![Siddaramaiah](https://www.udayavani.com/wp-content/uploads/2025/02/Siddaramaiah-4-415x249.jpg)
![Siddaramaiah](https://www.udayavani.com/wp-content/uploads/2025/02/Siddaramaiah-4-415x249.jpg)
Team Udayavani, Jan 29, 2025, 11:12 PM IST
ಬೆಳಗಾವಿ: “ಮುಂದಿನ 144 ವರ್ಷಗಳ ಬಳಿಕ ನಡೆಯುವ ಮಹಾ ಕುಂಭಮೇಳದಲ್ಲಿ ನಾವಿರಲ್ಲ’ ಎಂದು ಹಠ ಹಿಡಿದು ಹೋಗಿದ್ದ ಪತ್ನಿ, ಮಗಳು ವಾಪಸ್ ಬಾರದೆ ಇಲ್ಲವಾಗಿದ್ದಾರೆ ಎಂದು ಪತ್ನಿ ಹಾಗೂ ಮಗಳನ್ನು ಕಳೆದುಕೊಂಡಿರುವ ದೀಪಕ ಹತ್ತರವಾಠ ರೋದಿಸಿದರು.
ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಪುಣ್ಯ ಸ್ನಾನ ಮಾಡಲು ಹೋಗಿದ್ದ ಬೆಳಗಾವಿಯ ಜ್ಯೋತಿ ಹತ್ತರವಾಠ ಹಾಗೂ ಮೇಘಾ ಹತ್ತರವಾಠ ಅವರನ್ನು ಕಳೆದುಕೊಂಡ ದೀಪಕ ಹತ್ತರವಾಠ ಅಕ್ಷರಶಃ ಕಂಗಾಲಾಗಿದ್ದಾರೆ.
ಜೀವನದಲ್ಲಿ ಒಮ್ಮೆ ನಡೆಯುವ ಮಹಾ ಕುಂಭ ಮೇಳಕ್ಕೆ ಹಠ ಹಿಡಿದು ಹೋದವರು ಈಗ ಶವವಾಗಿ ವಾಪಸಾಗುತ್ತಿದ್ದಾರೆ. ನನಗೂ ಬರುವಂತೆ ಹೇಳಿದರೂ ಕಚೇರಿ ಕೆಲಸದ ಒತ್ತಡದಿಂದಾಗಿ ರಜೆ ಇಲ್ಲದ್ದಕ್ಕೆ ನಾನು ಹೋಗಲಿಲ್ಲ. ಪತ್ನಿ ಹಾಗೂ ಮಗಳು ಬಾರದ ಲೋಕಕ್ಕೆ ಹೋಗಿದ್ದಾರೆ ಎಂದು ಕಣ್ಣೀರು ಹಾಕಿದರು.
ಜ. 26ರಂದು ಸಾಯಿರಥ ಟ್ರಾವೆಲ್ಸ್‌ನಲ್ಲಿ ತೆರಳಿದ್ದರು.ಪ್ರಯಾಣ ಬೆಳೆಸುವಾಗ ಆಗಾಗ ಕರೆ ಮಾಡಿ ಮಾಹಿತಿ ನೀಡುತ್ತಿದ್ದರು. ಮಂಗಳವಾರ ಜ. 28ರಂದು ರಾತ್ರಿ 10ಕ್ಕೆವೀಡಿಯೋ ಕಾಲ್ ಮಾಡಿ ಮಾತನಾಡಿದ್ದರು. ಜನದಟ್ಟಣೆ ಬಹಳ ಇದೆ ಎಂದಾಗ ಹುಷಾರಾಗಿ ಹೋಗುವಂತೆ ಹೇಳಿದ್ದೆ ಎಂದು ಕೊನೆಯದಾಗಿ ಮಾತನಾಡಿದ್ದನ್ನು ಸ್ಮರಿಸಿಕೊಂಡರು.
ನೀರಾವರಿ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ದೀಪಕ ಹತ್ತರವಾಠ ಅವರಿಗೆ ಮೇಘಾ ಸೇರಿ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಹಿರಿಯ ಮಗಳನ್ನು ಹುಕ್ಕೇರಿಗೆ ಮದುವೆ ಮಾಡಿಕೊಟ್ಟಿದ್ದಾರೆ. ಚಿಕ್ಕ ಮಗಳು ಮೇಘಾ ಪದವಿ ಮುಗಿಸಿ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು.
ಪತಿ ಅರುಣ ಸಾವು, ಪತ್ನಿ ಕಾಂಚನಾಗೆ ಗಾಯ
ಬಿಜೆಪಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಮಹಾದೇವಿ ಭವನೂರ ಅವರು ಮಹಾ ಕುಂಭಮೇಳದ ಕಾಲ್ತುಳಿತದಲ್ಲಿ ಮೃತಪಟ್ಟಿದ್ದಾರೆ.
ಜ.26ರಂದು 40 ಜನರೊಂದಿಗೆ ಬೆಳಗಾವಿಯಿಂದ ತೆರಳಿದ್ದರು. ಬೆಳಗಿನ ಜಾವ 3 ಗಂಟೆ ಸುಮಾರಿಗೆ ಕಾಲು¤ಳಿತ ಆಗಿರುವ ಬಗ್ಗೆ ಮಾಹಿತಿ ಬಂದಿತ್ತು. ಬುಧವಾರ ಮಧ್ಯಾಹ್ನ 12 ಗಂಟೆಗೆ ಮೃತಪಟ್ಟಿರುವುದು ದೃಢವಾಗಿದೆ. ಪತ್ನಿಯನ್ನು ಕಳೆದುಕೊಂಡಿರುವ ಪತಿಯ ಆಕ್ರಂದನ ಮುಗಿಲು ಮುಟ್ಟಿತ್ತು. ಶೆಟ್ಟಿ ಗಲ್ಲಿಯ ಅರುಣ ಕೋಪರ್ಡೆ ಮೃತಪಟ್ಟಿದ್ದು, ಇವರ ಪತ್ನಿ ಕಾಂಚನಾ ಕೋಪರ್ಡೆ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾಂಚನ ಕೋಪರ್ಡೆ ಕೂಡ ಬಿಜೆಪಿ ಕಾರ್ಯಕರ್ತೆ ಆಗಿದ್ದಾರೆ.
ಕೆಳಗೆ ಬಿದ್ದವರು ಮೇಲೇ ಳಲೇ ಇಲ್ಲ: ಪ್ರತ್ಯಕ್ಷದರ್ಶಿ
ಮುಡಾ ಅಧಿಕಾರಿ ಬಿ.ಎನ್.ಗಿರೀಶ್
ದಾವಣಗೆರೆ: ಮಹಾ ಕುಂಭಮೇಳಕ್ಕೆ ನಿರೀಕ್ಷೆಗೂ ಮೀರಿ ಭಕ್ತ ಜನಸಾಗರವೇ ಹರಿದು ಬಂದಿದೆ. ನಾವು ನಸುಕಿನಲ್ಲೇ ಪುಣ್ಯಸ್ನಾನಕ್ಕಾಗಿ ಸಂಗಮಕ್ಕೆ ಹೋಗಿ ಬಂದಿದ್ದೆವು. ಜನದಟ್ಟಣೆ ನಿರಂತರವಾಗಿತ್ತು. ಈ ನಡುವೆ ಕಾಲ್ತುಳಿತಕ್ಕೆ ಸಿಲುಕಿ ಕೆಳಗೆ ಬಿದ್ದದವರು ಮೇಲೇಳಲಾಗದೆ ನರಳಿದರು…’
ಘಟನೆ ಕುರಿತಂತೆ ಇಲ್ಲಿನ ಮುಡಾ ಅಧಿಕಾರಿ ಬಿ.ಎನ್. ಗಿರೀಶ್ “ಉದಯವಾಣಿ’ ಜತೆ ಮಾಹಿತಿ ಹಂಚಿಕೊಂಡರು. ತ್ರಿವೇಣಿ ಸಂಗಮದ ದ್ವಾರದ ಬಳಿ ನಿರಂತರ ನೂಕುನುಗ್ಗಲು ಉಂಟಾಯಿತು. ನೂಕುನುಗ್ಗಲು ತಗ್ಗುತ್ತಲೇ ಇರಲಿಲ್ಲ. ಕಾಲ್ತುಳಿತಕ್ಕೆ ಸಿಲುಕಿ ಕೆಳಗೆ ಬಿದ್ದವರು ಮೇಲೇಳಲಾಗದೆ ತೊಂದರೆಗೊಳಗಾದರು. ಬಿದ್ದು ಗಾಯಗೊಂಡವರನ್ನು ತತ್‌ಕ್ಷಣವೇ ರಕ್ಷಣ ಸಿಬಂದಿಗಳಿಂದ ಆ್ಯಂಬುಲೆನ್ಸ್‌ಗಳಲ್ಲಿ ಕರೆದೊಯ್ಯುವ ಕಾರ್ಯವೂ ಅಷ್ಟೇ ಕ್ಷಿಪ್ರವಾಗಿ ನಡೆಯುತ್ತಿತ್ತು. ಎಂದವರು ಮಾಹಿತಿ ನೀಡಿದ್ದಾರೆ.
ಸ್ವಲ್ಪದರಲ್ಲೇ ಪಾರಾದೆವು: ಚಿಕ್ಕಬಳ್ಳಾಪುರ ಯಾತ್ರಿಕರು
ಚಿಕ್ಕಬಳ್ಳಾಪುರ: ಮಂಗಳವಾರ ಮಧ್ಯರಾತ್ರಿ ಸಂಭವಿಸಿದ ಕಾಲ್ತುಳಿತ ಘಟನೆಯಿಂದ ಚಿಕ್ಕಬಳ್ಳಾಪುರದ ಮಂಚನಬಲೆ ಗ್ರಾಮದ ಶ್ರೀಧರ್ ಹಾಗೂ ಅವರ ಸಂಗಡಿಗರು ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಕಿ.ಮೀ.ಗಟ್ಟಲೆ ವಾಹನಗಳು ಎಲ್ಲೆಂದರಲ್ಲಿ ನಿಂತಿದ್ದವು. ಎತ್ತ ನೋಡಿದರೂ ಭಕ್ತರು ಪ್ರವಾಹದಂತೆ ಕುಂಭಮೇಳಕ್ಕೆ ಬರುತ್ತಿದ್ದಾರೆ. ನಿರೀಕ್ಷೆಗೂ ಮೀರಿ ಜನರ ಆಗಮನದಿಂದ ಮೂಲ ಸೌಕರ್ಯದ ಕೊರತೆ ಇದೆ. 2 ದಿನದಿಂದ ಜನರ ಆಗಮನ ಹೆಚ್ಚಾಗಿದೆ. 10 ಕಿ.ಮೀ.ದೂರವನ್ನು 4 ಗಂಟೆ ಪ್ರಯಾಣ ಮಾಡಿದವು. ಕಾರಿನಲ್ಲಿ ತೆರಳಿದ್ದರಿಂದ ಅನುಕೂಲವಾಯಿತು. ಸದ್ಯ ನಾವೀಗ ಕಾಶಿಗೆ ಬಂದಿದ್ದೇವೆ. ನಮ್ಮ ಜತೆ 5 ಮಂದಿ ಇದ್ದಾರೆ. ಎಲ್ಲರೂ ಸುರಕ್ಷಿತವಾಗಿದ್ದೇವೆ.
ಮಹಾಕುಂಭಮೇಳದಲ್ಲಿ ಮುಂಜಾನೆ ಸಂಭವಿಸಿದ ಕಾಲ್ತುಳಿತದಲ್ಲಿ ಹಲವರು ಸಾವಿಗೀಡಾದ ಸುದ್ದಿ ತಿಳಿದು ದುಃಖವಾಯಿತು. ಕಾಲ್ತುಳಿತದಲ್ಲಿ ಸಿಲುಕಿದ ನಮ್ಮ ರಾಜ್ಯದ ಎಲ್ಲರನ್ನೂ ಕ್ಷೇಮವಾಗಿ ಕರೆತರಲು ಅಧಿಕಾರಿಗಳನ್ನು ನಿಯೋಜಿಸಿದ್ದು ನಮ್ಮವರ ರಕ್ಷಣೆಗೆ ಸರಕಾರ ಎಲ್ಲ ರೀತಿಯ ಪ್ರಯತ್ನವನ್ನು ನಡೆಸುತ್ತಿದೆ. ಕುಂಭಮೇಳದಲ್ಲಿ ಪಾಲ್ಗೊಂಡಿರುವ ಕನ್ನಡಿಗರು ಸ್ವಲ್ಪ ಜಾಗರೂಕತೆಯಿಂದಿರಿ.
– ಸಿದ್ದರಾಮಯ್ಯ, ಮುಖ್ಯಮಂತ್ರಿ
ಕಾಲ್ತುಳಿತದಲ್ಲಿ ಬೆಳಗಾವಿ ಮೂಲದ ನಾಲ್ವರು ಮೃತಪಟ್ಟಿರುವ ಸುದ್ದಿ ಆಘಾತ ಮೂಡಿಸಿದೆ. ಅಲ್ಲಿನ ಸ್ಥಳೀಯ ಆಡಳಿತದೊಂದಿಗೆ ಸಂಪರ್ಕ ಸಾಧಿಸಿ ಮೃತದೇಹಗಳನ್ನು ಕರ್ನಾಟಕಕ್ಕೆ ತರಲು ಮತ್ತು ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ಕೊಡಿಸಲು ರಾಜ್ಯ ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡುತ್ತೇನೆ.
-ಆರ್. ಅಶೋಕ್, ವಿಧಾನಸಭೆ ವಿಪಕ್ಷದ ನಾಯಕ
ಉತ್ತರ ಪ್ರದೇಶ ಸರಕಾರ ಸಕಲ ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಂಡಿದ್ದರ ನಡುವೆಯೂ ಮುಂಜಾನೆ ಕಾಲ್ತುಳಿತದಿಂದಾಗಿ ದುರಂತ ಸಂಭವಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವರೂ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಜತೆ ದೂರವಾಣಿ ಮೂಲಕ ಪರಿಸ್ಥಿತಿಯ ಮಾಹಿತಿ ಪಡೆದಿದ್ದಾರೆ. ಕೋಟ್ಯಂತರ ಭಕ್ತರು ಸೇರುವ ಜಾಗದಲ್ಲಿ ಸಾರ್ವಜನಿಕ ಸಹಕಾರವೂ ಮುಖ್ಯ.
– ಬಿ.ವೈ. ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ
GBS Outbreak; ಸಾಂಕ್ರಾಮಿಕ ರೋಗದ ಬಗ್ಗೆ ಬೆಳಗಾವಿಯಲ್ಲಿ ಮುನ್ನೆಚ್ಚರಿಕೆ
11 ವರ್ಷದಿಂದ ವಿಶ್ವಗುರು ನೋಡಿದ್ದೇವೆ, ಅವರನ್ನು ಕೆಳಗಿಳಿಸಿ: ಬಿಜೆಪಿಗೆ ಸಂತೋಷ್ ಲಾಡ್ ಟಾಂಗ್
Belagavi: ಮುಂದಿನ ಅವಧಿಗೂ ಸಿದ್ದರಾಮಯ್ಯ ಸಿಎಂ ಆದರೆ ತಪ್ಪೇನಿದೆ… ಸಚಿವ ಶಿವಾನಂದ ಪಾಟೀಲ
Belagavai: ಆಟೋ ಚಾಲಕನ ಜತೆ ಜಗಳ ಬೆನ್ನಲ್ಲೇ ಗೋವಾ ಮಾಜಿ ಶಾಸಕ ಸಾವು!
Belgavi: ಬೆಳಗಾವಿ ಪ್ರಾದೇಶಿಕ ಆಯುಕ್ತರ ವಿರುದ್ಧ ರಾಜ್ಯಪಾಲರಿಗೆ ಶಾಸಕ ಅಭಯ ದೂರು
You seem to have an Ad Blocker on.
To continue reading, please turn it off or whitelist Udayavani.