ಕಲಿಯಬೇಕೆನ್ನುವ ವಿದ್ಯಾರ್ಥಿಗಳಿಗೆ ಸಾರಿಗೆಯದ್ದೇ ಸಮಸ್ಯೆ
ಹಲಗಾ ಹಾಗೂ ಕೊಂಡಸಕೊಪ್ಪ ಗ್ರಾಮಗಳು ಸುವರ್ಣ ಸೌಧದ ಮುಂಭಾಗದಲ್ಲಿವೆ.
Team Udayavani, May 31, 2022, 6:24 PM IST
ಹಿರೇಬಾಗೇವಾಡಿ: ಸರ್ಕಾರವು ಶಿಕ್ಷಣ ಕ್ಷೇತ್ರಕ್ಕೆ ಸಾಕಷ್ಟು ಯೋಜನೆಗಳನ್ನು ರೂಪಿಸಿದ್ದರೂ ಕೂಡ ಗ್ರಾಮಾಂತರ ಪ್ರದೇಶಗಳಲ್ಲಿನ ವಿದ್ಯಾರ್ಥಿಗಳು ನಾನಾ ರೀತಿಯ ತೊಂದರೆಗಳನ್ನು ಅನುಭವಿಸುತ್ತಲೇ ಇದ್ದಾರೆ. ಅದರಲ್ಲಿ ಇಲ್ಲಿನ ಸರ್ಕಾರಿ ಪ್ರೌಢ ಶಾಲೆಯ ಮಕ್ಕಳ ಸಾರಿಗೆ ಅನಾನುಕೂಲತೆಯೂ ಒಂದು. ಹೌದು ! ಇಲ್ಲಿನ ಸರ್ಕಾರಿ ಪ್ರೌಢಶಾಲೆಯುವರ್ಷದಿಂದ ವರ್ಷಕ್ಕೆ ಈ ಹಿಂದಿನ ನ್ಯೂನ್ಯತೆಗಳನ್ನು ಸರಿಪಡಿಸಿಕೊಳ್ಳುತ್ತಲೇ ಶೈಕ್ಷಣಿಕ ಪ್ರಗತಿಯುತ್ತ ದಾಪುಗಾಲು ಹಾಕುತ್ತಿದೆ. ಶಾಲಾ ಕಟ್ಟಡ, ನುರಿತ ಶಿಕ್ಷಕ ವೃಂದ ಹಾಗೂ ಮೂಲ ಸೌಕರ್ಯಗಳ ಜೊತೆಗೆ ಕಟ್ಟುನಿಟ್ಟಿನ ಆಡಳಿತ ಮತ್ತು ಎಸ್‌ಎಸ್‌ಎಲ್‌ಸಿ ಯಲ್ಲಿ ಉತ್ತಮ ಫಲಿತಾಂಶವನ್ನೂ ಸಹ ನೀಡಿದೆ.
ಹಾಗಾಗಿ ಇಲ್ಲಿ ದಾಖಲಾತಿಯೆ ಪ್ರಮಾಣವೂ ಸಹ ಗಣನೀಯವಾಗಿ ಏರಿಕೆಯಾಗುತ್ತಿದೆ. ಸುತ್ತ-ಮುತ್ತಲಿನ ಗ್ರಾಮಗಳ ವಿಧ್ಯಾರ್ಥಿಗಳೂ ಸಹ ಅಧಿಕ ಪ್ರಮಾಣದಲ್ಲಿ ಇಲ್ಲಿಗೆ ಆಗಮಿಸುತ್ತಿದ್ದಾರೆ. ಆದರೆ ಸಮಸ್ಯೆ ಶುರುವಾಗುವುದೇ ಇಲ್ಲಿ!
ಸುವರ್ಣ ಸೌಧದ ಸನಿಹದಲ್ಲಿರುವ ಗ್ರಾಮಗಳಾದ ಹಲಗಾ, ಕೊಂಡಸಕೊಪ್ಪ , ಕಮಕಾರಹಟ್ಟಿ ಹಾಗೂ ಗಿರಿಯಾಲ ಗ್ರಾಮಗಳಿಂದ 121 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಲ್ಲಿ ಪ್ರವೇಶ ಪಡೆದಿದ್ದಾರೆ. ಅದರಲ್ಲಿ ವಿದ್ಯಾರ್ಥಿನಿಯರದ್ದೇ ಸಿಂಹ ಪಾಲು. ಶಾಲೆಗೆ ಬಂದು ಹೋಗಲು ಇವರೆಲ್ಲಾ ರಾಜ್ಯ ರಸ್ತೆ ಸಾರಿಗೆಯ ಬಸ್ ಗಳನ್ನು ಅವಲಂಬಿಸಿದವರು. ಆದರೆ ಇವರಿಗೆ ಸಾರಿಗೆ ಸೌಲಭ್ಯ ಮರೀಚಿಕೆಯಾಗುತ್ತಿದೆ.
ಕಾರಣ ಬೆಳಗಾವಿ-ಗಿರಿಯಾಲ ಬಸ್ ಬೆಳಗ್ಗೆ 8 ಗಂಟೆಗೆ ಬರುತ್ತದೆ. ಅಲ್ಲದೆ ತಿಗಡಿ ಹಾಗೂ ಗಣಿಕೊಪ್ಪ ಬಸ್‌ಗಳು ಇದ್ದರೂ ಸಹ ಶಾಲಾ ಸಮಯಕ್ಕೆ ಹೊಂದಾಣಿಕೆ ಆಗುತ್ತಿಲ್ಲ. ಅಲ್ಲದೆ ಹಲಗಾ ಹಾಗೂ ಕೊಂಡಸಕೊಪ್ಪ ಗ್ರಾಮಗಳು ಸುವರ್ಣ ಸೌಧದ ಮುಂಭಾಗದಲ್ಲಿವೆ. ಇಲ್ಲಿನ ವಿದ್ಯಾರ್ಥಿಗಳು ಬೆಳಿಗ್ಗೆ ಶಾಲೆಗೆ ಹೋಗುವಾಗ ರಾಷ್ಟ್ರೀಯ ಹೆದ್ದಾರಿಯನ್ನು ದಾಟಿ ಇನ್ನೊಂದು ಬದಿಗೆ ಹೋಗುವುದು ಅಪಾಯಕ್ಕೆ ಆಹ್ವಾನ ನೀಡುವಂತಾಗುತ್ತಿದೆ. ಆದ್ದರಿಂದ ಬಸ್ತವಾಡ ಸರ್ವಿಸ್ ಬಲಗಡೆ ರಸ್ತೆಯಿಂದ ಹಾಗೂ ಕಮಕಾರಹಟ್ಟಿ ಎಡಗಡೆಯಿಂದ ಬಸ್ ಗಳು ಸಂಚರಿಸುವಂತಾಗಬೇಕು ಎಂದು ವಿದ್ಯಾರ್ಥಿಗಳು ಹಾಗೂ ಪಾಲಕರು ಆಗ್ರಹಿಸುತ್ತಿದ್ದಾರೆ.
ಬಡವನಾದರೂ ದುಡ್ಡು ಕೊಟ್ಟು ಬರಬೇಕು
ಸರಕಾರದ ಈಗಿನ ನಿಯಮದ ಪ್ರಕಾರ 9 ಹಾಗು 10 ನೇಯ ತರಗತಿಯ ವಿಧ್ಯಾರ್ಥಿಗಳಿಗೆ ಮಾತ್ರ ಹಳೆ ಪಾಸ್‌ಗಳ ಮೂಲಕ ಸಂಚರಿಸಲು ಅವಕಾಶವಿದೆ. ಹಾಗಾದರೆ 8 ನೆಯ ವರ್ಗದ ಮಕ್ಕಳ ಪಾಡೇನು? ಅವರು ದಿನಕ್ಕೆ ಎರಡು ಬದಿಯ ಪ್ರಯಾಣಕ್ಕೆ ಕನಿಷ್ಠ 30ರೂ. ಖರ್ಚು ಮಾಡಬೇಕಾಗಿದೆ. ಈ ಗ್ರಾಮಗಳಲ್ಲಿನ ಮಕ್ಕಳ ಪಾಲಕರು ಸ್ಥಿತಿವಂತರಲ್ಲ, ಕೂಲಿ ಕಾರ್ಮಿಕರಾಗಿಯೇ ಬಹಳಷ್ಟು ಜನ ತಮ್ಮ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡುತ್ತಿದ್ದಾರೆ. ಹಾಗಾಗಿ ಈ ಬಗ್ಗೆ ಅಧಿ ಕಾರಿಗಳು, ಜನಪ್ರತಿನಿಧಿಗಳು ಗಮನ ಹರಿಸಬೇಕಿದೆ.
ನಮ್ಮ ತಂದೆ ತಾಯಿ ತಮ್ಮ ಕಡಿಮೆ ಆದಾಯದಲ್ಲಿಯೇ ನಮ್ಮನ್ನು ಓದಿಸಲು ಹರಸಾಹಸ ಪಡುತ್ತಿದ್ದಾರೆ, ಸಾರಿಗೆ ಸಮಸ್ಯೆಯಿಂದ ನಮಗೆ ತೊಂದರೆ ಆಗುತ್ತಿದ್ದು ಆದಷ್ಟು ಬೇಗ ಪರಿಹಾರ ಸಿಗಬೇಕು.
ಸಂಜನಾ ಮಲ್ಲತವಾಡ,
ವಿದ್ಯಾರ್ಥಿನಿ
ಬೇರೆ ಗ್ರಾಮಗಳಿಂದ ಹಿರೇಬಾಗೇವಾಡಿ ಶಾಲೆಗಳಿಗೆ ಬರುವ ವಿದ್ಯಾರ್ಥಿಗಳ ಸಾರಿಗೆ ಸಮಸ್ಯೆಗಳು ನಮ್ಮ ಗಮನಕ್ಕೆ ಬಂದಿದ್ದು, ಈ ಬಗ್ಗೆ ಅ ಧಿಕಾರಿಗಳೊಂದಿಗೆ ಶೀಘ್ರ ಚರ್ಚಿಸಿ, ಸಮಸ್ಯೆ ಪರಿಹರಿಸಲು ಪ್ರಯತ್ನಿಸುತ್ತೇನೆ.
ಪ್ರಕಾಶ ಹುಕ್ಕೇರಿ, ಎಮ್.ಎಲ್.ಸಿ
ಶಿಕ್ಷಕ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ
ವಿದ್ಯಾರ್ಥಿಗಳೇ ಈ ದೇಶದ ಆಸ್ತಿ. ಹಾಗಾಗಿ ಅವರ ಎಲ್ಲಾ ಸಮಸ್ಯೆಗಳಿಗೆ ಸ್ಪಂದಿಸುವುದು ನನ್ನ ಕರ್ತವ್ಯ. ಸಮಸ್ಯೆ ಬಗ್ಗೆ ಅರಿವಿದ್ದು, ಶೀಘ್ರವೇ ಪರಿಹಾರಕ್ಕಾಗಿ ಶ್ರಮಿಸುತ್ತೇನೆ.
ಅರುಣ ಶಹಾಪೂರ,
ಎಮ್.ಎಲ್.ಸಿ ಶಿಕ್ಷಕ ಕ್ಷೇತ್ರದ ಬಿಜೆಪಿ ಅಭ್ಯರ್ಥಿ
ಶಿವಾನಂದ ಮೇಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು
Congress; ಔತಣಕೂಟದ ಸಭೆಗೆ ರಾಜಕೀಯ ಮಹತ್ವ ಬೇಕಿಲ್ಲ: ಸತೀಶ್ ಜಾರಕಿಹೊಳಿ
President ಮುರ್ಮು ಅವರಿಂದ ಇಂದು ಬೆಳಗಾವಿಯಲ್ಲಿ ಕೆಎಲ್‌ಇ ಕ್ಯಾನ್ಸರ್ ಆಸ್ಪತ್ರೆ ಉದ್ಘಾಟನೆ
ಮಗಳ ಮೇಲೆ ಎರಗಲು ಹೋದ ಪತಿಯನ್ನೇ ಹತ್ಯೆಗೈದು ದೇಹವನ್ನು ತುಂಡರಿಸಿ ವಿಲೇವಾರಿ ಮಾಡಿದ ಪತ್ನಿ
Butterfly Park: ಬೆಳಗಾವಿಯ ಹಿಡಕಲ್ ಡ್ಯಾಂ ಬಳಿ ಅತಿ ದೊಡ್ಡ ತೆರೆದ ಚಿಟ್ಟೆ ಪಾರ್ಕ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ
Theatre stampede case: ಪೊಲೀಸರ ಮುಂದೆ ಹಾಜರಾದ ಅಲ್ಲು ಅರ್ಜುನ್, ಆಸ್ಪತ್ರೆಗೆ ಭೇಟಿ ರದ್ದು
Gambhir; ಕೊಹ್ಲಿ, ರೋಹಿತ್ ಶರ್ಮ ಟೆಸ್ಟ್ ಭವಿಷ್ಯದ ಬಗ್ಗೆ ಗಂಭೀರ್ ಪ್ರತಿಕ್ರಿಯೆ
Kasaragod: ಬಟ್ಟಿಪದವು; ಪ್ಲೈವುಡ್ ಮಿಲ್ಲಿಗೆ ಬೆಂಕಿ
Bus Fare Hike: ಸಾರಿಗೆ ನಿಗಮಗಳಿಗೆ ಸರ್ಕಾರ ಎಷ್ಟೂ ಅಂತ ಸಹಾಯಧನ ಕೊಡಲು ಸಾಧ್ಯ?: ಸಚಿವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.