ಮೂವರು ಪೊಲೀಸರಿಗೆ ಸೋಂಕು
ಬಂಧಿತ ಆರೋಪಿ-ಚೆಕ್‌ಪೋಸ್ಟ್‌ನಲ್ಲಿ ತಗುಲಿದ ವೈರಸ್
Team Udayavani, Jul 5, 2020, 2:16 PM IST
ಬೆಳಗಾವಿ: ಮಹಾಮಾರಿ ಕೋವಿಡ್ ಗಡಿ ಜಿಲ್ಲೆ ಬೆಳಗಾವಿಯನ್ನು ಬೆಂಬಿಡದೇ ಕಾಡುತ್ತಿದ್ದು, ಕೆಲ ದಿನಗಳಿಂದ ಕೇವಲ ಕ್ವಾರಂಟೈನ್‌ನಲ್ಲಿದ್ದವರಿಗಷ್ಟೇ ತಗಲುತ್ತಿದ್ದ ಸೋಂಕು ಈಗ ಪೊಲೀಸರಿಗೂ ಕಾಡುತ್ತಿದೆ. ಮೂವರು ಪೊಲೀಸರಿಗೆ ಸೋಂಕು ತಗುಲಿ ಆತಂಕ ಸೃಷ್ಟಿಸಿದೆ. ಜಿಲ್ಲೆಯಲ್ಲಿ ಶನಿವಾರ ಒಟ್ಟು 27 ಹೊಸ ಪ್ರಕರಣಗಳು ಪತ್ತೆಯಾಗಿದೆ.
ನಿಪ್ಪಾಣಿ ತಾಲೂಕಿನ ಕೊಗನೊಳ್ಳಿ ಚೆಕ್‌ಪೋಸ್ಟ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮೂವರು ಡಿಆರ್ ಪೇದೆಗಳಿಗೆ ಸೋಂಕು ತಗುಲಿದೆ. ಕರ್ತವ್ಯ ಮುಗಿಸಿ ನಗರದ ಪೊಲೀಸ್ ವಸತಿ ಗೃಹದಲ್ಲಿದ್ದ ಈ ಮೂವರು ಪೇದೆಗಳಿಗೆ ಸೋಂಕು ತಗುಲಿದ್ದರಿಂದ ಆತಂಕ ಹೆಚ್ಚಾಗಿದೆ. ಎರಡು ದಿನಗಳ ಹಿಂದೆಯಷ್ಟೇ ಪೇದೆಗೆ ಸೋಂಕು ತಗುಲಿತ್ತು. ಜತೆಗೆ ಕ್ಯಾಂಪ್ ಪೊಲೀಸರು ಬಂಧಿಸಿದ್ದ ಆರೋಪಿಗೂ ಸೋಂಕು ದೃಢವಾಗಿತ್ತು. ಕೋವಿಡ್ ವಾರಿಯರ್ಸ್‌ಗಳಾಗಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸರಿಗೆ ಈ ಸೋಂಕು ಅಂಟಿದ್ದರಿಂದ ಜೀವ ಕೈಯಲ್ಲಿ ಹಿಡಿದು ಪೊಲೀಸರು ಕೆಲಸ ಮಾಡುವಂತಾಗಿದೆ.
ಬೆಳಗಾವಿ ತಾಲೂಕಿನ ಕಂಗ್ರಾಳಿ ಕೆ.ಎಚ್. ಗ್ರಾಮದ ಮೂರು ವರ್ಷದ ಹೆಣ್ಣು ಮಗು, ನೆಹರು ನಗರದ 31 ವರ್ಷದ ವ್ಯಕ್ತಿ, ಖಾನಾಪುರ ತಾಲೂಕಿನ ಕರವಿನಕೊಪ್ಪ ಗ್ರಾಮದ 30 ವರ್ಷದ ವ್ಯಕ್ತಿ, ಸುಭಾಷ ನಗರದ 27 ವರ್ಷದ ಯುವಕ, 26 ವರ್ಷದ ಯುವಕ, 27 ವರ್ಷದ ಯುವಕ, ಸವದತ್ತಿ ತಾಲೂಕಿನ ಕರೀಕಟ್ಟಿ ಗ್ರಾಮದ 14 ವರ್ಷದ ಬಾಲಕ, 35 ವರ್ಷದ ಮಹಿಳೆ, ಅಥಣಿ ತಾಲೂಕಿನ ಗುಂಡೇವಾಡಿ 61 ವರ್ಷದ ವ್ಯಕ್ತಿ, ಅನಂತಪುರದ 20 ವರ್ಷದ ಯುವತಿ, 18 ವರ್ಷದ ಯುವಕ, ಝಜಂಜರವಾಡದ 53 ವರ್ಷದ ವ್ಯಕ್ತಿ, ಚಿಕ್ಕಟ್ಟಿ ಗ್ರಾಮದ 20 ವರ್ಷದ ಯುವತಿ, ಸಂಕೋನಟ್ಟಿಯ38 ವರ್ಷದ ವ್ಯಕ್ತಿ, ಶೇಡಬಾಳದ 55 ವರ್ಷದ ಮಹಿಳೆ, 6 ವರ್ಷದ ಬಾಲಕ, 11 ವರ್ಷದ ಬಾಲಕಿ, 62 ವರ್ಷದ ವ್ಯಕ್ತಿ, 34 ವರ್ಷದ ವ್ಯಕ್ತಿ, ಬೆಳಗಾವಿ ನಗರದ 58 ವರ್ಷದ ಮಹಿಳೆ, ನಗರದ 75 ವರ್ಷದ ವೃದ್ಧ, ಕಡೋಲಿ ಗ್ರಾಮದ 63 ವರ್ಷದ ಮಹಿಳೆ, 36 ವರ್ಷದ ವ್ಯಕ್ತಿ, 27 ವರ್ಷದ ಮಹಿಳೆ, ಖಾಸಬಾಗ 52 ವರ್ಷದ ಮಹಿಳೆ ಹಾಗೂ ಅಥಣಿ 83 ವರ್ಷದ ವೃದ್ಧನಿಗೆ ಸೋಂಕು ತಗುಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belgavi; ಹೆರಿಗೆ ಬಳಿಕ ಮತ್ತೋರ್ವ ಬಾಣಂತಿ ಸಾವು
Belagavi; ಅಗಲಿದ ಮನಮೋಹನ್ ಸಿಂಗ್ ಅವರಿಗೆ ಕಾಂಗ್ರೆಸ್ ಭಾವಪೂರ್ಣ ಶ್ರದ್ಧಾಂಜಲಿ
Congress: ಪಕ್ಷದೊಳಗೆ ಹೊಸ ನಾಯಕತ್ವಕ್ಕೆ ಅವಕಾಶ ಸಿಗಬೇಕು: ಮಲ್ಲಿಕಾರ್ಜುನ ಖರ್ಗೆ
Belagavi Congress Session: ಗಾಂಧೀಜಿ ಪರಂಪರೆ ಮುಂದುವರಿಸಲು ಬದ್ಧರಾಗಬೇಕು: ಸೋನಿಯಾ
Belagavi: ಬಿಮ್ಸ್ ಆಸ್ಪತ್ರೆಯಲ್ಲಿ ಮತ್ತೊರ್ವ ಬಾಣಂತಿ ಮೃತ್ಯು; ಕುಟುಂಬಸ್ಥರ ಆಕ್ರಂದನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.