ಕೋವಿಡ್ ವಿಷಯದಲ್ಲಿ ಸರ್ಕಾರದ ಎಡವಟ್ಟು
Team Udayavani, Jun 3, 2020, 1:36 PM IST
ಯಮಕನಮರಡಿ: ಮತಕ್ಷೇತ್ರದಲ್ಲಿ ಬರುವ ದಡ್ಡಿ, ಮೋದಗಾ, ಮಣಗುತ್ತಿ, ದೊಣಗಟ್ಟಿ, ಬಿದರೆವಾಡಿ ಗ್ರಾಮಗಳ ಒಟ್ಟು 21ಜನರಿಗೆ ಮಂಗಳವಾರ ಕೋವಿಡ್ ಸೋಂಕು ದೃಢಪಟ್ಟಿದ್ದು, ಇದಕ್ಕೆ ರಾಜ್ಯ ಸರ್ಕಾರದ ನಿರ್ಲಕ್ಷ್ಯತನ ಕಾರಣ ಎಂದು ಶಾಸಕ ಸತೀಶ ಜಾರಕಿಹೊಳಿ ಆರೋಪಿಸಿದರು.
ಅವರು ಮಂಗಳವಾರ ಗ್ರಾಮ ಪಂಚಾಯತಿ ಸಭಾಭವನದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿ, ಮತಕ್ಷೇತ್ರದಲ್ಲಿ ಸುಮಾರು 900 ಜನರು ಮುಂಬೈಯಿಂದ ಬಂದಿದ್ದು, 14 ಕ್ವಾರಂಟೈನ್ ಕೇಂದ್ರದಲ್ಲಿ ಇರಿಸಿ, ಅವರ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಲಾಗಿತ್ತು. ರಿಪೋರ್ಟ್ ಬರುವ ಮುನ್ನ ಎಲ್ಲರನ್ನು ಕ್ವಾರಂಟೈನ್ ಕೇಂದ್ರದಿಂದ ಅವರವರ ಮನೆಗೆ ಕಳಿಸಿದ್ದು ತಪ್ಪು. ವರದಿ ಬಂದ ನಂತರ ಅದರಲ್ಲಿ ಯಾರು ನೆಗೆಟಿವ್ ಎಂದು ಗೊತ್ತಾಗುತ್ತಿತ್ತು. ಸರ್ಕಾರ ಎಡವಟ್ಟು ಮಾಡಿದೆ ಎಂದ ಅವರು, ಈಗ ಹೊಸದಾಗಿ ಅಲದಾಳ ಗೆಸ್ಟ್‌ಹೌಸ್‌ನಲ್ಲಿ 45 ಜನರು ಮುಂಬೈಯಿಂದ ಬಂದಿದ್ದಾರೆ. ಅವರನ್ನು 7ದಿನಗಳ ಕಾಲ ಕ್ವಾರಂಟೈನ್ ನಲ್ಲಿ ಇಡಲಾಗಿದೆ. ಈಗಾಗಲೇ ಪಾಸಿಟಿವ್ ಬಂದ ಜನರನ್ನು ಅವರ ಮನೆಯವರನ್ನು ಆಡಳಿತ ಕರೆದುಕೊಂಡು ಹೋಗಿದೆ. ಅವರ ಮನೆಯ 50 ಮೀ. ಸುತ್ತ ಸೀಲ್‌ಡೌನ್ ಮಾಡಿದ್ದಾರೆ. ಜನರು ಭಯಪಡುವ ಅವಶ್ಯಕತೆ ಇಲ್ಲ ಎಂದರು.
ಖುಲ್ಲಾ ಜಾಗೆ ಇದ್ದರೆ ಯಮಕನಮರಡಿಗೆ ಹೊಸ ಬಸ್ ನಿಲ್ದಾಣ ನಿರ್ಮಾಣ ಮಾಡಲಾಗುವುದು. ಹತ್ತರಗಿ ಗ್ರಾಪಂ ಪಕ್ಕದ ಸೇತುವೆ ಮಳೆಯಿಂದ ಕುಸಿದಿದ್ದು, ಮತ್ತೆ ನಿರ್ಮಾಣ ಮಾಡಲಾಗುವದು, ಗ್ರಾಪಂ ಸದಸ್ಯರ ಅವಧಿ ಮುಗಿದಿದ್ದು ಪ್ರತಿ ಗ್ರಾಪಂಗೆ ಆಡಳಿತಾಧಿಕಾರಿಯನ್ನು ಡಿಸಿ ನೇಮಕ ಮಾಡುತ್ತಾರೆ. ಬಿಜೆಪಿ ಪಕ್ಷದ 5 ಜನರ ಸಮಿತಿ ರಚನೆ ಮಾಡುತ್ತಾರೆ. ಅವರ ಸರ್ಕಾರ ಇದ್ದ ಕಾರಣ ಅವರೇ ಆರು ತಿಂಗಳ ಕಾಲ ಇರುತ್ತಾರೆ ಎಂದರು. ಯಮಕನಮರಡಿ ಗ್ರಾಪಂ ಅಧ್ಯಕ್ಷೆ ಅವ್ವಕ್ಕಾ ಮಾದರ, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಈರಣ್ಣಾ ಬಿಸಿರೊಟ್ಟಿ, ಯುವ ಧುರೀಣ ರವೀಂದ್ರ ಜಿಂಡ್ರಾಳಿ, ಹತ್ತರಗಿ ಗ್ರಾಪಂ ಅಧ್ಯಕ್ಷ ಮಹಾದೇವ ಪಟೋಳಿ, ಕಿರಣ ರಜಪೂತ, ಓಂಕಾರ ತುಬಚಿ, ಶೌಕತ ಖಾಜಿ, ಪಿಡಿಒ ಶಿವಲಿಂಗ ಢಂಗ ಮುಂತಾದವರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ
Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು
Winter Session: ಬಾಣಂತಿ ಸಾವು: ನ್ಯಾಯಾಂಗ ತನಿಖೆಗೆ ಬಿಜೆಪಿ ಪಟ್ಟು
Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ
“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.