29.25 ಲಕ್ಷ ವೆಚ್ಚದಲ್ಲಿ ಮೂರು ಶಾಲೆ ಅಭಿವೃದ್ಧಿ
| ಎರಡು ಕನ್ನಡ-ಒಂದು ಮರಾಠಿ ಸರ್ಕಾರಿ ಶಾಲೆ ದತ್ತು ಪಡೆದ ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್
Team Udayavani, Jan 6, 2021, 2:53 PM IST
ಖಾನಾಪುರ: ಶಿಕ್ಷಣದಲ್ಲಿ ಖಾಸಗಿ ಶಾಲೆಗಳಿಗಿಂತ ಸರ್ಕಾರಿ ಶಾಲೆಗಳು ನಾವೇನುಕಮ್ಮಿ ಇಲ್ಲ ಎಂದು ತೋರಿಸುವುದಕ್ಕೆ ಸ್ಥಳೀಯಶಾಸಕಿ ಡಾ| ಅಂಜಲಿ ನಿಂಬಾಳಕರ ಕ್ಷೇತ್ರದಮೂರು ಶಾಲೆಗಳನ್ನು ದತ್ತು ಪಡೆದಿದ್ದಾರೆ.
ಈ ಮೂರು ಶಾಲೆಗಳಿಗೆ ಹೊಸ ರೂಪ ಬರಲಿದ್ದು, ಹಲವುಸೌಲಭ್ಯಗಳನ್ನು ಹೊಂದುವುದರ ಮೂಲಕಸುಸಜ್ಜಿತಗೊಳ್ಳಲಿವೆ. ಈ ಮೂರು ಹಿರಿಯಪ್ರಾಥಮಿಕ ಶಾಲೆಗಳಿಗೆ ಒಟ್ಟು 29.25 ಲಕ್ಷ ರೂ.ಕ್ರಿಯಾಯೋಜನೆ ಸಿದ್ಧವಾಗಿದೆ. ಕೆಪಿಎಸ್‌ಸಿ ಶಾಲೆ ಮುಗಳಿಹಾಳ 7.75 ಲಕ್ಷ, ಕಣಕುಂಬಿಹಿರಿಯ ಮರಾಠಿ ಪ್ರಾಥಮಿಕ ಶಾಲೆ 7 ಲಕ್ಷ,ಪ್ರಭುನಗರ ಶಾಲೆ 14.5 ಲಕ್ಷ ರೂ. ಅಂದಾಜುವೆಚ್ಚ ಸಿದ್ಧಪಡಿಸಿ ಅನುಮೋದನೆಗೆ ಸರ್ಕಾರಕ್ಕೆ ಕಳುಹಿಸಲಾಗಿದೆ. ಎರಡು ಕನ್ನಡ ಹಾಗೂಒಂದು ಮರಾಠಿ ಶಾಲೆಗಳನ್ನು ಶಾಸಕರು ಆಯ್ಕೆ ಮಾಡಿದ್ದು, ಈ ಶಾಲೆಗಳಿಗೆ ಹೊಸ ಸ್ಪರ್ಷ ದೊರೆಯಲಿದೆ.
ಕರ್ನಾಟಕ ಪಬ್ಲಿಕ್ ಶಾಲೆ, ಮುಗಳಿಹಾಳ :
ಒಂದರಿಂದ ಪಿಯುವರೆಗೆ ಕ್ಲಬ್ ಮಾಡಲಾಗಿದ್ದು, 821ವಿದ್ಯಾರ್ಥಿಗಳು ಇಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಶಾಲೆ ಅಭಿವೃದ್ಧಿಗೆ7.75 ಲಕ್ಷ ರೂ. ಪ್ರಸ್ತಾವನೆ ಸಿದ್ಧಪಡಿಸಲಾಗಿದೆ. ಶೌಚಾಲಯ,ಶಿಕ್ಷಕರ ಕೊಠಡಿ, ಮೇಲ್ಛಾವಣಿ ರಿಪೇರಿ, ಕೊಠಡಿಗಳಿಗೆಹಾಸಲು, ಕುಡಿಯುವ ನೀರಿಗೆ ಓವರ್‌ಹೆಡ್ ಟ್ಯಾಂಕ್, ಸ್ಮಾರ್ಟ್ ಬೋರ್ಡ್, ಪ್ರಯೋಗಾಲಯ, ಹೂದೋಟ, ಮಕ್ಕಳಿಗೆಕ್ರೀಡಾ ಸೌಲಭ್ಯ ದೊರೆಯಬೇಕಿದೆ. ಇಲ್ಲಿನ ಶಿಕ್ಷಣ ಗುಣಮಟ್ಟದಲ್ಲಿದ್ದು, ಇನ್ನಷ್ಟು ಸೌಲಭ್ಯಗಳಿಂದ ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡಲು ಸಾಧ್ಯವಿದೆ.
ಕೆಪಿಎಸ್‌ಸಿ ಶಾಲೆಗೆ ಅಗತ್ಯ ಸೌಲಭ್ಯಗಳು ದೊರೆತಲ್ಲಿ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ದೊರೆಯುತ್ತದೆ. ಮಕ್ಕಳಿಗೆ ಹೆಚ್ಚಿನ ಸೌಲಭ್ಯ ಕಲ್ಪಿಸಿದಲ್ಲಿ ಮಕ್ಕಳು ಇತ್ತ ಇನ್ನಷ್ಟು ಆಕರ್ಷಿತರಾಗುತ್ತಾರೆ.- ರಾಜಶೇಖರಯ್ನಾ ಹಿರೇಮಠ, ಮುಖ್ಯ ಶಿಕ್ಷಕ
ಹಿರಿಯ ಪ್ರಾಥಮಿಕ ಮರಾಠಿ ಶಾಲೆ,ಕಣಕುಂಬಿ :
ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಕಣಕುಂಬಿ ಹಿರಿಯ ಪ್ರಾಥಮಿಕ ಮರಾಠಿ ಶಾಲೆಯಲ್ಲಿ 190 ವಿದ್ಯಾರ್ಥಿಗಳುಇದ್ದಾರೆ. ಶಾಲೆಗೆ ಡೆಸ್ಕ್, ಹೊಸ ಕಂಪ್ಯೂಟರ್, ನೀರಿನಸೌಲಭ್ಯ ಆಗಬೇಕಿದೆ. ಶೌಚಾಲಯಗಳು ಹಳೆಯದಾಗಿದ್ದುಹೊಸ ಶೌಚಾಲಯ ನಿರ್ಮಿಸಬೇಕಿದೆ. ಇಲ್ಲಿ ಅಭಿವೃದ್ಧಿಗೆ 7 ಲಕ್ಷ ರೂ. ಪ್ರಸ್ತಾವನೆ ಸಿದ್ಧಪಡಿಸಲಾಗಿದೆ.
ಅಗತ್ಯ ಸೌಲಭ್ಯಗಳ ಪ್ರಸ್ತಾವನೆ ನೀಡಲಾಗಿದ್ದು,ಸೌಲಭ್ಯಗಳು ದೊರೆತಲ್ಲಿ ಶಾಲೆಯ ಅಭಿವೃದ್ಧಿಗೆಸಹಾಯವಾಗುತ್ತದೆ. ಮಕ್ಕಳಿಗೆ ಸೌಲಭ್ಯಗಳುಅತ್ಯಗತ್ಯವಾಗಿದ್ದು ಮಕ್ಕಳ ಭವಿಷ್ಯ ದೃಷ್ಟಿಯಿಂದ ಹೆಚ್ಚು ಅನುಕೂಲವಾಗಲಿದೆ.- ಶಾಂತಕುಮಾರ ಅವತಾಡೆ, ಮುಖ್ಯ ಶಿಕ್ಷಕ
ಪ್ರಭುನಗರ ಸರ್ಕಾರಿ ಶಾಲೆ : ಖಾನಾಪುರದಿಂದ 10 ಕಿಮೀ ದೂರದಲ್ಲಿ ಬೆಳಗಾವಿಹೆದ್ದಾರಿಯಲ್ಲಿರುವ ಪ್ರಭುನಗರ ಸರ್ಕಾರಿ ಶಾಲೆ 222ವಿದ್ಯಾರ್ಥಿಗಳನ್ನು ಹೊಂದಿದೆ. ಎರಡು ಕೊಠಡಿಗಳಅಗತ್ಯವಿದೆ. ಶಾಲೆಯ ಮೇಲ್ಚಾವಣಿ ಹಾಳಾಗಿದ್ದು,ತರಗತಿಗಳಿಗೆ ಸುಣ್ಣ ಬಣ್ಣ ಅಗಲಿದೆ. ಕೊಠಡಿಗೆ ಸ್ಲ್ಯಾಬ್‌ನಿರ್ಮಾಣ, ಹೊಸ ಶೌಚಾಲಯ ನಿರ್ಮಾಣ, ಶಾಲೆ ಆವರಣದಲ್ಲಿ ತೋಟಗಾರಿಕೆ 14.5 ಯೋಜನೆಗೆ ಮುಂಜೂರಾತಿ ಪ್ರಸ್ತಾವನೆ ನೀಡಲಾಗಿದೆ.
ಶಾಲೆ ದತ್ತು ಪಡೆಯುವುದರಿಂದಮೂಲಸೌಲಭ್ಯಗಳ ಕೊರತೆ ನೀಗುತ್ತಿದೆ. ಮಕ್ಕಳಿಗೆಅಗತ್ಯ ಸೌಕರ್ಯಗಳು ದೊರೆಯುತ್ತಿರುವುದು ಶಾಲೆಅಭಿವೃದ್ಧಿಗೆ ಸಹಕಾರಿಯಾಗಲಿದೆ. –ಆರ್.ಬಿ. ಚೋಬಾರಿ, ಮುಖ್ಯ ಶಿಕ್ಷಕ
ಕ್ಷೇತ್ರದಲ್ಲಿ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಅಗತ್ಯಸೌಲಭ್ಯಗಳನ್ನು ಮಕ್ಕಳಿಗೆನೀಡಲಾಗುತ್ತಿದೆ. ಮೂರು ಶಾಲೆಗಳನ್ನು ದತ್ತು ಪಡೆದಿದ್ದುಸೌಲಭ್ಯ ಕಲ್ಪಿಸುವುದರಮೂಲಕ ಮಕ್ಕಳ ಉತ್ತಮಭವಿಷ್ಯ ರೂಪಿಸಲಾಗುವುದು. -ಅಂಜಲಿ ನಿಂಬಾಳಕರ, ಖಾನಾಪುರ ಶಾಸಕಿ
ಜಗದೀಶ ಹೊಸಮನಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress: ಪಕ್ಷದೊಳಗೆ ಹೊಸ ನಾಯಕತ್ವಕ್ಕೆ ಅವಕಾಶ ಸಿಗಬೇಕು: ಮಲ್ಲಿಕಾರ್ಜುನ ಖರ್ಗೆ
Belagavi Congress Session: ಗಾಂಧೀಜಿ ಪರಂಪರೆ ಮುಂದುವರಿಸಲು ಬದ್ಧರಾಗಬೇಕು: ಸೋನಿಯಾ
Belagavi: ಬಿಮ್ಸ್ ಆಸ್ಪತ್ರೆಯಲ್ಲಿ ಮತ್ತೊರ್ವ ಬಾಣಂತಿ ಮೃತ್ಯು; ಕುಟುಂಬಸ್ಥರ ಆಕ್ರಂದನ
Controversy: ಕಾಂಗ್ರೆಸ್ ಪೋಸ್ಟರ್‌ನಲ್ಲಿ ಪಿಒಕೆ ತಪ್ಪಾಗಿ ಚಿತ್ರಣ; ಬಿಜೆಪಿ ತೀವ್ರ ಆಕ್ರೋಶ
Belagavi: ಪಿಒಕೆ ಬಗ್ಗೆ ಕಾಂಗ್ರೆಸ್ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Gold Scam; ಪವಿತ್ರಾ ಸ್ನೇಹಿತೆ ಜತೆಗೆ ಕಾಣಿಸಿಕೊಂಡ ಚಿನ್ನ ವಂಚನೆ ಕೇಸ್ ಆರೋಪಿ ಶ್ವೇತಾ
Video: ತನ್ನ ಮನೆಯ ಮುಂದೆಯೇ ತನ್ನನ್ನು ಚಾಟಿಯಿಂದ ಹೊಡೆದುಕೊಂಡ ಅಣ್ಣಾಮಲೈ…
Substitutes: ರಾಜಕೀಯ ಬಿರುಗಾಳಿ ಎಬ್ಬಿಸಿದ ಮಧ್ಯಪ್ರದೇಶ ಶಿಕ್ಷಣ ಸಚಿವರ ಬದಲಿ ಹೇಳಿಕೆ
Ex PM:ಪ್ರಚಾರದಿಂದ ದೂರ- ದೇಶ ಕಂಡ ಸರಳ, ಸಜ್ಜನಿಕೆಯ ಮೊದಲ ಆರ್ಥಿಕ ತಜ್ಞ ಪ್ರಧಾನಿ
ಆನಂದಪುರ: ಬೆಳ್ಳಂಬೆಳಗ್ಗೆ ತೋಟಕ್ಕೆ ಕಾಡಾನೆಗಳ ಲಗ್ಗೆ… ಗ್ರಾಮಸ್ಥರಲ್ಲಿ ಆತಂಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.