![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, Mar 30, 2024, 11:49 PM IST
ಬೆನಕಟ್ಟಿ: ನಮ್ಮ ದೇಶದ ಭದ್ರತೆಗೆ ಮತ್ತೊಮ್ಮೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ನಾಯಕತ್ವ ಅವಶ್ಯಕತೆ ಇದೆ ಎಂದು ಮಾಜಿ ಮುಖ್ಯಮಂತ್ರಿ ಬೆಳಗಾವಿ ಕ್ಷೇತ್ರದ ಬಿಜೆಪಿ ಲೋಕಸಭಾ ಅಭ್ಯರ್ಥಿ,ಮಾಜಿ ಸಿಎಂ ಜಗದೀಶ ಶೆಟ್ಟರ್ ಹೇಳಿದರು.
ಶುಕ್ರವಾರ ಬೆನಕಟ್ಟಿ ಗ್ರಾಮದಲ್ಲಿ ಶ್ರೀ ದುರ್ಗಾದೇವಿ ದರ್ಶನವನ್ನು ಪಡೆದು ಸ್ಥಳೀಯ ಬಿಜೆಪಿ ಮುಖಂಡರ ಭೇಟಿ ಮಾಡಿ ಮಾತನಾಡಿದರು, ನರೇಂದ್ರ ಮೋದಿಯವರ ನಾಯಕತ್ವದ ಆಡಳಿತವನ್ನು ನೋಡಿದ ಪಾಕಿಸ್ಥಾನ ದೇಶದಲ್ಲಿ ನಮ್ಮ ಆರ್ಥಿಕ ವ್ಯವಸ್ಥೆಯು ಸುಧಾರಣೆಯಾಗಲು ಭಾರತದ ಮೋದಿಯಂತ ನಾಯಕತ್ವ ಬೇಕು ಎಂದು ಹೇಳುತ್ತಿದ್ದಾರೆ, ಆದ್ದರಿಂದ ಬಿಜೆಪಿ ಅಭ್ಯರ್ಥಿ ನರೇಂದ್ರ ಮೋದಿ ಅಂತ ಮತ ಹಾಕಿ ಹೆಚ್ಚಿನ ಅಂತರ ಗೆಲ್ಲಿಸಿ ಪ್ರಧಾನಿಯವರನ್ನು ಕೈ ಬಲಪಡಿಸಿ ಎಂದು ಮನವಿ ಮಾಡಿದರು.
ತಾಲೂಕು ಬಿಜೆಪಿ ಮುಖಂಡ ವಿರೂಪಾಕ್ಷಪ್ಪ ಮಾಮನಿ ಮಾತನಾಡಿ, ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಲು ನಮ್ಮ ತಾಲೂಕಿನ ಮತವನ್ನು ಹೆಚ್ಚಿಸಿ ಕೂಡುತ್ತೇವೆ ಎಂದು ಹೇಳಿದರು. ರತ್ನಾ ಆ. ಮಾಮನಿ ಮಾತನಾಡಿ ನಮ್ಮ ತಾಲೂಕಿನ ಮತದಾರರು ಮನೆತನ ಮೇಲೆ ವಿಶ್ವಾಸವಿಟ್ಟು ಸಾಕಷ್ಟು ಭಾರೀ ನಮ್ಮವರನ್ನು ಗೆಲವು ಕೂಡಿಸಿದ್ದಿರಿ, ಹಾಗೇ ಜಗದೀಶ ಶೆಟ್ಟರಿಗೆ ಮತ ಹಾಕಿ ಪ್ರಧಾನಮಂತ್ರಿ ನರೇಂದ್ರ ಮೋದಿ ಬೆಂಬಲಿಸಿ ನಮ್ಮ ಮನೆತನ ಗೌರವ ಹೆಚ್ಚಿಸಿ ಎಂದು ಮನವಿ ಮಾಡಿದರು. ರಾಜಶೇಖರ ಗಯ್ಯಾಳಿ ಮಾತನಾಡಿದರು.
ಜಗದೀಶ ಶಿಂತ್ರಿ, ಸೋಮಪ್ಪ ಬಿಷ್ಟಣ್ಣವರ, ಪುಂಡಲೀಕ ಮೇಟಿ, ಗುರು ಮೇಳವಂಕಿ, ಪ್ರವೀಣ ಚಿನ್ನಪ್ಪನ್ನವರ, ಕಾಡಪ್ಪ ವೀರಶೆಟ್ಟಿ ಪಂಚಪ್ಪ ಮಾತಾರಿ, ಅಶೋಕ ಯರಝರ್ವಿ, ಈರಯ್ಯಾ ಹಿರೇಮಠ, ಪ್ರಕಾಶ ಕಲ್ಲೇದ, ಸುರೇಶ ಸಾವಳಗಿ, ಮಹಾದೇವ ಹೂಲಿ, ಲಕ್ಕಪ್ಪ ಲಕ್ಕಣ್ಣವರ, ಮಾಯಪ್ಪ ಚೂರಿ, ವೀರಪ್ಪ ವೀರಶೆಟ್ಟಿ, ಯಲ್ಲಪ್ಪ ತಳವಾರ, ನಾಗಪ್ಪ ರೈನಾಪೂರ, ಸೋಮಲಿಂಗ ರೇವನ್ನವರ, ಮುದಕಪ್ಪ ಗುರವ್ವಗೋಳ ಮತ್ತಿತ್ತರರು ಇದ್ದರು, ಮಹಾದೇವ ಮುರಗೋಡ ಕಾರ್ಯಕ್ರಮ ನಿರೂಪಿಸಿದರು.
Belagavai: ಆಟೋ ಚಾಲಕನ ಜತೆ ಜಗಳ ಬೆನ್ನಲ್ಲೇ ಗೋವಾ ಮಾಜಿ ಶಾಸಕ ಸಾವು!
Belgavi: ಬೆಳಗಾವಿ ಪ್ರಾದೇಶಿಕ ಆಯುಕ್ತರ ವಿರುದ್ಧ ರಾಜ್ಯಪಾಲರಿಗೆ ಶಾಸಕ ಅಭಯ ದೂರು
Belegavi: ಗದ್ದೆಗೆ ಹೊತ್ತಿದ್ದ ಬೆಂಕಿ ಆರಿಸಲುಹೋಗಿ ಸುಟ್ಟು ಕರಕಲಾದ ರೈತ
Belagavi: ನ್ಯಾಯಾಲಯ ವ್ಯವಸ್ಥೆಯಿಂದಲೇ ಅತ್ಯಾ*ಚಾರ, ಕೊ*ಲೆ ಹೆಚ್ಚಾಗಿದೆ: ಮುತಾಲಿಕ್
Belagavi: ಎರಡು ವಾರಗಳಲ್ಲಿ ಸಾರ್ವಜನಿಕ ಜೀವನಕ್ಕೆ ವಾಪಸ್: ಸಚಿವೆ ಲಕ್ಷ್ಮೀ ಹೆಬ್ಬಾಳಕರ್
You seem to have an Ad Blocker on.
To continue reading, please turn it off or whitelist Udayavani.