ಕೃಷ್ಣಾ ನದಿ ತೀರದಹಳ್ಳಿಗಳಿಗೆ ನೀರಿನ ಬರ
Team Udayavani, May 20, 2019, 12:05 PM IST
ಕಳೆದೊಂದು ತಿಂಗಳಿಂದ ಈ ಭಾಗದಲ್ಲಿ 40ರಿಂದ 41 ಡಿಗ್ರಿ ಸೆಲ್ಸಿಯಸ್ ತಾಪಮಾನ ಸರ್ವೇ ಸಾಮಾನ್ಯವಾಗಿದೆ. ಚಿಕ್ಕೋಡಿ ತಾಲೂಕಿನ 32 ಗ್ರಾಮಗಳಾದ ಉಮರಾಣಿ, ಇಟನಾಳ, ಬಂಬಲವಾಡ, ಕುಂಗಟೊಳ್ಳಿ, ಬೆಣ್ಣಿಹಳ್ಳಿ, ನಾಗರಮುನ್ನೋಳ್ಳಿ, ಕರಗಾಂವ, ಕರೋಶಿ, ಬೆಳಕೂಡ, ನಾಯಿಂಗ್ಲಜ್, ಯಾದ್ಯಾನವಾಡಿ, ಇಂಗಳಿ, ನವಲಿಹಾಳ, ಕೇರೂರ ಗ್ರಾಮಗಳಲ್ಲಿ 33 ಟ್ಯಾಂಕರ ಮೂಲಕ 114 ಟ್ರಿಪ್ ನೀರು ಸರಬರಾಜು ಮಾಡುತ್ತಿದೆ. ಬೆಳಕೂಡ ಗೇಟ್ದಲ್ಲಿ ಒಂದು ಕಡೆ ಮೇವು ಬ್ಯಾಂಕ್ ಸ್ಥಾಪನೆ ಮಾಡಿ ಜಾನುವಾರಗಳಿಗೆ ಮೇವು ಪೂರೈಕೆಯನ್ನು ಮಾಡಲಾಗುತ್ತಿದೆ.
ಅಥಣಿಯಲ್ಲಿ ಮೇವಿನ ಸಮಸ್ಯೆ: ಅಥಣಿ ಪಟ್ಟಣದಿಂದ ಸುಮಾರು 20 ಕಿಮೀ ದೂರದಲ್ಲಿ ಹಿಪ್ಪರಗಿ ಅಣೆಕಟ್ಟು ಇದ್ದರೂ ನೀರು ಸಂಗ್ರಹವಿಲ್ಲ. ಕೃಷ್ಣಾ ನದಿ ಬತ್ತಿಹೋಗಿದ್ದರ ಪರಿಣಾಮ ಹಿಪ್ಪರಗಿ ಬ್ಯಾರೇಜ್ ಖಾಲಿಯಾಗಿದೆ. ಹೀಗಾಗಿ ಅಥಣಿ ತಾಲೂಕಿನ 61 ಗ್ರಾಮಗಳಲ್ಲಿ ತೀವ್ರವಾದ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಇಲ್ಲಿ 118 ಟ್ಯಾಂಕರ್‌ಗಳ ಮೂಲಕ 428 ಟ್ರಿಪ್ ನೀರನ್ನು ಸರ್ಕಾರ ಪೂರೈಕೆ ಮಾಡುತ್ತಿದೆ. ಇನ್ನೂ ಅನಂತಪೂರ, ತೇಲಸಂಗ ಮತ್ತು ಅಥಣಿ ಹೋಬಳಿ ವ್ಯಾಪ್ತಿಯ 24 ಕಡೆಗಳಲ್ಲಿ ಮೇವು ಬ್ಯಾಂಕ ಸ್ಥಾಪನೆ ಮಾಡಿ ಜಾನುವಾರಗಳಿಗೆ ಮೇವು ವಿತರಣೆ ಮಾಡಲಾಗುತ್ತಿದೆ.
ಚಿಕ್ಕೋಡಿ ಉಪವಿಭಾಗದಲ್ಲಿ ಉಂಟಾಗಿರುವ ಬರಗಾಲ ನಿಯಂತ್ರಣ ಮಾಡಲು ಆಯಾ ತಾಲೂಕಾಡಳಿತ ಸತತ ಪ್ರಯತ್ನ ಮಾಡುತ್ತಿದ್ದು, ಯಾವುದೇ ಗ್ರಾಮದಲ್ಲಿ ನೀರು ಮತ್ತು ಮೇವಿನ ಸಮಸ್ಯೆ ಉಲ್ಬಣಿಸಿದರೇ ತಕ್ಷಣ ನಾಗರಿಕರು ಮಾಹಿತಿ ನೀಡಬೇಕು. 24 ಗಂಟೆಯೊಳಗೆ ಮೇವು-ನೀರು ಪೂರೈಕೆ ಮಾಡಬೇಕೆಂದು ಆಯಾ ತಹಶೀಲ್ದಾರರು, ತಾಪಂ ಇಒ ಮತ್ತು ಗ್ರಾ.ಕು.ನಿ. ಸರಬರಾಜು ಇಲಾಖೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ.
• ಸೋಮಲಿಂಗ ಗೇಣ್ಣೂರ,ಉಪವಿಭಾಗಾಧಿಕಾರಿಗಳು ಚಿಕ್ಕೋಡಿ
ರಾಯಬಾಗ ಹೊರತಾಗಿಲ್ಲ: ಬರಗಾಲಕ್ಕೆ ರಾಯಬಾಗ ತಾಲೂಕು ಹೊರತಾಗಿಲ್ಲ. ತಾಲೂಕಿನ ಬ್ಯಾಕೂಡ, ಹುಬ್ಬರವಾಡಿ, ಮೇಖಳಿ, ಮಂಟೂರ, ಬೂದಿಹಾಳ, ದೇವಣಕಟ್ಟಿ, ಮಾವಿನಹೊಂಡ, ಬೆಂಡವಾಡ, ಕಟಕಬಾವಿ, ಬಸ್ತವಾಡ, ಜೋಡಟ್ಟಿ, ಬೇಕ್ಕೇರಿ ಹೀಗೆ 21 ಗ್ರಾಮಗಳಲ್ಲಿ 34 ಟ್ಯಾಂಕರ್ ಮೂಲಕ 136 ಟ್ರಿಪ್‌ಗ್ಳಲ್ಲಿ ಸರ್ಕಾರ ನೀರು ಕೊಡುತ್ತಿದೆ. ಇಲ್ಲಿ ಮೇವಿನ ಸಮಸ್ಯೆ ಹೆಚ್ಚಿರುವ ಕಾರಣ ಮೇವು ಬ್ಯಾಂಕ್ ಪ್ರಾರಂಭಿಸಬೇಕೆಂಬುದು ರೈತರ ಒತ್ತಾಯವಾಗಿದೆ.
ಮಹಾದೇವ ಪೂಜೇರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗಾಂಧಿ ಭಾರತ್ ಕಾರ್ಯಕ್ರಮದ ಬಗ್ಗೆ ಶೆಟ್ಟರ್ ಅಪಸ್ವರ ತೆಗೆದಿದ್ದು ದುರ್ದೈವ – ಎಚ್ ಕೆ ಪಾಟೀಲ
Congress ಅಧಿವೇಶನದ ಶತಮಾನೋತ್ಸವ ಕಾರ್ಯಕ್ರಮ ದೇಶದ ಇತಿಹಾಸದ ಒಂದು ಐತಿಹಾಸಿಕ ಕಾರ್ಯಕ್ರಮ
Belagavi: ಗಾಂಧಿ ಭಾರತ ಹಿನ್ನೆಲೆ ಡಿ. 26, 27 ರಂದು ಕೆಲ ಶಾಲೆಗಳಿಗೆ ರಜೆ
Suspension: ಸಿ.ಟಿ. ರವಿ ಪ್ರಕರಣ; ಖಾನಾಪುರ ಸಿಪಿಐ ಅಮಾನತು
Belagavi: ಕಾಶ್ಮೀರದಲ್ಲಿ 300 ಅಡಿ ಆಳದ ಕಂದಕಕ್ಕೆ ಬಿದ್ದ ಸೇನಾ ವಾಹನ; ಯೋಧರು ಹುತಾತ್ಮ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kasaragod ಅಪರಾಧ ಸುದ್ದಿಗಳು: ವಿದ್ಯಾರ್ಥಿನಿಯರಿಗೆ ಕಿರುಕುಳ; ಕೇಸು ದಾಖಲು
Brahmavar: ಆರೂರು; ಬೆಂಕಿ ತಗಲಿ ಗಾಯಗೊಂಡಿದ್ದ ಮಹಿಳೆ ಸಾವು
Kalaburagi: ಟಿಟಿ ಟಯರ್ ಸ್ಫೋಟಗೊಂಡು ಸರಣಿ ಅಪಘಾತ; ಮೂವರು ಸ್ಥಳದಲ್ಲೇ ಮೃತ್ಯು!
Waqf Issue: ನಾಳೆಯಿಂದ ಜೆಪಿಸಿ ಎದುರು ಕರ್ನಾಟಕ ಸೇರಿ 6 ರಾಜ್ಯಗಳ ಪ್ರತಿನಿಧಿಗಳು ಹಾಜರು
ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.