Kalammawadi Dam ಹಿನ್ನೀರಿನಲ್ಲಿ ಈಜಲು ತೆರಳಿದ್ದ ಯುವಕರಿಬ್ಬರು ನೀರು ಪಾಲು
ನಿಪ್ಪಾಣಿ ಮೂಲದ 13 ಯುವಕರು ಪ್ರವಾಸಕ್ಕೆ ಆಗಮಿಸಿದ್ದರು
Team Udayavani, Jul 1, 2024, 8:47 PM IST
ಚಿಕ್ಕೋಡಿ: ನೆರೆಯ ಮಹಾರಾಷ್ಟ್ರದ ಕಾಳಮ್ಮವಾಡಿ ಡ್ಯಾಂನಲ್ಲಿ ನಿಪ್ಪಾಣಿಯ ಯುವಕರಿಬ್ಬರು ನೀರುಪಾಲಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಮಹಾರಾಷ್ಡ್ರದ ಕೊಲ್ಲಾಪೂರ ಜಿಲ್ಲೆಯ ರಾಧಾನಗರಿ ತಾಲೂಕಿನ ಕಾಳಮ್ಮವಾಡಿ ಜಲಾಶಯಕ್ಕೆ ನಿಪ್ಪಾಣಿ ಮೂಲದ 13 ಜನ ಯುವಕರು ಪ್ರವಾಸಕ್ಕೆ ತೆರಳಿದರು. ಜಲಾಶಯದ ಹಿನ್ನೀರಿನಲ್ಲಿ ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ಜೀವ ಕಳೆದುಕೊಂಡಿದ್ದಾರೆ.
ನಿಪ್ಪಾಣಿಯ ಗಣೇಶ ಕದಮ್, ಪ್ರತೀಕ್ ಪಾಟೀಲ್ ನೀರುಪಾಲಾದ ಯುವಕರು.
ಕಾಳಮ್ಮವಾಡಿ ಜಲಾನಯನ ಪ್ರದೇಶದಲ್ಲಿ ಸದ್ಯ ಮಳೆಯ ಅಬ್ಬರ ಮುಂದುವರಿದಿದೆ. ಆದರೂ ಶವ ಹೊರ ತೆಗೆಯಲು ಅಲ್ಲಿಯ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ.
ನಿನ್ನೆಯಷ್ಟೇ ಪುಣೆಯ ಲೋನಾವಾಲಾ ಬಳಿಯ ಭುಶಿ ಡ್ಯಾಂ ಹಿನ್ನೀರಿನಲ್ಲಿ7 ಮಂದಿ ನೀರುಪಾಲಾಗಿದ್ದರು. ಲೋನಾವಾಲಾ ದುರಂತ ಮಾಸುವ ಮುನ್ನವೇ ಈ ಘಟನೆ ನಡೆದಿರುವುದು ಗಡಿ ಭಾಗದಲ್ಲಿ ಆತಂಕ ಸೃಷ್ಡಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಮರಕ್ಕೆ ಕ್ರೂಸರ್ ಢಿಕ್ಕಿ: ಸ್ಥಳದಲ್ಲೇ ಮೂವರ ಸಾವು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Belagavi: ಪೂರ್ಣಾವಧಿ ಅಧಿವೇಶನದಲ್ಲಿ ಸಮಸ್ಯೆಗಳ ಪೂರ್ಣ ಚರ್ಚೆಯಾಗಲಿ: ಡಾ.ಪ್ರಭಾಕರ್ ಕೋರೆ
Belagavi: ಗೆಳೆಯರ ಜೊತೆ ಪಾರ್ಟಿಗೆಂದು ಹೋದ ವ್ಯಕ್ತಿ ಅನುಮಾನಾಸ್ಪದವಾಗಿ ಸಾ*ವು
Belagavi: ಬಾಲಕಿ ಮೇಲೆ ಅತ್ಯಾಚಾರ… ಆರೋಪಿಗೆ 20 ವರ್ಷ ಜೈಲು ಶಿಕ್ಷೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.