ಸದಲಗಾದಲ್ಲಿ ಅಸ್ವಚ್ಛತೆ ಕಾಟ
Team Udayavani, Feb 7, 2020, 12:53 PM IST
ಚಿಕ್ಕೋಡಿ: ತಾಲೂಕಿನ ಸದಲಗಾ ಪಟ್ಟಣದ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಪುರಸಭೆ ವಾಣಿಜ್ಯ ಮಳಿಗೆ ಮೇಲೆ ಸ್ವಚ್ಛತೆ ನಿರ್ವಹಣೆ ಇಲ್ಲದೇ ಗಬ್ಬೆದ್ದು ನಾರುತ್ತಿದ್ದು, ಸಾರ್ವಜನಿಕರಿಗೆ ನಿತ್ಯ ಬೇಸರ ತರಿಸುತ್ತಿದೆ. ತಾಲೂಕಾ ಕೇಂದ್ರವಾಗಲು ತುದಿಗಾಲಲ್ಲಿ ನಿಂತ್ತಿರುವ
ಸದಲಗಾ ಪಟ್ಟಣವು ಪುರಸಭೆ ಹೊಂದಿದೆ. ಸ್ವಚ್ಛತೆಯಲ್ಲಿ ಗ್ರಾಮೀಣ ಪ್ರದೇಶ ಎಷ್ಟೊಂದು ಮುಂದೆ ಇದ್ದು, ಆದರೆ ಸದಲಗಾ ಪಟ್ಟಣವು ಅಸ್ವತ್ಛತೆಯಿಂದ ಗಬ್ಬೆದ್ದು ನಾರುತ್ತಿದೆ. ಪಟ್ಟಣದ ಚರಂಡಿಗಳು ಕಸದಿಂದ ತುಂಬಿಕೊಂಡಿವೆ. ಹಂದಿಗಳು ಚರಂಡಿಯಲ್ಲಿ ವಾಸ ಮಾಡಿ ಗಬ್ಬೆದ್ದು ವಾಸನೆ ಬರುವುದರಿಂದ ಸಾರ್ವಜನಿಕರು ಮೂಗು ಮುಚ್ಚಿಕೊಂಡು ಸಂಚರಿಸುವಂತಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಪುರಸಭೆ ವ್ಯಾಪ್ತಿಗೆ ಬರುವ ಬಸ್ ನಿಲ್ದಾಣದ ಮುಂಭಾಗದಲ್ಲಿ ಕೆಳ ಹಂತದ ಸುಮಾರು ಹತ್ತಾರು ವಾಣಿಜ್ಯ ಮಳಿಗೆಯನ್ನು ಬಾಡಿಗೆ ಕೊಡಲಾಗಿದೆ. ಅಲ್ಲಿ ಹೋಟೆಲ್, ಪಾನ್ ಶಾಪ್, ಬೇಕರಿ, ಮೊಬೈಲ್ ಅಂಗಡಿ, ಹಣ್ಣಿನ ಅಂಗಡಿ ಹೀಗೆ ಹತ್ತಾರು ವ್ಯಾಪಾರಸ್ಥರು ವಹಿವಾಟು ಮಾಡುತ್ತಾರೆ. ಆದರೆ ಬಸ್ ನಿಲ್ದಾಣದ ಹತ್ತಿರ ಸುಳಿದಾಡುವ ಪುಂಡಪೋಕರಿಗಳು ಮದ್ಯ ಸೇವಿಸಿ ಅಲ್ಲಿಯೇ ಬಾಟಲಗಳನ್ನು ಬಿಸಾಡಿ ಹೋಗುತ್ತಿದ್ದಾರೆ. ಅಲ್ಲಿಯೇ ತಿಂಡಿ ತಿನಿಸುಗಳ ಪ್ಲಾಸ್ಟಿಕ್ ಬಿಸಾಡಿದ್ದಾರೆ. ಇದರಿಂದ ಪರಸರಕ್ಕೆ ಹಾನಿಯಾಗುತ್ತಿದೆ ಎಂದು ಪ್ರಜ್ಞಾವಂತರು ಆರೋಪಿಸಿದ್ದಾರೆ.
ದುರ್ವಾಸನೆಯಿಂದ ಕಂಗೆಟ್ಟ ಜನ: ಕೆಳ ಹಂತದ ವಾಣಿಜ್ಯ ಮಳಿಗೆಗಳು ಬಾಡಿಗೆ ರೂಪದಲ್ಲಿ ಇದ್ದರೆ ಮೇಲಾºಗದ ಮಳಿಗೆಗಳು ಖಾಲಿ ಇವೆ. ಅಲ್ಲಿಯ ದುರ್ವಾಸನೆಯಿಂದ ಕಂಗೆಟ್ಟಿರುವ ಜನ ಯಾರು ಬಾಡಿಗೆ ಪಡೆಯಲು ಮುಂದೆ ಬರುತ್ತಿಲ್ಲ, ಹಗಲು ಹೊತ್ತಿನಲ್ಲಿಯೇ ಕಿಡಿಗೇಡಿಗಳು ಮಳಿಗೆ ಮೇಲೆ ಮೂತ್ರ ಮಾಡುವದರಿಂದ ರಸ್ತೆ ಮೇಲೆ ಹಾದು ಹೋಗುವ ಸಾರ್ವಜನಿಕರಿಗೆ ದುರ್ವಾಸನೆ ಬರುತ್ತಿದೆ.
ಶೌಚಾಲಯವೇ ಇಲ್ಲ: ಸದಲಗಾ ಪಟ್ಟಣದ ಹೃದಯ ಭಾಗವಾದ ಬಸ್ ನಿಲ್ದಾಣ ಹಾಗೂ ಬಾಜಿ ಮಾರ್ಕೆಟ್ ಬಳಿ ಸಾರ್ವಜನಿಕ ಶೌಚಾಲಯ ಇಲ್ಲವಾಗಿದೆ. ಇದರಿಂದ ಸಾರ್ವಜನಿಕರು ಬಯಲಲ್ಲಿ ಮೂತ್ರ ಮಾಡುವುದು ಸರ್ವೆ ಸಾಮಾನ್ಯವಾಗಿದೆ. ಪಟ್ಟಣದ ಬಸ್ ನಿಲ್ದಾಣದ ಬಳಿ ಶೌಚಾಲಯ ಇಲ್ಲದೇ ಇರುವುದರಿಂದ ಸಾರ್ವಜನಿಕರು ಪುರಸಭೆ ವಾಣಿಜ್ಯ ಮಳಿಗೆ ಮೇಲ್ಭಾಗದ ಬಯಲಿನಲ್ಲಿ ಮೂತ್ರ ಮಾಡಿ ಗಲಿಜು ಮಾಡಲಾಗುತ್ತಿದೆ. ಕೂಡಲೇ ಪುರಸಭೆ ಅಧಿಕಾರಿಗಳು ಎಚ್ಚೆತ್ತುಕೊಂಡು ಸಾರ್ವಜನಿಕ ಶೌಚಾಲಯ ನಿರ್ಮಿಸಿ ಜನರಿಗೆ ಅನುಕೂಲ ಕಲ್ಪಿಸಬೇಕು. ವಾಣಿಜ್ಯ ಮಳಿಗೆ ಮೇಲ್ಭಾಗವನ್ನು ಸ್ವಚ್ಛಮಾಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಪಟ್ಟಣದ ಬಸ್ ನಿಲ್ದಾಣದ ಮುಂಭಾಗದ ಪುರಸಭೆಗೆ ಒಳಪಡುವ ವ್ಯಾಪಾರಿ ಮಳಿಗೆ ಮೇಲ್ಭಾಗದಲ್ಲಿ ಸಾರ್ವಜನಿಕರು ಗಲಿಜು ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಶೀಘ್ರವೇ ಸ್ವಚ್ಛಗೊಳಿಸಿ ಪಟ್ಟಣದ ಸ್ವಚ್ಛತೆಗೂ ಆದ್ಯತೆ ನೀಡಲಾಗುವುದು. –ಪ್ರವೀಣ ಗರದಾಳೆ, ಪರಿಸರ ಅಭಿಯಂತರ ಸದಲಗಾ ಪುರಸಭೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mrinal Hebbalkar: ನನ್ನ ತಾಯಿಗೆ ರವಿ ಬಳಸಿದ ಪದದಿಂದ ನೋವಾಗಿದೆ: ಮೃಣಾಲ್
Belgavi: ಸಿ.ಟಿ.ರವಿ ಪ್ರಕರಣ ಮುಂದುವರಿಸುವಲ್ಲಿ ಅರ್ಥವೇ ಇಲ್ಲ: ಸಚಿವ ಸತೀಶ್ ಜಾರಕಿಹೊಳಿ
Belagavi: ನ್ಯಾಯಾಧೀಶರ ಮುಂದೆ ಪೊಲೀಸ್ ದೌರ್ಜನ್ಯ ಬಿಚ್ಚಿಟ್ಟ ಸಿ.ಟಿ. ರವಿ
Belagavi: ಎಲ್ಲದಕ್ಕೂ ಪೂರ್ಣವಿರಾಮ ಬೀಳಲಿದೆ, ನನಗೂ ಒಂದು ಕಾಲ ಬರುತ್ತದೆ….. : ಸಿ.ಟಿ.ರವಿ
Belagavi: ಸಿ.ಟಿ.ರವಿ ಬಂಧನ ಪ್ರಕರಣ ಬೆಂಗಳೂರಿಗೆ ಸ್ಥಳಾಂತರ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Pope Francis; ಗಾಜಾಪಟ್ಟಿ ಮೇಲೆ ನಡೆದದ್ದು ಯುದ್ಧವಲ್ಲ, ಕ್ರೌರ್ಯ
Horoscope: ಈ ರಾಶಿಯವರಿಗೆ ಧೈರ್ಯ ಮತ್ತು ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ
Priority: ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಅವಕಾಶ ವಂಚಿತ ಯಕ್ಷಗಾನ
Ambedkar Row: ಕಾಂಗ್ರೆಸ್ ಎಂದರೆ ಫೇಕ್ ಗಾಂಧಿಗಳ ಪಕ್ಷ: ಛಲವಾದಿ ನಾರಾಯಣಸ್ವಾಮಿ
Delhi bom*b ಬೆದರಿಕೆ; ಮಕ್ಕಳಿಗೆ ರಜೆ ಬೇಕಾಗಿತ್ತು: ಕಾರಣ ಬಿಚ್ಚಿಟ್ಟ ಪೊಲೀಸರು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.