ಮದುವೆ ಮಂಟಪದಲ್ಲಿ ವಧುವಿಗೆ ಕಟ್ಟಲು ತಂದಿದ್ದ ತಾಳಿ ಕದ್ದ ಕದೀಮ
• ಪೊಲೀಸರಿಂದ ಶೋಧ ಕಾರ್ಯ
Team Udayavani, Jun 14, 2019, 2:44 PM IST
ಬೆಳಗಾವಿ: ಮನೆಗೆ ಕನ್ನ ಹಾಕುವುದು, ಕೊರಳಲ್ಲಿನ ಸರ ಕದಿಯುವುದು ಮಾಮೂಲಿ. ಆದರೆ, ಇಲ್ಲೊಬ್ಬ ಕಿಲಾಡಿ ಕದೀಮ ಮದುವೆ ಮಂಟಪದಲ್ಲಿ ವಧುವಿಗೆ ಕಟ್ಟಬೇಕಾದ ಮಾಂಗಲ್ಯ ಸರವನ್ನೇ ಎಗರಿಸಿದ್ದಾನೆ! ಹೀಗಾಗಿ ಶುಭ ಮುಹೂರ್ತದಲ್ಲಿ ನಡೆಯಬೇಕಾಗಿದ್ದ ಮಾಂಗಲ್ಯಧಾರಣೆ ಎರಡೂವರೆ ಗಂಟೆ ತಡವಾಗಿದೆ.
ಚಿಕ್ಕೋಡಿ ಲೋಕೋಪಯೋಗಿ ಇಲಾಖೆ ಅಧೀಕ್ಷಕ ಹಾಗೂ ಸಾಹಿತಿ ಶಿರೀಷ ಜೋಶಿ ಅವರ ಪುತ್ರ ಆರ್‌ಎಲ್ಎಸ್ ಕಾಲೇಜಿನ ಉಪನ್ಯಾಸಕ ಶ್ರೀನಾಥ ಜೋಶಿ ಅವರ ಮದುವೆ ಸಮಾರಂಭ ಇಲ್ಲಿಯ ಮಹಾವೀರ ಮಂಗಲ ಕಾರ್ಯಾಲಯದಲ್ಲಿ ಬುಧವಾರ ನಡೆಯುತ್ತಿತ್ತು.
ವಧುವಿಗಾಗಿ 1.22 ಲಕ್ಷ ರೂ. ಮೌಲ್ಯದ 32.2 ಗ್ರಾಂ. ಚಿನ್ನದ ಮಾಂಗಲ್ಯ ತಂದಿಟ್ಟು ಕಾರ್ಯಕ್ರಮಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಬೆಳಗ್ಗೆ 8:30ರಿಂದ 8:55ರ ಅವಧಿಯಲ್ಲಿ ಮಾಂಗಲ್ಯಧಾರಣ ಮುಹೂರ್ತ ನಡೆಯ ಬೇಕಿದ್ದ ಹಿನ್ನೆಲೆಯಲ್ಲಿ ಪುರೋಹಿತರ ಸಮ್ಮುಖದಲ್ಲಿ ತಂದಿಟ್ಟು ಪೂಜೆ ನೆರವೇರಿಸಿದ್ದಾರೆ. ಅಷ್ಟರಲ್ಲೇ ಚಾಲಾಕಿ ಕಳ್ಳ ಮಾಂಗಲ್ಯ ಸರ ಎಗರಿಸಿದ್ದಾನೆ. ಇದರಿಂದ ಕಂಗಾಲಾದ ವಧು ಹಾಗೂ ವರನ ಪೋಷಕರು ಇಡೀ ಮದುವೆ ಮಂಟಪದಲ್ಲಿ ತಡಕಾಡಿದ್ದಾರೆ. ಕೊನೆಗೆ ಎಲ್ಲೂ ಸಿಗದ ಹಿನ್ನೆಲೆಯಲ್ಲಿ ಚಿನ್ನಾಭರಣ ಅಂಗಡಿ ಹೋಗಿ ಹೊಸ ಮಾಂಗಲ್ಯ ಸರ ಖರೀದಿಸಿ ಮದುವೆ ಕಾರ್ಯ ನೆರವೇರಿಸಿದ್ದಾರೆ. ಟಿಳಕವಾಡಿ ಠಾಣೆಯಲ್ಲಿ ಶಿರೀಷ ಜೋಶಿ ದೂರು ನೀಡಿದ್ದಾರೆ. ಸಿಸಿ ಕ್ಯಾಮರಾ ದೃಶ್ಯಾವಳಿ ಪರಿಶೀಲಿಸಿ ಕಳ್ಳನ ಚಲನವಲನ ಬಗ್ಗೆ ಮಾಹಿತಿ ಕಲೆ ಹಾಕುತ್ತಿರುವ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಗ್ಯಾರಂಟಿ ವಿರೋಧಿಸಿದ ವಿಪಕ್ಷಗಳಿಗೆ ಸ್ಪಷ್ಟ ಉತ್ತರ ನೀಡಿದ ಮತದಾರ: ಹೆಬ್ಬಾಳ್ಕರ್
Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!
ಬೆಳಗಾವಿ-ಐಫೋನ್‌ಗಾಗಿ ನಡೆಯಿತಾ ಯುವಕನ ಹತ್ಯೆ? ಪೊಲೀಸರಿಂದ ತೀವ್ರ ತನಿಖೆ
ಬೆಳಗಾವಿ: ಸಿಎಂ ಸಿದ್ದರಾಮಯ್ಯಗೆ ಬೆಳಗಾವಿ ಅಧಿವೇಶನವೇ ಕೊನೆ-ಬಿ.ವೈ ವಿಜಯೇಂದ್ರ
Belagavi: ಮರಕ್ಕೆ ಕ್ರೂಸರ್ ಢಿಕ್ಕಿ: ಸ್ಥಳದಲ್ಲೇ ಮೂವರ ಸಾವು
MUST WATCH
ಹೊಸ ಸೇರ್ಪಡೆ
Belagavi: ಗ್ಯಾರಂಟಿ ವಿರೋಧಿಸಿದ ವಿಪಕ್ಷಗಳಿಗೆ ಸ್ಪಷ್ಟ ಉತ್ತರ ನೀಡಿದ ಮತದಾರ: ಹೆಬ್ಬಾಳ್ಕರ್
Childhood Days: ಮರಳಿ ಬಾರದ ಬಾಲ್ಯ ಜೀವನ
Kalaburagi: ಶಿಗ್ಗಾವಿ ಫಲಿತಾಂಶ ಅನಿರೀಕ್ಷಿತ; ನಾವು ಒಪ್ಪುವುದಿಲ್ಲ: ಸಿ.ಟಿ.ರವಿ
UV Fusion: ಅಂದು ಇಂದು- ಮಕ್ಕಳೆಲ್ಲ ಈಗ ಮಾಡ್ರನೈಸ್ಡ್
By Polls Result: ಪ್ರತಿಪಕ್ಷಗಳ ಸುಳ್ಳು ಆರೋಪಕ್ಕೆ ಜನಾದೇಶದ ಉತ್ತರ: ಖಂಡ್ರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.