ಬೆಳಗಾವಿ ಭಾರೀ ದುರಂತ : ಮನೆಯಲ್ಲಿದ್ದ 7 ಮಂದಿ ಪ್ರಾಣ ಬಿಟ್ಟರು : ಬದುಕುಳಿದ ಅಪ್ಪ-ಮಗ
Team Udayavani, Oct 7, 2021, 8:17 AM IST
ಬೆಳಗಾವಿ: ತಾಲೂಕಿನ ಬಡಾಲ ಅಂಕಲಗಿಯಲ್ಲಿ ಗೋಡೆ ಕುಸಿದ ದುರಂತದಲ್ಲಿ ಏಳು ಜನ ಸಾವಿಗೀಡಾಗಿದ್ದು, ಅಪ್ಪ- ಮಗ ಬದುಕುಳಿದಿದ್ದಾರೆ.
ಹೊಲದಲ್ಲಿ ಕೆಲಸ ಮುಗಿಸಿಕೊಂಡು ಬಂದಿದ್ದ ಮನೆ ಯಜಮಾನ ಭೀಮಪ್ಪ ಖನಗಾಂವಿ ಗ್ರಾಮದಲ್ಲಿ ತಿರುಗಾಡಲು ಹೋಗಿದ್ದರು. ದುರಂತ ಸಂಭವಿಸುವ ಕೆಲ ಹೊತ್ತು ಮುಂಚೆಯೇ ಭೀಮಪ್ಪ ಮನೆಯಿಂದ ತೆರಳಿದ್ದರು. ಅಷ್ಟೊತ್ತಿಗಾಗಲೇ ಈ ಗೋಡೆ ಕುಸಿದು ಬಿದ್ದಿದೆ. ಸಾವಿನಿಂದ ಬಚಾವ್ ಆಗಿದ್ದಾರೆ.
ಭೀಮಪ್ಪನ ಮಗ ದೇವರಾಜ ಬೆಳಗಾವಿಗೆ ಕಾಲೇಜಿಗೆ ಹೋಗಿದ್ದನು. ದುರಂತ ಸಂಭವಿಸಿದ ಬಳಿಕ ಮನೆಗೆ ಬಂದಿದ್ದಾನೆ. ಅಪ್ಪ-ಮಗ ಅದೃಷ್ಟವಶಾತ್ ಬದುಕುಳಿದಿದ್ದಾರೆ. ಈ ಕುಟುಂಬದಲ್ಲಿ ಈಗ ಇಬ್ಬರೇ ಬದುಕುಳಿದಿದ್ದಾರೆ.
ಆಟ ಆಡಲು ಹೋಗಿ ಪ್ರಾಣ ಬಿಟ್ಟ ಬಾಲಕಿ: ಖನಗಾಂವಿ ಕುಟುಂಬದ ಪಕ್ಕದಲ್ಲಿಯೇ ವಿಠ್ಠಲ ಕೊಳೆಪ್ಪನವರ ಕುಟುಂಬ ಇದೆ. ಇವರ ಮಗಳು ಕಾಶವ್ವ(8) ಹಾಗೂ ಅರ್ಜುನ ಖನಗಾಂವಿಯ ಮಗಳು ಪೂಜಾ(8) ಕ್ಲಾಸ್ ಮೇಟ್. ಹೀಗಾಗಿ ಇವರಿಬ್ಬರೂ ಆಗಾಗ ಕೂಡಿ ಆಡುತ್ತಿದ್ದರು. ಬುಧವಾರ ಸಂಜೆ ಕಾಶವ್ವ ಇವರ ಮನೆಗೆ ಹೋಗಿದ್ದಾಳೆ. ಆಟ ಆಡಿ ಹೊರ ಬಂದು ಗೋಡೆ ನೋಡುತ್ತಿದ್ದಾಗ ಈ ದುರಂತ ಸಂಭವಿಸಿ ಬಾಲಕಿ ಕಾಶವ್ವ ಹಾಗೂ ಪೂಜಾ ಅಸುನೀಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ
Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್ ಆಕ್ರೋಶ
Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.