟಕ್ಕೆ ತೊಡಕಾದ ಅಂಶಗಳೇನು? ʼಚಾಕ್ಲೇಟ್‌ ಹೀರೋʼ ಎಡವಿದ್ದೆಲ್ಲಿ?

BBK11: ಧರ್ಮ ಬಿಗ್‌ ಬಾಸ್‌ ಆಟಕ್ಕೆ ತೊಡಕಾದ ಅಂಶಗಳೇನು? ʼಚಾಕ್ಲೇಟ್‌ ಹೀರೋʼ ಎಡವಿದ್ದೆಲ್ಲಿ?

Maharashtra: ಕಾಂಗ್ರೆಸ್‌ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ

Maharashtra: ಕಾಂಗ್ರೆಸ್‌ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ

Ajit Pawar supports Devendra Fadnavis; CM tussle continues in Maharashtra

Politics: ಫಡ್ನವೀಸ್‌ ಗೆ ಬೆಂಬಲ ನೀಡಿದ ಅಜಿತ್;‌ ಮಹಾರಾಷ್ಟ್ರದಲ್ಲಿ ಮುಗಿಯದ ಸಿಎಂ ತಿಕ್ಕಾಟ

Video: ನೋಟಿನ ಮಾಲೆಯಲ್ಲಿ ನೋಟು ಎಗರಿಸಿ ಕಳ್ಳ… ಮದುವೆ ಬಿಟ್ಟು ಕಳ್ಳನ ಹಿಂದೆ ಓಡಿದ ವರ

Video: ನೋಟಿನ ಮಾಲೆಯ ನೋಟು ಎಗರಿಸಿದ ಕಳ್ಳ… ಮದುವೆ ಬಿಟ್ಟು ಕಳ್ಳನ ಹಿಂದೆ ಓಡಿದ ವರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-huliraya

Belagavi; ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿದ್ದ ಹುಲಿ ಶೌರ್ಯ ಇನ್ನಿಲ್ಲ

2–Chennamman-Kittur

Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ

yathnal

Setback BJP: ಜನರಿಂದ ವಿಜಯೇಂದ್ರ ನಾಯಕತ್ವ ತಿರಸ್ಕಾರ, ರಾಜೀನಾಮೆ ನೀಡಲಿ: ಶಾಸಕ ಯತ್ನಾಳ್‌

satish

ಮಹಾರಾಷ್ಟ್ರ ಸೋಲಿನ ಬೆನ್ನಲ್ಲೇ ಇವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಸತೀಶ್‌ ಜಾರಕಿಹೊಳಿ

ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ

ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

ip

‌IPL Auction: ಕೇನ್‌, ಮಯಾಂಕ್‌, ಶಾಗಿಲ್ಲ ಬೇಡಿಕೆ; ಉತ್ತಮ ಹಣ ಪಡೆದ ದ. ಆಫ್ರಿಕಾ ವೇಗಿ

Andaman: ಮೀನುಗಾರಿಕಾ ದೋಣಿಯಲ್ಲಿದ್ದ 5 ಟನ್ ಮಾದಕ ವಸ್ತು ವಶಕ್ಕೆ ಪಡೆದ ಕೋಸ್ಟ್ ಗಾರ್ಡ್

Andaman: ಕೋಸ್ಟ್ ಗಾರ್ಡ್ ಕಾರ್ಯಾಚರಣೆ… ಮೀನುಗಾರಿಕಾ ದೋಣಿಯಲ್ಲಿದ್ದ 5ಟನ್ ಮಾದಕ ವಸ್ತು ವಶ

Kundapura: ಮೋಜಿನ ತಾಣಗಳಾಗುತ್ತಿರುವ ಬೀಚ್‌ಗಳು-ಕಡಲಾಮೆಗೆ ಅಪಾಯ!

Kundapura: ಮೋಜಿನ ತಾಣಗಳಾಗುತ್ತಿರುವ ಬೀಚ್‌ಗಳು-ಕಡಲಾಮೆಗೆ ಅಪಾಯ!

Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್‌ ಸುಖಾಂತ್ಯ

Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್‌ ಸುಖಾಂತ್ಯ

BBK11: ಧರ್ಮ ಬಿಗ್‌ ಬಾಸ್‌ ಆಟಕ್ಕೆ ತೊಡಕಾದ ಅಂಶಗಳೇನು? ʼಚಾಕ್ಲೇಟ್‌ ಹೀರೋʼ ಎಡವಿದ್ದೆಲ್ಲಿ?

BBK11: ಧರ್ಮ ಬಿಗ್‌ ಬಾಸ್‌ ಆಟಕ್ಕೆ ತೊಡಕಾದ ಅಂಶಗಳೇನು? ʼಚಾಕ್ಲೇಟ್‌ ಹೀರೋʼ ಎಡವಿದ್ದೆಲ್ಲಿ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.