![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, Jul 13, 2022, 5:50 PM IST
ಬೆಳಗಾವಿ: ಅಪಾಯಕಾರಿ ಸನ್ನಿವೇಶಗಳಲ್ಲೂ ಜೀವದ ಹಂಗು ತೊರೆದು ಪರಿಶ್ರಮದಿಂದ ಕಾರ್ಯಾಚರಿಸಿ ಜನತೆಗೆ ಬೆಳಕು ನೀಡುವ ಪವರ್ ಮ್ಯಾನ್ ಗಳ ಸೇವೆ ಪ್ರಶಂಸನೀಯ ಎಂದು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಹೇಳಿದರು.
ಬೆಳಗಾವಿ ಗ್ರಾಮೀಣ ಕ್ಷೇತ್ರದ ಪೀರನವಾಡಿ ಸೆಕ್ಷನ್ 1, ಪೀರನವಾಡಿ ಸೆಕ್ಷನ್ 2, ಉಚಗಾಂವ ಹಾಗೂ ಹಿಂಡಲಗಾ ಈ ಪ್ರದೇಶಗಳಲ್ಲಿ ಹಗಲಿರುಳು ಕೆಲಸ ಮಾಡುವ ಪವರ್ ಮ್ಯಾನ್‌ಗಳ ನಿಸ್ವಾರ್ಥ ಸೇವೆಯನ್ನು ಪರಿಗಣಿಸಿ, ಲಕ್ಷ್ಮಿ ತಾಯಿ ಫೌಂಡೇಶನ್ ವತಿಯಿಂದ ಉತ್ತಮ ಗುಣಮಟ್ಟದ ರೇನ್ ಕೋಟ್‌ಗಳನ್ನು ಮಂಗಳವಾರ ವಿತರಿಸಿ ಅವರು ಮಾತನಾಡಿದರು.
ಈ ಮೊದಲು ಲೈನ್ ಮ್ಯಾನ್ ಎಂದು ಕರೆಯಲ್ಪಡುತ್ತಿದ್ದವರಿಗೆ ‘ಪವರ್ ಮ್ಯಾನ್’ ಎಂದು ಬಿರುದು ನೀಡಿದ ಶ್ರೇಯಸ್ಸು ಮಾಜಿ ಇಂಧನ ಸಚಿವ ಡಿ.ಕೆ. ಶಿವಕುಮಾರ ಅವರಿಗೆ ಸಲ್ಲುತ್ತದೆ. ಕಾಂಗ್ರೆಸ್ ಅಧಿಕಾರಾವಧಿಯಲ್ಲಿ ಡಿ.ಕೆ. ಶಿವಕುಮಾರ ಅವರು ಇಂಧನ ಸಚಿವರಾಗಿದ್ದಾಗ ಇಂಧನ ಖಾತೆಯಲ್ಲಿ ಗುಣಾತ್ಮಕ ಬದಲಾವಣೆಗಳನ್ನು ಮಾಡಿದ್ದಾರೆ.
ಇದೀಗ ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮಿ ಹೆಬ್ಟಾಳಕರ ಅವರು ಪವರ್ ಮ್ಯಾನ್ ಗಳ ಸೇವೆಯ ಮಹತ್ವ ಪರಿಗಣಿಸಿ, ಮಳೆಗಾಲದಲ್ಲಿ ಸುರಕ್ಷಿತತೆ ಕ್ರಮವಾಗಿ ಲಕ್ಷ್ಮಿ ತಾಯಿ ಫೌಂಡೇಷನ್ ವತಿಯಿಂದ ರೇನ್ ಕೋಟ್ ಗಳನ್ನು ವಿತರಿಸಿದ್ದಾರೆ. ಇನ್ನೂ ಹೆಚ್ಚಿನ ಸೇವೆಗೆ ತಾವು ಸದಾ ಬದ್ಧ ಎಂದು ಹೇಳಿದರು.
ಮುಖಂಡರಾದ ಯುವರಾಜ ಕದಂ, ರಘುನಾಥ್ ಖಂಡೇಕರ್, ಬಸನಗೌಡ ಪಾಟೀಲ, ಸಿದ್ದನಗೌಡ ಪಾಟೀಲ, ಅಶೋಕ ಕಾಂಬಳೆ, ವಿಠuಲ ದೇಸಾಯಿ, ಗಜಾನನ ಕಾಕತಕರ ಜಯವಂತ ಬಾಳೇಕುಂದ್ರಿ, ಸುಧೀರ ಪಾಟೀಲ, ಆಯಾ ಭಾಗದ ಸೆಕ್ಷನ್ ಅ ಕಾರಿಗಳು ಹಾಗೂ ಹೆಸ್ಕಾಂ ವಿಭಾಗದ ಮೇಲಧಿಕಾರಿಗಳು ಇದ್ದರು.
Belagavai: ಆಟೋ ಚಾಲಕನ ಜತೆ ಜಗಳ ಬೆನ್ನಲ್ಲೇ ಗೋವಾ ಮಾಜಿ ಶಾಸಕ ಸಾವು!
Belgavi: ಬೆಳಗಾವಿ ಪ್ರಾದೇಶಿಕ ಆಯುಕ್ತರ ವಿರುದ್ಧ ರಾಜ್ಯಪಾಲರಿಗೆ ಶಾಸಕ ಅಭಯ ದೂರು
Belegavi: ಗದ್ದೆಗೆ ಹೊತ್ತಿದ್ದ ಬೆಂಕಿ ಆರಿಸಲುಹೋಗಿ ಸುಟ್ಟು ಕರಕಲಾದ ರೈತ
Belagavi: ನ್ಯಾಯಾಲಯ ವ್ಯವಸ್ಥೆಯಿಂದಲೇ ಅತ್ಯಾ*ಚಾರ, ಕೊ*ಲೆ ಹೆಚ್ಚಾಗಿದೆ: ಮುತಾಲಿಕ್
Belagavi: ಎರಡು ವಾರಗಳಲ್ಲಿ ಸಾರ್ವಜನಿಕ ಜೀವನಕ್ಕೆ ವಾಪಸ್: ಸಚಿವೆ ಲಕ್ಷ್ಮೀ ಹೆಬ್ಬಾಳಕರ್
You seem to have an Ad Blocker on.
To continue reading, please turn it off or whitelist Udayavani.