ಜಿಲ್ಲೆಯ ತಾಣಗಳ ಪ್ರವಾಸ ಇನ್ಮುಂದೆ ಕಠಿಣ
ವಾರಾಂತ್ಯ-ರಜಾದಿನಗಳಂದು ವೀಕ್ಷಣೆಗೆ ನಿರ್ಬಂಧಕೊರೊನಾ ನಿಯಂತ್ರಣಕ್ಕೆ ಜಿಲ್ಲಾಡಳಿತದ ಕ್ರಮ
Team Udayavani, Jul 16, 2021, 7:50 PM IST
ಬಸವರಾಜ ಭರಮಣ್ಣವರ
ಗೋಕಾಕ: ಮಳೆಗಾಲದಲ್ಲಿ ಮಾತ್ರ ತುಂಬಿ ಧುಮ್ಮಿಕ್ಕಿ ಪ್ರವಾಸಿಗರನ್ನು ಆಕರ್ಷಿಸುವ ಗೋಕಾಕ ಜಲಪಾತ, ಧುಪದಾಳ ಹಾಗೂ ಗೊಡಚಿನಮಲ್ಕಿ ಜಲಪಾತಗಳಿಗೆ ವಾರಾಂತ್ಯ, ರಜಾ ದಿನಗಳಲ್ಲಿ ಪ್ರವಾಸಿಗರ ಆಗಮನಕ್ಕೆ ಜಿಲ್ಲಾಡಳಿತ ನಿಷೇಧ ಹೇರಿದ್ದು ಪ್ರವಾಸಿಗರಿಗೆ ನೋವುಂಟು ಮಾಡಿದೆ.
ಸುಪ್ರಸಿದ್ಧ ಗೋಕಾಕ ಜಲಪಾತ ಮಳೆಗಾಲದ ಸ್ವರ್ಗವಾಗಿದೆ. ಈ ಜಲಪಾತ ಮಳೆಗಾಲದ ಪ್ರಾರಂಭದ ಎರಡೂ¾ರು ತಿಂಗಳು ಮೈದುಂಬಿ ಹರಿಯುತ್ತದೆ. ಈ ಜಲಪಾತದ ದೃಶ್ಯ ಕಣ್ತುಂಬಿಕೊಳ್ಳಲು ರಾಜ್ಯ ಹಾಗೂ ಹೊರ ರಾಜ್ಯಗಳ ಲಕ್ಷಾಂತರ ಜನ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ಆದರೆ ಕೋವಿಡ್ 19 ಹಿನ್ನಲೆ ಹೊರ ರಾಜ್ಯದ ಪ್ರವಾಸಿಗರ ಆಗಮನಕ್ಕೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಜಿಲ್ಲಾಡಳಿತ ಪ್ರವಾಸಿತಾಣಗಳಿಗೆ ನಿರ್ಬಂಧ ಹೇರಿದೆ.
ಬೆಳಗಾವಿ ಮತ್ತು ಮಹಾರಾಜ್ಯದ ಗಡಿಭಾಗದಲ್ಲಿ ಉತ್ತಮ ಮಳೆಯಾದರೆ ಸಾಕು, ಗೋಕಾಕ ಜಲಪಾತ ನೋಡುಗರ ಕಣ್ಮನ ಸೆಳೆಯುತ್ತದೆ. ಈ ಜಲಪಾತ ಭೋರ್ಗರೆಯುತ್ತಾ 180 ಮೀಟರ್ ಆಳಕ್ಕೆ ಧುಮುಕುವ ಮನಮೋಹಕ, ರುದ್ರರಮಣೀಯ ದೃಶ್ಯಕ್ಕೆ ಮನಸೋಲದವರೇ ಇಲ್ಲ. ಹೀಗಾಗಿ ಪ್ರತಿ ವರ್ಷವೂ ಸಾವಿರಾರು ಜನರು ತಮ್ಮ ಕುಟುಂಬ ಸಮೇತ ಹಾಗೂ ಗೆಳೆಯರೊಂದಿಗೆ ಭೇಟಿ ನೀಡಿ ಜಲಪಾತದ ಸೌಂದರ್ಯ ಸವಿಯುತ್ತಾರೆ. ಕೊರೊನಾ ಲಾಕ್‌ಡೌನ್ ನಂತರ ಮನೆಗಳಿಂದ ಹೊರ ಬಂದಿರುವ ಜನ ಮಳೆಗಾಲ ಇರುವುದರಿಂದ ಪ್ರಕೃತಿಯ ಸೌಂದರ್ಯ ಸವಿಯಲು ಕಾತುರರಾಗಿದ್ದಾರೆ. ಆದರೆ ಕೊರೋನಾ ಹಿನ್ನಲೆಯಲ್ಲಿ ಜಿಲ್ಲಾಡಳಿತ ನಿರ್ಬಂಧ ಹೇರಿದ್ದು ಪ್ರವಾಸಿಗರು ಅಸಮಾಧಾನಗೊಂಡಿದ್ದಾರೆ.
ಈ ಜಲಪಾತ ಉಳಿದ ಫಾಲ್ಸ್‌ಗಳಿಗಿಂತ ತುಂಬಾ ವಿಭಿನ್ನವಾಗಿದೆ. ಮಳೆಗಾಲದಲ್ಲಿ ಕೆಂಪು ಮಿಶ್ರಿತ ನೀರಿನ ಕಲರವದ ಹತ್ತಿರಕ್ಕೆ ಹೋದಂತೆ ಹಾಲಿನಂತೆ ಕಂಗೊಳಿಸುವ ಗೋಕಾಕ ಫಾಲ್ಸ್ ಸೌಂದರ್ಯ ಆಸ್ವಾದಿಸಲು ಪ್ರವಾಸಿಗರ ಆಗಮನಕ್ಕೆ ಬರೆ ಬಿದ್ದಂತಾಗಿದೆ ಎಂದು ಜಲಪಾತ ವೀಕ್ಷಣೆಗೆ ಬಂದಿದ್ದ ಪ್ರವಾಸಿಗರು ನೋವಿನಿಂದ ನುಡಿದರು.
ಕರ್ನಾಟಕ ಎರಡನೇ ಅತಿ ದೊಡ್ಡ ಈ ಜಲಪಾತವನ್ನು ಬ್ರಿಟಿಷರು ಕೆನಡಾದ ನಯಾಗಾರಕ್ಕೆ ಹೊಲಿಸಿದ್ದಾರೆ. ಇದನ್ನು ಭಾರತದ ನಯಾಗರ ಎಂದಿದ್ದಾರೆ. ಪ್ರವಾಸಿಗರು ಈ ಜಲಪಾತವನ್ನು ಎಲ್ಲ ಬದಿಯಿಂದಲೂ ವೀಕ್ಷಿಸಬಹುದು. ಪ್ರಕೃತಿ ಸೌಂದರ್ಯದ ಜೊತೆಗೆ ಜಲಪಾತದ ಸೌಂದರ್ಯ ಪ್ರವಾಸಿಗರನ್ನು ಮಂತ್ರ ಮುಗ್ಧರನ್ನಾಗಿಸುತ್ತದೆ.
ವಿದ್ಯುತ್ ಉತ್ಪಾದನೆ: ಗೋಕಾಕ ಜಲಪಾತ ಹಾಗೂ ಗೋಕಾಕ ಮಿಲ್Éಗೆ ತನ್ನದೇ ಆದ ವೈಶಿಷ್ಠÂತೆಯ ಜೊತೆಗೆ ಐತಿಹಾಸಿಕ ದಾಖಲೆ ಸಹ ಇದೆ. ಜೂನ್ ತಿಂಗಳಿನಿಂದ ಅಕ್ಟೋಬರ್ ವರೆಗೆ ತುಂಬಿ ಹರಿಯುವ ಈ ಜಲಪಾತದ ಕೆಳಗೆ ವಿದ್ಯುತ್ ಉತ್ಪಾದನೆ ಘಟಕವಿದೆ. ಈ ವಿದ್ಯುತ್ ಘಟಕವನ್ನು ಬ್ರಿಟಿಷರ ಕಾಲದಲ್ಲಿ ಅಂದರೆ 1885, 87ರಲ್ಲಿ ವಿದ್ಯುತ್ ಉತ್ಪಾದನೆ ಆರಂಭಿಸಿದ ಇತಿಹಾಸವಿದೆ. ಏಷ್ಯಾ ಖಂಡದಲ್ಲೆ ಪ್ರಪ್ರಥಮ ಬಾರಿಗೆ ಇಲ್ಲಿ ವಿದ್ಯುತ್ ಉತ್ಪಾದನೆ ಮಾಡಲಾಗಿದೆ ಎಂದು ಹೇಳಲಾಗುತ್ತದೆ. ಈ ಜಲಪಾತದ ವಿದ್ಯುತ್‌ನ್ನು ಗೋಕಾಕ ಫಾಲ್ಸ್ ಟàಕ್ಸಟೆ„ಲ್ ಮಿಲ್ಲ, ಹೆಸ್ಕಾಂ ಸೇರಿದಂತೆ ಸ್ಥಳೀಯ ಫಾಲ್ಸ್‌ನಲ್ಲಿ ನೆಲೆಸಿರುವ ಕಾರ್ಮಿಕರ ಮನೆಗಳಿಗೆ ಸರಬರಾಜು ಮಾಡಲಾಗುತ್ತದೆ.
ತೂಗು ಸೇತುವೆ: ಗೋಕಾಕ ಫಾಲ್ಸ್‌ನ ಮತ್ತೂಂದು ವಿಶೇಷತೆ ಎಂದರೆ ತೂಗು ಸೇತುವೆ. ಬ್ರಿಟಿಷರ ಕಾಲದಲ್ಲಿ ಇದನ್ನು ಮರ ಮತ್ತು ಕಬ್ಬಿಣದ ಸರಳುಗಳಿಂದ ಕಟ್ಟಲಾಗಿದೆ. ಜಲಪಾತ ಮೈದುಂಬಿ ಹರಿಯುತ್ತಿರುವಾಗ ಈ ತೂಗು ಸೇತುವೆಯ ಮೇಲೆ ನಡೆದಾಡುವದೇ ಒಂದು ಅದ್ಭುತ ರೊಮಾಂಚಕ ಅನುಭವ. ಪ್ರವಾಸಿಗರಿಗೆ ಜಲಪಾತದ ಸುಂದರ ದೃಶ್ಯ ಕಣ್ತುಂಬಿಕೊಳ್ಳಲು ಹಾಗೂ ಕ್ಯಾಮೆರಾದಲ್ಲಿ ಸೆರೆಹಿಡಿಯಲು ಈ ತೂಗು ಸೇತುವೆ ಸಹಾಯಕಾರಿಯಗಿದೆ. ರಾಜ್ಯದಲ್ಲಿಯೇ ಅತಿದೊಡ್ಡ ತೂಗು ಸೇತುವೆ. ಇಂತಹ ಅದ್ಭುತ ಅನುಭವ ನೀಡುವ ತೂಗು ಸೇತುವೆಯ ಮೋಜು ಅನುಭವಿಸದೇ ಯಾವೊಬ್ಬ ಪ್ರವಾಸಿಗನೂ ಹೋಗುವುದಿಲ್ಲ. ಈ ಫಾಲ್ಸ್‌ನ ಪಕ್ಕದಲ್ಲೇ ಹಸಿರಿನಿಂದ ಕಂಗೊಳಿಸುವ ಕೆಂಪಲ್ ಪಾರ್ಕ ಇದ್ದು ಪ್ರವಾಸಿಗರಿಗೆ ವಿಶ್ರಾಂತಿ ತಾಣವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Maharashtra ; ಕೈ ಯಿಂದ ಲೋಕಸಭಾ ಸ್ಥಾನ ಕಸಿದ ಬಿಜೆಪಿ: ರಾಜ್ಯಸಭೆ ಬಹುಮತದತ್ತ ಚಿತ್ತ
By Election: ಮೂರು ಕ್ಷೇತ್ರದಲ್ಲೂ ಬಿಜೆಪಿ ಸೋತಿದ್ದಕ್ಕೆ ಟಿವಿಯನ್ನೇ ಒಡೆದು ಹಾಕಿದ ಮುಖಂಡ!
Basavaraj Bommai: ಹಣದ ಹೊಳೆಹರಿಸಿ ಕಾಂಗ್ರೆಸ್ ಗೆಲುವು: ಬೊಮ್ಮಾಯಿ ಆರೋಪ
Maharashtra; ಮಹಾಯುತಿಯ ಮಹಾ ಗೆಲುವಿನಲ್ಲಿ ಆರ್ ಎಸ್ಎಸ್ ದೊಡ್ಡ ಕೊಡುಗೆ
Pakistan: ಪಾಕ್‌ನಲ್ಲಿ ಹಿಂಸಾಚಾರ; ಒಟ್ಟು 37 ಮಂದಿ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.