ಸೂರು ಕಟ್ಟಲು ಧಾವಂತ

ಉಸುಕು ಸಂಗ್ರಹಕ್ಕೆ ನದಿ ತೀರಕ್ಕೆ ಲಗ್ಗೆ ಬಿದ್ದ ಮನೆ ದುರಸ್ತಿಗೆ ಮುಂದಾದ ನಿರಾಶ್ರಿತರು

Team Udayavani, Aug 28, 2019, 10:40 AM IST

bg-tdy-1

ಬೆಳಗಾವಿ: ಮಲಪ್ರಭಾ ಜಲಾಶಯದ ಈ ಬಾರಿಯ ದಾಖಲೆ ನೀರು ಸಂಗ್ರಹ ಹಾಗೂ ಬಿಡುಗಡೆ ರಾಮದುರ್ಗ ಹಾಗೂ ಸವದತ್ತಿ ತಾಲೂಕುಗಳ ನದಿ ತೀರದ ಗ್ರಾಮಗಳಲ್ಲಿ ತಲ್ಲಣವನ್ನೇ ಸೃಷ್ಟಿಮಾಡಿತ್ತು. ಒಂದು ವಾರದ ಕಾಲ ನಿರೀಕ್ಷೆ ಮೀರಿ ಆತಂಕ ಉಂಟುಮಾಡಿದ್ದ ಜಲಾಶಯದ ಅಬ್ಬರ ಈಗ ಸಂಪೂರ್ಣ ಕಡಿಮೆಯಾಗಿದೆ. ನದಿಯ ಪ್ರವಾಹ ಸಹ ಗುರುತು ಸಿಗದಷ್ಟು ಇಳಿದಿದೆ. ಆದರೆ ನೆರೆಯಿಂದ ಉಂಟಾದ ಆತಂಕ ಹಾಗೂ ಹಾನಿಯಿಂದ ಸಾರ್ವಜನಿಕರು ಇನ್ನೂವರೆಗೆ ಚೇತರಿಸಿಕೊಂಡಿಲ್ಲ.

ಭೀಕರ ಪ್ರ ವಾಹದಿಂದ ಎಲ್ಲವನ್ನೂ ಕಳೆದುಕೊಂಡಿರುವ ನದಿ ತೀರದ ಜನರು ಹೊಸ ಬದುಕು ಕಟ್ಟಿಕೊಳ್ಳಲೇಬೇಕಾದ

ಅನಿವಾರ್ಯತೆಯಲ್ಲಿದ್ದಾರೆ. ಸರಕಾರದ ಪರಿಹಾರದ ಭರವಸೆ ಸ್ವಲ್ಪ ಧೈರ್ಯ ಮೂಡಿಸಿದೆಯಾದರೂ ಅದು ಯಾವಾಗ ಬರುತ್ತದೆ ಎಂಬ ವಿಶ್ವಾಸ ಇಲ್ಲ. ಇದೇ ಕಾರಣಕ್ಕೆ ಪ್ರವಾಹ ಸಂತ್ರಸ್ತರು ತಾವೇ ಸ್ವತಃ ಸಾಧ್ಯವಾದಷ್ಟು ಪರಿಹಾರ ಕ್ರಮಕ್ಕೆ ಮುಂದಾಗಿದ್ದಾರೆ.

ಇದಕ್ಕೆ ಸವದತ್ತಿ ತಾಲೂಕಿನ ಮುನವಳ್ಳಿ ಗ್ರಾಮದ ಜನರೂ ಒಂದು ನಿದರ್ಶನ. ಪ್ರಮುಖ ವ್ಯಾಪಾರಿ ಕೇಂದ್ರವಾದ ಮುನವಳ್ಳಿಗೆ ತಾಗಿಕೊಂಡೇ ಇರುವ ಸಣ್ಣ ಹಾಗೂ ಹಳೆಯ ಸೇತುವೆ ಬಳಿ ಸಂಪೂರ್ಣ ನೀರು ಕಡಿಮೆಯಾಗಿರುವ ಮಲಪ್ರಭಾ ನದಿಯಲ್ಲಿ ಜನರ ದಂಡೇ ಕಂಡುಬಂದಿದೆ. ಮಹಿಳೆ, ಮಕ್ಕಳು ಹಾಗೂ ವಯಸ್ಸಾದವರು ಪೈಪೋಟಿ ಮೇಲೆ ಹುಡುಕಾಟದಲ್ಲಿ ತೊಡಗಿದ್ದಾರೆ. ಆಲ್ಲಿ ದಾಟಿ ಹೊರಟ ಜನರಿಗೆ ಇಲ್ಲಿ ಏನು ನಡೆಯುತ್ತಿದೆ ಎಂಬ ಕುತೂಹಲ. ಪ್ರವಾಹದಿಂದ ಹರಿದು ಬಂದ ತಂತಮ್ಮ ಮನೆಯ ಸಾಮಗ್ರಿಗಳನ್ನು ಹುಡುಕುತ್ತಿರಬಹುದೆನ್ನುವುದೇ ಎಂಬುದೇ ಎಲ್ಲರ ಊಹೆ. ಆದರೆ ವಾಸ್ತವವೇ ಬೇರೆ. ನದಿ ಪ್ರವಾಹದಲ್ಲಿ ತಮ್ಮ ಮನೆಗಳನ್ನು ಕಳೆದುಕೊಂಡಿದ್ದ ಸಂತ್ರಸ್ತರು ಬೆಳ್ಳಂ ಬೆಳಗ್ಗೆ ನದಿಯಲ್ಲಿ ಉಸುಕು ಸಂಗ್ರಹಿಸಲು ಮುಗಿಬಿದ್ದಿದ್ದರು. ಮಹಿಳೆಯರು ಸೇರಿದಂತೆ ಪ್ರತಿಯೊಬ್ಬರೂ ಸಣ್ಣ ಸಣ್ಣ ಚೀಲ, ಪಾತ್ರೆಗಳಲ್ಲಿ ಉಸುಕು ತುಂಬಿಕೊಂಡು ಹೊರಟಿದ್ದು ಪ್ರವಾಹದ ಕರಾಳ ಮುಖದ ಪರಿಚಯ ಮಾಡಿತು.

ನದಿಯ ಮಧ್ಯ ಭಾಗದಲ್ಲಿ ರಾಶಿರಾಶಿಯಾಗಿ ಬಿದ್ದಿದ್ದ ತ್ಯಾಜ್ಯವಸ್ತುಗಳನ್ನು ತುಳಿದುಕೊಂಡು ಕಲ್ಲು ಬಂಡೆಗಳನ್ನು ದಾಟಿ ತಲೆ ಮೇಲೆ ಉಸುಕಿನ ಚೀಲಗಳನ್ನು ಹೊತ್ತುಕೊಂಡಿದ್ದ ಮುನವಳ್ಳಿಯ ಜನರು ಸಾಲು ಸಾಲಾಗಿ ಬರುತ್ತಿರುವ ದೃಶ್ಯ ಪ್ರವಾಹ ಸಂಕಷ್ಟದ ಹೊಸ ಮುಖವನ್ನು ತೆರೆದಿಟ್ಟಿತು.

ಏನು ಮಾಡುವುದು ಸ್ವಾಮಿ. ನಾವು ಎಂದೂ ನೋಡಿರದೇ ಇದ್ದ ಮಲಪ್ರಭಾ ನದಿಯ ಪ್ರವಾಹ ನಮ್ಮದೆಲ್ಲವನ್ನೂ ಕಸಿದುಕೊಂಡಿದೆ. ಮನೆಗಳು ಬಿದ್ದು ಬೀದಿಗೆ ಬಿದ್ದಿದ್ದೇವೆ. ತಕ್ಷಣ ಮನೆ ಕಟ್ಟಿಕೊಳ್ಳಬೇಕು ಎಂದರೆ ಉಸುಕು ಸಿಗುವುದಿಲ್ಲ. ಸಿಕ್ಕರೂ ಅದನ್ನು ಖರೀದಿ ಮಾಡುವ ಶಕ್ತಿ ನಮಗೆ ಇಲ್ಲ. ಹೀಗಾಗಿ ಅನಿವಾರ್ಯವಾಗಿ ನಾವು ನದಿಯಲ್ಲಿ ಸಿಕ್ಕಷ್ಟು ಉಸುಕು ತೆಗೆದುಕೊಂಡು ಹೊರಟಿದ್ದೇವೆ. ಇದರಿಂದ ಎಷ್ಟು ಕೆಲಸ ಆಗುತ್ತದೆಯೋ ಅಗಲಿ ಎಂದು ನೋವಿನಿಂದಲೇ ಹೇಳುತ್ತಾರೆ ಸಲೀಮ ಸಯ್ಯದ್‌.

ಪ್ರವಾಹದಿಂದ ನಮ್ಮ ಮನೆ ಭಾಗಶಃ ಬಿದ್ದಿದೆ. ಮಳೆ ಹಾಗೂ ನದಿ ಪ್ರವಾಹದಿಂದ ಹಿಂದೆಂದೂ ಈ ರೀತಿ ಹಾನಿ ಆಗಿರಲೇ ಇಲ್ಲ. ನದಿಗೆ ನೀರು ಬಂದರೂ ಅಂತಹ ಅಪಾಯ ಉಂಟಾಗಿರಲಿಲ್ಲ. ಈಗ ಮನೆ ಬಿದ್ದಿದೆ. ಮತ್ತೆ ಕಟ್ಟಿಕೊಳ್ಳಲು ಸ್ವಲ್ಪ ಉಸುಕು ಬೇಕು ಮಾರ್ಕೆಟ್‌ನಲ್ಲಿ ಉಸುಕು ಸಿಗುವುದು ದುಸ್ತರ. ಅದಕ್ಕೆ ನೂರೆಂಟು ಕಾಟ. ಮೇಲಾಗಿ ಬಹಳ ದುಬಾರಿ. ಈಗ ನದಿಯಲ್ಲಿ ಸ್ವಲ್ಪ ಹೊಸ ಉಸುಕು ಬಂದಿರುತ್ತದೆ. ಅದನ್ನೇ ಸಿಕ್ಕಷ್ಟು ತೆಗೆದುಕೊಂಡಿದ್ದೇವೆ. ಬಡವರಿಗೆ ಈಗ ನದಿಯಲ್ಲಿ ಸಿಕ್ಕ ಅಲ್ಪಸ್ವಲ್ಪ ಉಸುಕೇ ಆಧಾರ ಎಂಬುದು ಮುನವಳ್ಳಿಯ ಜೀತು ಹುದ್ದಾರ ಹೇಳಿಕೆ.

 

•ಕೇಶವ ಆದಿ

ಟಾಪ್ ನ್ಯೂಸ್

1-chilly

Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ

army

J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

owaisi (2)

Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು

farukh abdulla

Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

1-jmm

INDIA bloc; ಜಾರ್ಖಂಡ್ ಸೀಟು ಹಂಚಿಕೆ ಒಪ್ಪಂದ ಅಂತಿಮ: ಜೆಎಂಎಂಗೆ 43 ಸ್ಥಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-belagavi

Belagavi: ರಾಜ್ಯೋತ್ಸವ ಮೆರವಣಿಗೆ ವೇಳೆ ಯುವಕನ ಮೇಲೆ ಮಾರಣಾಂತಿಕ ಹಲ್ಲೆ

5-belagavi

Belagavi: ಎಂಇಎಸ್‌ ಕಾರ್ಯಕರ್ತರ ಪುಂಡಾಟ

Rajyotsava Celebration: ಬೆಳಗಾವಿಯಲ್ಲಿ ವೈಭವದ ಕರ್ನಾಟಕ ರಾಜ್ಯೋತ್ಸವ

Rajyotsava Celebration: ಬೆಳಗಾವಿಯಲ್ಲಿ ವೈಭವದ ಕರ್ನಾಟಕ ರಾಜ್ಯೋತ್ಸವ

Ignoring MES is better than banning it: Satish Jarakiholi

Belagavi; ಎಂಇಎಸ್‌ ನಿಷೇಧಕ್ಕಿಂತ ನಿರ್ಲಕ್ಷ್ಯ ಮಾಡುವುದು ಉತ್ತಮ: ಸತೀಶ್‌ ಜಾರಕಿಹೊಳಿ

ಬೆಳಗಾವಿ: ಆರ್ಥಿಕ ಮುಗ್ಗಟ್ಟು ಮಧ್ಯೆಯೇ ದುಂದುವೆಚ್ಚ: ಪಾಲಿಕೆಯಿಂದ ಲಕ್ಷ, ಲಕ್ಷ ವೆಚ್ಚ!

ಬೆಳಗಾವಿ: ಆರ್ಥಿಕ ಮುಗ್ಗಟ್ಟು ಮಧ್ಯೆಯೇ ದುಂದುವೆಚ್ಚ: ಪಾಲಿಕೆಯಿಂದ ಲಕ್ಷ, ಲಕ್ಷ ವೆಚ್ಚ!

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

1-chilly

Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ

attack

Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ

1-reeee

Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ

army

J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.