ವಿಚಾರವಾದಿಗಳ ಹತ್ಯೆ: ಮುಂದಿನ ಟಾರ್ಗೆಟ್‌ ನಾನೇ!


Team Udayavani, Aug 20, 2018, 6:00 AM IST

19bgv-11a.jpg

ಬೆಳಗಾವಿ: “ಕರ್ನಾಟಕ ಹಾಗೂ ಮಹಾರಾಷ್ಟ್ರದ ವಿಚಾರವಾದಿಗಳಾದ ಡಾ.ನರೇಂದ್ರ ದಾಬೋಲಕರ, ಗೋವಿಂದ ಪನ್ಸಾರೆ, ಗೌರಿ ಲಂಕೇಶ, ಡಾ| ಎಂ.ಎಂ.ಕಲಬುರ್ಗಿ ಹತ್ಯೆಗೆ ಬಳಸಲಾದ ಅಸ್ತ್ರಗಳು ಒಂದೇ ಮಾದರಿಯದ್ದು, ಹತ್ಯೆಯ ಸಾಮ್ಯತೆ ಹಾಗೂ ಕೊಂದವರು ಒಂದೇ ಗುಂಪಿನ ಮನಸ್ಥಿತಿಯವರಾ ಎಂಬ ಅನುಮಾನ ಮೂಡುತ್ತಿದೆ’.

-ಹೀಗೆ ಅನುಮಾನ ವ್ಯಕ್ತಪಡಿಸಿದವರು ಗೋವಿಂದ ಪನ್ಸಾರೆ ಅವರ ಮೊಮ್ಮಗಳು, ಕೊಲ್ಲಾಪುರದ ಡಾ.ಮೇಘಾ ಪನ್ಸಾರೆ.

ಮಹಾರಾಷ್ಟ್ರದಲ್ಲಿ ನರೇಂದ್ರ ದಾಬೋಲಕರ ಹತ್ಯೆಯಾಗಿ ಆ.20ಕ್ಕೆ ಐದು ವರ್ಷ ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ “ಉದಯವಾಣಿ’ ಅವರನ್ನು ಸಂಪರ್ಕಿಸಿದಾಗ ಹಲವು ಪ್ರಶ್ನೆಗಳನ್ನು ಅವರು ಎತ್ತಿದರು. ಹತ್ಯೆಯ ಸಾಮ್ಯತೆ ಒಂದೆಯಾದರೂ ಆರೋಪಿಗಳ ಪತ್ತೆ ಏಕಾಗುತ್ತಿಲ್ಲ? ಎರಡೂ ರಾಜ್ಯದ ಸರ್ಕಾರಗಳು ಬೇರೆ, ಬೇರೆ ಇವೆ ಎಂಬ ಕಾರಣಕ್ಕೋ ಅಥವಾ ಇಚ್ಛಾಶಕ್ತಿ ಕೊರತೆಯೋ ಎಂಬುದು ಅರ್ಥವಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕರ್ನಾಟಕದ ಎಸ್‌ಐಟಿಗೆ ಹೋಲಿಸಿದರೆ ಮಹಾರಾಷ್ಟ್ರದ ಎಸ್‌ಐಟಿ ತನಿಖೆಯ ಕಾರ್ಯಕ್ಷಮತೆ ತೃಪ್ತಿಕರವಾಗಿಲ್ಲ. ಗೌರಿ ಲಂಕೇಶ್‌ ಹತ್ಯೆಗೆ ಸಂಬಂಧಿಸಿದಂತೆ ಕರ್ನಾಟಕದ ವಿಶೇಷ ತನಿಖಾ ದಳ ಈಗಾಗಲೇ 12 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದು, ಮಾಹಿತಿ ಸಂಗ್ರಹಿಸಿದೆ. ವಿಚಾರಣೆ ಸಂದರ್ಭದಲ್ಲಿಯೇ ದೊರೆತ ದಿನಚರಿ ಪುಸ್ತಕದ ಮಾಹಿತಿ ನನ್ನನ್ನೂ ಸೇರಿ ಮುಕ್ತಾ ಹಾಗೂ ಹಮೀದ್‌ ದಾಬೋಲಕರ ಮೇಲೆ ದುಷ್ಕರ್ಮಿಗಳ ಕಣ್ಣು ಇರುವುದನ್ನು ಖಚಿತಪಡಿಸಿವೆ. ಇದೇ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ವಿಶೇಷ ತನಿಖಾ ದಳ ನನಗೂ ಹಾಗೂ ಮುಕ್ತಾ, ಹಮೀದ್‌ ದಾಬೋಲಕರಗೆ ಎಕ್ಸ್‌ ಭದ್ರತೆ ಒದಗಿಸಿದೆ.

ಆದರೆ, ನಮ್ಮ ತಂದೆ ಹಾಗೂ ನರೇಂದ್ರ ದಾಬೋಲಕರ ಹತ್ಯೆಗೆ ಸಂಬಂಧಿಸಿದಂತೆ ಈಗಷ್ಟೇ ಮೂವರನ್ನು ವಶಕ್ಕೆ ತೆಗೆದುಕೊಂಡಿರುವುದಾಗಿ ಎಸ್‌ಐಟಿ ತಿಳಿಸಿದೆ. ನಮ್ಮ ತಂದೆ ಹತ್ಯೆಯಾಗಿ 3 ವರ್ಷ,  ದಾಬೋಲಕರ ಹತ್ಯೆಯಾಗಿ 5 ವರ್ಷ ಕಳೆದಿದೆ. ಇದು ಕರ್ನಾಟಕ ಮತ್ತು ಮಹಾರಾಷ್ಟ್ರದ ವಿಶೇಷ ತನಿಖಾ ದಳಗಳ ನಡುವಿನ ಕಾರ್ಯಕ್ಷಮತೆಯನ್ನು ತೆರೆದಿಡುತ್ತದೆ. ಹೀಗಿದ್ದೂ ಡಾ.ಎಂ.ಎಂ.ಕಲಬುರ್ಗಿ ಮತ್ತು  ಗೌರಿ ಲಂಕೇಶ ಹತ್ಯೆಯ ತನಿಖೆಯಲ್ಲಿ ಹೋಲಿಕೆಯಾಗುತ್ತಿದೆ. ಅದಕ್ಕೆ ಕಾರಣಗಳು ಏನಿವೆ ಎಂಬುದು ತಿಳಿಯದು ಎಂದರು.

ಈಗಾಗಲೇ ಪನ್ಸಾರೆ ಹಾಗೂ ದಾಬೋಲಕರ ಕುಟುಂಬ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ತಿಂಗಳಿಗೊಮ್ಮೆ ವಿಚಾರಣೆಗೆ ಹೋಗುತ್ತಿದೆ. ಅಲ್ಲಿ ಎಸ್‌ಐಟಿಯವರನ್ನು ಕರೆಯಿಸಿ ಹೈಕೋರ್ಟ್‌ ಛೀಮಾರಿ ಹಾಕುತ್ತಿದೆ. ಈವರೆಗೂ ತನಿಖೆಗೆ ಸಂಬಂಧಿಸಿದ ಅಪ್‌ಡೆಟ್‌ ಯಾಕಿಲ್ಲ ಎಂದು ಕೇಳಿದರೆ ಎಸ್‌ಐಟಿ ಬಳಿ ಉತ್ತರವೇ ಇಲ್ಲದಂತಾಗಿದೆ. 5 ವರ್ಷ  ಬಳಿಕ ಡಾ.ನರೇಂದ್ರ ದಾಬೋಲಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಔರಂಗಬಾದ್‌ನ ರೋಜಾ ಬಾಜಾರ್‌ ಪ್ರದೇಶದ ನಿವಾಸಿ ಸಚಿನ ಅಂಧುರೆಯನ್ನು ಸಿಬಿಐ ವಶಕ್ಕೆ ಪಡೆದುಕೊಂಡಿದೆ. ಎರಡು ದಿನಗಳ ಮುನ್ನವೇ ಔರಂಗಾಬಾದ್‌ದಿಂದ ಸಚಿನ ಅಂಧುರೆಯನ್ನು ಸಿಬಿಐ ಮಹಾರಾಷ್ಟ್ರಕ್ಕೆ ಕರೆ ತಂದಿದೆ. ಸಿಬಿಐ, ಇನ್ನು ಮುಂದೆ ಪನ್ಸಾರೆ ಹಂತಕರನ್ನೂ ಪತ್ತೆ ಮಾಡುವ ಬಗ್ಗೆ ವಿಶ್ವಾಸ ಮೂಡಿದೆ ಎನ್ನುತ್ತಾರೆ ಡಾ| ಮೇಘಾ ಪಾನ್ಸರೆ.

ಬೆಳಗಾವಿಯಲ್ಲಿ ಪ್ಲಾನ್‌
ಗೌರಿ ಹತ್ಯೆ ಬೆಂಗಳೂರಿನಲ್ಲಿ ನಡೆದರೂ ಇದರ ಸ್ಕೆಚ್‌ ತಯಾರಾಗಿದ್ದು ಬೆಳಗಾವಿಯಲ್ಲಿ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಹತ್ಯೆ ಪ್ರಕರಣದಲ್ಲಿ ಈಗಾಗಲೇ ಬಂಧಿಯಾಗಿರುವ ಢಾಬಾ ಮಾಲೀಕ ಭರತ ಕುರಣೆಯ ತೀವ್ರ ವಿಚಾರಣೆ ನಡೆಯುತ್ತಿದೆ. ಖಾನಾಪುರದ ಜಾಂಬೋಟಿ ಬಳಿ ಪಿಸ್ತೂಲು ತರಬೇತಿ ನಡೆದಿದ್ದು, ಬೆಳಗಾವಿ ನಗರದ ಸುತ್ತಲೂ ಹತ್ಯೆಯ ಪ್ಲಾನ್‌ ರೆಡಿ ಮಾಡಿದ್ದು ನೋಡಿದರೆ ಬೆಳಗಾವಿಯ ಲಿಂಕ್‌ ಇದೆ ಎಂಬುದು ಗೊತ್ತಾಗುತ್ತಿದೆ. ಮಹಾರಾಷ್ಟ್ರದ ಅಮೋಲ ಕಾಳೆ, ವಿಜಯಪುರದ ಪರಶುರಾಮ ವಾಘೊ¾àರೆ ಬೆಳಗಾವಿಯ ಕೆಲ ಯುವಕರೊಂದಿಗೆ ನಿಕಟ ಸಂಪರ್ಕದಲ್ಲಿದ್ದರು ಎಂದು ಮೂಲಗಳು ತಿಳಿಸಿವೆ.

– ಭೈರೋಬಾ ಕಾಂಬಳೆ

ಟಾಪ್ ನ್ಯೂಸ್

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

1-ullala

Mangaluru; ನೇತ್ರಾವತಿ ಸೇತುವೆ ದುರಸ್ತಿ ಆರಂಭ: ಸಂಚಾರ ಸಲಹೆ ನೀಡಿದ ಪೊಲೀಸರು

1-aaammm

Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-eeee

Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್‌ಮಿಲ್ ಕುಸಿತ:7 ಮಂದಿಗೆ ಗಾಯ

rape

Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ

CT Ravi

Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಬಂಧನ

1-a-ct

Belagavi Session ಉದ್ವಿಗ್ನ:ಹೆಬ್ಬಾಳ್ಕರ್ ವಿರುದ್ದ ಅವಾಚ್ಯ ಪದ ಬಳಸಿದರೆ ಸಿ.ಟಿ.ರವಿ?

ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ

Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

K. S. Eshwarappa: ಗುಂಪುಗಾರಿಕೆ ಮಾಡುತ್ತಿರುವವರು ಬಿಜೆಪಿ ಕಟ್ಟಿ ಬೆಳೆಸಿಲ್ಲ

Untitled-1

Kasaragod Crime News: ರಸ್ತೆಯಲ್ಲಿ ಬಿಯರ್‌ ಬಾಟ್ಲಿ ಒಡೆದ ಮೂವರ ಬಂಧನ

byndoor

Belthangady: ಬಸ್‌ ಬೈಕ್‌ ಢಿಕ್ಕಿ, ಸವಾರ ಗಂಭೀರ

5

Malpe: ಮೆಹಂದಿಯಲ್ಲಿ ತಡರಾತ್ರಿವರೆಗೆ ಡಿಜೆ ಬಳಕೆ; ಪ್ರಕರಣ ದಾಖಲು

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.