ಶಿಥಿಲ ಸೇತುವೆ ಮೇಲೆ ವಾಹನ ಸಂಚಾರ
Team Udayavani, Dec 9, 2019, 1:13 PM IST
ಚಿಕ್ಕೋಡಿ: ಕೃಷ್ಣಾ ನದಿಗೆ ಕಟ್ಟಿರುವ ಕಲ್ಲೋಳ–ಯಡೂರ ಸೇತುವೆ ಕಳೆದ ಹತ್ತು ವರ್ಷಗಳಿಂದ ಶಿಥಿಲಗೊಂಡು ಈಗಲೋ ಆಗಲೋ ಬೀಳುವ ಹಂತ ತಲುಪಿದೆ. ಸೇತುವೆ ಮೇಲೆ ಭಾರಿ ವಾಹನಗಳು ಸಂಚರಿಸುತ್ತಿರುವುದರಿಂದ ಸೇತುವೆಗೆ ಅಪಾಯಕಾರಿಯಾಗಿ ಪರಿಣಮಿಸಿದೆ.
ಇನ್ನೂ ಹೊಸ ಸೇತುವೆ ಮಂಜೂರಾಗಿ ಎರಡು ವರ್ಷ ಕಳೆಯುತ್ತಾ ಬಂದರೂ ಕಾಮಗಾರಿ ಆರಂಭಿಸುವ ಭಾಗ್ಯ ಕೂಡಿಬರುತ್ತಿಲ್ಲ. ಇದರಿಂದ ಗಡಿ ಭಾಗದ ಜನ ಸರ್ಕಾರ ಮತ್ತು ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಅಸಮಾಧಾನ ಹೊರಹಾಕುತ್ತಿದ್ದಾರೆ.
ಕಲ್ಲೋಳ–ಯಡೂರ ಸೇತುವೆಯು ಪ್ರವಾಹ ರಭಸಕ್ಕೆ ಶಿಥಿಲಗೊಂಡಿದೆ. ತೀರಾ ಹಳೆಯದಾದ ಸೇತುವೆಯು ಶೇ 60ರಷ್ಟು ಅಲ್ಲಲ್ಲಿ ಬಿರುಕು ಬಿಟ್ಟಿದೆ. ಕೆಲ ಕಡೆಗಳಲ್ಲಿ ಸೇತುವೆ ಕುಸಿಯುತ್ತ ಹೋಗುತ್ತಿದೆ. ಸಂಪೂರ್ಣ ಶಿಥಿಲಗೊಂಡಿರುವ ಸೇತುವೆ ಮೇಲೆ ಭಾರಿ ವಾಹನಗಳು ಸಂಚಾರ ಮಾಡುತ್ತಿರುವುದು ಅಪಾಯಕಾರಿಯಾಗಿದೆ. ಆದರೂ ಭಾರಿ ವಾಹನಗಳ ಸಂಚಾರ ಸೇತುವೆ ಮೇಲೆ ಅಬಾಧಿತವಾಗಿದೆ.
ಕಳೆದ 2005ರಿಂದ ಈ ಸೇತುವೆ ಮೇಲೆ ಭಾರಿ ಪ್ರಮಾಣದ ವಾಹನ ಸಂಚಾರವನ್ನು ನಿಬಂರ್ಧಿ ಸಲಾಗಿತ್ತು. ಕಾರು ಮತ್ತು ದ್ವಿಚಕ್ರ ವಾಹನಗಳು ಮಾತ್ರ ಸಂಚರಿಸಲು ಮಾತ್ರ ಅವಕಾಶವಿತ್ತು. ನಂತರ ಪ್ರಸಕ್ತ ಆಗಸ್ಟ್ ತಿಂಗಳಲ್ಲಿ ಉಂಟಾದ ಭೀಕರ ಮಹಾಪೂರದ ರಭಸಕ್ಕೆ ಕಬ್ಬಿಣದ ಗೇಟ್‌ಗಳು ಮುರಿದು ಬಿದ್ದಿವೆ. ಮತ್ತೆ ಟ್ರಕ್, ಕಬ್ಬಿನ ಟ್ರ್ಯಾಕ್ಟರ್ ಮೊದಲಾದ ಭಾರಿ ವಾಹನಗಳು ಸಂಚರಿಸಲು ಆರಂಭ ಮಾಡಿವೆ. ಇದರಿಂದ ಸೇತುವೆ ಅಲ್ಲಲ್ಲಿ ಕುಸಿಯುತ್ತಾ ಹೋಗುತ್ತಿದೆ. ಇದೇ ಮುಂದುವರಿದರೆ ಒಂದಿಲ್ಲೊಂದು ದಿನ ಅಪಾಯಕಾರಿಯಾಗುವ ಸಾಧ್ಯತೆ ದಟ್ಟವಾಗಿದೆ.
ಕಬ್ಬಿಣದ ಗೇಟ್ ಅಳವಡಿಸಿ: ರಭಸವಾಗಿ ಹರಿಯುವ ಕೃಷ್ಣಾ ನದಿಯ ಸೆಳೆತಕ್ಕೆ ಶಿಥಿಲ ಸೇತುವೆ ಮೇಲೆ ಅವಘಡ ಸಂಭವಿಸುವ ಮುನ್ನವೇ ಎಚ್ಚೆತ್ತುಕೊಂಡು ನೀರಾವರಿ ಇಲಾಖೆ ಮತ್ತೆ ಸೇತುವೆಯ ಎರಡೂ ಬದಿಗಳಲ್ಲಿ ಕಬ್ಬಿಣದ ತಡೆಗೋಡೆ ನಿರ್ಮಿಸಬೇಕು ಎಂಬುದು ಗಡಿ ಭಾಗದ ಸಾರ್ವಜನಿಕರ ಒತ್ತಾಯವಾಗಿದೆ.
ಹೊಸ ಸೇತುವೆ ಮಂಜೂರು: ಕಲ್ಲೋಳ–ಯಡೂರ ಸೇತುವೆ ಶಿಥಿವಾಗಿದ್ದರಿಂದ ಕಳೆದ ಎರಡು ವರ್ಷಗಳ ಹಿಂದೆಯಷ್ಟೇ ಹಿಂದಿನ ಸಂಸದ ಪ್ರಕಾಶ ಹುಕ್ಕೇರಿ ಅವರು ಹೊಸ ಸೇತುವೆ ನಿರ್ಮಿಸಲು 27 ಕೋಟಿ ರೂ. ಅನುದಾನ ಮಂಜೂರು ಮಾಡಿಸಿಕೊಂಡು ಬಂದು ಕಾಮಗಾರಿ ಆರಂಭಿಸಲು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮಕ್ಕೆ (ಕೆಆರ್‌ಡಿಸಿಎಲ್) ಗೆ ಒಪ್ಪಿಸಿದ್ದಾರೆ. ಕಲ್ಲೋಳ–ಯಡೂರ ಹೊರತುಪಡಿಸಿ ಚಿಕ್ಕೋಡಿ ಲೋಕಸಭೆ ಕ್ಷೇತ್ರ ವ್ಯಾಪ್ತಿಯ ಕೃಷ್ಣಾ ನದಿಗೆ ಅಡ್ಡಲಾಗಿ ಜಯಗೂಳ–ಕೇದರಾಪೂರ, ಮಳವಾಡ–ಚಿಂಚಲಿ, ಕುಡಚಿ, ಕೃಷ್ಣಾ ಕಿತ್ತೂರ ಹೀಗೆ ಐದು ಸೇತುವೆಗಳು ಮಂಜೂರಾಗಿವೆ. ಆದರೆ ಮಂಜೂರಾಗಿ ಎರಡು ವರ್ಷ ಕಳೆದರೂ ಕಾಮಗಾರಿ ಮಾತ್ರ ಆರಂಭ ವಾಗದಿರುವುದರಿಂದ ಗಡಿ ಭಾಗದ ಜನರು ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ.
ಎರಡೆರಡು ಬಾರಿ ಉದ್ಘಾಟನೆ: ಕಲ್ಲೋಳ–ಯಡೂರ ಸೇತುವೆ ಕಾಮಗಾರಿ ಆರಂಭ ಮಾಡಲು ಎರಡು ಬಾರಿ ಉದ್ಘಾಟಿಸಿದ್ದಾರೆ. ಹಿಂದಿನ ಸರ್ಕಾರದಲ್ಲಿ ಲೋಕೋಪಯೋಗಿ ಸಚಿವ ಎಚ್.ಸಿ.ಮಹದೇವಪ್ಪ ಅವರು ಒಂದು ಬಾರಿ ಉದ್ಘಾಟಿಸಿದರೆ ಎರಡನೆ ಬಾರಿಗೆ ಹಿಂದಿನ ಸಂಸದ ಪ್ರಕಾಶ ಹುಕ್ಕೇರಿ ನೇತೃತ್ವದಲ್ಲಿ ಸೇತುವೆಗೆ ಚಾಲನೆ ದೊರಕಿದೆ. ಆದರೂ ಕೂಡಾ ಕಾಮಗಾರಿ ಆರಂಭವಾಗದ ಭಾಗ್ಯ ಕೂಡಿ ಬರುತ್ತಿಲ್ಲ, ಅಧಿಕಾರಿಗಳನ್ನು ಕೇಳಿದರೆ ಪ್ರವಾಹ, ಮಳೆ ಹೀಗೆ ಅನೇಕ ಕಾರಣಗಳನ್ನು ನೀಡಿ ಜಾರಿಕೊಳ್ಳುತ್ತಿದ್ದಾರೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.
-ಮಹಾದೇವ ಪೂಜೇರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು
Congress; ಔತಣಕೂಟದ ಸಭೆಗೆ ರಾಜಕೀಯ ಮಹತ್ವ ಬೇಕಿಲ್ಲ: ಸತೀಶ್ ಜಾರಕಿಹೊಳಿ
President ಮುರ್ಮು ಅವರಿಂದ ಇಂದು ಬೆಳಗಾವಿಯಲ್ಲಿ ಕೆಎಲ್‌ಇ ಕ್ಯಾನ್ಸರ್ ಆಸ್ಪತ್ರೆ ಉದ್ಘಾಟನೆ
ಮಗಳ ಮೇಲೆ ಎರಗಲು ಹೋದ ಪತಿಯನ್ನೇ ಹತ್ಯೆಗೈದು ದೇಹವನ್ನು ತುಂಡರಿಸಿ ವಿಲೇವಾರಿ ಮಾಡಿದ ಪತ್ನಿ
Butterfly Park: ಬೆಳಗಾವಿಯ ಹಿಡಕಲ್ ಡ್ಯಾಂ ಬಳಿ ಅತಿ ದೊಡ್ಡ ತೆರೆದ ಚಿಟ್ಟೆ ಪಾರ್ಕ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.