ಅಭಿವೃದ್ಧಿಯಲ್ಲಿ ಯುವಕರ ಪಾತ್ರ ಮುಖ್ಯ: ಜಗತಾಪ್
ವಿದ್ಯಾರ್ಥಿ ದೆಸೆಯಲ್ಲಿಯೇ ದೇಶಾಭಿಮಾನದ ಬೀಜವನ್ನು ಬಿತ್ತುವ ಮಹತ್ತರ ಕಾರ್ಯ ಮಾಡುತ್ತಿದೆ
Team Udayavani, Dec 1, 2021, 6:00 PM IST
ಬೆಳಗಾವಿ: ದೇಶವನ್ನು ಭದ್ರಗೊಳಿಸುವ ಮತ್ತು ಅಭಿವೃದ್ಧಿಯತ್ತ ಕೊಂಡೊಯ್ಯುವಲ್ಲಿ ಯುವಜನಾಂಗದ ಪಾತ್ರ ಬಹುಮೌಲಿಕವಾಗಿದೆ ಎಂದು 26 ಕರ್ನಾಟಕ ಎನ್‌ಸಿಸಿ ಬಟಾಲಿಯನ್ ಸುಬೇದಾರ ಮೇಜರ್ ಕ್ಯಾಫ್ಟನ್ ಮಹಾದೇವ ಜಗತಾಪ್ ಹೇಳಿದರು.
ನಗರದ ಲಿಂಗರಾಜ ಕಾಲೇಜಿನಲ್ಲಿ ಆಯೋಜಿಸಿದ್ದ ಎನ್‌ಸಿಸಿ ಡೇ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯುವಜನಾಂಗವು ದೇಶವನ್ನು ಮುನ್ನಡೆಸುವ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಅವರಿಗೆ ಸೂಕ್ತವಾದ ಮಾರ್ಗದರ್ಶನ ಹಾಗೂ ತರಬೇತಿಯ ಅವಶ್ಯಕತೆ ಇದೆ. ದೇಶಾಭಿಮಾನ ಬಹುಮುಖ್ಯ. ಯೌವನಾವಸ್ಥೆಯಲ್ಲಿ ನಾವು ಉತ್ತಮವಾದ ಆರೋಗ್ಯ ಹಾಗೂ ಜ್ಞಾನಾರ್ಜನೆಯನ್ನು ಮಾಡಿಕೊಳ್ಳಬೇಕು ಎಂದರು.
ಭವಿಷ್ಯತ್ತಿನಲ್ಲಿ ನಮ್ಮ ದೇಶ ಅಭಿವೃದ್ಧಿಶೀಲವಾಗುವುದರಲ್ಲಿ ಯಾವ ಸಂದೇಹವು ಇಲ್ಲ. ಎನ್‌ಸಿಸಿ ರಾಷ್ಟ್ರದ ಮಹತ್ವದ ಸಾಂಸ್ಥಿಕ ಘಟಕವಾಗಿದ್ದು. ವಿದ್ಯಾರ್ಥಿಗಳಿಗೆ ವಿಶಿಷ್ಟವಾದ ತರಬೇತಿಯನ್ನು ನೀಡುತ್ತಾ ಬಂದಿದೆ. 1948ರಲ್ಲಿ ಪ್ರಾರಂಭಗೊಂಡ ಎನ್‌ಸಿಸಿ ಶಿಸ್ತು, ಬದ್ಧತೆ, ಸೇವೆ, ರಾಷ್ಟ್ರಾಭಿಮಾನವನ್ನು ಉಂಟುಮಾಡುತ್ತಿದೆ. ದೆ„ಹಿಕ ಹಾಗೂ ಬೌದ್ಧಿಕ ತರಬೇತಿಗಳನ್ನು ನೀಡುವ ಮೂಲಕ ಅವರ ಸರ್ವಾಂಗೀಣ ವಿಕಾಸಕ್ಕೆ ಅಹರ್ನಿಶಿ ಶ್ರಮಿಸುತ್ತಿದೆ ಎಂದು ಅವರು ಹೇಳಿದರು.
ಗೌರವ ಅತಿಥಿಗಳಾಗಿ ಆಗಮಿಸಿದ್ದ ಪಿಯು ಕಾಲೇಜಿನ ಪ್ರಾಚಾರ್ಯ ಗಿರಿಜಾ ಹಿರೇಮಠ ಮಾತನಾಡಿ, ವಿದ್ಯಾರ್ಥಿಗಳಿಗೆ ಜೀವನದ ಹತ್ತು ಹಲವಾರು ಕೌಶಲಗಳನ್ನು ಎನ್‌ಸಿಸಿ ಘಟಕ ಕಲಿಸಿಕೊಡುತ್ತಿದೆ. ಬದುಕಿನಲ್ಲಿ ಶಿಸ್ತು ಹಾಗೂ ಸಮಯಪಾಲನೆ ಬಹುಮುಖ್ಯ. ಇಲ್ಲಿ ಪಡೆಯುವ ತರಬೇತಿ ಬದುಕನ್ನೇ ಬದಲಾಯಿಸುತ್ತದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ| ಬಿ.ಎಂ.ತೇಜಸ್ವಿ ಮಾತನಾಡಿ, ನಮ್ಮ ರಚನಾತ್ಮಕ ಹಾಗೂ ಕ್ರಿಯಾಶೀಲತೆಗೆ ಎನ್‌ಸಿಸಿ ಒಂದು ವ್ಯಾಖ್ಯಾನವಾಗಿದೆ. ದೇಶವು ರಾಜಕೀಯವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಬಲಿಷ್ಠವಾಗುವುದು ಬಹುಮುಖ್ಯ ಸಂಗತಿ. ಅಂತಹ ನಾಯಕತ್ವದ ಗುಣಗಳನ್ನು ಎನ್‌ಸಿಸಿ ಕಲಿಸಿಕೊಡುತ್ತಿದೆ.
ಎನ್‌ಸಿಸಿ ಘಟಕ ವಿದ್ಯಾರ್ಥಿ ದೆಸೆಯಲ್ಲಿಯೇ ದೇಶಾಭಿಮಾನದ ಬೀಜವನ್ನು ಬಿತ್ತುವ ಮಹತ್ತರ ಕಾರ್ಯ ಮಾಡುತ್ತಿದೆ ಎಂದು ಹೇಳಿದರು. ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಎನ್‌ಸಿಸಿ ಅಧಿಕಾರಿ ಕ್ಯಾ|ಡಾ| ಮಹೇಶ ಗುರನಗೌಡರ, ಎನ್‌ಸಿಸಿ ಘಟಕವು ಹಲವಾರು ನೆಲೆಗಳಲ್ಲಿ ಕೆಡೆಟ್‌ಗಳಿಗೆ ತರಬೇತಿ ನೀಡುತ್ತಿದೆ. ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮೂಡಿಸುತ್ತಿದೆ. ಸಾಧನೆಗೆ ಸಾವಿರ ಮೆಟ್ಟಿಲುಗಳು ಉಂಟು. ಸವಾಲುಗಳನ್ನು ಸ್ವೀಕರಿಸುವ ಮನೋಭಾವ ನಮಗಿರಬೇಕು ಎಂದರು.
ಇದೇ ಸಂದರ್ಭದಲ್ಲಿ ಇತ್ತೀಚಿಗೆ ರಾಷ್ಟ್ರಮಟ್ಟದಲ್ಲಿ ಡಿಜಿ ಎನ್‌ಸಿಸಿ ಆಯೋಜಿಸಿದ್ದ ಇಂಟರ್ ಡೈರೆಕ್ಟರೇಟ್ ಶೂಟಿಂಗ್ ಚಾಂಪಿಯನ್‌ಶಿಪ್‌ದಲ್ಲಿ ಪಾಲ್ಗೊಂಡು ಅದ್ವಿತೀಯ ಸಾಧನೆಗೈದ ಸಿನಿಯರ್ ಕೆಡೆಟ್ ರೋಷನಿ ಮುಲಿಕ್ ಅವರನ್ನು ಸತ್ಕರಿಸಿ ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಉಪಪ್ರಾಚಾರ್ಯರಾದ ಡಾ.ಎಂ.ಆರ್.ಬನಹಟ್ಟಿ, ಪ್ರಣವ್ ಕರಜಗಿ, ಅರುಣ ಜ್ಯೋತಿ, ಸತೀಶ, ಮೋಹನ್, ವಿನೋದ, ಪ್ರೇಮಾ, ಮಣಿಕಂಠ ಉಪಸ್ಥಿತರಿದ್ದರು. ಅದಿತಿ ಜಾಧವ ನಿರೂಪಿಸಿದರು. ರಾಘವೇಂದ್ರ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi; ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿದ್ದ ಹುಲಿ ಶೌರ್ಯ ಇನ್ನಿಲ್ಲ
Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ
Setback BJP: ಜನರಿಂದ ವಿಜಯೇಂದ್ರ ನಾಯಕತ್ವ ತಿರಸ್ಕಾರ, ರಾಜೀನಾಮೆ ನೀಡಲಿ: ಶಾಸಕ ಯತ್ನಾಳ್
ಮಹಾರಾಷ್ಟ್ರ ಸೋಲಿನ ಬೆನ್ನಲ್ಲೇ ಇವಿಎಂ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಸತೀಶ್ ಜಾರಕಿಹೊಳಿ
ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Puttur: ಮೃ*ತದೇಹವನ್ನು ರಸ್ತೆ ಬದಿ ಇರಿಸಿ ಹೋದ ಪ್ರಕರಣ; ಪ್ರಮುಖ ಆರೋಪಿ ಸಹಿತ ಮೂವರ ಬಂಧನ
ಗೂಗಲ್ ಮ್ಯಾಪ್ ನಂಬಿ ಸೇತುವೆಯಿಂದ ನದಿಗೆ ಬಿದ್ದ ಕಾರು, ಮದುವೆಗೆ ಹೊರಟಿದ್ದ ಮೂವರು ಮೃತ್ಯು
JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ
Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್’ಗೆ ಗುಡ್ ಬೈ
Result: ಮಹಾರಾಷ್ಟ್ರ ಚುನಾವಣೆ ಗೆಲ್ಲಲು ಇವಿಎಂ ಹ್ಯಾಕ್ ಕಾರಣ: ಗೃಹ ಸಚಿವ ಡಾ.ಪರಮೇಶ್ವರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.