ಬೇಕರಿಯ ಆಹಾರದ ಶುಚಿತ್ವವನ್ನು ಪರಿಶೀಲಿಸಿದ ಅಧಿಕಾರಿ
Team Udayavani, Nov 27, 2021, 7:33 PM IST
ಬೈಲಹೊಂಗಲ: ತಾಲೂಕಿನ ನೇಸರಗಿಯ ನ್ಯೂ ರಾಯಲ್ ಬೆಂಗಳೂರ ಅಯ್ಯಂಗಾರ್ ಬೇಕರಿಯನ್ನು ತಾಲೂಕು ಆರೋಗ್ಯಾಧಿಕಾರಿ ಮತ್ತು ತಾಲೂಕಾ ಆಹಾರ ಸುರಕ್ಷತಾ ಅಧಿಕಾರಿ ಡಾ.ಎಸ್.ಎಸ್.ಸಿದ್ದಣ್ಣವರ ಶನಿವಾರ ಪರೀಶಿಲಿಸಿದರು.
ಅಧಿಕಾರಿಗಳು ಬೇಕರಿಯ ಪರೀಶಿಲನೆ ಸಂದರ್ಭದಲ್ಲಿ ಸಾಕಷ್ಟು ನ್ಯೂನ್ಯತೆಗಳು ಕಂಡು ಬಂದವು. ಬೇಕರಿಯಲ್ಲಿ ಮಾರಾಟ ಮಾಡುವ ಆಹಾರದಲ್ಲಿ ಸ್ವಚ್ಚತೆ ಇರಲಿಲ್ಲ. ತಿಂಡಿ,ತಿನಿಸುಗಳ ಪೊಟ್ಟಣದ ಮೇಲೆ ಆಯಾರ ತಯಾರಿಕೆ ದಿನಾಂಕ ಮತ್ತು ಕೊನೆಗೊಳ್ಳುವ ದಿನಾಂಕ ಮಾಹಿತಿ ಇರಲಿಲ್ಲ. ಎಫ್‌ಎಸ್‌ಎಸ್‌ಎಆಯ್ ಪ್ರಮಾಣ ಪತ್ರ ಹಾಜರುಪಡಿಸಲಿಲ್ಲ. ಆಹಾರ ತಯಾರಿಕೆಯ ಕೊಠಡಿಯಲ್ಲಿ ಸುಣ್ಣಬಣ್ಣ ಹಚ್ಚಿರಲಿಲ್ಲ. ಕೆಲಸಗಾರರು ತಲೆಗೆ ಕ್ಯಾಪ್ ಹಾಕಿರಲಿಲ್ಲ. ಸಮವಸ್ತ್ರ ದರಿಸಿರಲಿಲ್ಲ. ಆಹಾರ ತಯಾರಿಕೆ ಪರಿಕರ ಉಪಯೋಗ ಮಾಡಿರಲಿಲ್ಲ. ಕೆಲಸಗಾರರನ್ನು ಪ್ರತಿ ಆರು ತಿಂಗಳಿಗೊಮ್ಮೆ ಕಡ್ಡಾಯವಾಗಿ ಆರೋಗ್ಯ ತಪಾಸನಾ ಮಾಡಿ ಅಧಿಕಾರಿಗಳ ಗಮನಕ್ಕೆ ತರಬೇಕು. ಇಲ್ಲಿ ಇದನ್ನು ಪಾಲಿಸಿರಲಿಲ್ಲ. ಬೇಕರಿಯಲ್ಲಿ ಆಹಾರದಲ್ಲಿ ನೋಣ, ಜೊಂಡಿಗೆ ಕಂಡು ಬಂದ ಕಾರಣ ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದರು.
ಸದ್ಯ ಬೇಕರಿ ಮಾಲೀಕರಿಗೆ ಕಾರಣ ಕೇಳಿ ನೋಟಿಸ್ ನೀಡಲಾಗುವದು. ಎಲ್ಲ ಬೇಕರಿ, ಹೋಟೆಲ್‌ಗಳು ಕಡ್ಡಾಯವಾಗಿ ಸ್ವಚ್ಚತೆಗೆ ಆದ್ಯತೆ ನೀಡಬೇಕು. ವ್ಯಾಪಾರ ವಹಿವಾಟಿನ ವೇಳೆ ಸ್ವಚ್ಛತೆ, ನೈರ್ಮಲ್ಯ, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಬೇಕರಿಯಲ್ಲಿ ಕುಳಿತು ತಿನ್ನುವುದಕ್ಕೆ ಅವಕಾಶ ಕೊಡುವಂತಿಲ್ಲ. ಪ್ರವೇಶ ದ್ವಾರದಲ್ಲಿ ಥರ್ಮಲ್ ಸ್ಕ್ಯಾನರ್ ಮೂಲಕ ನೌಕರರ ತಪಾಸಣೆ ಮಾಡಬೇಕು. ಜ್ವರ ಕಂಡು ಬಂದರೆ ಆರೋಗ್ಯ ಇಲಾಖೆಗೆ ತಿಳಿಸಬೇಕು. ಒಳ ಪ್ರವೇಶಕ್ಕೆ ಮುನ್ನ ಪ್ರತಿಯೊಬ್ಬ ನೌಕರರು ಸ್ಯಾನಿಟೈಸರ್ ಬಳಸಬೇಕು, ಮಾಸ್ಕ್ ಧರಿಸಬೇಕು. ಕೆಲಸದ ವೇಳೆ ಒಂದೂವರೆ ಮೀಟರ್ ಅಂತರ ಕಾಯ್ದುಕೊಳ್ಳಬೇಕು. ಕುಡಿಯಲು ಬಿಸಿ ನೀರಿನ ವ್ಯವಸ್ಥೆ ಮಾಡಬೇಕು. ಶೌಚಾಲಯಗಳಲ್ಲಿ ಸ್ಯಾನಿಟೈಸರ್/ಸೋಪ್ ವ್ಯವಸ್ಥೆ ಮಾಡಬೇಕೆಂದು ತಾಲೂಕಾ ಆರೋಗ್ಯಾಧಿಕಾರಿ ಡಾ.ಎಸ್.ಎಸ್.ಸಿದ್ದಣ್ಣವರ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mrinal Hebbalkar: ನನ್ನ ತಾಯಿಗೆ ರವಿ ಬಳಸಿದ ಪದದಿಂದ ನೋವಾಗಿದೆ: ಮೃಣಾಲ್
Belgavi: ಸಿ.ಟಿ.ರವಿ ಪ್ರಕರಣ ಮುಂದುವರಿಸುವಲ್ಲಿ ಅರ್ಥವೇ ಇಲ್ಲ: ಸಚಿವ ಸತೀಶ್ ಜಾರಕಿಹೊಳಿ
Belagavi: ನ್ಯಾಯಾಧೀಶರ ಮುಂದೆ ಪೊಲೀಸ್ ದೌರ್ಜನ್ಯ ಬಿಚ್ಚಿಟ್ಟ ಸಿ.ಟಿ. ರವಿ
Belagavi: ಎಲ್ಲದಕ್ಕೂ ಪೂರ್ಣವಿರಾಮ ಬೀಳಲಿದೆ, ನನಗೂ ಒಂದು ಕಾಲ ಬರುತ್ತದೆ….. : ಸಿ.ಟಿ.ರವಿ
Belagavi: ಸಿ.ಟಿ.ರವಿ ಬಂಧನ ಪ್ರಕರಣ ಬೆಂಗಳೂರಿಗೆ ಸ್ಥಳಾಂತರ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.