ರಾಣಿ ಚನ್ನಮ್ಮ ವಿವಿಗೆ ಸಾರಥಿ ಯಾರು?ಯಾರಾಗ್ತಾರೆ ಎಂಬುದೇ ನಿಗೂಢ


Team Udayavani, Dec 26, 2023, 3:26 PM IST

ರಾಣಿ ಚನ್ನಮ್ಮ ವಿವಿಗೆ ಸಾರಥಿ ಯಾರು?ಯಾರಾಗ್ತಾರೆ ಎಂಬುದೇ ನಿಗೂಢ

ಬೆಳಗಾವಿ: ರಾಜ್ಯದ ಅತಿ ದೊಡ್ಡ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿರುವ, ಉತ್ತರ ಕರ್ನಾಟಕದಲ್ಲಿಯೇ ಹೆಸರುವಾಸಿಯಾದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯಕ್ಕೆ ಶಾಶ್ವತ ಕುಲಪತಿ ಇಲ್ಲದೇ ಆರು ತಿಂಗಳು ಸಮೀಪಿಸಿದರೂ ಇನ್ನೂ ಸಾರಥಿ ಸಿಕ್ಕಿಲ್ಲ. ಸರ್ಕಾರ ಅಸ್ತಿತ್ವಕ್ಕೆ ಬಂದರೂ ಹೊಸ ಕುಲಪತಿ ನೇಮಕ ವಿಚಾರದಲ್ಲಿ ಹಗ್ಗಜಗ್ಗಾಟ ಮಾಡುತ್ತಿರುವುದಾದರೂ ಏಕೆ ಎಂಬುದು ಗಡಿ ಭಾಗದ ಜನರಲ್ಲಿ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

ರಾಣಿ ಚನ್ನಮ್ಮ ವಿಶ್ವವಿದ್ಯಾಲಯಕ್ಕೆ ಕುಲಪತಿ ನೇಮಕ ಮಾಡಲು ಸರ್ಕಾರ ರಚಿಸಿದ್ದ ಶೋಧನಾ ಸಮಿತಿ ಈಗಾಗಲೇ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದ್ದು, ಈ ವರದಿಯಲ್ಲಿ ಮೂವರ ಹೆಸರು ಇದೆ. ಇದರಲ್ಲಿ ಒಬ್ಬರ ಹೆಸರು ಅಂತಿಮಗೊಳಿಸುವ ಅಧಿ ಕಾರ ರಾಜ್ಯಪಾಲ ಥಾವರಚಂದ್‌ ಗೆಹ್ಲೋಟ್‌ ಅವರಿಗಿದೆ. ಸರ್ಕಾರಕ್ಕೆ ವರದಿ ಕೈ ಸೇರಿ ಹಲವು ದಿನಗಳು ಕಳೆದರೂ ನೇಮಕ ಆಗಿಲ್ಲ. ಶೀಘ್ರದಲ್ಲಿ ಬೆಳಗಾವಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯಕ್ಕೆ ಕುಲಪತಿ ನೇಮಕ ಆಗಲಿದೆ.

ಕುಲಪತಿ ಹುದ್ದೆಗೆ ಈಗಾಗಲೇ ಸಂಭವನೀಯರ ಹೆಸರುಗಳಲ್ಲಿ ಬೆಳಗಾವಿಯ ರಾಣಿ ಚನ್ನಮ್ಮ ವಿವಿ ವಾಣಿಜ್ಯ ಶಾಸ್ತ್ರ ವಿಭಾಗದ ಹಿರಿಯ ಪ್ರಾಧ್ಯಾಪಕರಾದ ಡಾ. ಎಚ್‌.ವೈ. ಕಾಂಬಳೆ, ಕಲುºರ್ಗಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಉಪನ್ಯಾಸಕರಾದ ಡಾ. ಎಚ್‌.ಟಿ. ಪೋಟೆ ಹಾಗೂ ರಾಚವಿ ಎಂಬಿಎ ವಿಭಾಗದ ಹಿರಿಯ ಪ್ರಾಧ್ಯಾಪಕರಾದ ಡಾ. ಸಿ.ಎಂ. ತ್ಯಾಗರಾಜನ್‌ ಅವರ ಹೆಸರಿದ್ದು, ಈ ಮೂವರಲ್ಲೇ ನೇಮಕ ಆಗುವ ಸಾಧ್ಯತೆ ಇದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಸದ್ಯ ಆರ್‌ಸಿಯುದಲ್ಲಿ ಪ್ರಭಾರಿ ಕುಲಪತಿ ಆಗಿ ಡಾ. ಎಫ್‌.ವಿ. ನಾಗಣ್ಣವರ ಕಾರ್ಯ ನಿರ್ವಹಿಸುತ್ತಿದ್ದು, ಈಗ ಕುಲಪತಿಯ ನೇಮಕ ಆಗಬೇಕೆಂಬುದು ಈ ಭಾಗದ ಶಿಕ್ಷಣ ತಜ್ಞರ ಬೇಡಿಕೆ ಆಗಿದೆ. ಕುಪತಿ ಆಗಿದ್ದ ಡಾ. ರಾಮಚಂದ್ರಗೌಡ ಆವರು ಜು. 4ರಂದು ನಿವೃತ್ತಿ
ಆಗಿದ್ದು, ನಂತರದಲ್ಲಿ ಕುಲಪತಿ ನೇಮಕ ಆಗಿಲ್ಲ. ಆರು ತಿಂಗಳು ಮುಗಿಯಲು ಬಂದರೂ ಇನ್ನೂ ನೇಮಕ ಆಗದಿರುವುದು ಸಾರ್ವಜನಿಕರಲ್ಲಿ ಪ್ರಶ್ನೆ ಮೂಡಿಸಿದೆ. ಕುಲಪತಿ ಆಗಲು ಸುಮಾರು 100ಕ್ಕೂ ಹೆಚ್ಚು ಅರ್ಜಿಗಳು ಶೋಧನಾ ಸಮಿತಿ ಬಳಿ ಇದ್ದವು. ಇದರಲ್ಲಿ ಯಾರ ಹೆಸರನ್ನು ವರದಿಯಲ್ಲಿ ಹಾಕಬೇಕು ಎಂದು ಸಮಿತಿ ಗೊಂದಲಕ್ಕೀಡಾಗಿತ್ತು. ಅನೇಕರು ಆಕಾಂಕ್ಷಿಗಳಾಗಿದ್ದರೂ ಇದರಲ್ಲಿ ಮೂವರ ಹೆಸರು ಅಂತಮಗೊಳಿಸಲಾಗಿದೆ.

ವಿವಿಗೆ ಕುಲಪತಿ ನೇಮಕ ಆಗದಿರುವುದು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಲ್ಲಿಯೂ ಬೇಸರ ಮೂಡಿಸಿದೆ. ಶಾಶ್ವತ ಕುಲಪತಿ ಇಲ್ಲದೇ ಆಡಳಿತದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಸಿಂಡಿಕೇಟ್‌ನಲ್ಲಿ ಸರ್ಕಾರದ ನಾಮ ನಿರ್ದೇಶನ ಸದಸ್ಯರನ್ನೂ ಇನ್ನೂ ನೇಮಕ ಮಾಡಿಲ್ಲ. ಇದರಿಂದ ಒಂದೆಡೆ ಕಲಪತಿ ಇಲ್ಲದಿರುವ ಸಮಸ್ಯೆ ಕಾಡುತ್ತಿದ್ದರೆ, ಇನ್ನೊಂದೆಡೆ ಸಿಂಡಿಕೇಟ್‌ ಸದಸ್ಯರ ಕೊರತೆಯಿಂದಾಗಿ ಸುಲಲಿತ ಆಡಳಿತ ಮೇಲೆ ಅನಿವಾರ್ಯವಾಗಿ ಪರಿಣಾಮ ಬೀರುತ್ತಿದೆ.

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಆಡಳಿತಕ್ಕೆ ಚುರುಕು ಸಿಗಲಿ ಎಂಬ ಉದ್ದೇಶದಿಂದ ಕುಲಪತಿ ನೇಮಕ ಆಗಬೇಕೆಂಬ ಬೇಡಿಕೆ ಇದ್ದರೂ ಪ್ರಭಾರಿ ಕುಲಪತಿಗಳಿಗೂ ಆಡಳಿತಾತ್ಮಕ ಹಾಗೂ ಶೈಕ್ಷಣಿಕ ದೃಷ್ಟಿಯಿಂದ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಇರುತ್ತದೆ. ವಿಶ್ವವಿದ್ಯಾಲಯದ ಹಣಕಾಸು ವಿಷಯದಲ್ಲಿಯೂ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಇದ್ದರೂ ಪ್ರಭಾರಿಗಳು ಈ ಬಗ್ಗೆ ಹಿಂದೇಟು ಹಾಕುವುದು ಸಹಜ. ಪ್ರಭಾರಿಗಳು ಶಾಶ್ವತವಾಗಿ ಕುಲಪತಿ ಆಗಿ ಇರುವುದಿಲ್ಲ ಎಂಬ ಕಾರಣಕ್ಕೆ ಮಹತ್ವದ ನಿರ್ಣಯ ಕೈಗೊಳ್ಳುವುದಿಲ್ಲ.

ವಿವಿಯ ಸ್ವತಂತ್ರ ಕಟ್ಟಡಕ್ಕಾಗಿ ಹೆಣಗಾಟ
ಈ ಭಾಗದ ಪ್ರಾದೇಶಿಕ ಅಸಮಾನತೆ ನಿವಾರಿಸಬೇಕು ಎಂಬ ಉದ್ದೇಶದಿಂದ 1982ರಲ್ಲಿ ಬೆಳಗಾವಿಯಲ್ಲಿ ರಾಣಿ ಚನ್ನಮ್ಮ ಸ್ನಾತಕೋತ್ತರ ಕೇಂದ್ರ ಆರಂಭಿಸಲಾಗಿತ್ತು. ಆದರೆ ವಿಶ್ವವಿದ್ಯಾಲಯವಾಗಿ ಪರಿವರ್ತನೆ ಆಗಲು 30 ವರ್ಷಗಳು ಬೇಕಾಯಿತು. 2010ರಲ್ಲಿ ರಾಜ್ಯ ಸರ್ಕಾರ ರಾಣಿ ಚನ್ನಮ್ಮ ಸ್ನಾತಕೋತ್ತರ ಕೇಂದ್ರವನ್ನು ಸ್ವತಂತ್ರ ವಿವಿಯಾಗಿ ಘೋಷಣೆ ಮಾಡಿ ಆದೇಶ ಹೊರಡಿಸಿತು. ಈ ಭಾಗದ ವಿದ್ಯಾರ್ಥಿಗಳು ಹಾಗೂ ಶಿಕ್ಷಣ ಪ್ರೇಮಿಗಳಲ್ಲಿ ಹೊಸ ಹುರುಪು ಹಾಗೂ ಉತ್ಸಾಹಕ್ಕೆ ಕಾರಣವಾಯಿತು. ಬೆಳಗಾವಿ, ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಗಳನ್ನೊಳಗೊಂಡ ವಿವಿ ಆಯಿತು. ಆದರೆ 13 ವರ್ಷ ಕಳೆದರೂ ವಿವಿ ಆವರಣದಲ್ಲಿ ಇನ್ನೂ ಅನೇಕ ಅಭಿವೃದ್ಧಿ ಕೆಲಸಗಳು ಆಗಬೇಕಿದೆ. ಅರಣ್ಯ ಇಲಾಖೆಯ ಅಧೀನದಲ್ಲಿ ವಿವಿ ಜಾಗ  ಒಳಪಟ್ಟಿದ್ದರಿಂದ ಅನೇಕ ಕೆಲಸಗಳು ಆಗಿಲ್ಲ. ಹೀಗಾಗಿ ಸರ್ಕಾರ ಹಿರೇಬಾಗೇವಾಡಿಯಲ್ಲಿ ಹೊಸ ಜಾಗ ಗುರುತಿಸಿ ಕಟ್ಟಡ ನಿರ್ಮಾಣ ಆರಂಭಿಸಿದೆ. ಈ ಹಿಂದಿನ ಕುಲಪತಿ ಡಾ. ಎಂ. ರಾಮಚಂದ್ರಗೌಡ ಅವರು ಕಟ್ಟಡ ನಿರ್ಮಾಣದಲ್ಲಿ ಆಸಕ್ತಿ ತೋರಿದ್ದು, ಕಾಮಗಾರಿ ಆರಂಭಗೊಂಡಿದೆ. ಆದರೆ ಆ ಕಾಮಗಾರಿಯೂ ಆಮೆಗತಿಯಲ್ಲಿ ಸಾಗುತ್ತಿದೆ.

ರಾಣಿ ಚನ್ನಮ್ಮ ವಿಶ್ವವಿದ್ಯಾಲಯಕ್ಕೆ ಕುಲಪತಿ ನೇಮಕ ವಿಚಾರದಲ್ಲಿ ಆರು ತಿಂಗಳು ಕಳೆಯಲು ಬಂದಿದೆ. ಇನ್ನೂ ಅಂತಿಮ ನಿರ್ಧಾರ ಆಗದಿರುವುದು ಬೇಸರದ ಸಂಗತಿ. ಈ ಭಾಗದ ಶೈಕ್ಷಣಿಕ ಸಮಸ್ಯೆಗಳನ್ನು ಅರಿತು ಸ್ಪಂದಿಸುವವರನ್ನು ನೇಮಕ ಮಾಡಬೇಕು. ಉತ್ತರ ಕರ್ನಾಟಕದವರು ಅದರಲ್ಲೂ ಸ್ಥಳೀಯರಿಗೆ ಆದ್ಯತೆ ನೀಡಿ ನೇಮಕಗೊಳಿಸುವಂತೆ ಉನ್ನತ
ಶಿಕ್ಷಣ ಸಚಿವರಿಗೆ ಮನವಿ ಮಾಡಲಾಗಿದೆ.
ಅಶೋಕ ಚಂದರಗಿ,ಕನ್ನಡ
ಹೋರಾಟಗಾರರು

ರಾಣಿ ಚನ್ನಮ್ಮ ವಿವಿ ಕುಲಪತಿ ನೇಮಕ ಕೂಡಲೇ ಆಗಬೇಕು. ಇದರಿಂದ ವಿವಿಯಲ್ಲಿನ ಆಡಳಿತಾತ್ಮಕ ಹಾಗೂ ಶೈಕ್ಷಣಿಕ
ಕೆಲಸಗಳಿಗೆ ಚುರುಕು ಮುಟ್ಟುತ್ತದೆ.
ಡಾ| ಸರಜೂ ಕಾಟ್ಕರ, ಹಿರಿಯ ಸಾಹಿತಿ

*ಭೈರೋಬಾ ಕಾಂಬಳೆ

ಟಾಪ್ ನ್ಯೂಸ್

Borewell Tragedy: ಹೇಗಾದರು ಮಾಡಿ ನನ್ನ 3ವರ್ಷದ ಮಗಳನ್ನು ರಕ್ಷಣೆ ಮಾಡಿ ಕೊಡಿ.. ತಾಯಿ ಅಳಲು

Borewell Tragedy: ಹೇಗಾದರು ಮಾಡಿ ನನ್ನ 3ವರ್ಷದ ಮಗಳನ್ನು ರಕ್ಷಣೆ ಮಾಡಿ ಕೊಡಿ.. ತಾಯಿ ಅಳಲು

Robbery: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ “ಮೊಟ್ಟೆ ಗ್ಯಾಂಗ್‌”

Robbery: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ “ಮೊಟ್ಟೆ ಗ್ಯಾಂಗ್‌”

Vijay Hazare Trophy; Abhinav Manohar’s brilliant century; Karnataka won easily against Arunchal Pradesh

Vijay Hazare Trophy; ಅಭಿನವ್‌ ಮನೋಹರ್‌ ಭರ್ಜರಿ ಶತಕ; ಸುಲಭ ಜಯ ಸಾಧಿಸಿದ ಕರ್ನಾಟಕ

Video: ಜನವರಿಯಲ್ಲಿ ಮದುವೆ ನಿಶ್ಚಯವಾಗಿದ್ದ ಯುವತಿ 70 ಅಡಿ ಎತ್ತರದ ಸೇತುವೆಯಿಂದ ಜಿಗಿದಳು

Video: 2 ವಾರದಲ್ಲಿ ಮದುವೆಯಾಗಬೇಕಿದ್ದ ಯುವತಿ 70 ಅಡಿ ಎತ್ತರದ ಸೇತುವೆಯಿಂದ ನದಿಗೆ ಜಿಗಿದಳು

New Year 2025: ಹೊಸ ವರುಷ, ಹೊಸ ಹರುಷ 2025: ಆಲೋಚನೆಗಳು ಹೊಸ ಹಾದಿ ಕಾಣಲಿ

New Year 2025: ಹೊಸ ವರುಷ, ಹೊಸ ಹರುಷ 2025: ಆಲೋಚನೆಗಳು ಹೊಸ ಹಾದಿ ಕಾಣಲಿ

Actress kashima is in Nee nange movie

Kashima; ನೀ ನಂಗೆ ಎಂದ ಕಾಶಿಮಾ…; ನಾಯಕಿ ಹೆಸರು ಘೋಷಣೆ

Hubli: ಮನೆ ದರೋಡೆಗೆ ಯತ್ನಿಸಿದ ದರೋಡಕೋರನ ಕಾಲಿಗೆ ಗುಂಡೇಟು

Hubli: ಮನೆ ದರೋಡೆಗೆ ಯತ್ನಿಸಿದ ದರೋಡಕೋರನ ಕಾಲಿಗೆ ಗುಂಡೇಟು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

suicide

Belgavi; ಹೆರಿಗೆ ಬಳಿಕ ಮತ್ತೋರ್ವ ಬಾಣಂತಿ ಸಾವು

ಅಗಲಿದ ಮನಮೋಹನ್ ಸಿಂಗ್ ಅವರಿಗೆ ಕಾಂಗ್ರೆಸ್ ಭಾವಪೂರ್ಣ ಶ್ರದ್ಧಾಂಜಲಿ

Belagavi; ಅಗಲಿದ ಮನಮೋಹನ್ ಸಿಂಗ್ ಅವರಿಗೆ ಕಾಂಗ್ರೆಸ್ ಭಾವಪೂರ್ಣ ಶ್ರದ್ಧಾಂಜಲಿ

BGV-Congress

Congress: ಪಕ್ಷದೊಳಗೆ ಹೊಸ ನಾಯಕತ್ವಕ್ಕೆ ಅವಕಾಶ ಸಿಗಬೇಕು: ಮಲ್ಲಿಕಾರ್ಜುನ ಖರ್ಗೆ

Sonia-Ghandi

Belagavi Congress Session: ಗಾಂಧೀಜಿ ಪರಂಪರೆ ಮುಂದುವರಿಸಲು ಬದ್ಧರಾಗಬೇಕು: ಸೋನಿಯಾ

BGV–BIMS

Belagavi: ಬಿಮ್ಸ್ ಆಸ್ಪತ್ರೆಯಲ್ಲಿ ಮತ್ತೊರ್ವ ಬಾಣಂತಿ ಮೃತ್ಯು; ಕುಟುಂಬಸ್ಥರ ಆಕ್ರಂದನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

14

Padubidri: ವೃದ್ಧ ದಂಪತಿಗೆ ಸುರಕ್ಷಿತ ಕಾಲು ಸಂಕದ ಭರವಸೆ

ಅಡ್ಡಹೊಳೆಯಲ್ಲಿ ಸಂಕೀರ್ತನ ಯಾತ್ರೆ ಮತ್ತು ಸ್ವಾಮೀಜಿಗಳ ಪಾದಯಾತ್ರೆ

ಅಡ್ಡಹೊಳೆ ಗ್ರಾಮದಲ್ಲಿ ಸಂಕೀರ್ತನ ಯಾತ್ರೆ ಮತ್ತು ಸ್ವಾಮೀಜಿಗಳ ಪಾದಯಾತ್ರೆ

13(1

Udupi: ಕೊರಗ ಸಮುದಾಯಕ್ಕೆ ಸಮಸ್ಯೆಗಳ ಸರಣಿ

Borewell Tragedy: ಹೇಗಾದರು ಮಾಡಿ ನನ್ನ 3ವರ್ಷದ ಮಗಳನ್ನು ರಕ್ಷಣೆ ಮಾಡಿ ಕೊಡಿ.. ತಾಯಿ ಅಳಲು

Borewell Tragedy: ಹೇಗಾದರು ಮಾಡಿ ನನ್ನ 3ವರ್ಷದ ಮಗಳನ್ನು ರಕ್ಷಣೆ ಮಾಡಿ ಕೊಡಿ.. ತಾಯಿ ಅಳಲು

12

Mangaluru: ಕಾಂಕ್ರೀಟ್‌ ರಸ್ತೆ ನಿರ್ಮಿಸಿದರೂ ಫುಟ್‌ಪಾತ್‌ ಇಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.