ಭಯಪಡುವ ಅವಶ್ಯಕತೆಯಿಲ್ಲ: ಸಚಿವೆ ಜೊಲ್ಲೆ
Team Udayavani, May 11, 2020, 9:22 AM IST
ಚಿಕ್ಕೋಡಿ: ಕ್ವಾರಂಟೈನ್‌ನಲ್ಲಿಟ್ಟಿದ್ದ 30 ಜನರಿಗೆ ಕೋವಿಡ್ ವೈರಸ್ ಸೋಂಕು ತಗುಲಿದ್ದರೂ ಯಾರೂ ಭಯಪಡುವ ಅವಶ್ಯಕತೆಯಿಲ್ಲ. ಅಜ್ಮೇರ್ ದಿಂದ ಬಂದವರಾಗಿದ್ದರಿಂದ ಹಾಗೂ ತಾಲೂಕಿನಲ್ಲಿ ಯಾರ ಸಂಪರ್ಕಕ್ಕೆ ಬಾರದೆ ಇದ್ದರಿಂದ ನಾಗರಿಕರು ನಿಶ್ಚಿಂತೆಯಿಂದಿರಬೇಕು ಎಂದು ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
ನಗರದಲ್ಲಿ ಕ್ವಾರಂಟೈನ್‌ನಲ್ಲಿಟ್ಟಿದ್ದವರಿಗೆ ಕೋವಿಡ್ ದೃಢಪಟ್ಟ ಹಿನ್ನೆಲೆಯಲ್ಲಿ ನಿಪ್ಪಾಣಿ ನಗರಸಭೆಯಲ್ಲಿ ಸಭೆ ನಡೆಸಿ ಅವರು ಮಾತನಾಡಿದರು. ಅಜ್ಮೇರ್‌ದಿಂದ ಮೇ 3 ರಂದು ಬೆಳಗಿನ ಜಾವ ಬಸ್ ಮೂಲಕ 38 ಜನರು ಕೊಗನ್ನೋಳ್ಳಿ ಬಳಿ ಬಂದಾಗ ಪೊಲೀಸರು ನನ್ನೊಂದಿಗೆ ಸತತವಾಗಿ ಸಂಪರ್ಕದಲ್ಲಿದ್ದರು. ನಂತರ ರಾಜ್ಯದ ಅನುಮತಿ ಇಲ್ಲದ್ದರಿಂದ ಎಲ್ಲ ಅಧಿಕಾರಿಗಳೊಂದಿಗೆ ಚರ್ಚಿಸಿ ಅವರನ್ನು ಕ್ವಾರಂಟೈನಲ್ಲಿಡಲು ನಿರ್ಣಯಿಸಿದ್ದೆವು ಎಂದರು.
ಕ್ವಾರಂಟೈನಲ್ಲಿದ್ದವರ ಮತ್ತು ತಾಲೂಕಿನ ನಾಗರಿಕರ ಯಾವುದೇ ಸಂಪರ್ಕವಿಲ್ಲ. ಆದಾಗ್ಯೂ ಇವರ ಸಂಪರ್ಕಕ್ಕೆ ಬಂದವರನ್ನು ಪೊಲೀಸರು ಹುಡುಕಿ ಕ್ವಾರಂಟೈನ್‌ನಲ್ಲಿಡಲಿದ್ದಾರೆ. ಲಾಕ್‌ಡೌನ್ ನಿಯಮಗಳು ಉಲ್ಲಂಘನೆಯಾಗದಂತೆ ಅನುಮತಿ ನೀಡಿದ ವ್ಯವಹಾರಗಳನ್ನು ಎಲ್ಲರೂ ಧಾರಾಳವಾಗಿ ಮುನ್ನಡೆಸಿ ಎಂದರು.
ಪಿಎಸ್‌ಐ ಕುಮಾರ ಹಾಡಕರ ಮಾತನಾಡಿದರು. ಪೌರಾಯುಕ್ತ ಮಹಾವೀರ ಬೋರನ್ನವರ, ಎಂಜಿಎಂ ವೈದ್ಯಾಧಿಕಾರಿ ಡಾ. ಸೀಮಾ ಗುಂಜಾಳ, ನಗರಸಭೆ ಸದಸ್ಯ ಜಯವಂತ ಭಾಟಲೆ, ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಗಳ ಈಡೇರಿಕೆಗೆ ಕ್ರಮ: ಸಚಿವೆ ಲಕ್ಷ್ಮೀ
ತೀವ್ರ ಸ್ವರೂಪ ಪಡೆದ ಅತಿಥಿ ಶಿಕ್ಷಕರ ಪ್ರತಿಭಟನೆ; ಶಿಕ್ಷಕ ಅಸ್ವಸ್ಥ, ಆಸ್ಪತ್ರೆಗೆ ದಾಖಲು
Grant: ರಸ್ತೆ ಅಭಿವೃದ್ಧಿಗೆ ಪಕ್ಷಾತೀತವಾಗಿ ಶಾಸಕರಿಗೆ 2 ಸಾವಿರ ಕೋ.ರೂ.: ಮುಖ್ಯಮಂತ್ರಿ
ವಾಲ್ಮೀಕಿ ಹಗರಣ ಮಾದರಿ ನಗರೋತ್ಥಾನದಲ್ಲೂ ನಿಧಿ ತಿರುವು!
Winter Session: ಸೋಮವಾರ 14.18 ಗಂಟೆ ಕಲಾಪ: ನೂತನ ದಾಖಲೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.