ದೇವರ ಹೆಸರಲ್ಲಿ ಕಲಹ ಬೇಡ; ಒಂದಾಗಿ ಬಾಳಿ; ಕುಮಾರೇಂದ್ರ ಸ್ವಾಮಿ
ಮನುಷ್ಯನು ನಡೆ-ನುಡಿ ಒಂದಾಗಿ ಬಾಳಿದರೆ ಮಾತ್ರ ಬದುಕಿಗೆ ಅರ್ಥ ಸಿಗುತ್ತದೆ.
Team Udayavani, Mar 24, 2022, 2:20 PM IST
ಗೋಕಾಕ: ದೇವನೊಬ್ಬ ನಾಮ ಹಲವು. ನಾಮದ ಹೆಸರಿನಲ್ಲಿ ಕಲಹಗಳಾಗದೇ ಪ್ರೀತಿ, ನೀತಿ, ರೀತಿಯಿಂದ ಬಾಳಬೇಕು. ಇರುವುದೊಂದೇ ಬದುಕು. ಜಾತಿ-ಮತವ ಮರೆತು ಒಂದಾಗಿ ಬಾಳಬೇಕು ಎಂದು ಸಾವಳಗಿ ಜಗದ್ಗುರು ಶಿವಲಿಂಗೇಶ್ವರ ಮಠದ ಶ್ರೀ ಶಿವಲಿಂಗೇಶ್ವರ ಕುಮಾರೇಂದ್ರ ಸ್ವಾಮಿಗಳು ಆಶೀರ್ವಚನ ನೀಡಿದರು.
ತಾಲೂಕಿನ ಕುಂದರಗಿಯ ಅಡವಿಸಿದ್ದೇಶ್ವರ ಮಠದ ಶ್ರೀ ಅಡವಿಸಿದ್ದೇಶ್ವರ ಜಾತ್ರಾ ಮಹೋತ್ಸವದ ಕುಂದರನಾಡೋತ್ಸವ-2022 ಉದ್ಘಾಟನೆ ಹಾಗೂ ಭಾವೈಕ್ಯ ಸಮ್ಮೇಳನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಮನುಷ್ಯನು ನಡೆ-ನುಡಿ ಒಂದಾಗಿ ಬಾಳಿದರೆ ಮಾತ್ರ ಬದುಕಿಗೆ ಅರ್ಥ ಸಿಗುತ್ತದೆ. ನಡೆ ನುಡಿ ವ್ಯತ್ಯಾಸವಾದಲ್ಲಿ ಬದುಕು ಭಾರವಾಗುತ್ತೆ. ಯಾವುದೇ ಧಾರ್ಮಿಕ ಆಚರಣೆಗಳು ಆತ್ಮೋದ್ಧಾರವಾಗಿರಬೇಕೆ ವಿನಃ ಡಾಂಭಿಕ ಆಚರಣೆಯಾಗಿರಬಾರದು. ಶ್ರೀಮಠದ ಪೂಜ್ಯರು ಕಿರಿಯ ವಯಸ್ಸಿನಲ್ಲಿ ಈ ಭಾಗದಲ್ಲಿ ಹಲವಾರು ಸಾಮಾಜಿಕ-ಧಾರ್ಮಿಕ ಕಾರ್ಯಗಳನ್ನು ಮಾಡುತ್ತಿದ್ದಾರೆ. ಅವರ ಕಾರ್ಯ ಎಲ್ಲರಿಗೂ ಮಾದರಿಯಾಗಲಿ ಎಂದರು.
ಶೂನ್ಯ ಸಂಪಾದನಮಠದ ಮುರುಘ ರಾಜೇಂದ್ರ ಸ್ವಾಮಿಗಳು ಮಾತನಾಡಿ, ಸರ್ವ ಧರ್ಮದವರನ್ನು ಏಕತೆಯಿಂದ ಕಾಣುವ ಏಕೈಕ ದೇಶ ನಮ್ಮ ಭಾರತ. ನಮ್ಮ ಧರ್ಮವನ್ನು ಪ್ರೀತಿಸಿ, ಅನ್ಯ ಧರ್ಮದವರನ್ನು ಗೌರವಿಸುವುದು ನಮ್ಮ ಕರ್ತವ್ಯ. ಸಮಾಜದಲ್ಲಿ ದುಃಖದಲ್ಲಿರುವವರು, ಸಮಸ್ಯೆಯಲ್ಲಿರುವವರನ್ನು ಮೇಲಕ್ಕೆ ಎತ್ತುವುದೇ ನಿಜವಾದ ಧರ್ಮ ಎಂದರು. ಕಾರ್ಮಿಕ ಮುಖಂಡ ಅಂಬಿರಾವ್ ಪಾಟೀಲ ಕಾರ್ಯಕ್ರಮ ಉದ್ಘಾಟಿಸಿದರು.
ಹುಕ್ಕೇರಿ ವಿರಕ್ತಮಠದ ಶಿವಬಸವ ಸ್ವಾಮಿಗಳು, ಪಾಶ್ಚಾಪುರದ ವಿಶ್ವಾರಾಧ್ಯ ಶಿವಾಚಾರ್ಯ ಸ್ವಾಮಿಗಳು, ಮೂಲಗದ್ದೆಯ ಚನ್ನಬಸವ ಸ್ವಾಮಿಗಳು, ವಿಶ್ವನಾಥ ದೇವರು ಚರಂತಿಮಠ ಕುಂದರಗಿ, ಮೌಲಾನಾ ಅಲ್ಲಮಖಾನ ದೇಸಾಯಿ, ಸಿಸ್ಟರ್ ಫಾತೀಮಾ ಡೇವಿಡ್, ರಾಜಕೀಯ ಮುಖಂಡರಾದ ಭೀಮನಗೌಡ ಪೋಲಿಸ್‌ಗೌಡ್ರು ಸೇರಿದಂತೆ ಭಕ್ತಾದಿಗಳು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
Belagavi; ಬಹಳ ನೋವಾಗಿದೆ, ನೂರು ಸಿ.ಟಿ.ರವಿ ಬಂದರೂ ಹೆದರುವುದಿಲ್ಲ: ಲಕ್ಷ್ಮೀ ಹೆಬ್ಬಾಳಕರ
Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ
Mrinal Hebbalkar: ನನ್ನ ತಾಯಿಗೆ ರವಿ ಬಳಸಿದ ಪದದಿಂದ ನೋವಾಗಿದೆ: ಮೃಣಾಲ್
Belgavi: ಸಿ.ಟಿ.ರವಿ ಪ್ರಕರಣ ಮುಂದುವರಿಸುವಲ್ಲಿ ಅರ್ಥವೇ ಇಲ್ಲ: ಸಚಿವ ಸತೀಶ್ ಜಾರಕಿಹೊಳಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.